Karnataka Politics : ಬಿಜೆಪಿ ಕಿತ್ತೊಗೆಯಲು ಜನ ನಿರ್ಧಾರ : 140 ಸ್ಥಾನ ಗೆಲುವು ಅಸಾಧ್ಯ

By Kannadaprabha NewsFirst Published Nov 29, 2021, 7:49 AM IST
Highlights
  • ಕಾಂಗ್ರೆಸ್‌ ಭಯೋತ್ಪಾದನೆಗೆ ಬಡ್ತಿ ನೀಡುತ್ತಿದೆ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌
  • ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ 

 ಚಿತ್ರದುರ್ಗ (ನ.29) : ಕಾಂಗ್ರೆಸ್‌ (Congress) ಭಯೋತ್ಪಾದನೆಗೆ ಬಡ್ತಿ ನೀಡುತ್ತಿದೆ ಎಂದಿರುವ ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar kateel) ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Suddaramaiah) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟೀಲ್‌ ಒಬ್ಬ ಭಯೋತ್ಪಾದಕ (terrorist) ಎಂದು ಕಿಡಿಕಾರಿದ್ದಾರೆ.  ಕಾಂಗ್ರೆಸ್‌ (Congress) ಆಡಳಿತಾವಧಿಯಲ್ಲಿ ಭಯೋತ್ಪಾದನೆ ಒಂದು ಗುಂಡಿನಿಂದ 17 ಗುಂಡಿಗೆ, ನಂತರ 17 ಗುಂಡಿನಿಂದ ಬಾಂಬ್‌ಗೆ ಪ್ರಮೋಷನ್‌ ಪಡೆದಿತ್ತು ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದರು. ಈ ಕುರಿತು ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಳಿನ್‌ ಕುಮಾರ್‌ ಕಟೀಲ್‌ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳಿದರು.

ಇದೇ ವೇಳೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka assembly Election) 140 ಸ್ಥಾನ ಗೆಲ್ಲುತ್ತೇವೆಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa) ಹೇಳಿಕೆಗೂ ಸಿದ್ದರಾಮಯ್ಯ ತಿರುಗೇಟು ನೀಡಿದರು. 140 ಸ್ಥಾನ ಗೆಲ್ಲಲು ಮತಗಳೇನು ಅವರ ಜೇಬಿನಲ್ಲಿ ಇವೆಯಾ? ರಾಜ್ಯದ ಜನ ಬಿಜೆಪಿ (BJP) ಕಿತ್ತೊಗೆಯಲು ತೀರ್ಮಾನಿಸಿದ್ದಾರೆ ಎಂದು ಭವಿಷ್ಯ ನುಡಿದರು.

ಇದಕ್ಕೂ ಮುನ್ನ ನಗರದ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ಭಾನುವಾರ ಕಾಂಗ್ರೆಸ್‌ (Congress) ಅಭ್ಯರ್ಥಿ ಪರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯ, ಪ್ರಜಾಪ್ರಭುತ್ವ, ಸಂವಿಧಾನ ಉಳಿಯಬೇಕಾದರೆ ಬಿಜೆಪಿ ಸರ್ಕಾರವನ್ನು (BJP Govt) ಕಿತ್ತೊಗೆಯಬೇಕು ಎಂದರು.

ರಾಜ್ಯದ ಇತಿಹಾಸದಲ್ಲೇ ಬಿಜೆಪಿಯಂಥ ಭ್ರಷ್ಟಸರ್ಕಾರ (Corrupted Govt) ಅಧಿಕಾರಕ್ಕೆ ಬಂದಿರಲಿಲ್ಲ. ರಾಜ್ಯದಲ್ಲಿ ಯಾವುದೇ ಯೋಜನೆ ಜಾರಿಯಾಗಬೇಕಿದ್ದರೂ ಗುತ್ತಿಗೆದಾರರು ಶೇ.40ರಷ್ಟು  ಲಂಚ ನೀಡಬೇಕಾಗಿದೆ. ಈ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿ ಮೋದಿ (Prime Minister Narendra modi) ಅವರಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಿಧಾನ ಸಭೆಗೆ ಹೋದರೆ ಲಂಚ ಲಂಚ ಎಂದು ಹೇಳಿ ಬರೀ ಲಂಚದ ವಾಸನೆ ಬರುತ್ತಿದೆ. ಇಂತಹ ಭ್ರಷ್ಟ ಸರ್ಕಾರವನ್ನು ದಯಮಾಡಿ ಕಿತ್ತು ಹಾಕಬೇಕು. ಇಲ್ಲವಾದರೆ, ಈ ರಾಜ್ಯಕ್ಕೆ ಉಳಿಗಾಲವಿಲ್ಲ ಎಂದರು.

ಈಶ್ವರಪ್ಪ ಶೋ ಮ್ಯಾನ್‌: ಏಕವಚನದಲ್ಲೇ ವಾಗ್ದಾಳಿ : ತಮ್ಮ ವಿರುದ್ಧ ಪದೇ ಪದೆ ತಿರುಗಿ ಬೀಳುತ್ತಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ (KS eshwarappa) ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯಲ್ಲಿ ಈಶ್ವರಪ್ಪ ಎನ್ನುವ ಒಬ್ಬ ಪೆದ್ದ ಇದ್ದಾನೆ. ಏನೋ ಬಾಯಿಗೆ ಬಂದಂಗೆ ಮಾತನಾಡಿ ಬಿಡೋದು ರೂಢಿ ಮಾಡಿಕೊಂಡಿದ್ದಾರೆ ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಬಗ್ಗೆ ನಮಗೆ ಹೇಳೋಕೆ ಈಶ್ವರಪ್ಪ ಯಾರು? ಶೋ ಮ್ಯಾನ್‌ ( Show Man) ಆಗಿರುವ ಈಶ್ವರಪ್ಪ ಅವರ ಕೆಲಸ ಅವರು ನೋಡಿಕೊಳ್ಳಲಿ. ‘ನಮ್ಮ ಕತೆ ಯಾಕೆ ನಿಂಗೆ, ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನಾಚಿಕೆ ಆಗಲ್ವಾ?. ರಾಜಕೀಯದ (Politics) ಗಂಧ ಗಾಳಿ ಗೊತ್ತಿಲ್ಲದೆ ಮಂತ್ರಿ ಆಗಿದ್ದೀನಿ ಅಂತ ಬಾಯಿಗೆ ಬಂದಂತೆ ಮತನಾಡೋದು ಅಷ್ಟೆಗೊತ್ತಿರುವುದು’ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಮೌನ ಅಪಾಯಕಾರಿ : 

ರಾಜ್ಯದಲ್ಲಿ 25 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆಗೆ(Karnataka Legislative Council polls) ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ (JDS)ಅಭ್ಯರ್ಥಿಗಳು ನಾಮಪತ್ರ (Nomination) ಸಲ್ಲಿಸಿದ್ದು, ಪರಿಷತ್ ಚುನಾವಣೆ ರಂಗೇರಿದೆ. ಇದರ ಮಧ್ಯೆ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಎಚ್ಚರಿಕೆಯ ಟ್ವೀಟ್ ಮಾಡಿದೆ.

ಹೌದು.. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರೇ, ಸಿದ್ದರಾಮಯ್ಯ (Siddaramaiah) ಅವರ ಮೌನ ತುಂಬಾ ಅಪಾಯಕಾರಿ ಎಂದು ಬಿಜೆಪಿ ಎಚ್ಚರಿಸಿದೆ.

MLC Election: ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನಿಂದ ಕುಟುಂಬ ಕಲ್ಯಾಣ

ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ(BJP), ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಒಳಜಗಳ ಬಯಲಾಗಿದೆ. ಅಭ್ಯರ್ಥಿ ಆಯ್ಕೆ, ಪ್ರಚಾರ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳಿಂದಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೂರ ಉಳಿದಿದ್ದಾರೆ ಎಂದಿದೆ.

click me!