ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಕಾರ್ಯಕರ್ತರಿಂದ ಸೋಲನ್ನಪ್ಪಿಲ್ಲ, ಕೆಲವು ಮುಖಂಡರಿಂದ ಸೋಲನ್ನೊಪ್ಪಬೇಕಾಯಿತು, ಕಾಂಗ್ರೆಸ್ ಪಕ್ಷವು ಗೆದ್ದಿಲ್ಲ ನಾವೇ ಅವರ ಗೆಲುವನ್ನು ತಂದು ಕೊಟ್ಟಿರುವುದು ಎಂದು ಸಂಸದ ಎಸ್.ಮುನಿಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಕೋಲಾರ (ಜೂ.17): ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಕಾರ್ಯಕರ್ತರಿಂದ ಸೋಲನ್ನಪ್ಪಿಲ್ಲ, ಕೆಲವು ಮುಖಂಡರಿಂದ ಸೋಲನ್ನೊಪ್ಪಬೇಕಾಯಿತು, ಕಾಂಗ್ರೆಸ್ ಪಕ್ಷವು ಗೆದ್ದಿಲ್ಲ ನಾವೇ ಅವರ ಗೆಲುವನ್ನು ತಂದು ಕೊಟ್ಟಿರುವುದು ಎಂದು ಸಂಸದ ಎಸ್.ಮುನಿಸ್ವಾಮಿ ಬೇಸರ ವ್ಯಕ್ತಪಡಿಸಿದರು. ನಗರ ಹೊರವಲಯದ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಕಾರ್ಯಕರ್ತರ ಆತ್ಮಾವಲೋಕನ ಸಭೆ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಗಿಂತ ಪಕ್ಷಕ್ಕೆ ಹೆಚ್ಚಿನ ಮಹತ್ವ ನೀಡುವುದನ್ನು ಮರೆತು, ನಮ್ಮನ್ನು ಅಭ್ಯರ್ಥಿ ಮಾತನಾಡಿಸಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಇತ್ಯಾದಿ ಸಣ್ಣಪುಟ್ಟ ಕಾರಣಗಳನ್ನು ಮುಂದು ಮಾಡಿ ಚುನಾವಣೆಯಲ್ಲಿ ನಿರ್ಲಕ್ಷ್ಯ ಮಾಡಲಾಗಿದೆ ಎಂದರು.
ಚುನಾವಣೆಗೆ ಮುನ್ನ ಪ್ರಚಾರಕ್ಕೆ ಯಾರೇ ಬಂದು ಹೋದರೂ ಸಹ ಕೊನೆಯವರೆಗೂ ಉಳಿದುಕೊಳ್ಳುವವರೂ ನಾವುಗಳು ತಾನೇ ಎಂದ ಅವರು ಕಾಂಗ್ರೆಸ್ ಪಕ್ಷವು ನೀಡಿರುವಂತ ಗ್ಯಾರಂಟಿಗಳಿಗೆ ಈಗ ಕರಾರು ಗಳನ್ನು ಅಳವಡಿಸುತ್ತಿರುವುದರಿಂದ ಸಾರ್ವಜನಿಕರು ಮತ ನೀಡಿದ್ದಕ್ಕೆ ಪಶ್ಚಾತ್ತಾಪಪಟ್ಟು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಶಾಶ್ವತವಾಗಿ ಮನೆಗೆ ಕಳುಹಿಸಲು ತೀರ್ಮಾನಿಸಿದ್ದಾರೆ ಎಂದರು. ಬಿಜೆಪಿ ಪಕ್ಷದಲ್ಲಿ ಸ್ಥಾನಮಾನ ಪಡೆದ ಕೆಲವು ಮುಖಂಡರು ಆಮಿಷಗಳಿಗೆ ಬಲಿಯಾಗಿ ಪಕ್ಷಕ್ಕೆ ದ್ರೋಹ ಬಗೆದವರು ಯಾರಾರಯರೆಂಬ ಪಟ್ಟಿನನ್ನ ಬಳಿ ಇದೆ.
ವಿದ್ಯುತ್ ದರ ಹೆಚ್ಚಳಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ: ಸಂಸದ ಮುನಿಸ್ವಾಮಿ
ಪಕ್ಷಕ್ಕೆ ದ್ರೋಹ ಬಗೆದು ಸಹ ಕಾರ್ಯಕ್ರಮದ ವೇದಿಕೆಗಳಲ್ಲಿ ವಿರಾಮಾನಿಸುತ್ತಾರೆ. ಹಾಲಿನಂತಹ ಪಕ್ಷಕ್ಕೆ ಹುಳಿ ಹಿಂಡಲು ಮುಂದಾಗಿ ಬೇಡಿ ಪಕ್ಷವು ಅಧಿಕಾರದಲ್ಲಿದ್ದಾಗ ಎಲ್ಲಾ ಸೌಲಭ್ಯಗಳನ್ನು ಪಡೆದು ವಂಚಿಸಿರುವುದಕ್ಕೆ ಎಂದಿಗೂ ಕ್ಷಮಿಸಲಾಗದು ಎಂದು ಕಿಡಿ ಕಾರಿದರಲ್ಲದೆ, ನಮ್ಮ, ನಮ್ಮಲ್ಲಿ ಏನೇ ಭಿನ್ನ ಮತಗಳಿದ್ದರೂ ನಾವೇ ಬಗೆಹರಿಸಿಕೊಳ್ಳೋಣ ಇನ್ನೊ್ನಬ್ಬರ ಮೇಲಿನ ಕೋಪಕ್ಕೆ ಪಕ್ಷವನ್ನು ಬಲಿ ಕೊಡುವುದು ಬೇಡ ಎಂದರು. ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆದ ಮಹಿಳೆಯರ ಸಾಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ವೇಮಗಲ್ ಸಾರ್ವಜನಿಕ ಚುನಾವಣಾ ಪ್ರಚಾರದಲ್ಲಿ ಮಾತು ಕೊಟ್ಟವರು ಈಗ ನಾನು ಹೇಳಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ.
ನಾಲಿಗೆಗೆ ಎಲುಬು ಇಲ್ಲ ಎಂದು ಹೇಗೆ ಬೇಕಾದರೂ ತಿರುಚುತ್ತಿರುವುದು ಸಮಂಜಸವಲ್ಲ ಎಂದು ಕಿಡಿಕಾರಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ಶಾಸಕರಾದ ವೈ.ಸಂಪಂಗಿ, ವರ್ತೂರು ಪ್ರಕಾಶ್, ರಾಜ್ಯ ಸಂಚಾಲಕ ಕಾಂತರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ, ಮುಖಂಡರಾದ ಗುರುಮೂರ್ತಿ ರೆಡ್ಡಿ, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್‌ಸಿಂಗ್, ತಿಮ್ಮರಾಯಪ್ಪ, ಮಾಗೇರಿ ನಾರಾಯಣಸ್ವಾಮಿ, ಓಹಿಲೇಶ್, ಮಮತಮ್ಮ, ಸೀಗೆನಹಳ್ಳಿ ಸುಂದರ್, ಬೆಗ್ಲಿ ಸೂರ್ಯಪ್ರಕಾಶ್ ಇದ್ದರು.
25 ಕೋಟಿ ವೆಚ್ಚದಲ್ಲಿ ಮಾಲೂರು ಅಭಿವೃದ್ಧಿಗೆ ನೀಲಿನಕ್ಷೆ: ಶಾಸಕ ನಂಜೇಗೌಡ
ಲೋಕಸಭೆಗೆ ಜೆಡಿಎಸ್ ಮತಗಳೂ ಬಿಜೆಪಿಗೆ ದೊರೆಯಲಿವೆ: ಚುನಾವಣೆಗಳಲ್ಲಿ ಮೊದಲು ಬೇರೆ ಕಡೆಯಿಂದ 10-15 ಸಾವಿರ ಮಂದಿಯನ್ನು ಮತಗಳನ್ನು ಅಕ್ರಮವಾಗಿ ಚಲಾಯಿಸಲಾಗುತ್ತಿತ್ತು, ಸತ್ತವರನ್ನು ಬಿಡದಂತೆ ಮತ ಚಲಾಯಿಸುತ್ತಿದ್ದರು ಆದರೆ ಈಗ ಅದಕ್ಕೆ ಕಡಿ ವಾಣ ಹಾಕಿದೆ. ಅತಿಯಾದ ವಿಶ್ವಾಸದಿಂದ ನಾವು ಗೆಲುವಿನಿಂದ ವಂಚಿತರಾಗಬೇಕಾಯಿತು. ಮುಬಾರಕ್ ಜೆಡಿಎಸ್‌ನವರ ಬಳಿ 4.5 ಲಕ್ಷ ರು. ಪಡೆದು ಪರಾರಿಯಾದರು. ನಂಜೇಗೌಡರಿಗೆ ತಮ್ಮ ಸೋಲು ಖಚಿತ ವಾಗುತ್ತಿದ್ದಂತೆ ಸಂಜೆ 4.30ರಲ್ಲಿ ಜೆಡಿಎಸ್‌ನವರಿಗೆ 20 ಲಕ್ಷ ರು. ಹಂಚಿ ಮತ ಪಡೆದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದವರೂ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸಲಿದ್ದಾರೆ. ನಿಷ್ಠಾ ವಂತರಿಗೆ ಪ್ರತಿ ಫಲ ಸಿಗಬೇಕು. ಇನ್ನು 10 ವರ್ಷ ವಿರೋಧ ಪಕ್ಷದಲ್ಲಿ ಇದ್ದರೂ ಸರಿ ಸದೃಢವಾದ ಪಕ್ಷವನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.