ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು: ಶಾಸಕ ಹರೀಶ್‌ ಪೂಂಜ

By Kannadaprabha News  |  First Published Jun 2, 2023, 12:30 AM IST

ಸಮಾಜವನ್ನು ಪ್ರಾಮಾಣಿಕವಾಗಿ ಮುನ್ನಡೆಸಲು ತಾಲೂಕು ಆಡಳಿತ, ಜನಪ್ರತಿನಿಧಿಗಳು ಹಾಗೂ ಇಲಾಖೆಗಳು ಉತ್ತಮವಾಗಿ ಕೆಲಸ ನಿರ್ವಹಿಸಿದ್ದು, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಕಾರ್ಯ ಕೈಗೊಳ್ಳುವುದನ್ನು ಮುಂದುವರಿಸಬೇಕು ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.


ಬೆಳ್ತಂಗಡಿ (ಜೂ.02): ಕೊರೋನಾ ಕಾಲಘಟ್ಟಹಾಗೂ 2019ರ ನೆರೆ ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ತಾಲೂಕಿನ ನಾನಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವರ್ಗ ಮಾದರಿಯಾಗಿ ಕೆಲಸ ನಿರ್ವಹಿಸಿದೆ. ಸಮಾಜವನ್ನು ಪ್ರಾಮಾಣಿಕವಾಗಿ ಮುನ್ನಡೆಸಲು ತಾಲೂಕು ಆಡಳಿತ, ಜನಪ್ರತಿನಿಧಿಗಳು ಹಾಗೂ ಇಲಾಖೆಗಳು ಉತ್ತಮವಾಗಿ ಕೆಲಸ ನಿರ್ವಹಿಸಿದ್ದು, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಕಾರ್ಯ ಕೈಗೊಳ್ಳುವುದನ್ನು ಮುಂದುವರಿಸಬೇಕು ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.

ಅವರು ಗುರುವಾರ ಲಾಯಿಲದ ಸಂಗಮ ಸಭಾಭವನದಲ್ಲಿ ತಾಲೂಕು ಆಡಳಿತ ಹಾಗೂ ತಾ.ಪಂ. ವತಿಯಿಂದ ನಡೆದ ಮುಂಗಾರು ಪೂರ್ವ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂಎಲ್‌ಸಿ ಪ್ರತಾಪ ಸಿಂಹ ನಾಯಕ್‌, ಮುಖ್ಯ ರಸ್ತೆಗಳ ಚರಂಡಿ ದುರಸ್ತಿ ಇಷ್ಟರೊಳಗೆ ನಡೆಯಬೇಕಿತ್ತು. ಚರಂಡಿಗಳಲ್ಲಿರುವ ತ್ಯಾಜ್ಯ ವಿಲೇವಾರಿ, ದುರಸ್ತಿ ಇನ್ನಿತರ ಅಗತ್ಯ ಕೆಲಸಗಳ ಬಗ್ಗೆ ತಕ್ಷಣ ಗಮನಹರಿಸುವಂತೆ ಸೂಚಿಸಿದರು. 

Tap to resize

Latest Videos

Karwar: ಮುಂದಿನ ಎರಡು ತಿಂಗಳುಗಳ ಕಾಲ ಮೀನುಗಾರಿಕೆ ಸ್ಥಗಿತ, ಯಾಕೆ? ಇಲ್ಲಿದೆ ವಿವರ

ಅಪಾಯಕಾರಿ ಮರಗಳು: ರಸ್ತೆ ಬದಿ ಇರುವ ಅಪಾಯಕಾರಿ ಮರ ಹಾಗೂ ಮರದ ರೆಂಬೆಗಳನ್ನು ತೆರೆವುಗೊಳಿಸುವ ಕುರಿತು ಆಯಾಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ತಕ್ಷಣ ಪರಿಶೀಲನೆ ನಡೆಸಿ ಅರಣ್ಯ ಇಲಾಖೆ ಹಾಗೂ ಮೆಸ್ಕಾಂಗೆ ಮಾಹಿತಿ ನೀಡಬೇಕು. ಹಾಗೂ ಇವುಗಳ ತೆರವು ಕಾರ್ಯ ಕೂಡಲೇ ಆರಂಭಿಸುವಂತೆ ಶಾಸಕರು ಸೂಚಿಸಿದರು.

ಆಡಳಿತ ಸನ್ನದ್ಧ: ಮಳೆಗಾಲದ ಸಮಸ್ಯೆಗಳ ತುರ್ತು ನಿರ್ವಹಣೆಗೆ ತಾಲೂಕು ಆಡಳಿತ ಸನ್ನದ್ಧವಾಗಿದ್ದು ಜನ-ಜಾನುವಾರು ರಕ್ಷಣೆಗೆ ಮುನ್ನೆಚ್ಚರಿಕೆ ಕೈಗೊಂಡಿದೆ. ಎಲ್ಲ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ಸ್ಥಾನದಲ್ಲಿರುವಂತೆ ಸೂಚಿಸಲಾಗಿದೆ. ಪ್ರವಾಹ ಉಂಟಾಗಬಹುದಾದ ಗ್ರಾಮಗಳಲ್ಲಿ ನುರಿತ ಈಜುಗಾರರ ಸೇವೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹೋಬಳಿ ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದ್ದು ಅವಘಡಗಳು ಉಂಟಾದ ಸಂದರ್ಭ ತುರ್ತು ಸ್ಪಂದನೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಹಸೀಲ್ದಾರ್‌ ಸುರೇಶ್‌ ಕುಮಾರ್‌ ಹೇಳಿದರು. ತಾಪಂ ಇಒ ಕುಸುಮಾಧರ ಸ್ವಾಗತಿಸಿದರು. ಸಂಯೋಜಕ ಜಯಾನಂದ ಲಾಯಿಲ ವಂದಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.

4ರಂದು ಕಿಂಡಿ ಅಣೆಕಟ್ಟು ಸ್ವಚ್ಛತೆ ಅಭಿಯಾನ: ಮಳೆಗಾಲದಲ್ಲಿ ನದಿಗಳು ತುಂಬಿ ಹರಿಯುವ ಸಮಯ ಕಿಂಡಿ ಅಣೆಕಟ್ಟುಗಳಲ್ಲಿ ಮರಮಟ್ಟು ಸಿಲುಕಿ ಹಾನಿ ಉಂಟಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ತಾಲೂಕಿನಾದ್ಯಂತ ಜೂ.4ರಂದು ಪಂಚಾಯಿತಿಗಳು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ನದಿ, ಹೊಳೆಗಳ ಪ್ರದೇಶಗಳಲ್ಲಿರುವ ಮರಮಟ್ಟು,ಕಿಂಡಿ ಅಣೆಕಟ್ಟುಗಳಲ್ಲಿರುವ ಮರ, ಅವುಗಳ ವ್ಯಾಪ್ತಿಯಲ್ಲಿರುವ ಮರದ ರೆಂಬೆಗಳನ್ನು ತೆರೆವುಗೊಳಿಸುವ ಅಭಿಯಾನ ನಡೆಸಲು ಶಾಸಕರು ಸೂಚನೆ ನೀಡಿದರು. ಈ ಬಗ್ಗೆ ಎಲ್ಲ ಪಂಚಾಯಿತಿಗಳಿಗೆ ತಕ್ಷಣ ಸೂಚನಾ ಪತ್ರ ನೀಡುವಂತೆ ತಾಪಂ ಇಒ ಅವರಿಗೆ ಸೂಚಿಸಲಾಯಿತು

ಫುಲ್ ಡ್ರಿಂಕ್ಸ್ ಮಾಡಿ ಆಸ್ಪತ್ರೆಗೆ ಬಂದ ವೈದ್ಯ ಬೆಡ್ ಮೇಲೆ ಸ್ಲೀಪಿಂಗ್: ಅನಸ್ತೇಷಿಯಾ ಪಡೆದ ಮಹಿಳೆಯರ ಗತಿ ಏನಾಯ್ತು?

5ರಂದು ಗಿಡ ನೆಡುವ ಅಭಿಯಾನ: ಶಿಬಾಜೆ, ಶಿಶಿಲ, ಹತ್ಯಡ್ಕ, ಕಳೆಂಜ ಮೊದಲಾದ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಈ ಬಾರಿ ಕಾಡ್ಗಿಚ್ಚಿನಿಂದ ಸಾವಿರಾರು ಮರ ಗಿಡಗಳು ನಾಶವಾಗಿವೆ. ಜೂ.5ರ ವಿಶ್ವ ಪರಿಸರ ದಿನದಂದು ಈ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಸ್ಥಳೀಯ ಕಾಲೇಜುಗಳ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ಸಹಕಾರದಲ್ಲಿ ಹಣ್ಣಿನ ಗಿಡಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅತೀ ಹೆಚ್ಚು ಗಿಡಗಳನ್ನು ನೆಡುವಂತೆ ತಿಳಿಸಲಾಯಿತು.

click me!