91 ಬಾರಿ ನನ್ನ ನಿಂದಿಸಿ ಇದೀಗ ಲಿಂಗಾಯಿತರನ್ನು ಕಳ್ಳರೆಂದು ಅವಮಾನಿಸಿದೆ; ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!

Published : Apr 29, 2023, 12:06 PM ISTUpdated : Apr 29, 2023, 01:00 PM IST
91 ಬಾರಿ ನನ್ನ ನಿಂದಿಸಿ ಇದೀಗ ಲಿಂಗಾಯಿತರನ್ನು ಕಳ್ಳರೆಂದು ಅವಮಾನಿಸಿದೆ; ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!

ಸಾರಾಂಶ

ಕಾಂಗ್ರೆಸ್ ನಿಂದನೆಯಿಂದಲೇ ಸಮಯ  ವ್ಯರ್ಥ ಮಾಡುತ್ತಿದೆ. 91ಬಾರಿ ಕಾಂಗ್ರೆಸ್ ನನ್ನನ್ನು ನಿಂದಿಸಿದೆ. ಬಾಬಾ ಸಾಹೇಬ್ ಅಂಬೇಡ್ಕರ್, ವೀರ್ ಸಾವರ್ಕರರನ್ನೂ ಕಾಂಗ್ರೆಸ್ ನಿಂದಿಸಿದೆ. ಕಳೆದ ಚುನಾವಣೆಯಲ್ಲಿ ಚೌಕಿದಾರ್ ಚೋರ್, ಮೋದಿ ಚೋರ್, ಒಬಿಸಿ ಸಮುದಾಯ ಚೋರ್ ಎಂದು ಇದೀಗ ಲಿಂಗಾಯಿತರನ್ನು ಭ್ರಷ್ಟರು ಎಂದಿದೆ ಎಂದು ಮೋದಿ ಹುಮ್ನಾಬಾದ್ ಸಮಾವೇಶದಲ್ಲಿ ಹೇಳಿದ್ದಾರೆ.

ಹುಮ್ನಾನಾಬಾದ್(ಏ.29): ಕಾಂಗ್ರೆಸ್ ನಿಂದನೆಯಲ್ಲೇ ಕಾಲಹರಣ ಮಾಡುತ್ತಿದೆ. ಕಳೆದ ಚುನಾವಣೆಯಲ್ಲಿ ಚೌಕಿದಾರ್ ಚೋರ್ ಎಂದ ಕಾಂಗ್ರೆಸ್ ಬಳಿಕ ಮೋದಿ ಚೋರ್, ಒಬಿಸಿ ಸಮುದಾಯ ಚೋರ್ ಎಂದಿತು. ಇದೀಗ ಲಿಂಗಾಯಿತ ಸಮುದಾಯವನ್ನು ಭ್ರಷ್ಟರು ಎಂದಿದೆ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ ನಿಂದಿಸುವುದರಲ್ಲಿ ಏತ್ತಿದ ಕೈ,. ಬಾಬಾ ಸಾಹೇಬ್ ಅಂಬೇಡ್ಕರ್, ವೀರ ಸಾವರ್ಕರ್ ಅವರನ್ನೂ ಸಾರ್ವಜನಿಕವಾಗಿಯೇ ನಿಂದಿಸಿತ್ತು. ಈ ನಿಂದನೆಯನ್ನು ಪ್ರೇರಣೆಯಾಗಿ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬೀದರ್‌ನ ಹುಮ್ನಾಬಾದ್‌ನಲ್ಲಿ ಬಿಜೆಪಿ ಆಯೋಜಿಸಿದ ಕರ್ನಾಟಕ ವಿಧಾಸಭಾ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಕಾಂಗ್ರಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಇತ್ತೀಚೆಗೆ ಮಾಡಿದ ನಿಂದನೆಗೆ ತಿರುಗೇಟು ನೀಡಿದ್ದಾರೆ. 

ನಿಮ್ಮ ಮಗ ದೆಹಲಿಯಲ್ಲಿ ಕುಳಿತಿದ್ದಾನೆ. ಕೋಟ್ಯಾಂತರ ಮಹಿಳೆಯರು, ಸಹೋದರಿಯರಿಗೆ ಬ್ಯಾಂಕ್ ಖಾತೆ ತೆರೆಯಲಾಗಿದೆ. ಅವರ ಖಾತೆಗೆ ನೇರವಾಗಿ ಹಣ ಜಮಾವಣೆ ಮಾಡಲಾಗಿದೆ. ಬಂಜಾರಾ ಸಮುದಾಯಕ್ಕೆ ಹಕ್ಕು ಪತ್ರವನ್ನು ಬಿಜೆಪಿ ನೀಡಿದೆ. ಆರೋಗ್ಯಕ್ಕಾಗಿ ವಿಮೆ ಮಾಡಲಾಗಿದೆ. ಒನ್ ರೇಶನ್ ಒನ್ ನೇಶನ್ ಯೋಜನೆ ನೀಡಿದೆ. ಇದು ಸಬಕ್ ವಿಕಾಸ್ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ಮಾಡಿದೆ. ತುಷ್ಠೀಕರಣ ಮಾಡಿದ ಕಾಂಗ್ರೆಸ್, ಒಲೈಕೆ ರಾಜಕಾರಣವನ್ನೇ ಮಾಡಿದೆ.  ಬೀದರ್ ಕಲೆಯನ್ನು ಕಾಂಗ್ರೆಸ್ ಕಡೆಗಣಿಸಿತ್ತು. ಇದೇ ಕಲೆಯನ್ನು ಪೋಷಿಸಿದ ವ್ಯಕ್ತಿಗೆ ಇತ್ತೀಚೆಗೆ ಪದ್ಮ ಪ್ರಶಸ್ತಿ ಸಿಕ್ಕಿತ್ತು. ಕಾಂಗ್ರೆಸ್ ಇವೆಲ್ಲವನ್ನು ಕಡೆಗಣಿಸಿತ್ತು.  

ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ, ಕನ್ನಡದಲ್ಲಿ ಚುನಾವಣಾ ಮಂತ್ರ ಘೋಷಿಸಿದ ಮೋದಿ!

ಕಾಂಗ್ರೆಸ್ ಪ್ರತಿ ವ್ಯಕ್ತಿಯನ್ನು ಕಡೆಗಣಿಸುತ್ತದೆ. ಕಾಂಗ್ರೆಸ್ ಸ್ವಾರ್ಥ ರಾಜನೀತಿ ಮೇಲೆ ನಿಂತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ನನ್ನ ವಿರುದ್ಧ ನಿಂದನೆ ಮಾಡುವ ಕೆಲಸ ಮಾಡುತ್ತಿದೆ. ಇಲ್ಲೀವರೆಗೆ 91 ಬಾರಿ ನನ್ನ ವಿರುದ್ಧ ನಿಂದನೆ ಮಾಡಿದೆ. ಕಾಂಗ್ರೆಸ್ ನನ್ನ ವಿರುದ್ಧ ಟೀಕೆ, ನಿಂದನೆ ಮಾಡುವುದರಲ್ಲಿ ಹೆ್ಚ್ಚಿನ ಸಮಯ ಕಳೆಯುತ್ತಿದೆ. ಇದಕ್ಕಿಂತ ಉತ್ತಮ ಆಡಳಿತ ನೀಡಿದರ ಕಾಂಗ್ರೆಸ್‌ಗೆ ಈ ರೀತಿ ಪರಿಸ್ಥಿತಿ ಬರುವುದಿಲ್ಲ. ಕಳೆದ ಚುನಾವಣೆಯಲ್ಲಿ ಚೌಕಿದಾರ್ ಚೋರ್, ಮೋದಿ ಚೋರ್, ಒಬಿಸಿ ಸಮುದಾಯ ಚೋರ್ ಎಂದಿತ್ತು. ಇದೀಗ ಲಿಂಗಾಯಿತ ಸಮುದಾಯವನ್ನು ಕಳ್ಳರು ಎಂದಿತು. ಕಾಂಗ್ರೆಸ್ ನಾಯಕರೇ ಕಿವಿ ಅರಳಿಸಿ ಕೇಳಿ, ನೀವು ಯಾರಿಗೆಲ್ಲಾ ಟೀಕೆ, ನಿಂದನೆ ಮಾಡಿದ್ದೀರೋ, ನಿಮಗೆ ಚುನಾವಣೆಯಲ್ಲಿ ಉತ್ತರ ಸಿಗಲಿದೆ. ಈ ಬಾರಿಯ ಚುನಾವಣೆಯಲ್ಲೂ ನಿಂದಿಸಿದವರಿಗೆ ಜನರು ಮತದ ಮೂಲಕ ಉತ್ತರ ನೀಡಲಿದ್ದಾರೆ ಎಂದು ಮೋದಿ ಹೇಳಿದ್ದಾರೆ. 

ಕಾಂಗ್ರೆಸ್ ಪಾರ್ಟಿ ಅಂಬೇಡ್ಕರ್‌ನ್ನೂ ನಿಂದಿಸುವುದು ಬಿಟ್ಟಿಲ್ಲ. ಕಾಂಗ್ರೆಸ್ ನಿಂದನೆ ಕುರಿತು ಅಂಬೇಡ್ಕರ್ ಸಾರ್ವಜನಿಕವಾಗಿ ಹೇಳಿದ್ದರು. ರಾಷ್ಟ್ರದ್ರೋಹಿ ಸೇರಿದಂತೆ ಹಲವು ಶಬ್ದಗಳನ್ನು ಕಾಂಗ್ರೆಸ್ ಅಂಬೇಡ್ಕರ್ ವಿರುದ್ಧ ಬಳಸಿದೆ. ಅಂದಿನ ಕಾಲಾದಲ್ಲೇ ಮಹಾಪುರಷ ಅಂಬೇಡ್ಕರ್‌ಗೆ ಈ ಶಬ್ದಗಳನ್ನು ಕಾಂಗ್ರೆಸ್ ಬಳಸಿದೆ. ವೀರ್ ಸಾವರ್ಕರ್‌ಗೂ ಕಾಂಗ್ರೆಸ್ ನಿಂದನೆ ಮಾಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್, ವೀರ್ ಸಾವರ್ಕರ್‌ಗೆ ಮಾಡಿದಂತೆ ನಿಂದನೆಯನ್ನು ಮೋದಿ ವಿರುದ್ದ ಕಾಂಗ್ರೆಸ್ ಪ್ರಯೋಗಿಸುತ್ತಿದ್ದಾರೆ. ನೀವು ನಿಂದನೆ ಮಾಡುತ್ತೀರಿ, ನಾನು ಜನರ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತೇನೆ. ನಿಮ್ ಆಶೀರ್ವಾದಿಂದ ಎಲ್ಲಾ ನಿಂದನೆ ಮಣ್ಣಾಗಲಿದೆ ಎಂದು ಮೋದಿ ಹೇಳಿದ್ದಾರೆ. ಎಷ್ಟು ನಿಂದಿಸುತ್ತೀರಿ, ಅಷ್ಟೇ ಕಮಲ ಅರಳಲಿದೆ ಎಂದು ಮೋದಿ ಹೇಳಿದ್ದಾರೆ.

 

ನಾನು ಸಿಎಂ ಆದರೂ ಬದಲಾಗಲಿಲ್ಲ ಜನ ಸಾಮಾನ್ಯನಾಗೇ ಉಳಿದೆ: ಪ್ರಧಾನಿ ಮೋದಿ

ಈ ಬಾರಿ ಮತ್ತೆ ಕರ್ನಾಟಕದಲ್ಲಿ ಪೂರ್ಣಬಹುಮತದ ಬಿಜೆಪಿ ಸರ್ಕಾರವನ್ನು ಗೆಲ್ಲಿಸಿ.ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ಎಂಬ ಘೋಷಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ಸತತ ವಾಗ್ದಾಳಿ ನಡೆಸಿದ್ದಾರೆ. ಮೂಲಭೂತ ಸೌಕರ್ಯ, ಅಭಿವೃದ್ಧಿಯ ಕರ್ನಾಟಕಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮೋದಿ ಮನವಿ ಮಾಡಿದರು. ಮೇ. 10 ರಂದು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ತೆರಳಿ, ಕಮಲ ಚಿಹ್ನೆಗೆ ಮತ ಹಾಕುತ್ತೀರಿ ಅನ್ನೋ ವಿಶ್ವಾಸವಿದೆ ಎಂದು ಮೋದಿ ಹೇಳಿದ್ದಾರೆ.

ಬೂತ್‌ಗೆ ತೆರಳಿ, ಪ್ರತಿ ಮನಗೆ ತೆರಳಿ, ಮತದಾರರಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸಿ. ನನ್ನ ಒಂದು ಕೆಲಸವನ್ನು ಮಾಡಿ, ನಿಮ್ಮ ಸೇವಕ ಮೋದಿಜಿ ಬೀದರ್ ಜಿಲ್ಲೆಗೆ ಆಗಮಿಸಿದ್ದರು. ಮೋದಿ ನಿಮಗೆ ನಮಸ್ಕಾರ ಮಾಡಲು ಹೇಳಿದ್ದಾರೆ ಎಂದು ಪ್ರತಿ ಮನಗೆ ತೆರಳಿ ಹೇಳಬೇಕು ಎಂದು ಮೋದಿ ಮನವಿ ಮಾಡಿದ್ದಾರೆ. ನನ್ನ ನಮಸ್ಕಾರ ಅವರಿಗೆ ತಲುಪಿಸಿದರೆ, ಅವರ ಆಶೀರ್ವಾದ ನನಗೆ ಸಿಗುತ್ತದೆ. ಇದರಿಂದ ನಾನು ಮತ್ತಷ್ಟು ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ