Prajadhwani yatre: ಜನ ಜೀವನ ಸುಧಾರಣೆಗೆ ಕಾಂಗ್ರೆಸ್‌ ಕಂಕಣಬದ್ಧ: ಬಿಕೆ ಹರಿಪ್ರಸಾದ್‌

By Kannadaprabha News  |  First Published Mar 5, 2023, 5:24 AM IST

ಜನರ ಜೀವನ ಸುಧಾರಣೆಗೆ ಕಾಂಗ್ರೆಸ್‌ ಕಂಕಣಬದ್ಧವಾಗಿದ್ದು, ಜನಸಾಮಾನ್ಯರ ಪರವಾದ ನಿಲುವುಗಳನ್ನು ಕಾಂಗ್ರೆಸ್‌ ಪಕ್ಷ ಹೊಂದಿದೆ ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌(BK Hariprasad) ಹೇಳಿದರು.


ಕೊಟ್ಟಿಗೆಹಾರ (ಮಾ.5) : ಜನರ ಜೀವನ ಸುಧಾರಣೆಗೆ ಕಾಂಗ್ರೆಸ್‌ ಕಂಕಣಬದ್ಧವಾಗಿದ್ದು, ಜನಸಾಮಾನ್ಯರ ಪರವಾದ ನಿಲುವುಗಳನ್ನು ಕಾಂಗ್ರೆಸ್‌ ಪಕ್ಷ ಹೊಂದಿದೆ ಎಂದು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌(BK Hariprasad) ಹೇಳಿದರು.

ಬಣಕಲ್‌ ಪಟ್ಟಣದಲ್ಲಿ ಶನಿವಾರ ಕಾಂಗ್ರೆಸ್‌ ಪಕ್ಷ(Congress party)ದಿಂದ ನಡೆದ ಮಲೆನಾಡು ಪ್ರಜಾಧ್ವನಿ ಯಾತ್ರೆ(Prajadhwani yatre) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯೋಗಗಳನ್ನು ಕೊಡುತ್ತೇನೆ ಎಂದ ಬಿಜೆಪಿ ಸರ್ಕಾರದಲ್ಲೆ ಲಕ್ಷಾಂತರ ಜನ ನಿರುದ್ಯೋಗಿಗಳಾಗಿದ್ದಾರೆ. ಹಲವಾರು ಕಂಪನಿಗಳು ಮುಚ್ಚಿ ಹೋಗಿವೆ. ಗ್ಯಾಸ್‌ ಬೆಲೆ ಗಗನಕ್ಕೇರಿದೆ. ಈ ಭಾಗದಲ್ಲಿ ಕಾಡುಪ್ರಾಣಿ, ಕಾಡಾನೆಗಳ(wildlife attacked) ಹಾವಳಿ ಹೆಚ್ಚಾಗಿದೆ. ಆದರೂ ಬಿಜೆಪಿ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಜನರ ಸಾವಿನಲ್ಲೂ ಬಿಜೆಪಿ ತಾರತಮ್ಯ ಮಾಡಿದೆ. ಕರ್ನಾಟಕದಲ್ಲಿ ದ್ವೇಷ ಅಸೂಯೆಯನ್ನು ಬಿತ್ತಿ ಜನರಲ್ಲಿ ಒಡಕು ಮೂಡಿಸುತ್ತಿದೆ ಎಂದು ಆರೋಪಿಸಿದರು.

Tap to resize

Latest Videos

ಚಿಕ್ಕಮಗಳೂರು: ಇಂದು ಬಿಎಸ್‌ವೈಗೆ ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ

ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್‌(UT Khadar) ಮಾತನಾಡಿ, ಜನವಿರೋಧಿ ಬಿಜೆಪಿ ಸರ್ಕಾರ(BJP government)ವನ್ನು ಕಿತ್ತೆಸೆದು ಜನಪರವಾದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ತರಬೇಕಿದೆ. ಮತದ ಮೌಲ್ಯಅರಿತು ಜನಪರ, ಬಡವರ ಪರ, ಶೋಷಿತರ ಪರ, ಮಹಿಳೆಯರು ಮತ್ತು ಯುವಕರ ಪರವಾಗಿ ಕಾರ್ಯಕ್ರಮ ರೂಪಿಸುವ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂದರು. ಜನಸಾಮಾನ್ಯರ ಹಸಿವು ನೀಗಿಸಲು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಇಂದಿರಾ ಕ್ಯಾಂಟಿನ್‌(Indira canteen) ಈಗಿನ ಬಿಜೆಪಿ ಸರ್ಕಾರ ಮುಚ್ಚಿಸಿದೆ. ಧರ್ಮದ ಆಧಾರದಲ್ಲಿ ಜಾತಿ ಆಧಾರದಲ್ಲಿ ಜನರನ್ನು ಒಡೆದು ಆಳುವ ಕಾರ್ಯ ಬಿಜೆಪಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಧರ್ಮದ ಅಂಧಕಾರ ತುಂಬುವ ಕೆಲಸ ಬಿಜೆಪಿ ಮಾಡುತ್ತಿದೆ. ಮನುಷ್ಯ ಧರ್ಮ ಶ್ರೇಷ್ಟವಾದರು. ಜಾತ್ಯಾತೀತ ದೇಶವಾದ ಭಾರತಕ್ಕೆ ಸಂವಿಧಾನವೇ ಆಧಾರ ಸ್ತಂಭ. ಸಂವಿಧಾನವನ್ನು ಕಿತ್ತೊಗೆಯುತ್ತೇವೆ ಎಂದು ಹೊರಡುವ ಬಿಜೆಪಿ ನಾಯಕರನ್ನು ಜನರು ಪ್ರಶ್ನಿಸುವ ಅಗತ್ಯವಿದೆ ಎಂದು ಹೇಳಿದರು.

ಕಾಂಗ್ರೆಸ್‌ ನಾಯಕರು ಎಲೆಕ್ಷನ್‌ ಟೈಂನ ಹಿಂದೂಗಳು: ಸಿ.ಟಿ.ರವಿ

ಕಾರ್ಯಕ್ರಮದಲ್ಲಿ ಎಐಸಿಸಿ ಕಾರ್ಯದರ್ಶಿಗಳಾದ ಬಿ.ಎಂ ಸಂದೀಪ್‌, ರೋಜಿ ಜಾನ್‌, ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ್‌ ಭಂಡಾರಿ, ರಾಜ್ಯ ಪ್ರಚಾರಕ ಗಪ್ಪೂರ್‌ ಖಾನ್‌, ಪ್ರಧಾನ ಕಾರ್ಯದರ್ಶಿ ನಯನಾ ಮೋಟಮ್ಮ, ಕೆಪಿಸಿಸಿ ವಕ್ತಾರ ಎಚ್‌.ಎಚ್‌. ದೇವರಾಜ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಅಂಶುಮಂತ್‌, ಉಪಾಧ್ಯಕ್ಷ ಜಯರಾಮೇಗೌಡ, ಮೂಡಿಗೆರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುರೇಂದ್ರಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಭಾನಾ ಸುಲ್ತಾನ್‌, ಸಂಯೋಜಕ ವಿಜಯ್‌, ಬಣಕಲ್‌ ಹೋಬಳಿ ಅಧ್ಯಕ್ಷ ಸುಬ್ರಮಣ್ಯ, ಮುಖಂಡರಾದ ಶಂಕರ್‌, ಶ್ರೀನಾಥ್‌, ಮಹೇಶ್‌ಗೌಡ, ಸತೀಶ್‌, ಬಿನ್ನಡಿ ಪ್ರಭಾಕರ್‌, ಸಬ್ಲಿ ದೇವರಾಜ್‌, ರಾಮಚಂದ್ರ ಒಡೆಯರ್‌, ಹನೀಪ್‌ ಉಪಸ್ಥಿತರಿದ್ದರು.

click me!