ಪ್ರಧಾನಿ ಮೋದಿ ಆಡಳಿತದಿಂದ ಜನ ಭ್ರಮಾನಿರಸ: ಶಾಸಕ ರಾಯರಡ್ಡಿ ಟೀಕೆ

By Kannadaprabha News  |  First Published Jun 4, 2023, 12:31 PM IST

ಬಿಜೆಪಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ,ದುರಾಡಳಿತ,ಹಣ,ಹೆಂಡ,ಆಮಿಷಕ್ಕೆ ಬೇಸತ್ತು ಮತದಾರ ರಾಜ್ಯದಲ್ಲಿ ಕಾಂಗ್ರೆಸಿಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದ್ದಾನೆ. ರಾಜ್ಯದಲ್ಲಿ ಕಾಂಗ್ರೆಸಿನಿಂದ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.


ಕುಕನೂರು (ಜೂ.4) : ಬಿಜೆಪಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ,ದುರಾಡಳಿತ,ಹಣ,ಹೆಂಡ,ಆಮಿಷಕ್ಕೆ ಬೇಸತ್ತು ಮತದಾರ ರಾಜ್ಯದಲ್ಲಿ ಕಾಂಗ್ರೆಸಿಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದ್ದಾನೆ. ರಾಜ್ಯದಲ್ಲಿ ಕಾಂಗ್ರೆಸಿನಿಂದ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಮಹಾಮಾಯಾ ತೇರಿನ ಗಡ್ಡೆ ಹತ್ತಿರ ಯಲಬುಗಾ,ಕುಕನೂರು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸುಳ್ಳು ಭರವಸೆಗೆ ಜನತೆ ಭ್ರಮಾನಿರಸವಾಗಿದ್ದಾರೆ. ಈ ಸಲ ಕೇಂದ್ರದಲ್ಲೂ ಪರ್ಯಾಯ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮೋದಿ 9 ವರ್ಷದ ಹಿಂದೆ ಅಧಿಕಾರಕ್ಕೆ ಬಂದು ಅಚ್ಚೇ ದಿನ್‌ ಆಯೇಗಾ ಎಂದರು. ಬೆಲೆ ಏರಿಕೆ, ನಿರುದ್ಯೋಗಗಳೇ ಅವರ ಅಚ್ಚೇದಿನಾಗಳಾ ಎಂದು ಪ್ರಶ್ನಿಸಿದರು.ಜನಪರ ಆಡಳಿತದಲ್ಲಿ ಪರ್ಯಾಯ ವ್ಯವಸ್ಥೆಯೇ ದೊಡ್ಡ ಉತ್ತರ ಆಗಲಿದೆ ಎಂದರು.

Tap to resize

Latest Videos

undefined

ಕೊಪ್ಪಳ: ವಿಮಾನ ಹಾರಿದ್ದು ಆಯಿತು, ಈಗ ಡ್ರೋನ್‌ಗಳ ಹಾರಾಟ!

ಹಲವಾರು ರಾಜ್ಯಗಳಲ್ಲಿ ಬಿಜೆಪಿ ತನ್ನ ಅಧಿಕಾರ ಕಳೆದುಕೊಂಡಿದೆ.ಕ್ಷೇತ್ರದಲ್ಲಿ ಸಹ ಜನತೆ ಹಣ,ಹೆಂಡ,ಜಾತಿಗೆ ಮನ್ನಣೆ ನೀಡಲಿಲ್ಲ.ಅಭಿವೃದ್ಧಿ ಬಯಸಿ ನನ್ನನ್ನೂ ಗೆಲ್ಲಿಸಿದರು. ನನ್ನ ವಿರುದ್ಧ ಒಬ್ಬ ವ್ಯಕ್ತಿ ಒಂದೇ ಸಲ ಗೆಲ್ಲುವುದು,ಮತ್ತೆ ಅವರು ಸೋತಾದ ನಂತರ ಚುನಾವಣೆಗೇ ಬರುವುದಿಲ್ಲ ಎಂದರು.

ಮಂತ್ರಿ ಪಟ್ಟಿಯಲ್ಲಿ ಇತ್ತು ಹೆಸರು:

ಮೇ 25ರ ರಾತ್ರಿಯವರೆಗೂ ಮಂತ್ರಿಗಳ ಆಯ್ಕೆ ಪಟ್ಟಿಯಲ್ಲಿ ನನ್ನ ಹೆಸರಿತ್ತು.ಆದರೆ ಕೆಲವು ಜವಾಬ್ದಾರಿ ಹಾಗು ಕೆಲವು ವಿಚಾರಗಳ ಆಧಾರ ಮೇಲೆ ಬೇರೆಯವರಿಗೆ ಅವಕಾಶ ನೀಡಲಾಯಿತು.ಮಂತ್ರಿ ಆಗುವುದು ಮಾನದಂಡವಲ್ಲ.ಅಭಿವೃದ್ಧಿಯೇ ಮಾನದಂಡ.ಸಿದ್ದರಾಮಯ್ಯನವರು ಸಿಎಂ ಆಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ವ್ಯಕ್ತಿಗಳಲ್ಲಿ ನಾನು ಸಹ ಪ್ರಥಮ ಎಂದರು.

ಪ್ರಣಾಳಿಕೆ ಘೋಷಣೆಯಾದವಲ್ಲ ಗ್ಯಾರಂಟಿ:

ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ.ಚುನಾವಣೆ ಪ್ರಣಾಳಿಕೆಯಲ್ಲಿ ನೀಡಲಾದ ಎಲ್ಲ ಘೋಷಣೆ ಗ್ಯಾರಂಟಿಯಾಗಿ ಘೋಷಣೆ ಮಾಡಿದ್ದೇವೆ.ಪಂಚ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಲಿವೆ ಎಂದರು. ಗ್ಯಾರಂಟಿ ಯೋಜನೆಗೆ .50 ಸಾವಿರ ಕೋಟಿ ಬೇಕು. ಇದರ ಹೊಂದಾಣಿಕೆ ಸಹ ಕಷ್ಟ.ಆದರೂ ಸಹ ಆರ್ಥಿಕತೆಗೆ ಹೊಡೆತ ಬೀಳದ ಹಾಗೆ ಹಣ ಹೊಂದಾಣಿಕೆ ಮಾಡಿದ್ದೇವೆ ಎಂದರು.

ಕ್ಷೇತ್ರದಲ್ಲಿ 40 ಕೆರೆಗೆ ಆದ್ಯತೆ:

ಯಲಬುರ್ಗಾ ಕ್ಷೇತ್ರದಲ್ಲಿ ಇನ್ನೂ 40 ಕೆರೆ ತುಂಬಿಸುವೆ. ಈಗಾಗಲೇ 26 ಕೆರೆಗಳ ತುಂಬಿಸುವ ಕಾರ್ಯ ಆರಂಭವಾಗಿದೆ. ಕುಕನೂರಲ್ಲಿ 100 ಎಕರೆಯಲ್ಲಿ ಬೃಹತ್‌ ಕೆರೆ ನಿರ್ಮಿಸಿ ಕೊಡುವೆ.ಅದಕ್ಕೆ ಜನರು ಭೂಮಿ ನೀಡಬೇಕು. ಈಗಾಗಲೇ ನಾನು ನೂತನ ಕೆರೆಗಳ ನಿರ್ಮಾಣಕ್ಕೆ .2500 ಕೋಟಿ ವೆಚ್ಚದಲ್ಲಿ ಪ್ರಸ್ತಾವನೆ ಸಿದ್ದಪಡಿಸಿಕೊಂಡು ಸಿಎಂ ಸಿದ್ದರಾಮಯ್ಯನವರ ಬಳಿ ಹೋಗಿದ್ದೆ. ಸರ್ಕಾರ ಈಗ ಆರಂಭವಾಗಿದೆ ಇನ್ನೊಂದು ವಾರದಲ್ಲಿ ನಿನಗೆ ಮಂಜೂರಾತಿ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.

ಕ್ಷೇತ್ರದಲ್ಲಿ ಹದಗೆಟ್ಟಆಡಳಿತ ವ್ಯವಸ್ಥೆ:

ಯಲಬುರ್ಗಾ ಕ್ಷೇತ್ರದಲ್ಲಿ ಅಧಿಕಾರಿಗಳು ಹದಗೆಟ್ಟಿದ್ದಾರೆ.ಅಧಿಕಾರಿಗಳು ಅಂದರೆ ಕುದುರೆ ತರಹ,ಎಂಎಲ್‌ಎ ಅವರನ್ನು ಮುನ್ನೆಡೆಸುವ ಸವಾರ. ಹಿಂದಿನ ಸವಾರಿಗೆ ಕುದುರೆ ನಡೆಸಲು ಬಂದಿಲ್ಲ. ಕಟ್ಟುನಿಟ್ಟಾಗಿ ಅಧಿಕಾರಿಗಳು ತಮ್ಮ ಜವಾಬ್ದಾರಿಯುತ ಕೆಲಸ ಮಾಡಿದರೆ ಇಲ್ಲಿ ಅವರಿಗೆ ಅವಕಾಶ. ಇಲ್ಲದಿದ್ದರೆ ತಾವಾಗಿಯೇ ಇಲ್ಲಿಂದ ಹೋಗಬಹುದು. ಪಾರದರ್ಶಿಕ ಭ್ರಷ್ಟಾಚಾರ ಆಡಳಿತ ಹಾಗು ಕಾನೂನಾತ್ಮಕ ಆಡಳಿತಕ್ಕೆ ನನ್ನ ಅವಧಿಯಲ್ಲಿ ಮನ್ನಣೆ ಇದೆ ಎಂದರು.

ಬಿಜೆಪಿ ಕಾರ್ಯಕರ್ತರಿಗೂ ಕೆಲಸ:

ಬಿಜೆಪಿಯ ಒಳ್ಳೆ ಕಾರ್ಯಕರ್ತರೂ ಸಹ ಬಂದು ನನ್ನ ಬಳಿ ಕೆಲಸ ತೆಗೆದುಕೊಳ್ಳಿ. ನಾನು ಎಂದಿಗೂ ಪಕ್ಷ ಬೇಧಭಾವ ಮಾಡುವುದಿಲ್ಲ.ನಾನು ಕ್ಷೇತ್ರದಲ್ಲಿ ಎಲ್ಲ ಪಕ್ಷದವರಿಗೂ ನಾನೇ ಎಂಎಲ್‌ಎ ಎಂದರು.

ನನೆಗುದಿಗೆ ಬಿದ್ದದ್ದ ಅಮೃತ್‌ ಯೋಜನೆ:

ಪಪಂ ನಗರಗಳಿಗೆ ಕುಡಿವ ನೀರಿಗಾಗಿ ಕೇಂದ್ರ ಸರ್ಕಾರ ಅಮೃತ್‌ ಯೋಜನೆ ಜಾರಿಗೆ ಮಾಡಿತ್ತು.ಆದರೆ ರಾಜ್ಯ ಸರ್ಕಾರ ಅದಕ್ಕೆ ಹಣ ನೀಡದೆ,ಯೋಜನೆ ನನೆಗುದಿಗೆ ಬಿದ್ದಿತ್ತು. ಶೀಘ್ರ ಯೋಜನೆ ಆರಂಭಿಸಲಾಗುವುದು.ಕುಕನೂರು,ಯಲಬುರ್ಗಾ ನಗರಗಳಲ್ಲಿ ಯುಜಿಡಿ ಒಳಚರಂಡಿ ನಿರ್ಮಿಸುತ್ತೇನೆ.ತಳಕಲ್‌ ಗ್ರಾಮವನ್ನು ಪಪಂ ಮಾಡುತ್ತೇನೆ ಎಂದರು. ಕಾಂಗ್ರೆಸ್‌ ಕಾರ್ಯಕರ್ತರು ಶಾಸಕ ರಾಯರಡ್ಡಿ ಅವರನ್ನು ಸನ್ಮಾನಿಸುವ ಮೂಲಕ ಅಭಿನಂದಿಸಿದರು.

 

ನನಗೆ ಮಂತ್ರಿ ಸ್ಥಾನಕ್ಕಿಂತ ಸಿದ್ದರಾಮಯ್ಯ ಸಿಎಂ ಆಗಿದ್ದು ಸಂತಸ ತಂದಿದೆ: ಶಾಸಕ ರಾಯರಡ್ಡಿ

 

ಕುಕನೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹನುಮಂತಗೌಡ ಚಂಡೂರು,ಯಲಬುರ್ಗಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ,ಪ್ರಮುಖರಾದ ವೀರನಗೌಡ ಬಳೂಟಗಿ,ಸಿದ್ದಯ್ಯ ಕಳ್ಳಿಮಠ, ನಾರಾಯಣಪ್ಪ ಹರಪ್ಪನಹಳ್ಳಿ, ಖಾಸಿಂಸಾಬ್‌ ತಳಕಲ್‌, ಮಂಜುನಾಥ ಕಡೆಮನಿ, ಡಾ.ಮಲ್ಲಿಕಾರ್ಜುನ ಬಿನ್ನಾಳ, ವೀರಯ್ಯ ತೋಂಟದಾರ್ಯಮಠ, ಅಶೋಕ ತೋಟದ, ದೇವಪ್ಪ ಅರಕೇರಿ, ನಾಗರಾಜ ತಲ್ಲೂರು, ಚನ್ನಬಸಯ್ಯ ದೂಪದ,ಯಮನೂರಪ್ಪ ಗೊರ್ಲೆಕೊಪ್ಪ,ಗುದ್ನೇಯ್ಯ ದೇವಗಣಮಠ, ಶರಣಪ್ಪ ಛಲವಾದಿ, ಪಪಂ ಸದಸ್ಯರಾದ ಸಿರಾಜ್‌ ಕರಮುಡಿ, ನೂರುದ್ದೀನ್‌ ಗುಡಿಹಿಂದಲ್‌, ಗುದ್ನೇಶ ನೋಟಗಾರ, ವಕ್ತಾರ ಸಂಗಮೇಶ ಗುತ್ತಿ, ರಾಘವೇಂದ್ರ ಛಲವಾದಿ ಇತರರಿದ್ದರು.

click me!