
ಮಂಗಳೂರು(ಏ.16): ಮಂಗಳೂರಿನಲ್ಲಿ ಭಾನುವಾರ ರೋಡ್ ಶೋ ವೇಳೆ ತೊಕ್ಕೊಟ್ಟು ನಿವಾಸಿ ಚಿತ್ರ ಕಲಾವಿದ ಕಿರಣ್ ರಚನೆ ಮಾಡಿದ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿ ಗಮನ ಸೆಳೆದರು.
ನರೇಂದ್ರ ಮೋದಿ ಅವರಿಗೆ ಕೊಡಲೆಂದೇ ಕಿರಣ್ ಅವರು 20/24 ಫ್ರೇಮ್‌ನ ಮೋದಿ ಅವರ ಆಯಿಲ್ ಪೈಂಟ್ ಚಿತ್ರ ರಚನೆ ಮಾಡಿದ್ದರು. ರೋಡ್‌ಶೋ ವೇಳೆ ತಾನು ಬಿಡಿಸಿದ ಚಿತ್ರವನ್ನು ಮೋದಿ ಎದುರು ಪ್ರದರ್ಶಿಸಿದರು.
NARENDRA MODI: ಮೋದಿ ‘ಗುರು’ ಮಂತ್ರ ಲೆಕ್ಕಾಚಾರ: ಅಂತಿಮ ಹಂತದಲ್ಲಿ ಯಾರ ಕೈ ಹಿಡಿಯಲಿದ್ದಾರೆ ಬಿಲ್ಲವರು ?
ರೋಡ್ ಶೋ ನಡುವೆಯೂ ಚಿತ್ರವನ್ನು ಗಮನಿಸಿದ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ, ಫೋಟೊ ನೀಡುವಂತೆ ಎಸ್.ಪಿ.ಜಿ. ಅಧಿಕಾರಿಗಳಿಗೆ ಸೂಚಿಸಿದರು. ಎಸ್‌ಪಿಜಿಯವರು ಚಿತ್ರವನ್ನು ಪಡೆದು ಮೋದಿ ಅವರಿಗೆ ಹಸ್ತಾಂತರಿಸಿದರು. ತಾನು ರಚನೆ ಮಾಡಿದ ಚಿತ್ರವನ್ನು ಮೋದಿ ಸ್ವೀಕರಿಸಿರುವುದಕ್ಕೆ ಕಿರಣ್ ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.