ಮೀನು ಹಿಡಿಯುವವರು ಮೊದಲು ಗಾಳಕ್ಕೆ ಎರೆಹುಳು ಸಿಕ್ಕಿಸುತ್ತಾರೆ. ಎರೆಹುಳು ತಿನ್ನುವ ಆಸೆಯಲ್ಲಿ ಮೀನುಗಳ ಗಾಳಕ್ಕೆ ಸಿಕ್ಕಿಕೊಳ್ಳುತ್ತೇವೆ. ಎರೆಹುಳು ಸಿಕ್ಕಿಸಿದಂತೆ ಮತದಾರರನ್ನ ಸೆಳೆಯಲು ಕಾಂಗ್ರೆಸ್ ಗ್ಯಾರೆಂಟಿ ಹೆಸರಲ್ಲಿ ಗಾಳ ಹಾಕಿದೆ ಎಂದು ಸಿಟಿ ರವಿ ಗ್ಯಾರಂಟಿ ಯೋಜನೆ ವಿರುದ್ಧ ವಾಗ್ದಾಳಿ ನಡೆಸಿದರು.
ವಿಜಯಪುರ (ಏ.16): ಕಾಂಗ್ರೆಸ್ ಗ್ಯಾರಂಟಿ ಓಟ್ ಬ್ಯಾಕ್ ಸೃಷ್ಟಿ ಮಾಡುತ್ತೆ. ಬಳಿಕ ಹರಿಕೆ ಕುರಿಗಳನ್ನಾಗಿ ಮಾಡುತ್ತೆ ಎಂದು ಬಿಜೆಪಿ ಮಾಜಿ ಸಚಿವ ಸಿಟಿ ರವಿ ಹೇಳಿದರು.
ಇಂದು ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಮೀನು ಹಿಡಿಯುವವರು ಮೊದಲು ಗಾಳಕ್ಕೆ ಎರೆಹುಳು ಸಿಕ್ಕಿಸುತ್ತಾರೆ. ಎರೆಹುಳು ತಿನ್ನುವ ಆಸೆಯಲ್ಲಿ ಮೀನುಗಳ ಗಾಳಕ್ಕೆ ಸಿಕ್ಕಿಕೊಳ್ಳುತ್ತೇವೆ. ಎರೆಹುಳು ಸಿಕ್ಕಿಸಿದಂತೆ ಮತದಾರರನ್ನ ಸೆಳೆಯಲು ಕಾಂಗ್ರೆಸ್ ಗ್ಯಾರೆಂಟಿ ಹೆಸರಲ್ಲಿ ಗಾಳ ಹಾಕಿದೆ. ಇವರ ಉದ್ದೇಶ ಜನರ ನಿಜವಾದ ಕಾಳಜಿ ಅಲ್ಲ. ಗ್ಯಾರಂಟಿ ಮೂಲಕ ಮತ ಗಳಿಸಿ ಅಧಿಕಾರಕ್ಕೆ ಬಂದು ಲೂಟಿ ಮಾಡುವುದು ಉದ್ದೇಶವಾಗಿದೆ. ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಗ್ಯಾರಂಟಿ ಯೋಜನೆ ವಿರುದ್ಧ ಟೀಕಿಸಿದರು.
ಮೋದಿ ಗ್ಯಾರಂಟಿ ಬಡವರ ಬದುಕನ್ನು ಬದಲಾಯಿಸುತ್ತದೆ. ದೇಶವನ್ನ ಅಬಿವೃದ್ಧಿಪಥದ ಕಡೆಗೆ ಕೊಂಡೊಯ್ಯುತ್ತದೆ. ಹೀಗಾಗಿ ಈ ಬಾರಿ ಮತದಾನ ಮಾಡುವಾಗ ಯೋಚಿಸಿ ಎರೆಹುಳು ಆಸೆಗೆ ಗಾಳಕ್ಕೆ ಸಿಕ್ಕಿಕೊಳ್ಳುತ್ತಿರೋ ಅಭಿವೃದ್ಧಿ ಪಥದೆಡೆಗೆ ಸಾಗುತ್ತಿರೋ ಯೋಚಿಸಿ ಎನ್ನುವ ಮೂಲಕ ಬಿಜೆಪಿಗೆ ಬೆಂಬಲಿಸುವಂತೆ ತಿಳಿಸಿದರು.
ಬಾಂಬ್ ಇರುವವರ ಪರ ಇರುವವರಿಗೆ ಪಾಠ ಕಲಿಸಿ: ಮಾಜಿ ಸಚಿವ ಸಿ.ಟಿ.ರವಿ ವಾಗ್ದಾಳಿ