ರಾಜಕಾರಣದಲ್ಲಿ ತಾಳ್ಮೆ ಮುಖ್ಯ, ಡಿಕೆಶಿ ಜತೆ ಸೌಜನ್ಯಯುತ ಭೇಟಿ: ಲಕ್ಷ್ಮಣ ಸವದಿ

By Kannadaprabha News  |  First Published Jun 1, 2023, 3:00 AM IST

ಕಾಂಗ್ರೆಸ್‌ ಸರ್ಕಾರದ ಅಧಿಕಾರವಧಿ ಇನ್ನೂ ಐದು ವರ್ಷಗಳಿವೆ. ಇದೇನೂ ಅಂತ್ಯವಲ್ಲ, ಆರಂಭ. ರಾಜಕಾರಣದಲ್ಲಿ ತಾಳ್ಮೆ ಹಾಗೂ ದೂರದೃಷ್ಟಿಇರಬೇಕು ಅವರೆಡೂ ನನಗಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. 


ಬೆಳಗಾವಿ (ಜೂ.01): ಕಾಂಗ್ರೆಸ್‌ ಸರ್ಕಾರದ ಅಧಿಕಾರವಧಿ ಇನ್ನೂ ಐದು ವರ್ಷಗಳಿವೆ. ಇದೇನೂ ಅಂತ್ಯವಲ್ಲ, ಆರಂಭ. ರಾಜಕಾರಣದಲ್ಲಿ ತಾಳ್ಮೆ ಹಾಗೂ ದೂರದೃಷ್ಟಿ ಇರಬೇಕು ಅವರೆಡೂ ನನಗಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ತಮ್ಮ ಮನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಭೇಟಿಯ ಕುರಿತು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಸೌಜನ್ಯಯುತ ಭೇಟಿ ಅಷ್ಟೇ. ಈ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದಷ್ಟೆ ಹೇಳಿದರು. 

ಸಚಿವ ಸ್ಥಾನದ ಕೂಗು: ನನಗೆ ಸಂಪುಟದಲ್ಲಿ ಸ್ಥಾನಮಾನ ನೀಡುವ ಕುರಿತು ಕೂಡ ಯಾವುದೇ ಚರ್ಚೆ ನಡೆದಿಲ್ಲ. ನನಗೆ ಮಂತ್ರಿ ಸ್ಥಾನ ಕೊಡಬೇಕೆಂದು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಆದರೆ ಹೈಕಮಾಂಡ್‌ಗೂ, ರಾಜ್ಯದ ಮುಖಂಡರಿಗೂ ಅನಿವಾರ್ಯ ಸಂದರ್ಭವಿದು. ಬಹಳಷ್ಟುಜನ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಬಂದಿರುವುದರಿಂದ ಎಲ್ಲರಿಗೂ ಪ್ರಾತಿನಿಧ್ಯ ನೀಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

Tap to resize

Latest Videos

ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ: ಶಾಸಕ ಕೊತ್ತೂರು ಮಂಜುನಾಥ್‌

ಡಿಕೆಶಿ ಸೌಜನ್ಯದ ಭೇಟಿ: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ ಅವರು ತಮ್ಮ ನಿವಾಸಕ್ಕೆ ಭೇಟಿ ನೀಡಿರುವುದರಲ್ಲಿ ಯಾವುದೇ ವಿಶೇಷವಿಲ್ಲ. ಅದು ಸೌಜನ್ಯದ ಭೇಟಿ ಮಾತ್ರ ಎಂದು ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ. ಬುಧವಾರ ಜಿಲ್ಲೆಯ ಇಂಚಗೇರಿ ಮಠದಲ್ಲಿ ಲಕ್ಷ್ಮಣ ಸವದಿ ಅವರು ಸುದ್ದಿಗಾರರ ಜತೆ ಮಾತನಾಡಿ, ಡಿ.ಕೆ.ಶಿವಕುಮಾರ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಬಿಡುವಿಲ್ಲದ ಕಾರಣ ಇದುವರೆಗೆ ಭೇಟಿಯಾಗಲು ಆಗಿರಲಿಲ್ಲ. ಸೌಜನ್ಯ ಭೇಟಿ ನೀಡಿದರು. ಮುಂದಿನ ರಾಜಕೀಯ ಚಟುವಟಿಕೆ ಬಗ್ಗೆ ಮಾತನಾಡಿದ್ದಾರೆ ಎಂದರು.

ಸಚಿವರಾಗುವ ಆಶಯ ಎಲ್ಲರಿಗೂ ಇರುತ್ತದೆ. ಅದು ಕಷ್ಟಸಾಧ್ಯ. ಏಕೆಂದರೆ ಎಲ್ಲರೂ ಮಂತ್ರಿಯಾಗಲು ಆಗಲ್ಲ. ಮಂತ್ರಿಯಾಗುವ ಆಸೆ ಹೊಂದುವುದು ತಪ್ಪಲ್ಲ ಎಂದು ಹೇಳಿದರು. ತಾವು ಇತ್ತೀಚೆಗೆ ಕಾಂಗ್ರೆಸ್‌ಗೆ ಬಂದಿದ್ದೇವೆ. ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಲ್ಲಿ ನಮ್ಮದೇಯಾದ ಕಾರ್ಯ ಮಾಡಿದ್ದೇವೆ. ಎಲ್ಲವೂ ಪಕ್ಷದ ನಾಯಕರಿಗೆ ಗೊತ್ತಿದೆ. ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ ಎಂದು ಸವದಿ ಹೇಳಿದರು. ಗಂಡ-ಹೆಂಡತಿ ನಡುವೆ ನಡೆದ ಮಾತುಕತೆಯ ಎಲ್ಲವನ್ನೂ ಹೊರಗೆ ಹೇಳಲಿಕ್ಕೆ ಆಗಲ್ಲ ಎಂದು ಸವದಿ ಮಾರ್ಮಿಕವಾಗಿ ನುಡಿದರು.

ಒಳ್ಳೆಯ ದಿನಗಳು ಮುಂದೆ ಬರಲಿವೆ: ನನಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಅನೇಕ ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ನಿರಾಸೆ ಆಗುವುದು ಸ್ವಾಭಾವಿಕ. ನಾನಂತೂ ನಿರಾಶೆ ಹೊಂದಿಲ್ಲ. ಆದರೆ, ಒಳ್ಳೆಯ ದಿನಗಳು ಮುಂದೆ ಬರಲಿವೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಕ್ಷೇತ್ರದಲ್ಲಿ ಆಯ್ಕೆಯಾದ ಶಾಸಕರ ಅಭಿಮಾನಿಗಳಲ್ಲಿ ಮತ್ತು ಕಾರ್ಯಕರ್ತರಲ್ಲಿ ತಮ್ಮ ಶಾಸಕರು ಸಚಿವರಾಗಬೇಕೆಂಬ ನಿರೀಕ್ಷೆ ಹೊಂದಿರುತ್ತಾರೆ. ಅದೇ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕೂಡ ನಿರೀಕ್ಷೆ ಹೊಂದಿದ್ದರು. 

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ತಲಾ 1 ಸಾವಿರ ರು. ಸಹಾಯಧನ: ಶಾಸಕ ಪ್ರದೀಪ್‌ ಈಶ್ವರ್‌ ಭರವಸೆ

ಆದರೆ, ಇರುವ 34 ಸಚಿವ ಸ್ಥಾನಗಳಲ್ಲಿ ಜಿಲ್ಲಾವಾರು ಮತ್ತು ಜಾತಿವಾರು, ಅದಲ್ಲದೆ ಪಕ್ಷದ ಅನೇಕ ಹಿರಿಯರು ಆಯ್ಕೆಯಾಗಿರುವುದರಿಂದ ಅವರಿಗೆ ಪ್ರಾತಿನಿಧ್ಯ ನೀಡಬೇಕಾಗಿರುವುದು ಅನಿವಾರ್ಯವಾಗಿತ್ತು ಎಂದರು. ಎರಡುವರೆ ವರ್ಷದ ನಂತರ ನಿಮಗೆ ಒಳ್ಳೆಯ ಸ್ಥಾನಮಾನ ಸಿಗಲಿದೆ ಎಂಬ ಊಹಾಪೋಹದ ಬಗ್ಗೆ ಪ್ರತಿಕ್ರಿಯೆಸಿದ ಅವರು ನಾನು ಬಿಸಿಲು ಕುದುರೆಯ ನೋಡಿ ಓಡುವ ವ್ಯಕ್ತಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಕೇಂದ್ರದ ವರಿಷ್ಠರ ಜೊತೆ ಏನು ಮಾತುಕತೆ ಆಗಿದೆ ಎಂಬುವುದು ನನಗೆ ಗೊತ್ತಿಲ್ಲ. ಕೆಲವು ಜನ ಊಹಾಪೋಗಳಿಗೆ ರೆಕ್ಕೆ ಪುಕ್ಕ ಕಟ್ಟಿಕಾಗೆ ಹಾರಿಸುತ್ತಾರೆ. ಇಂತಹ ಮಾತುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

click me!