
ಹೈದರಾಬಾದ್: ಐಎಂಐಎಂ ಅಧ್ಯಕ್ಷ ಹಾಗೂ ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಸಂಸದ ಅಸಾದುದ್ದೀನ್ ಒವೈಸಿ ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರದ ಅಫಿಡವಿಟ್ ಸಲ್ಲಿಕೆ ಮಾಡಿದ್ದು, ಅವರು ಎಷ್ಟು ಆಸ್ತಿ ಹೊಂದಿದ್ದಾರೆ ಎಂಬ ಡಿಟೇಲ್ ಇಲ್ಲಿದೆ.
ಒವೈಸಿ ಅವರು ತಮ್ಮ ಕುಟುಂಬದ ಆಸ್ತಿ ಘೋಷಣೆ ಮಾಡಿದ್ದು ಒಟ್ಟು 23.87 ಕೋಟಿ ಮೊತ್ತದ ಆಸ್ತಿಯನ್ನು ಒವೈಸಿ ಕುಟುಂಬ ಹೊಂದಿದೆ. 2019ರಲ್ಲಿ ಒವೈಸಿ ಆಸ್ತಿ 13 ಕೋಟಿ ಇತ್ತು, ಈಗ 10 ಪ್ರತಿಶತದಷ್ಟು ಅವರ ಆಸ್ತಿ ಏರಿಕೆ ಕಂಡಿದೆ. ಇವರ ಚರಾಸ್ತಿ 2.96 ಕೋಟಿ ಹಾಗೂ ಸ್ತಿರಾಸ್ತಿ 20.91 ಕೋಟಿ ಇದೆ, 2019ರಲ್ಲಿ ಅಂದರೆ 5 ವರ್ಷಗಳ ಹಿಂದೆ ಇವರ ಚರಾಸ್ತಿ 1.67 ಕೋಟಿ ಇತ್ತು ಹಾಗೂ ಸ್ತಿರಾಸ್ತಿ 12 ಕೋಟಿ ಇತ್ತು.
ಇಷ್ಟೆಲ್ಲಾ ಆಸ್ತಿ ಇದ್ದರೂ ಒವೈಸಿ ಬಳಿ ಸ್ವಂತ ಕಾರಿಲ್ಲ, ಚುನಾವಣಾ ನಾಮಪತ್ರದ ವೇಳೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಒವೈಸಿ ಈ ಮಾಹಿತಿ ನೀಡಿದ್ದಾರೆ. ಹಾಗೆಯೇ ಒವೈಸಿ ಅವರ ಪತ್ನಿ 15.71 ಲಕ್ಷದ ಚರಾಸ್ತಿಯನ್ನು ಹೊಂದಿದ್ದಾರೆ. 4.90 ಕೋಟಿ ಮೊತ್ತದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಹಾಗೆಯೇ ಈ ದಂಪತಿ ಜೊತೆಯಾಗಿ 7.05 ಕೋಟಿಯ ಸಾಲ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ.
BJP Hyderabad Candidate: ಓವೈಸಿ ವಿರುದ್ಧ ಹೋರಾಟಕ್ಕೆ ಮಾಧವಿ ಲತಾಗೆ ಮುಸ್ಲಿಂ ಹೆಣ್ಮಕ್ಕಳ ಬೆಂಬಲ!
ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿರುವ ಒವೈಸಿ ಈಗ 5ನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದು, ಈ ಬಾರಿ ಇವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ ಉದ್ಯಮಿ ಮಾಧವಿ ಲತಾ ಅವರನ್ನು ಕಣಕ್ಕಿಳಿಸಿದೆ. 2022 ಹಾಗೂ 23ನೇ ವರ್ಷದಲ್ಲಿ ಇವರ ಆದಾಯವೂ 22.03 ಲಕ್ಷ ಇತ್ತು. ಆದರೆ ಹಿಂದಿನ ವರ್ಷಕ್ಕೆ (24.96 ಲಕ್ಷ ) ಹೋಲಿಸಿದರೆ ಆದಾಯದಲ್ಲಿ ಇಳಿಕೆ ಆಗಿದೆ. ಇದರ ಜೊತೆಗೆ ಎನ್‌ಪಿ ಬೊರೆ ಪಾಯಿಂಟ್ 22 ಪಿಸ್ತೂಲ್ ಅನ್ನು ಹೊಂದಿದ್ದಾರೆ ಹಾಗೆಯೇ ಎನ್ ಬೊರೆ 30-60 ಪಿಸ್ತೂಲ್ ಹೊಂದಿದ್ದು ಈ ಎರಡು ಪಿಸ್ತೂಲ್‌ಗಳ ಮೊತ್ತ ತಲಾ 1 ಲಕ್ಷ.
54 ವರ್ಷದ ಈ ಮುಸ್ಲಿಂ ನಾಯಕನಿಗೆ ಯಾವುದೇ ಕೃಷಿ ಭೂಮಿ, ಕೃಷಿಯೇತರ ಭೂಮಿಯಾಗಲಿ ಅಥವಾ ವಾಣಿಜ್ಯ ಕಟ್ಟಡಗಳಾಗಲಿ ಇಲ್ಲ, ಇವರು ವಾಸ ಮಾಡುವ ಶಾಸ್ತ್ರಿಪುರಂನಲ್ಲಿರುವ ಕಟ್ಟಡದ ಮಾಲೀಕತ್ವವನ್ನು ಗಂಡ ಹೆಂಡತಿ ಇಬ್ಬರೂ ಜಂಟಿಯಾಗಿ ಹೊಂದಿದ್ದಾರೆ. ಈ ಮನೆಯ ಅಂದಾಜು ಮೌಲ್ಯ 19.05 ಕೋಟಿ.
ರಾಮೇಶ್ವರಂ ಕೆಫೆಯಲ್ಲಿ ತಿಂಡಿ ಸವಿದ ಅಸಾದುದ್ದೀನ್ ಒವೈಸಿ, ಸ್ಫೋಟ ಖಂಡಿಸಿದ ನಾಯಕ!
ಹಾಗೆಯೇ ಇವರಿಗೆ ಮಿಸ್ರಿಗಂಜ್‌ನಲ್ಲಿ ಮನೆಯೊಂದು ಇದ್ದು, ಇದು ಉಡುಗೊರೆಯಾಗಿ ಸಿಕ್ಕಿದ್ದಾಗಿದೆ. ಹಾಗೆಯೇ ಇವರ ವಿರುದ್ಧ ವಿಚಾರಣೆಗೆ ಬಾಕಿ ಇರುವ ಐದು ಕ್ರಿಮಿನಲ್ ಪ್ರಕರಣಗಳು ಇವೆ. ಆದರೆ ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ತಾನು ದೋಷಿಯಾಗಿಲ್ಲ ಎಂದು ಇವರು ಘೋಷಿಸಿದ್ದಾರೆ. ಅಲ್ ಇಂಡಿಯಾ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್(AIMIM) ಅಧ್ಯಕ್ಷರಾಗಿರುವ ಒವೈಸಿ ಅವರು ಹೈದರಾಬಾದ್ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಇವರ ಪುತ್ರ ಸುಲ್ತಾಬ್ ಸಲಹುದ್ದೀನ್ ಒವೈಸಿ ಹಾಗೂ ಮಾಜಿ ಎಂಎಲ್‌ಎ ಪಾಶಾ ಖಾದ್ರಿ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.