* ರಂಗೇರಿದೆ ವಿಧಾನಪರಿಷತ್ ಚುನಾವಣೆ
* ಸಕ್ಕರೆ ನಾಡು ಮಂಡ್ಯದಲ್ಲಿ ವಿಧಾನ ಪರಿಷತ್ ರಾಜಕೀಯ ಬಿರುಸು
( ಸುಮಲತಾ ಅಂಬರೀಶ್ ಬೆಂಬಲ ಯಾರಿಗೆ ಎಂಬ ಕುತೂಹಲಕ್ಕೆ ತೆರೆ
ಮಂಡ್ಯ, (ನ.28): ಸಕ್ಕರೆ ನಾಡು ಮಂಡ್ಯದಲ್ಲಿ ವಿಧಾನ ಪರಿಷತ್ ಚುನಾವಣಾ (MLC Elections) ಅಖಾಡ ರಂಗೇರಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳು ಗೆಲುವಿಗಾಗಿ ನಾನಾ ತಂತ್ರಗಳನ್ನು ಎಣೆಯುತ್ತಿವೆ.
ಇದರ ಮಧ್ಯೆ ಮಂಡ್ಯ ಸಂಸದೆ (Mandya MP) ಸುಮಲತಾ ಅಂಬರೀಶ್ (Sumalatha Ambareesh) ಬೆಂಬಲ ಯಾರಿಗೆ ಎಂಬ ಕುತೂಹಲವು ಮನೆ ಮಾಡಿದೆ. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ.
undefined
MLC Election: ಕಾಂಗ್ರೆಸ್, ಬಿಜೆಪಿಗೆ ಶಾಕ್ ಕೊಟ್ಟ ಮಂಡ್ಯ ಸಂಸದೆ ಸುಮಲತಾ ಅಂಬರೀಶ್
ಇಷ್ಟು ದಿನ ಯಾರಿಗೆ ಬೆಂಬಲ ಇಲ್ಲ ಎಂದ್ದಿ ಸುಮಲತಾ ಅಂಬರೀಶ್ ಅವರು ಇದೀಗ ಪರೋಕ್ಷವಾಗಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಪರ ಸುಮಲತಾ ಆಪ್ತರು ಪ್ರಚಾರ ತೊಡಗಿಸಿಕೊಂಡಿದ್ದಾರೆ.
ಸುಮಲತಾ ನಡೆ ಇದುವರೆಗೂ ನಿಗೂಢವಾಗಿಯೇ ಉಳಿದಿತ್ತು. ಆದರೆ, ಇದೀಗ ಬಂದಿರುವ ಸುದ್ದಿಯ ಪ್ರಕಾರ ಸುಮಲತಾ ಅವರು ಕಾಂಗ್ರೆಸ್‌ಗೆ ಪರೋಕ್ಷವಾಗಿ ಬೆಂಬಲ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರೋಕ್ಷ ಬೆಂಬಲ ನೀಡಿದಂತೆ ಸುಮಲತಾ ಪರೋಕ್ಷ ಬೆಂಬಲ ನೀಡಲಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಸುಮಲತಾ ಅವರು ಆಪ್ತರು ಹಾಗೂ ಬೆಂಬಲಿಗರನ್ನು ಮುಂದೆ ಬಿಟ್ಟು ಪರೋಕ್ಷವಾಗಿ ಕಾಂಗ್ರೆಸ್ ಪರ ನಿಂತಿದ್ದಾರೆ. ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆನ್ನಲ್ಲಾಗಿದೆ.
ದಿನೇಶ್ ಗೂಳಿಗೌಡ ಪ್ರಚಾರ ಸಭೆಯಲ್ಲಿ ಸುಮಲತಾ ಆಪ್ತ ಬೇಲೂರು ಸೋಮಶೇಖರ್ ಭಾಗಿಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನೇರವಾಗಿ ಬೆಂಬಲ ನೀಡಿದ್ದ ಬಿಜೆಪಿಗೆ ಸುಮಲತಾ ಕೈ ಕೊಟ್ರಾ ಎಂಬ ಅನುಮಾನ ಮೂಡಿದೆ. ಚುನಾವಣೆಯಲ್ಲಿ ಅಭ್ಯರ್ಥಿ ಹಾಕದೇ ಸುಮಲತಾಗೆ ಬಹಿರಂಗವಾಗಿ ಬಿಜೆಪಿ ಬೆಂಬಲ ನೀಡಿತ್ತು. ಸುಮಲತಾ ಬೆಂಬಲದ ನಿರೀಕ್ಷೆಯಲ್ಲಿದ್ದ ಕಮಲ ಪಡೆಗೆ ಇದೀಗ ಶಾಕ್ ಆಗಿದೆ.
ತಟಸ್ಥವಾಗಿ ಉಳಿಯುವುದಾಗಿ ಹೇಳಿದ್ದ ಸುಮಲತಾ
ಒಂದು ಪಕ್ಷಕ್ಕೆ ಬೆಂಬಲ ಕೊಟ್ಟರೆ ಅದು ವಿವಾದ ಸೃಷ್ಟಿಸುತ್ತದೆ, ಮಂಡ್ಯ ಜಿಲ್ಲೆಗೆ ಯಾರು ಅಭಿವೃದ್ದಿ ಕೆಲಸ ಮಾಡುತ್ತಾರೋ ಅವರಿಗೆ ವೋಟ್ ಹಾಕುವೆ ಎಂದು ಸುಮಲತಾ ಅಂಬರೀಶ್ ಹೇಳಿದ್ದರು.
ಈ ಬಾರೀ ಯಾರಿಗೂ ಬೆಂಬಲ ನೀಡುವುದಿಲ್ಲ, ಇದು ಚುನಾಯಿತ ಸದಸ್ಯರಿಂದ ನಡೆಯುವ ಚುನಾವಣೆ, ನಾನು ಎಲ್ಲಿಗೂ ಕೂಡ ಬರುವುದಿಲ್ಲ, ನನ್ನನ್ನು ಸಂಪರ್ಕಿಸಿ ಬೆಂಬಲ ನೀಡಿದವರಿಗೆ ಶುಭಾಶಯ ಅಷ್ಟೇ ಹೇಳಲಿದ್ದೇನೆ ಎಂದಿದ್ದರು. ಆದ್ರೆ, ಇದೀಗ ಪರೋಕ್ಷವಾಗಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ ಎಂದು ಎನ್ನಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಭೇಟಿ
ಪರಿಷತ್ ಚುನಾವಣೆಯ (MLC Elections) ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ (Dinesh Guligowda) ಸಂಸದೆ ಸುಮಲತಾ (Sumalatha Ambareesh) ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸುಮಲತಾ ಅಂಬರೀಶ್ ಅವರು ಭರವಸೆ ನೀಡಿದ್ದರು.