ಮೈಸೂರು ಸಿಂಹ ಕಾಣೆಯಾಗಿದೆ, ಯಾವುದೋ ಗುಹೆಯೊಳಗೆ ಅಡಗಿ ಕುಳಿತಿದೆ: ಸಚಿವ ತಂಗಡಗಿ ವಾಗ್ದಾಳಿ

By Ravi JanekalFirst Published Dec 22, 2023, 2:45 PM IST
Highlights

ಪಾರ್ಲಿಮೆಂಟ್ ದಾಳಿಯ ಹಿಂದೆ ಬಿಜೆಪಿ ಕೈವಾಡ ಇದೆ. ಘಟನೆ ಬಳಿಕ ಮೈಸೂರಿನ ಸಿಂಹ ಕಾಣೆಯಾಗಿದೆ, ಯಾವುದೋ ಗುಹೆಯೊಳಗೆ ಕುಳಿತಿದೆ ಎಂದು ಸಚಿವ ಶಿವರಾಜ ತಂಗಡಗಿ ಗಂಭೀರ ಆರೋಪ ಮಾಡಿದ್ದಾರೆ.

ಕೊಪ್ಪಳ (ಡಿ.22):  ಪಾರ್ಲಿಮೆಂಟ್ ದಾಳಿಯ ಹಿಂದೆ ಬಿಜೆಪಿ ಕೈವಾಡ ಇದೆ. ಘಟನೆ ಬಳಿಕ ಮೈಸೂರಿನ ಸಿಂಹ ಕಾಣೆಯಾಗಿದೆ, ಯಾವುದೋ ಗುಹೆಯೊಳಗೆ ಕುಳಿತಿದೆ ಎಂದು ಸಚಿವ ಶಿವರಾಜ ತಂಗಡಗಿ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಸಂಸದರನ್ನು ಅಮಾನತ್ತು ಮಾಡುವ ಬದಲು ಸಂಸತ್ತಿನ ಭದ್ರತೆ ಬಗ್ಗೆ ಉತ್ತರ ಕೊಡಲಿ ಅದುಬಿಟ್ಟು ಪ್ರಶ್ನೆ ಮಾಡಿದ ಸಂಸದರನ್ನು ಅಮಾನತ್ತು ಮಾಡಿದ್ದಾರೆ. ಆ ಮೂಲಕ ದೇಶದ ಜನರಿಗೆ ಉತ್ತರ ಕೊಡದೇ ಸರ್ವಾಧಿಕಾರಿ ಧೋರಣೆ ನಡೆಸಿದೆ ಎಂದು ಕಿಡಿಕಾರಿದರು.

 

ಹೊಗೆ ಬಾಂಬ್ ಬಗ್ಗೆ ಪ್ರಧಾನಿ ಮಾತನಾಡದಿರುವುದು ದುರಂತ: ಸಚಿವ ಶಿವರಾಜ ತಂಗಡಗಿ

ಸಂಸತ್ತು ಕಾಪಾಡದ ಕೇಂದ್ರ ಸರ್ಕಾರ ದೇಶ ಹೇಗೆ ಕಾಪಾಡುತ್ತದೆ ಎಂದು ಪ್ರಶ್ನಿಸಿದ ಸಚಿವರು, ಇಲ್ಲಿ ಇರೋದು ದೇಶ ಭಕ್ತರಲ್ಲ ಮೋದಿ ಭಕ್ತರು. ಪುಲ್ವಾಮಾ ದಾಳಿ ಸಹ ನಡೆದವು ಆ ಬಗ್ಗೆಯೂ ಸರಿಯಾದ ತನಿಖೆ ನಡೆದಿಲ್ಲ ಎಂದು ಆರೋಪಿಸಿದರು.

ಸಂಸತ್ತಿನ ಮೇಲೆ ದಾಳಿ ಮಾಡಿದ ವ್ಯಕ್ತಿಗೆ ಪಾಸ್ ಕೊಟ್ಟಿದ್ದು ಬಿಜೆಪಿ ಸಂಸದ ಪ್ರತಾಪ ಸಿಂಹ. ಸಂಸತ್ತಿನ ಮೇಲೆ ದಾಳಿ ನಡೆಸಿದ ವ್ಯಕ್ತಿಯನ್ನು ಬಂಧಿಸಿದ ಸರ್ಕಾರ ಸಂಸದ ಪ್ರತಾಪ್ ಸಿಂಹರನ್ನು ಯಾಕೆ ಬಂಧಿಸಿಲ್ಲ. ಯಾಕೆ ವಿಚಾರಣೆಗೊಳಪಡಿಸಿಲ್ಲ? ಇಷ್ಟಾದರೂ ಪ್ರತಾಪ ಸಿಂಹ ಬಾಯಿಗೆ ಬಂದಂತೆ ಮಾತಾಡ್ತಾರೆ. ಮೊದಲು ಸಂಸತ್ತು ದಾಳಿಕೋರನಿಗೆ ಪಾಸ್ ಕೊಟ್ಟ ಪ್ರತಾಪ ಸಿಂಹನ ವಿಚಾರಣೆ ನಡೆಸಲಿ. ಕನಿಷ್ಠ ತನಿಖೆ ನಡೆಯುವವರಿಗೆ ಅಮಾನತು ಮಾಡಿಲ್ಲ ಎಂದು ಕಿಡಿಕಾರಿದರು.

ಮಶ್ರೂಮ್ ಬೀಜದ ಚೀಲಗಳ ಮಧ್ಯೆ ಗೋವಾ ಮದ್ಯ!   ಖದೀಮರ ಪ್ಲಾನ್ ನೋಡಿ ಬೆಚ್ಚಿಬಿದ್ದ ಅಬಕಾರಿ ಪೊಲೀಸರು!

. ಸಂಸದನ ಬಗ್ಗೆ ಈವರೆಗೆ ಒಂದೂ ಮಾತಾಡಿಲ್ಲ. ಇಷ್ಟೆಲ್ಲ ಆಗಿದ್ದರೂ ಮೌನವಾಗಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ. ಕಾಂಗ್ರೆಸ್ ಸಂಸದರನ್ನು ಅಮಾನತ್ತು ಮಾಡಿದೆ.  ಬಿಜೆಪಿಗೆ ಮಾನ ಮರ್ಯಾದೆ ಇದ್ದರೆ ಗೌರವ ಇದ್ದರೆ ಭದ್ರತೆ ಲೋಪದ ಬಗ್ಗೆ ಸಂಸತ್ತಿನಲ್ಲಿ ಉತ್ತರ ಕೊಡಲಿ.  ಸಂಸತ್ತಿನಲ್ಲಿ ಉತ್ತರ ಕೊಡಲಾಗದ ಉತ್ತರ ಕುಮಾರರು ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

click me!