ಚಂದ್ರ​ಯಾನ ಯಶಸ್ಸಿನ ಹಿಂದೆ ಪ್ರಧಾನಿ ಮೋದಿ ಪ್ರಬ​ಲ ಸ್ಫೂರ್ತಿ: ಸಂಸದ ರಾಘವೆಂದ್ರ

By Kannadaprabha News  |  First Published Aug 24, 2023, 10:37 AM IST

ಚಂದ್ರನ ಅಂಗಳಕ್ಕೆ ಚಂದ್ರಯಾನ-3 ಕಾಲಿಟ್ಟಿದ್ದು ಮೋದಿಜಿಯವರ ಪ್ರಬಲ ಮತ್ತು ಸ್ಫೂರ್ತಿದಾಯಕ ನಾಯಕತ್ವದಲ್ಲಿ ನಿರಾಸೆಯ ಕ್ಷಣಗಳು ಎನ್ನುವುದು ಇಲ್ಲವೇ ಇಲ್ಲ, ಏನಿದ್ದರೂ ಸದಾಶಯಗಳ ಮತ್ತು ಸಂತಸದ ಕಂಪನಗಳು ಮಾತ್ರ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸಂಸದ ಬಿ.ವೈ.ರಾಘವೆಂದ್ರ ತಿಳಿಸಿದ್ದಾರೆ.


ಶಿವಮೊಗ್ಗ (ಆ.24): ಚಂದ್ರನ ಅಂಗಳಕ್ಕೆ ಚಂದ್ರಯಾನ-3 ಕಾಲಿಟ್ಟಿದ್ದು ಮೋದಿಜಿಯವರ ಪ್ರಬಲ ಮತ್ತು ಸ್ಫೂರ್ತಿದಾಯಕ ನಾಯಕತ್ವದಲ್ಲಿ ನಿರಾಸೆಯ ಕ್ಷಣಗಳು ಎನ್ನುವುದು ಇಲ್ಲವೇ ಇಲ್ಲ, ಏನಿದ್ದರೂ ಸದಾಶಯಗಳ ಮತ್ತು ಸಂತಸದ ಕಂಪನಗಳು ಮಾತ್ರ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸಂಸದ ಬಿ.ವೈ.ರಾಘವೆಂದ್ರ ತಿಳಿಸಿದ್ದಾರೆ.

ಸುಮಾರು 4 ವರ್ಷಗಳ ಹಿಂದೆ ಇನ್ನೇನು ಚಂದ್ರನ ಅಂಗಳವನ್ನು ಸ್ಪರ್ಶಿಸಬೇಕು ಎನ್ನುವಾಗ ಚಂದ್ರಯಾನ-2ರ ವಿಕ್ರಮ್‌ ಲ್ಯಾಂಡರ್‌ ನಮ್ಮ ಸಂಪರ್ಕ ಕಡಿದುಕೊಂಡು ಪತನವಾಗಿ ಬಿಟ್ಟಿತ್ತು. ಆಗ ಎದೆಯೇ ಒಡೆದು ಹೋದವರಂತೆ ಬಿಕ್ಕಿಬಿಕ್ಕಿ ಅಳುತ್ತಾ ತಮ್ಮತ್ತ ಭಾರವಾದ ಹೆಜ್ಜೆಗಳನ್ನು ಇಡುತ್ತ ಬಂದ ಇಸ್ರೋ ಅಧ್ಯಕ್ಷ ಕೆ.ಶಿವನ್‌ ಅವರನ್ನು ಪ್ರಧಾನಿ ಅವರು ತಮ್ಮ ಎದೆಗೆ ಅವುಚಿಕೊಂಡು, ಬೆನ್ನುತಟ್ಟಿಸಮಾ​ಧಾನ ಮಾಡಿದ್ದರು. ಇದನ್ನು ನೋಡಿ ಇಡೀ ದೇಶದ ದುಃಖದ ಕಟ್ಟೆಒಡೆದಿತ್ತು. ಇಸ್ರೋ ಕೇಂದ್ರದಲ್ಲಿ ವಿಷಾದ, ನಿರಾ​ಶೆ ಛಾಯೆ ಆವರಿಸಿತ್ತು. ಪ್ರಧಾನಿ ಅವರು ಶಿವನ್‌ ಅವರ ಬೆನ್ನು ತಟ್ಟುತ್ತಾ, ಸವರುತ್ತಾ ಸಾಂತ್ವನ ಹೇಳಿದ್ದ ರೀತಿ ಇಡೀ ದೇಶವನ್ನು ಭಾವುಕಗೊಳಿಸಿತ್ತು ಎಂದು ಹೇಳಿದ್ದಾರೆ.

Latest Videos

undefined

ಸೌಜನ್ಯ ಹತ್ಯೆ ಮರುತನಿಖೆಗೆ ಕೇಂದ್ರಕ್ಕೆ ಪತ್ರ: ಸಿದ್ದರಾಮಯ್ಯ

ಈ ವೇಳೆ ಪ್ರಧಾನಿ ಅವರು ಮಾತ್ರ ಕೊಂಚವೂ ವಿಚಲಿತರಾಗದೇ ನಸುನಗುತ್ತಾ ವಿಜ್ಞಾನಿಗಳನ್ನು ಉದ್ದೇಶಿಸಿ, ಜೀವನದಲ್ಲಿ ಏರಿಳಿತ ಸಹಜ. ನೀವು ಮಾಡಿರುವುದು ಕಡಿಮೆ ಸಾಧನೆಯಲ್ಲ. ನಿಮ್ಮ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆಯಿದೆ. ನಮ್ಮ ಮಹಾಯಾತ್ರೆ ಮುಂದುವರಿಯಲಿದೆ. ಈ ವೈಫಲ್ಯವನ್ನೇ ಸವಾಲಾಗಿ ಸ್ವೀಕರಿಸೋಣ. ಮತ್ತೆ ನಾವು ಸಂತಸವನ್ನು ಹಂಚಿಕೊಳ್ಳುವ ಸಮಯ ಖಂಡಿತಾ ಬರಲಿದೆ. ಮೈ ಪೂರಿ ತರಹ್‌ ಆಪ್‌ ಕೆ ಸಾಥ್‌ ಹುಂ.. ಹ ಹಿಮ್ಮತ್‌ ಕೆ ಸಾಥ್‌ ಚಲೇ ಎಂದು ಹುರಿದುಂಬಿಸಿದರು ಎಂದು ಸ್ಮರಿ​ಸಿ​ದ್ದಾರೆ.

ಪ್ರಧಾನಿ ನೀಡಿದ ಸ್ಫೂರ್ತಿಗೆ ಇಡೀ ಆವರಣದಲ್ಲಿ ಚಪ್ಪಾಳೆಗಳ ಸದ್ದು ಮಾರ್ದನಿಸಿತು. ಶೋಕದ ವಾತಾವರಣ ಕ್ಷಣಾರ್ಧದಲ್ಲಿ ಮರೆಯಾಗಿ ಪ್ರಚಂಡ ಶಕ್ತಿ ಸಂಚಯವಾಗಿತ್ತು. ನಿರಾಸೆಯ ಕಾರ್ಮೋಡ ಕರಗಿ ಮಿಂಚಿನ ಸಂಚಾರವಾಗಿತ್ತು. ವಿಜ್ಞಾನಿಗಳು ಹೊಸ ಸಂಕಲ್ಪವನ್ನು ಮಾಡಿದ್ದರು. ಪ್ರಧಾನಿಯವರು ಅಂದು ನೀಡಿದ್ದ ಸ್ಫೂರ್ತಿಯೇ ಚಂದ್ರಯಾನ -3ರ ಯಶಸ್ಸಿಗೆ ನಾಂದಿಯಾಯಿತು ಎಂದು ಇಸ್ರೋ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾಗಿರುವ ಕೆ.ಶಿವನ್‌ ಕಳೆದ ತಿಂಗಳು ಒಂದು ಮಾಧ್ಯಮ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ. ಒಬ್ಬ ನಿಜವಾದ ಕಾಳಜಿ-ಪ್ರೀತಿ ತನ್ನವರ ಕೆಲಸದ ಬಗ್ಗೆ ಹೆಮ್ಮೆಯಿರುವ ನಾಯಕ ಮಾಡಬಹುದಾದ ಕೆಲಸ ಎಂದು ಪ್ರಧಾನಿಯನ್ನು ವರ್ಣಿಸಿದ್ದಾರೆ ಎಂದ ಸಂಸ​ದರು ತಿಳಿ​ಸಿ​ದ್ದಾರೆ.

ಇದೀಗ ಮೋದಿ ಅವರ ಸ್ಫೂರ್ತಿ, ನಮ್ಮ ವಿಜ್ಞಾನಿಗಳ ಅಚಲ ಆತ್ಮವಿಶ್ವಾಸ, ನಮ್ಮ ತಂತ್ರಜ್ಞಾನದ ಶ್ರೇಷ್ಠತೆ, ಯಾವುದೇ ಪ್ರಭಾವಗಳಿಗೂ- ಕೊಂಕುಗಳಿಗೂ ಈಡಾಗದೆ ತನ್ನಪಾಡಿಗೆ ತಾನೊಬ್ಬ ತಪಸ್ವಿಯಂತೆ ಕೆಲಸ ಮಾಡುವ ಸಂಸ್ಥೆಯ ವೃತ್ತಿಪರತೆಯಿಂದಾಗಿ, ಶಿವನ್‌ ಅವರು ಪಟ್ಟಿದ್ದ ಶ್ರಮ- ಹಾಕಿಕೊಟ್ಟಿದ್ದ ಮೇಲ್ಪಂಕ್ತಿಯಿಂದಾಗಿ, ಈಗಿನ ಅಧ್ಯಕ್ಷ ಸೋಮನಾಥ್‌ ಅವರ ನಾಯಕತ್ವದಿಂದಾಗಿ, ಈಗ ನಾವು ಚಂದ್ರನ ಅಂಗಳದಲ್ಲಿ ಸುಸೂತ್ರವಾಗಿ ಕಾಲಿಟ್ಟಿದ್ದೇವೆ! ಚಂದ್ರಯಾನ-3 ಯಶಸ್ವಿಯಾಗಿದೆ ತಿಳಿಸಿದ್ದಾರೆ.

ರಾಷ್ಟ್ರಭಕ್ತಿ, ಸಾಹಸ, ಪ್ರಾಮಾಣಿಕತೆ ಮತ್ತು ಕಾಯಕ ಸಂಸ್ಕೃತಿ ವಿಷಯದಲ್ಲಿ ಇವತ್ತು ನೀವು ಇಡೀ ದೇಶಕ್ಕೇ ಆದರ್ಶ ಪ್ರಾಯರಾಗಿದ್ದೀರಿ. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ್ದೀರಿ. ಭಾರತದ ಕೀರ್ತಿ ಪತಾಕೆಯನ್ನು ಆಕಾಶದೆತ್ತರಕ್ಕೆ ಹಾರಿಸಿದ್ದೀರಿ, ಭಾರತದತ್ತ ಇಡೀ ಪ್ರಪಂಚ ಬೆರಗಿನಿಂದ ನೋಡುವಂತೆ ಮಾಡಿದ್ದೀರಿ, ಭಾರತವನ್ನು ಬಲಿಷ್ಠ ರಾಷ್ಟ್ರಗಳ ಸಾಲಿಗೆ ಸೇರಿಸಿದ್ದೀರಿ ಎಂದು ಛಲ ಬಿಡದ ತ್ರಿವಿಕ್ರಮರಂತೆ ಯಶಸ್ಸಿನ ಗುರಿಯನ್ನು ಸಾಧಿಸಿರುವ ಎಲ್ಲ ವಿಜ್ಞಾನಿಗಳಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ತಕರಾರು ಅರ್ಜಿ ಸಲ್ಲಿಸದೆ ತಮಿಳುನಾಡಿಗೆ ನೀರು ಬಿಡುಗಡೆ: ಸರ್ಕಾರಕ್ಕೆ ವಿಪಕ್ಷ ಚಾಟಿ

ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಆಧುನಿಕ ಭಾರತ ನಿರ್ಮಾಣ ಕಾರ್ಯದಲ್ಲಿ ಪ್ರಧಾನಿ ಮೋದೀಜಿ ಅವರಿಗೆ ಮೊದಲಿನಿಂದಲೂ ವಿಶೇಷ ಆಸಕ್ತಿ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ಪ್ರಾಶಸ್ತ್ಯ ಪಡೆದಿವೆ ಎಂದು ವಿದೇಶಿ ಮಾಧ್ಯಮಗಳು ಈಗಾಗಲೇ ಶ್ಲಾಘಿಘಿಘಿಘಿಸಿವೆ. ಚಂದ್ರಯಾನದ ಪ್ರತಿ ಹಂತದ ಬೆಳವಣಿಗೆಯ ಮೇಲೂ ಪ್ರಧಾನಿ ಅವರು ಖುದ್ದಾಗಿ ನಿಗಾ ವಹಿಸುತ್ತಾ ಬಂದಿದ್ದಾರೆ. ಇಂತಹ ಮಹತ್ತರವಾದ ಕಾರ್ಯಕ್ರಮಗಳ ಮೂಲಕವೇ ದೇಶದ ದೃಢತೆ, ಶಕ್ತಿ ಮತ್ತು ಸಾಮರ್ಥ್ಯಗಳ ಅಭಿವ್ಯಕ್ತಿ ಸಾಧ್ಯ ಎನ್ನುವುದು ಅವರ ಅಚಲವಾದ ನಂಬಿಕೆ
- ಬಿ.ವೈ.ರಾಘವೇಂದ್ರ, ಸಂಸದ

click me!