ಮೋದಿ ದೇಶದ ಸಂವಿಧಾನ ಬದಲಾಯಿಸಲೆಂದೇ 400 ಸೀಟ್ ಕೇಳ್ತಿದ್ದಾರೆ; ಮಲ್ಲಿಕಾರ್ಜುನ ಖರ್ಗೆ ಆರೋಪ

By Sathish Kumar KHFirst Published Apr 22, 2024, 2:39 PM IST
Highlights

ದೇಶದ ಸಂವಿಧಾನವನ್ನು ಬದಲಾಯಿಸಲು 400 ಸಂಸದ ಸಂಖ್ಯಾಬಲ ಬೇಕು. ಸಂವಿಧಾನ ಬದಲಾವಣೆ ಮಾಡುವ ಉದ್ದೇಶದಿಂದಲೇ ನರೇಂದ್ರ ಮೋದಿ ಈ ಬಾರಿ 400 ಸೀಟು ಗೆಲ್ಲಿಸಿ ಎಂದು ಕೇಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ.

ರಾಮನಗರ (ಏ.22): ದೇಶದ ಸಂವಿಧಾನವನ್ನು ಬದಲಾವಣೆ ಮಾಡಬೇಕಾದರೆ ಲೋಕಸಭೆಯಲ್ಲಿ ಕನಿಷ್ಠ 400 ಸಂಖ್ಯಾಬಲದ ಅಗತ್ಯವಿದೆ. ಹೀಗಾಗಿಯೇ ಮೋದಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳುತ್ತಿದ್ದಾರೆ ಎಂದು ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ.

ಚನ್ನಪಟ್ಟಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇದು ಮಹತ್ವದ ಚುನಾವಣೆ. ಇದು ಕೇವಲ ವಿಧಾನಸಭೆ ಅಥವಾ ವಿಧಾನ ಪರಿಷತ್ ಚುನಾವಣೆಯಲ್ಲ. ದೇಶದ ಭವಿಷ್ಯ ರೂಪಿಸುವ ಚುನಾವಣೆ ಇದು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು, ಸಂವಿಧಾನ ಉಳಿಸಲು ಕಾಂಗ್ರೆಸ್ ಬೆಂಬಲಿಸಿ. ಕಾಂಗ್ರೆಸ್ ಗೆ ಮತ ನೀಡದಿದ್ರೆ ಪ್ರಜಾಪ್ರಭುತ್ವ, ಸಂವಿಧಾನ ಇರೋದಿಲ್ಲ. ಮೋದಿ ಈ ಲೋಕಸಭೆ ಚುನಾವಣೆಯಲ್ಲಿ 400 ಕ್ಷೇತ್ರ ಗೆಲ್ತೀವಿ ಅಂತಾರೆ. ಯಾಕೆ ಹೇಳಿ? ಸಂವಿಧಾನ ಬದಲಾವಣೆ ಮಾಡಬೇಕು ಅಂದ್ರೆ ಲೋಕಸಭೆಯಲ್ಲಿ 400 ಸಂಖ್ಯಾಬಲ ಬೇಕು. ಹೀಗಾಗಿ, ಮೋದಿ 400 ಕ್ಷೇತ್ರ ಗೆಲ್ಲಿಸಬೇಕು ಎಂದು ಬಿಜೆಪಿ ನಾಯಕರಿಗೆ ಕರೆ ನೀಡಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ಬರ ಪರಿಹಾರಕ್ಕೆ ಒಂದೇ ಮೆಟ್ಟಿಲು ಬಾಕಿ; ಸುಪ್ರೀಂ ಮುಂದೆ 7 ದಿನ ಗಡುವು ಪಡೆದ ಕೇಂದ್ರ ಸರ್ಕಾರ

ಬಾಬಾ ಸಾಹೇಬ್ ಹೆಸರಿನ ಮೇಲೆ ಮೋದಿ ಸಾಕಷ್ಟು ಭಾಷಣ ಮಾಡ್ತಾರೆ. ಆದರೆ ಆರ್‌ಎಸ್ಎಸ್ ಕಚೇರಿಯಲ್ಲಿ ಅಂಬೇಡ್ಕರ್ ಪೋಟೊ ಇದ್ಯಾ.? ಆರ್ ಎಸ್ಎಸ್ ಕಚೇರಿ ಮೇಲೆ ಎಂದಾದರೂ ತ್ರಿವರ್ಣ ಧ್ವಜ ಹಾರಿಸಿದ್ದಾರಾ.? ದೇಶದ ಮೇಲೆ ಯಾರಿಗೆ ಹೆಚ್ಚು ಪ್ರೀತಿ ಇದೆ ಅಂತ ಇದರಿಂದ ಗೊತ್ತಾಗುತ್ತದೆ. ಇವರು‌ ನಮಗೆ ದೇಶಪ್ರೇಮದ ಪಾಠ ಮಾಡ್ತಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ. ಮೋದಿಗೆ ಸಂವಿಧಾನ ಬೇಕಾಗಿಲ್ಲ. ಅವರಿಗೆ ಸರ್ವಾಧಿಕಾರಿ ಆಡಳಿತ ಬೇಕು. ಕಳೆದ 10 ವರ್ಷದಿಂದ ಅವರೇ ಅಧಿಕಾರ ಮಾಡ್ತಿದ್ದಾರೆ ಎಂದರು.

ಮೋದಿ ಅಧಿಕಾರಕ್ಕೆ ಬರುವ ಮುಂಚೆ ಅವರು ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದಾರಾ.? 2 ಕೋಟಿ ಉದ್ಯೋಗ ಸೃಷ್ಠಿ ಮಾಡ್ತೀವಿ ಅಂದ್ರ ಮಾಡಿದ್ರಾ.? ವಿದೇಶದಲ್ಲಿರೋ ಕಪ್ಪು ಹಣ ತಂದು ಬಡವರ ಜೇಬಿಗೆ 15ಲಕ್ಷ ಹಾಕ್ತೀವಿ ಅಂದ್ರ ಹಾಕಿದ್ರಾ.? ರೈತರ ಆದಾಯ ಡಬಲ್ ಮಾಡ್ತೀನಿ ಅಂದ್ರು ಮಾಡಿದ್ರಾ.? 3 ಕಾನೂನುಗಳನ್ನ ಪಾರ್ಲಿಮೆಂಟ್ ನಲ್ಲಿ ತಂದು ರೈತರ ಸಮಾದಿ ಮಾಡಿದ್ದಾರೆ. ಈ ಮಾತುಗಳನ್ನ ಪಾರ್ಲಿಮೆಂಟ್ ನಲ್ಲಿ ಹೇಳಿದ್ರೆ ನಮ್ಮನ್ನ ಪಾರ್ಲಿಮೆಂಟ್ ನಿಂದ ಹೊರಗೆ ಹಾಕಿದರು. ಇದೇನಾ ನಿಮ್ಮ ಪ್ರಜಾಪ್ರಭುತ್ವ.? ಎಂದು ಕೇಂದ್ರ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಪದೇ ಪದೇ ಮೋದಿ ಹೇಳ್ತಾರೆ. ಹೆಣ್ಣುಮಕ್ಕಳ ಕಷ್ಟ ನೋಡಲಾಗದೇ ಎಲ್ ಪಿಜಿ ಕೊಡ್ತೀವಿ ಅಂದರು. ಆದರೆ ಎಲ್ಪಿಜಿ ಸಿಲಿಂಡರ್ ದರ ಎಷ್ಟಾಗಿದೆ.? ಪೆಟ್ರೋಲ್, ಡೀಸೆಲ್‌ ದರ ಎಷ್ಟು ಹೆಚ್ಚಾಗಿದೆ.? 2014ರಲ್ಲಿ ಪೆಟ್ರೋಲ್ 66ರೂ ಇತ್ತು, ಈಗ 101 ರೂ ಆಗಿದೆ. ಡೀಸೆಲ್ 45ರೂ ಇತ್ತು, ಈಗ 90ರೂ ಆಗಿದೆ. ಎಲ್ಪಿಜಿ 450ರೂ ಇತ್ತು, ಈಗ 1200ರೂ ಆಗಿದೆ. ಆದರೆ ನರೇಂದ್ರ ಮೋದಿ ಈ ಬಗ್ಗೆ ಮಾತನಾಡಲ್ಲ. ಅಜ್ಞಾನಿ ರೀತಿ ಏನೇನೋ ಮಾತನಾಡ್ತಾರೆ. ನಮ್ಮನ್ನ ಕೇವಲ ಮುಸ್ಲಿಂ ಪರ ಅಂತ ಬಿಂಬಿಸ್ತಾರೆ. ನಾವು ಕೊಟ್ಟ, ಪುಡ್ ಸೆಕ್ಯುರಿಟಿ ಆಕ್ಟ್ ನಲ್ಲಿ ಜಾತಿ ಬೇಧಬಾವ ಇದ್ಯಾ.? ಓಟ್ ಗೋಸ್ಕರ ಏನೇನೋ ಮಾತನಾಡ್ತಿದ್ದಾರೆ. ಮಾತೆತ್ತಿದ್ರೆ ಗಾಂಧಿ ಕುಟುಂಬದ ಬಗ್ಗೆ ಮಾತನಾಡ್ತಾರೆ. ಮೋದಿ ದೇಶಕ್ಕಾಗಿ ಏನು ಮಾಡಿದ್ದಾರೆ. ಹಿಂದು ಮುಸ್ಲಿಮರ ನಡುವೆ ಜಗಳ, ಜಾತಿ ಜಾತಿಗಳ ನಡುವೆ ಜಗಳ ತಂದಿಟ್ಟರು ಎಂದು ವಾಗ್ದಾಳಿ ಮಾಡಿದರು.

ಬೆಂಗಳೂರು ಕದಂಬ ಹೋಟೆಲ್‌ನಲ್ಲಿ ಬಾಂಬ್ ಇಟ್ಟಿದ್ದೇನೆ; ರಾಮೇಶ್ವರಂ ಕೆಫೆಗೂ ಬಾಂಬ್ ಇಟ್ಟಿದ್ದು ನಾನೇ ಎಂದ ಅನಾಮಿಕ!

ಕಾಂಗ್ರೆಸ್‌ನವರಿಗೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ವಿ ಅಂದ್ರು. ನನಗೂ ಆಹ್ವಾನ ಪತ್ರಿಕೆ ಕೊಟ್ಟರು. ನನಗೆ ಯಾಕೆ ಆಹ್ವಾನ ಕೊಟ್ರು ಅಂದ್ರೆ ನಾನು ವಿಪಕ್ಷ ನಾಯಕ. ನನಗೆ ಯಾವಾಗ ಬೇಕು ಅವಾಗ ಹೋಗ್ತೇನೆ. ಆದ್ರೆ ಬಿಜೆಪಿಯವರು ಕಾಂಗ್ರೆಸ್ ನವರು ಬರ್ತಿಲ್ಲ ಅಂತ ಅಪಪ್ರಚಾರ ಮಾಡ್ತಾವ್ರೆ. ಅದರೆ, ದೇಶದ ಪ್ರಥಮ ಪ್ರಜೆಯನ್ನೇ ಯಾಕೆ ಕರೆದಿಲ್ಲ. ದ್ರೌಪದಿ ಮುರ್ಮು ಅವರು ಸೆಡ್ಯೂಲ್ ಕ್ಯಾಸ್ಟ್ ಅಂತ ಕಾರ್ಯಕ್ರಮಕ್ಕೆ ಕರೆದಿಲ್ಲ. ಮೋದಿ ಮಾತ್ರ ಹೋಗಿ ಮೊದಲೇ ನಿಂತಿದ್ದರು. ಮೋದಿ ಏನ್ ಪೂಜಾರಿನಾ? ಪಾರ್ಲಿಮೆಂಟ್ ಕಟ್ಟಡ ಉದ್ಘಾಟನೆಗೂ ಮುರ್ಮು ಕರೆದಿಲ್ಲ. ಎಲ್ಲಯ ವರೆಗೆ ದೇವಾಲಯಗಳಿಗೆ ಶೂದ್ರ, ದಲಿತ, ಹಿಂದುಳಿದವರಿಗೆ ಬಿಡೋದಿಲ್ಲವೋ ಅಲ್ಲಿಯ ವರೆಗೆ ನಾನು ಬರಲ್ಲ ಅಂದೆ ಎಂದು ಮೋದಿ ಅವರನ್ನು ಮಲ್ಲಿಕಾರ್ಜುನ ಖರ್ಗೆ ಕಟುವಾಗಿ ಟೀಕಿಸಿದರು.

click me!