ಬಿಜೆಪಿ ಸರ್ಕಾರ ಸ್ವಾರ್ಥಕ್ಕಾಗಿ‌ ಅಧಿಕಾರ ಬಳಸಿಕೊಳ್ಳುತ್ತಿದೆ: ಮಯೂರ ಜಯಕುಮಾರ್ ವಾಗ್ದಾಳಿ

By Girish GoudarFirst Published Apr 17, 2024, 1:50 PM IST
Highlights

ಬಿಜೆಪಿ ಸರ್ಕಾರ ಅಧಿಕಾರವನ್ನು ಸಂಪೂರ್ಣವಾಗಿ ತಮ್ಮ ಸ್ವಾರ್ಥಕ್ಕಾಗಿ‌ ಬಳಸಿಕೊಳ್ಳುತ್ತಿದ್ದು, ಚುನಾವಣೆಯಲ್ಲಿ ಬೆದರಿಸಿ ಮತ ಗಳಿಸುವ ತಂತ್ರಗಾರಿಕೆಯನ್ನು ಬಳಸುತ್ತಿದ್ದಾರೆ. ಆದರೆ ಇದ್ಯಾವುದು ಫಲಪ್ರದ ಆಗುವುದಿಲ್ಲ: ಮಯೂರ ಜಯಕುಮಾರ್ 

ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಏ.17): ಬಿಜೆಪಿ ಸರ್ಕಾರ ತನ್ನ ಅಧಿಕಾರವನ್ನು ಬಳಸಿಕೊಂಡು ಇಡಿ, ಸಿಬಿಐ ಮೇಲೆ ಒತ್ತಡ ಹಾಕಿ ವಿರೋಧ ಪಕ್ಷದವರನ್ನು ಬೆದರಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಮಯೂರ ಜಯಕುಮಾರ್ ಆರೋಪಿಸಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಮಯೂರ ಜಯಕುಮಾರ್ ಅವರು, ಬಿಜೆಪಿ ಸರ್ಕಾರ ಅಧಿಕಾರವನ್ನು ಸಂಪೂರ್ಣವಾಗಿ ತಮ್ಮ ಸ್ವಾರ್ಥಕ್ಕಾಗಿ‌ ಬಳಸಿಕೊಳ್ಳುತ್ತಿದ್ದು, ಚುನಾವಣೆಯಲ್ಲಿ ಬೆದರಿಸಿ ಮತ ಗಳಿಸುವ ತಂತ್ರಗಾರಿಕೆಯನ್ನು ಬಳಸುತ್ತಿದ್ದಾರೆ. ಆದರೆ ಇದ್ಯಾವುದು ಫಲಪ್ರದ ಆಗುವುದಿಲ್ಲ. ರಾಜ್ಯದಲ್ಲಿ 5 ಗ್ಯಾರಂಟಿಗಳ ಯೋಜನೆಗಳ ಮೂಲಕ ರಾಜ್ಯದ ಜನತೆಯನ್ನು ಕಾಂಗ್ರೆಸ್ ಸರ್ಕಾರ ತಲುಪಿದೆ. ಇದೇ ರೀತಿಯಲ್ಲಿ ದೇಶದೆಲ್ಲೆಡೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಭರವಸೆ ನೀಡಿದಂತೆ ನಡೆಯಲಿದ್ದೇವೆ‌. ಬಿ.ಎನ್.ಚಂದ್ರಪ್ಪ ಒಳ್ಳೆಯ ವ್ಯಕ್ತಿ. ಇಲ್ಲಿನ ಜನತೆಗೆ ಇದೊಂದು ಒಳ್ಳೆಯ ಅವಕಾಶವಾಗಿದೆ ಸಜ್ಜನ‌ ವ್ಯಕ್ತಿಯನ್ಮು ಗೆಲ್ಲಿಸಲು. ಇಂಡಿಯಾ ಒಕ್ಕೂಟದ ವ್ಯಕ್ತಿಯನ್ನು ಗೆಲ್ಲಿಸಿ ದೇಶಕ್ಕೆ ಒಳ್ಳೆಯ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು. 

ಡಿಕೆಶಿ 9 ವರ್ಷದ ಹೆಣ್ಣು ಮಗು ಕಿಡ್ನಾಪ್ ಮಾಡಿ ಅವರಪ್ಪನ ಆಸ್ತಿ ಬರೆಸಿಕೊಂಡ ದಾಖಲೆಯಿದೆ; ಹೆಚ್.ಡಿ. ದೇವೇಗೌಡ ಆರೋಪ

ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಸರ್ವಾಧಿಕಾರ ಮತ್ತು ಸಂವಿಧಾನದ ರಕ್ಷಣೆ ಮಧ್ಯೆ ನಡೆಯುತ್ತಿರುವ ಚುನಾವಣೆ ಇದಾಗಿದೆ. ಸಂವಿಧಾನ ಇದ್ದರೆ ಮಾತ್ರ ನಾವು ಬದುಕುತ್ತೇವೆ ಎಂಬ ಸ್ವಷ್ಟ ನಿಲುವಿನೊಂದಿಗೆ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳು ಒಗ್ಗೂಡಿವೆ.‌ ಮಂತ್ರಿಯಾದವರು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುತ್ತಾರೆ ಎಂದರೆ ಹೇಗೆ ? ಇದಕ್ಕೆ ಮೋದಿ ಅವರು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಬೆಂಬಲ ಸೂಚಿಸಿದಂತಾಗಿದ್ದು, ಇದಕ್ಕೆಲ್ಲ ತಕ್ಕ ಪ್ರತ್ಯುತ್ತರ ಚುನಾವಣೆಯಲ್ಲಿ ಜನತೆ ಕೊಡಲಿದ್ದಾರೆ ಎಂದು ಹೇಳಿದರು. ಮೋದಿ ಅವರಿಂದ ಯಾವ ಕುಟುಂಬಕ್ಕೆ ಸಹಕಾರ ಆಗಿದೆ ಎಂಬುದನ್ನು ಹೇಳಲಿ ? ಇದನ್ನು ಕುಮಾರಸ್ವಾಮಿ ಅವರು ಕೂಡ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಅವರು ೫ ಕೆ.ಜಿ.ಅಕ್ಕಿ. ಹಣ, ಉಚಿತ ವಿದ್ಯುತ್, ನಿರುದ್ಯೋಗಿ ಯುವಕರಿಗೆ ಹಣ ನೀಡಲಾಗುತ್ತಿದ್ದಾರೆ. ಇದೇ ರೀತಿ ಅನ್ಯ ಪಕ್ಷದವರು ತಾವೆನೂ ಮಾಡುತ್ತಿದ್ದೆವೆ ಎಂದು ಹೇಳಬೇಕಲ್ಲವೇ ? ಯಾವ ಕುಟುಂಬಕ್ಕೆ ಒಳಿತಾಗಿದೆ ಎಂದು ಪ್ರಶ್ನಿಸಿದರು. ಬಿಜೆಪಿ ಮೊದಲಿನಿಂದಲೂ ಭಾವನೆಗಳನ್ನು‌ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಧರ್ಮ, ಜಾತಿಗಳ ಮೇಲೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿವೆ. ಈ ರೀತಿಯಿಂದಲೇ 2 ಭಾರೀ ಗೆದ್ದಿದ್ದಾರೆ. ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿಲ್ಲ. ಜನತೆ ಉದ್ಯೋಗ ಇಲ್ಲದೆ ಕೇವಲ ಕೋಮುಗಲಭೆ ಮಾಡುತ್ತಾ ಹೋದರೆ ಜೀವನ ನಡೆಸುವುದು ಹೇಗೆ ಎಂದು ಚಿಂತೆಯಲ್ಲಿ ಮುಳುಗಿ, ಜನರು ಕಂಗಾಲಗಿದ್ದಾರೆ. ಆದ್ದರಿಂಲೇ ಈ ಚುನಾವಣೆಯಲ್ಲಿ ವ್ಯತಿರಿಕ್ತ ಫಲಿತಾಂಶ ಹೊರಬರಲಿದ್ದು, ಸರ್ವ ಜನಾಂಗದವರಿಗಾಗಿ ದುಡಿಯುತ್ತಿರುವ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಬೇಕು. ನನ್ನ ಹಾಗೂ ಪಕ್ಷವನ್ನು ನಂಬಿ ಮತ ನೀಡಬೇಕು ಎಂದು ಮನವಿ ಮಾಡಿದರು‌.

ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಮಾತನಾಡಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮೊದಲೇ ಹೇಳಿದ್ದರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೆ ದೇಶಕ್ಕೆ ಕಂಠಕ ಎಂದು, ಆದರೆ ನಾವು ಎಚ್ಚೆತ್ತುಕೊಳ್ಳಲಿಲ್ಲ. ಈಗಲಾದರೂ ನಾವುಗಳು ಎಚ್ಚೆತ್ತುಕೊಳ್ಳಬೇಕಿದೆ. ಸಂವಿಧಾನದ ಕಗ್ಗೊಲೆಯಾಗಿದೆ. ಸಂವಿಧಾನ ಬದಲಾವಣೆ ಮಾಡಲು ಹೊರಟಿರುವುದು ವಿನಾಶದ ಸಂಗತಿ. ಅದೇ ರೀತಿ ಅಭಿವೃದ್ದಿಯನ್ನು ಸಹಿಸದೆ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.

Breaking: ಸಂಸದ ಕರಡಿ ಸಂಗಣ್ಣ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

ಬರಗಾಲದ ಹಣ ಬಿಡುಗಡೆ ಮಾಡಿಲ್ಲ.  ರಾಜ್ಯದ ಸಂಸದರು ಬರಗಾಲದ ಸಮಯದಲ್ಲೂ ಲೋಕಸಭೆಯಲ್ಲಿ ಧ್ವನಿ ಎತ್ತಲಿಲ್ಲ ಎಂದರೆ ಯಾವ ರೀತಿ ಅಧಿಕಾರ ನಡೆಸುತ್ತಿದ್ದಾರೆ ಎಂಬುದು ತಿಳಿಯಯತ್ತದೆ. ಪಂಜಾಬ್ ರಾಜ್ಯದ ಯಾವ ಗ್ರಾಮದಲ್ಲೂ ಬಿಜೆಪಿಯವರನ್ನು ಒಳಗಡೆ ಬಿಟ್ಟುಕೊಳ್ಳುತ್ತಿಲ್ಲ ಅದೇ ರೀತಿ  ನಮ್ಮ ರಾಜ್ಯದಲ್ಲೂ ಮಾಡಬೇಕು ಹೇಳಿದರು. ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಮಂಜಪ್ಪ ಮಾತನಾಡಿ, ದೇಶದ ಸಂವಿಧಾನ ರಕ್ಷಣೆ ಮಾಡುವ ನಿಟ್ಟಿನಲ್ಲಿ ಇಂಡಿಯಾ ಒಕ್ಕೂಟದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು‌ ಮನವಿ ಮಾಡಿದರು.

ಕಮ್ಯುನಿಷ್ಟ್‌ ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ಬಾಬು‌ ಮಾತನಾಡಿ, ಬೇಟಿ ಪಡಾವೋ ಬೇಟಿ ಬಚಾವೋ ಎಂದು ಹೇಳಿದ ಮೋದಿ ಅಂಗನವಾಡಿ ಕಾರ್ಯಕರ್ತರಿಗೆ ಅನುದಾನ ಕಡಿಮೆ ಮಾಡಿದರು. ದೇಶದಲ್ಲಿ ನೀರಿನ ಹಾಹಾಕಾರ ಹೆಚ್ಚಿದ್ದರು ಕೂಡ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದ ನದಿ ಜೋಡಣೆ ಬಗ್ಗೆ ಒಂದು ಮಾತನಾಡಿಲ್ಲ ಇಂತಹವರನ್ನು ಅಧುಕಾರದಿಂದ ದೂರ ಇಟ್ಟು ಇಂಡಿಯಾ ಒಕ್ಕೂಟದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು‌. 

click me!