ಪ್ರಧಾನಿ ನರೇಂದ್ರ ಮೋದಿ ಅವರು ಖಾಸಗಿ ಸಂದರ್ಶನದಲ್ಲಿ ಎಲೆಕ್ಷನ್ ಬಾಂಡ್ ವಿಚಾರವಾಗಿ ಮಾತನಾಡುವಾಗ ಅವರ ಕೈ ನಡುಗುತ್ತಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಮಂಡ್ಯ (ಏ.17): ಭಾರತದಲ್ಲಿ ನಡೆದಿರುವ ಅತಿದೊಡ್ಡ ಹಗರಣವೆಂದರೆ ಅದು ಎಲೆಕ್ಷನ್ ಬಾಂಡ್ ಭ್ರಷ್ಟಾಚಾರವಾಗಿದೆ. ಮೊನ್ನೆ ನರೇಂದ್ರ ಮೋದಿ ಅವರು ಖಾಸಗಿ ಸಂದರ್ಶನದಲ್ಲಿ ಎಲೆಕ್ಷನ್ ಬಾಂಡ್ ವಿಚಾರವಾಗಿ ಮಾತನಾಡುವಾಗ ಅವರ ಕೈ ನಡುಗುತ್ತಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಮಂಡ್ಯದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಮೊನ್ನೆ ಸಂದರ್ಶನ ನೀಡಿದ್ದರು. ಅದರಲ್ಲಿ ಎಲೆಕ್ಟ್ರೋರಲ್ ಬಾಂಡ್ ಬಗ್ಗೆ ಮಾತನಾಡಿದ್ದಾರೆ. ಆ ಸಂದರ್ಶನ ಒಮ್ಮೆ ನೋಡಿ. ಎಲೆಕ್ಷನ್ ಬಾಂಡ್ ಬಗ್ಗೆ ಮಾತನಾಡುವಾಗ ಅವರ ಕೈ ನಡಗುತಿತ್ತು. ಎಲೆಕ್ಷನ್ ಬಾಂಡ್ ನಲ್ಲಿ ದೊಡ್ಡ ಹಗರಣ ನಡೆದಿದೆ. ಎಲೆಕ್ಷನ್ ಬಾಂಡ್ ಯಾರಿಗೆ ಹಣ ಕೊಡಲಾಗಿದೆ? ಯಾರಿಂದ ಕೊಡಲಿದೆ ಎಲ್ಲವೂ ನಿಗೂಢವಾಗಿದೆ. ಎಲೆಕ್ಷನ್ ಬಾಂಡ್ ಬಗ್ಗೆ ಬಹಿರಂಗವಾಗಿ ಸಾರ್ವಜನಿಕರಿಗೆ ತಿಳಿಸಬೇಕು. ಸಿಬಿಐ, ಇಡಿ ಹಾಗೂ ತೆರಿಗೆ ಇಲಾಖೆಗಳನ್ನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಿಶ್ವದಲ್ಲೇ ಅತ್ಯಂತ ಭ್ರಷ್ಟಾಚಾರ ಅಂದ್ರೆ ಎಲೆಕ್ಷನ್ ಬಾಂಡ್ ಹಗರಣದವಾಗಿದೆ. ಕೈಗಾರಿಕಾ ಸಂಸ್ಥೆಗಳಿಂದ ಹೆದರಿಸಿ ಬೆದರಿಸಿ ಹಣ ಸಂಗ್ರಹ ಮಾಡಲಾಗಿದೆ. ಈ ವಿಚಾರವನ್ನ ಮಾಧ್ಯಮಗಳು ನೇರವಾಗಿ ಜನರಿಗೆ ಹೇಳಲಾಗುತ್ತಿಲ್ಲ ಎಂದು ಹೇಳಿದರು.
undefined
ರಾಹುಲ್ ಗಾಂಧಿ ಕಾಲ್ಗುಣ ಶಕ್ತಿಶಾಲಿಯಾಗಿದೆ; ಪಾದಯಾತ್ರೆ ಮಾಡಿದಲ್ಲೆಲ್ಲಾ ಕಾಂಗ್ರೆಸ್ ಗೆದ್ದಿದೆ: ಡಿ.ಕೆ. ಶಿವಕುಮಾರ್
ಲೋಕಸಭೆ ಚುನಾವಣೆಗಾಗಿ ಘೋಷಣೆ ಮಾಡಿರುವ ಪ್ರಣಾಳಿಕೆಯ ಅಂಶಗಳನ್ನೆಲ್ಲ ಪ್ರಸ್ತಾಪಿಸಿ ಭಾಷಣ ಮಾಡಿದ ರಾಹುಲ್ ಗಾಂಧಿ, ರೈತರಿಗೆ ಮಹಿಳೆಯರರಿಗೆ ಏನೆಲ್ಲ ಯೋಜನೆ ರೂಪಿಸಿದ್ದೇವೆ ಎಂದು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದರು. ನಿರುದ್ಯೋಗ ನಿವಾರಣೆಗೆ ಹೋಸ ಯೋಜನೆ ತರುತ್ತಿದ್ದೇವೆ. ಪದವಿ ಮುಗಿಸಿದ ಯುವಕರಿಗೆ ಉದ್ಯೋಗ ನಿಶ್ಚಿತವಾಗಲಿದೆ. ಉದ್ಯೋಗ ಭದ್ರತೆಯನ್ನ ನಾವು ನೀಡ್ತೇವೆ. ಇನ್ನು ದೇಶದದಲ್ಲಿ ಈಗಿರುವ ಸಂವಿಧಾನ ಬದಲಾವಣೆ ಮಾಡುವ ನಡೆಯುತ್ತಿದೆ. ಬಿಜೆಪಿ ಕೇವಲ ಬೆರೆಳೆಣಿಕೆಯ ಜನರಪರವಾಗಿ ಕೆಲಸ ಮಾಡ್ತಿದೆ. ಆದರೆ, ಕಾಂಗ್ರೆಸ್ ಬಡವರು, ಹಿಂದುಳಿದವರು ರೈತರಪರವಾಗಿ ಕೆಲಸ ಮಾಡ್ತಿದೆ. 5 ಗ್ಯಾರಂಟಿಗಳನ್ನ ನಾವು ಘೋಷಣೆ ಮಾಡಿದಂತೆ ಜಾರಿ ಮಾಡಿದ್ದೇವೆ. ಎಐಸಿಸಿಯಿಂದಲ್ಲೂ ನಾವು ಗ್ಯಾರಂಟಿ ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದರು.
ಇಡೀ ದೇಶದಲ್ಲಿ ಕರ್ನಾಟಕ ತೆಲಂಗಾಣ ಮಾತ್ರವಲ್ಲ, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೂ ರೈತರು ಸಮಸ್ಯೆಯಲ್ಲಿದ್ದಾರೆ. ರೈತರಿಗೆ ನ್ಯಾಯ ಬೇಕಾಗಿದೆ. ಆ ಕೆಲಸ ಕಾಂಗ್ರೆಸ್ ಮಾಡಲಿದೆ. ಭಾರತ ಜೋಡೋ ಯಾತ್ರೆಯಲ್ಲು ರೈತ ಸಂಕಷ್ಟ ಆಲಿಸಿದ್ದೇನೆ. ರೈತರು ನನ್ನ ಬಳಿ ಎರಡು ಮೂರು ವಿಷಯಗಳ ಬಗ್ಗೆ ಮನವಿ ಮಾಡಿದ್ದಾರೆ. ಬೆಂಬಲ ಬೆಲ ಬಗ್ಗೆ ರೈತರು ನನ್ನ ಜೊತೆ ಚರ್ಚೆ ನಡೆಸಿದ್ದಾರೆ. ರೈತರ ಬೆಳೆಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನು ರೈತರ ಸಾಲಮನ್ನ ಯಾಕೆ ಆಗುತ್ತಿಲ್ಲ? ಶ್ರೀಮಂತರ ಸಾಲ ಮನ್ನಾ ಅಗುತ್ತದೆ. ಆದರೆ, ರೈತರದ್ದು ಯಾಕೆ ಮಾಡೋಕೆ ಹಿಂಜರಿಕೆ.? ಎಂದು ರೈತರು ಕೇಳ್ತಿದ್ದಾರೆ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ್ರೆ ರೈತರ ಎಲ್ಲಾ ಬೇಡಿಕೆಗಳನ್ನ ಪುರೈಸುತ್ತೇವೆ ಎಂದು ರಾಹುಲ್‌ಗಾಂಧಿ ತಿಳಿಸಿದರು.
ಡಿಕೆಶಿ 9 ವರ್ಷದ ಹೆಣ್ಣು ಮಗು ಕಿಡ್ನಾಪ್ ಮಾಡಿ ಅವರಪ್ಪನ ಆಸ್ತಿ ಬರೆಸಿಕೊಂಡ ದಾಖಲೆಯಿದೆ; ಹೆಚ್.ಡಿ. ದೇವೇಗೌಡ ಆರೋಪ
ರಾಹುಲ್ ಗಾಂಧಿ ಕಾಲ್ಗುಣ ಬಹಳ ಶಕ್ತಿಶಾಲಿಯಾಗಿದೆ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಹುಲ್ ಗಾಂಧಿ ಎಷ್ಟು ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದ್ರೋ ಅಷ್ಟು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಅವರ ಕಾಲ್ ಗುಣ ಬಹಳ ಶಕ್ತಿ ಶಾಲಿಯಾಗಿದೆ. ನಿಮ್ಮ ಸಮಸ್ಯೆಗಳನ್ನ ಕೇಳಲು ಪಾದಯಾತ್ರೆ ಮಾಡಿದ್ರು. ಮಂಡ್ಯ ಗೆದ್ರೆ ಇಂಡಿಯಾ ಗೆಲ್ಲುತ್ತೇನೆ ಅಂತ ಇಂದು ಇಲ್ಲಿಗೆ ಬಂದಿದ್ದಾರೆ. ನಾನು ಯಾವ ಅಭ್ಯರ್ಥಿ ಬಗ್ಗೆಯೂ ಮಾತನಾಡಲ್ಲ. ಅವರು ಮಂಡ್ಯ ಜಿಲ್ಲೆಗೆ ಏನೂ ಕೊಟ್ಟಿಲ್ಲ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದರು.