ಧಾರವಾಡ: ಬ್ರಾಹ್ಮಣ ಸಮಾಜಕ್ಕೆ ಟಿಕೆಟ್‌ ನೀಡಿದ ಪಕ್ಷಕ್ಕೆ ನಮ್ಮ ಬೆಂಬಲ: ವಿಪ್ರ ಅಧ್ಯಕ್ಷ ಆರ್‌ ಡಿ ಕುಲಕರ್ಣಿ

By Kannadaprabha News  |  First Published Apr 1, 2023, 10:57 AM IST

ಹು-ಧಾ ಮಹಾನಗರದ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಬ್ರಾಹ್ಮಣ ಮತದಾರರ ಸಂಖ್ಯೆ ಹೆಚ್ಚಿದೆ. ಬ್ರಾಹ್ಮಣ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಬೇಕಾಗಿದೆ. ಯಾವ ಪಕ್ಷ ಬ್ರಾಹ್ಮಣ ಸಮಾಜಕ್ಕೆ ಟಿಕೆಟ್‌ ಕೊಡುವುದೋ ಆ ಪಕ್ಷಕ್ಕೆ ಇಡೀ ಬ್ರಾಹ್ಮಣ ಸಮಾಜದ ಸಂಪೂರ್ಣ ಬೆಂಬಲ ನೀಡುವುದಾಗಿ ವಿಪ್ರ ಸಮಾಜದ ಅಧ್ಯಕ್ಷ ಆರ್‌.ಡಿ. ಕುಲಕರ್ಣಿ ಹೇಳಿದರು.


ಧಾರವಾಡ (ಏ.1) : ಹು-ಧಾ ಮಹಾನಗರದ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಬ್ರಾಹ್ಮಣ ಮತದಾರರ ಸಂಖ್ಯೆ ಹೆಚ್ಚಿದೆ. ಯಾವುದಾದರೂ ಒಂದು ಕ್ಷೇತ್ರದಲ್ಲಿ ಬ್ರಾಹ್ಮಣ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಬೇಕಾಗಿದೆ. ಯಾವ ಪಕ್ಷವು ಬ್ರಾಹ್ಮಣ ಸಮಾಜಕ್ಕೆ ಟಿಕೆಟ್‌ ಕೊಟ್ಟು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡುವುದೋ ಆ ಪಕ್ಷಕ್ಕೆ ಇಡೀ ಬ್ರಾಹ್ಮಣ ಸಮಾಜದ ಸಂಪೂರ್ಣ ಬೆಂಬಲ ನೀಡುವುದಾಗಿ ವಿಪ್ರ ಸಮಾಜದ ಅಧ್ಯಕ್ಷ ಆರ್‌.ಡಿ. ಕುಲಕರ್ಣಿ(RD Kulkarni) ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಮಾಜದಲ್ಲಿ ಧರ್ಮ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಬ್ರಾಹ್ಮಣರ ಕೊಡುಗೆ ಅಗ್ರಗಣ್ಯ. ದೇಶದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಈ ಸಮಾಜದ ಜನರು ನೀಡುತ್ತಿರುವ ಕೊಡುಗೆ ಕಡೆಗಣಿಸುವಂತಿಲ್ಲ. ಆದರೆ, ರಾಜಕೀಯವಾಗಿ ಈ ಸಮಾಜಕ್ಕೆ ಸಿಗಬೇಕಾದ ಮನ್ನಣೆ ಮತ್ತು ಪ್ರಾತಿನಿಧ್ಯ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಬ್ರಾಹ್ಮಣರಿಗೆ ಪ್ರಾತಿನಿಧ್ಯ ಸಿಗದೇ ದಶಕಗಳೇ ಕಳೆದಿವೆ. ಭಾವುರಾವ್‌ ದೇಶಪಾಂಡೆ ಶಾಸಕ (1978 ರಿಂದ 1983) ರಾಗಿದ್ದನ್ನು ಬಿಟ್ಟರೆ ಮತ್ತೆ ಯಾರೂ ಬ್ರಾಹ್ಮಣರು ಧಾರವಾಡ ಜಿಲ್ಲೆಯಿಂದ ವಿಧಾನಸಭೆಯನ್ನು ಪ್ರತಿನಿಧಿಸಿಲ್ಲ ಎಂದು ವಿಷಾಧಿಸಿದರು.

Tap to resize

Latest Videos

ಬ್ರಾಹ್ಮಣರ ಮೇಲೆ ಹರತಾಳು ಹಾಲಪ್ಪನ ದಬ್ಬಾ​ಳಿಕೆ ಇನ್ಮುಂದೆ ಸಹಿ​ಸಲ್ಲ: ಬ್ರಾಹ್ಮಣ ಮಹಾ​ಸ​ಭಾ

ಅವಿಭಜಿತ ಧಾರವಾಡ ಜಿಲ್ಲೆ, ವಿಭಜನೆ ನಂತರ ಮತ್ತು ವಿಧಾನಸಭೆ ಕ್ಷೇತ್ರ(Dharwad assembly constituency)ಗಳ ಮರುವಿಂಗಡಣೆ ನಂತರವೂ ಕೂಡ ಜಿಲ್ಲೆಯ ಯಾವ ಕ್ಷೇತ್ರಗಳಲ್ಲೇ ಆಗಲಿ, ಯಾವ ರಾಜಕೀಯ ಪಕ್ಷವೂ ಬ್ರಾಹ್ಮಣರನ್ನು ಗುರುತಿಸಿಲ್ಲ. ಅವಳಿ ನಗರದ ಮೂರು ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮಾಜ(Brahmana community)ದ ಮತದಾರರ ಸಂಖ್ಯೆಯನ್ನು ಕಡೆಗಾಣಿಸುವ ಹಾಗಿಲ್ಲ. ಬ್ರಾಹ್ಮಣರು ಇದುವರೆಗೂ ಜರುಗಿದ ಎಲ್ಲ ವಿಧಾನಸಭಾ ಚುನಾವಣೆಗಳಲ್ಲೂ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೇ ತಪ್ಪದೇ ಮತದಾನ ಮಾಡುವ ತಮ್ಮ ಕರ್ತವ್ಯವನ್ನು ಮರೆತಿಲ್ಲ. ಯಾವ ಪಕ್ಷಗಳೂ ಬ್ರಾಹ್ಮಣ ಸಮಾಜವನ್ನು ಗಣನೆಗೆ ತೆಗೆದುಕೊಂಡಿಲ್ಲ. ಹೇಗಾದರೂ ಅವರು ಮತ ಚಲಾಯಿಸುತ್ತಾರೆ ಎಂದುಕೊಂಡು ನಿರ್ಲಕ್ಷ್ಯ ಮಾಡಿದ್ದೇ ಹೆಚ್ಚು. ಆದ್ದರಿಂದ ಈ ಬಾರಿ ಹಾಗಾಗುವಂತಿಲ್ಲ ಎಂದು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಂಗಣ್ಣ ಕುಲಕರ್ಣಿ, ರಮೇಶ ಪರ್ವತಿಕರ, ಆನಂದ ಕುಲಕರ್ಣಿ, ರಾಜೀವ ಪಾಟೀಲ ಕುಲಕರ್ಣಿ ಇದ್ದರು.

Karnataka election 2023: ಮತದಾರರಿಗೆ ಆಮಿಷ ಶಿಕ್ಷಾರ್ಹ ಅಪರಾಧ: ಡಿಸಿ...

click me!