ಪ್ರಧಾನಿ ಭೇಟಿಯಿಂದ ಶಿವಮೊಗ್ಗಕ್ಕೆ ನಯಾಪೈಸೆ ಪ್ರಯೋಜವಾಗಿಲ್ಲ: ರೈತ ಮುಖಂಡ

By Kannadaprabha News  |  First Published Mar 5, 2023, 7:30 AM IST

ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಯ ಸಮಸ್ಯೆ ಬಗ್ಗೆ ಒಂದು ಮಾತು ಆಡಲಿಲ್ಲ. ಅವರ ಭೇಟಿಯಿಂದ ಜಿಲ್ಲೆಗೆ ಮೂರು ಕಾಸಿನ ಪ್ರಯೋಜನವಾಗಿಲ್ಲ ಎಂದು ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್‌ ಹೇಳಿದರು.


ಶಿವಮೊಗ್ಗ (ಮಾ.5) : ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಯ ಸಮಸ್ಯೆ ಬಗ್ಗೆ ಒಂದು ಮಾತು ಆಡಲಿಲ್ಲ. ಅವರ ಭೇಟಿಯಿಂದ ಜಿಲ್ಲೆಗೆ ಮೂರು ಕಾಸಿನ ಪ್ರಯೋಜನವಾಗಿಲ್ಲ ಎಂದು ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್‌(T.N Srinivas) ಹೇಳಿದರು.

ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಧಾನಿ ಮಲೆನಾಡು(Malenadu) ಭಾಗದ ಸಮಸ್ಯೆಗಳನ್ನು ಬಗೆಹರಿಸುವರೆಂಬ ವಿಶ್ವಾಸವಿತ್ತು. ಆದರೆ, ಅದು ಸುಳ್ಳಾಗಿದೆ. ಜಿಲ್ಲೆಯ ಸಂಸದರು, ಶಾಸಕರು, ಮಾಜಿ ಮುಖ್ಯಮಂತ್ರಿ, ಹಾಲಿ ಮುಖ್ಯಮಂತ್ರಿ ಯಾರೂ ಕೂಡ ಸಮಸ್ಯೆಗಳ ತೀವ್ರತೆಯನ್ನು ಪ್ರಧಾನಿಯವರಿಗೆ ತಿಳಿಸಲಿಲ್ಲ. ಪ್ರಧಾನಿಗೂ ಕೂಡ ಅದು ಬೇಕಾಗಿರಲಿಲ್ಲ. ಪ್ರಧಾನಿಗಳ ಶಿವಮೊಗ್ಗ(Shivamogga) ಭೇಟಿ ಕೇವಲ ಚುನಾವಣಾ ಪ್ರಚಾರಕ್ಕೆ ಮೀಸಲಾಗಿದ್ದು ಬಿಟ್ಟರೆ ಬೇರೆನೂ ಇಲ್ಲ ಎಂದು ಹರಿಹಾಯ್ದರು.

Tap to resize

Latest Videos

Lokayukta raid: ಶಾಸಕ ಮಾಡಳ, ಸಿಎಂ ಬೊಮ್ಮಾಯಿ ಇಬ್ಬರೂ ರಾಜಿ​ನಾಮೆ ನೀಡ​ಲಿ; ಕಾಂಗ್ರೆಸ್ ಆಗ್ರಹ

ವಿರೋಧ ಪಕ್ಷಗಳೂ ವಿಫಲ:

ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರಿಗೆ ಮಲೆನಾಡಿ ಜನರ ಸಮಸ್ಯೆಯನ್ನು ತಿಳಿಸಿಕೊಡುವಲ್ಲಿ ಬಿಜೆಪಿ ಶಾಸಕರು, ಸಚಿವರು, ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ಸರ್ಕಾರ ಲೆನಾಡು ಭಾಗದ ರೈತರ ಸಮಸ್ಯೆಗಳ(Farmers problems) ತೀವ್ರತೆ ಅರಿತುಕೊಂಡಿಲ್ಲ. ಪರಿಣಾಮ 35 ಸಾವಿರ ಎಕರೆ ರೈತರು ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಅರಣ್ಯ ಇಲಾಖೆಯವರು ಇದು ತಮಗೆ ಸೇರಿದ್ದು ಎಂದು ನಮೂದಿಸಿಕೊಂಡು ರೈತರಿಗೆ ಕಿರಕುಳ ನೀಡಲಾರಂಭಿಸಿದ್ದಾರೆ. ರೈತರು ಸಾಗುವಳಿ ಪತ್ರ ಪಡೆದಿದ್ದರೂ ತಮ್ಮ ಹೆಸರಿನಲ್ಲಿ ಪಹಣಿ ಇದ್ದರೂ ಈಗ ಅರಣ್ಯ ಇಲಾಖೆಗೆ ಬಿಟ್ಟು ಕೊಡುತ್ತಿರುವುದು ದುರಂತವಾಗಿದೆ ಎಂದರು.

ವಿರೋಧ ಪಕ್ಷವಾದ ಕಾಂಗ್ರೆಸ್‌(Congress) ಕೂಡ ರೈತರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಜೊತೆಗೆ ರೈತ ಸಂಘಟನೆಗಳು ಕೂಡ ಮಲಗಿವೆ. ರೈತ ಸಂಘಗಳು ಸರ್ಕಾರದ ಏಜೆಂಟ್‌ಗಳಂತೆ ನಡೆದುಕೊಳ್ಳುತ್ತಿವೆ. ಇಂಡೀಕರಣ ವಿಜೃಂಭಿಸುತ್ತಾ ಹೋಗುತ್ತಿದೆ. ತಕ್ಷಣವೇ ಇಂಡೀಕರಣ ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ರೈತರು ಸಾಗುವಳಿ ಮಾಡುತ್ತಿರುವ ಜಮೀನನ್ನು ಅರಣ್ಯ ಎಂದು ನಮೂದಿಸಬಾರದು. ಚುನಾವಣೆ ನೀತಿ ಸಂಹಿತೆ ಜಾರಿಯೊಳಗೆ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಸಿಗಬೇಕು. ಇಲ್ಲವಾದಲ್ಲಿ ಚುನಾವಣೆಯ ಸಂದರ್ಭದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ಯಾಸ್‌ ಹೋಯ್ತು ಸೌದೆ ಬಂತು: ಬಿಜೆಪಿ ಹೋಗುತ್ತೆ, ಕಾಂಗ್ರೆಸ್‌ ಬರು​ತ್ತೆ: ಕಾಂಗ್ರೆಸ್ ವಿನೂತನ ಪ್ರತಿಭಟನೆ

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರುದ್ರಪ್ಪ, ರಂಗಸ್ವಾಮಿ, ಶೇಖರಪ್ಪ, ಜಗದೀಶ…, ಗೌಸ್‌ ಪೀರ್‌, ನಯಾಜ್‌ ಅಹಮ್ಮದ್‌ ಮತ್ತಿತರರು ಇದ್ದರು.

click me!