ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೊಬ್ಬರು ಗರಿ ಗರಿ ನೋಟುಗಳನ್ನ ಮೈಮೇಲೆ ಸುರಿಸಿಕೊಂಡು ದುಡ್ಡಿನ ಮದ ತೋರಿಸಿದ್ದಾರೆ. ಅಲ್ಲದೆ ಮತದಾರರನ್ನ ಸೆಳೆಯಲು ಕುಕ್ಕರ್ ಪಾಲಿಟಿಕ್ಸ್ ನಡೆಸುತ್ತಿದ್ದಾರೆ.
ವರದಿ : ಟಿ.ಮಂಜುನಾಥ, ಹೆಬ್ಬಗೋಡಿ, ಏಷ್ಯಾನೆಟ್ ಸುವರ್ಣನ್ಯೂಸ್
ನೆಲಮಂಗಲ (ಫೆ.24): ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳು ಮತದರಾರರನ್ನ ಸೆಳೆಯಲು ಗಿಪ್ಟ್ ಪಾಲಿಟಿಕ್ಸ್ ಗೆ ಮೊರೆಹೋಗಿದ್ದಾರೆ. ಅದೇ ರೀತಿ ಇಲ್ಲೊಂದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೊಬ್ಬರು ಗರಿ ಗರಿ ನೋಟುಗಳನ್ನ ಮೈಮೇಲೆ ಸುರಿಸಿಕೊಂಡು ದುಡ್ಡಿನ ಮದ ತೋರಿಸಿದ್ದಾರೆ. ಅಲ್ಲದೆ ಮತದಾರರನ್ನ ಸೆಳೆಯಲು ಕುಕ್ಕರ್ ಪಾಲಿಟಿಕ್ಸ್ ನಡೆಸುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೊಬ್ಬರು ಹಂಚಿಕೆ ಮಾಡ್ತಿರೋ ಕುಕ್ಕರ್ಗಳ ಪಡೆಯಲು ಮುಗಿಬಿದ್ದಿರೋ ಜನ ಮತ್ತೊಂದ್ಕಡೆ ಟಿಕೆಟ್ ಆಕಾಂಕ್ಷಿಯ ಮೇಲೆ ದುಡ್ಡಿನ ಸುರಿಮಳೆ. ಈ ಎಲ್ಲಾ ಘಟನೆ ಸಾಕ್ಷಿಯಾಗಿರೋದು ಬೆಂಗಳೂರು ಗ್ರಾಮಾಂತರ ನೆಲಮಂಗಲದಲ್ಲಿ. ಅಂದಹಾಗೆ ನೆಲಮಂಗಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್.ಶ್ರೀನಿವಾಸ್ ತಾಲೂಕಿನ ಹಲವು ಹಳ್ಳಿಗಳಲ್ಲಿ ಕುಕ್ಕರ್ ತವ ಸೇರಿದಂತೆ ಐದು ಐಟಂ ಇರೋ ಬಾಕ್ಸ್ ಗಳನ್ನ ಮಹಿಳೆಯರಿಗೆ ಹಂಚಿಕೆ ಮಾಡಿದ್ದಾರೆ. ಶಿವರಾತ್ರಿ ಹಬ್ಬದ ಶುಭಾಶಯಗಳು ಹೇಳುವ ನೆಪದಲ್ಲಿ ಕುಕ್ಕರ್ ಕಿಟ್ ಗಳನ್ನ ಹಂಚಿಕೆ ಮಾಡಲಾಗಿದ್ದು, ಬಾಕ್ಸ್ ಮೇಲೆ ಕಾಂಗ್ರೆಸ್ ನಾಯಕರು ಟಿಕೆಟ್ ಆಕಾಂಕ್ಷಿ ಶ್ರೀನಿವಾಸ್ ಪೊಟೊ ಹಾಕಲಾಗಿದೆ. ಕುಕ್ಕರ್ ಕಿಟ್ ವಿತರಣೆ ಮಾಡುವ ಮೂಲಕ ಮತ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
undefined
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತೆ ಕೆಲಸ ಮಾಡಿ: ಬಿ.ಎಲ್.ಸಂತೋಷ್
ನೆಲಮಂಗಲದ ತ್ಯಾಮಗೊಂಡ್ಲು ಗ್ರಾಮದಲ್ಲಿ ನಡೆದ ಮುಸ್ಲಿಂ ಉರುಸ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶ್ರೀನಿವಾಸ್ ಮೇಲೆ ನೋಟುಗಳನ್ನ ಸುರಿಯಲಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿ ಗರಿಗರಿ ನೋಟುಗಳನ್ನ ಮೂವರು ವ್ಯಕ್ತಿಗಳು ಸುರಿದಿದ್ದು, ಸಾಮಾಜೀಕ ಜಾಲತಾಣಗಳನ್ನ ಮತದಾರರನ್ನ ಸೆಳೆಯಲು ಶ್ರೀನಿವಾಸ್ ಹಣದ ಹೊಳೆ ಹರಿಸುವ ಮೂಲಕ ಆಮಿಷ ಒಡ್ಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ಜತೆಗೆ ದುಡ್ಡನ್ನ ಈ ರೀತಿ ಸುರಿಯುವ ಮೂಲಕ ದುಡ್ಡಿನ ಮದ ತೋರಿಸಿದ್ದಾರೆ ಎಂದು ಕ್ಷೇತ್ರದ ಪ್ರತಿಕ್ಷಗಳು ಟೀಕಿಸಿವೆ.
Karnataka Election 2023: ಖಾನಾಪುರದಲ್ಲಿ ಭಾಷಾ ರಾಜಕೀಯವೇ ಮೇಲು!
ಒಟ್ಟಾರೇ ಚುನಾವಣೆ ಸಮೀಪವಾಗ್ತಿದ್ದಂತೆ ನೆಲಮಂಗಲದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮತದಾರರಿಗೆ ಕುಕ್ಕರ್ ಗಿಪ್ಟ್ ನೀಡಿ ಸೆಳೆಯುವ ಪ್ರಯತ್ನ ಒಂದ್ಕಡೆ ಮಾಡಿದ್ರೆ, ಮತ್ತೊಂದ್ಕಡೆ ದುಡ್ಡಿನ ಸುರಿಮಳೆ ಹಾಕಿಸಿಕೊಳ್ಳುವ ಮೂಲಕ ಮದ ತೋರಿಸಿರುವ ಆರೋಪ ಕೇಳಿ ಬಂದಿದೆ. ಟಿಕೆಟ್ ಆಕಾಂಕ್ಷಿಯೊಬ್ಬರು ಈ ರೀತಿಯ ವರ್ತನೆ ಮಾಡಿದ್ದು ಎಷ್ಟು ಸರಿ ಅನ್ನೋದು ಜನರ ಪ್ರಶ್ನೆಯಾಗಿದೆ.