ನುಡಿದಂತೆ ನಡೆಯುವುದೇ ನಮ್ಮ ಸರ್ಕಾರದ ಸಿದ್ದಾಂತ: ಶಾಸಕ ನರೇಂದ್ರಸ್ವಾಮಿ

By Kannadaprabha NewsFirst Published Dec 30, 2023, 8:25 PM IST
Highlights

ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಚುನಾವಣೆಗೂ ಮುನ್ನ ರಾಜ್ಯದ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಸಂಪೂರ್ಣವಾಗಿ ಈಡೇರಿಸುವ ಮೂಲಕ ನಾವು ಕೊಟ್ಟ ಮಾತಿಗೆ ಬದ್ಧರಾಗಿದ್ದೇವೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ (ಡಿ.30): ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಚುನಾವಣೆಗೂ ಮುನ್ನ ರಾಜ್ಯದ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಸಂಪೂರ್ಣವಾಗಿ ಈಡೇರಿಸುವ ಮೂಲಕ ನಾವು ಕೊಟ್ಟ ಮಾತಿಗೆ ಬದ್ಧರಾಗಿದ್ದೇವೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು. ಪಟ್ಟಣದ ತಾಪಂ ಆವರಣದಲ್ಲಿ ಸರ್ಕಾರದ ಯುವನಿಧಿ ಪ್ರಚಾರ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಗೆ ತಂದ ಏಕೈಕ ಸರ್ಕಾರ ನಮ್ಮದು. ನಮ್ಮ ನಾಯಕ ರಾಹುಲ್ ಗಾಂಧಿ ಸೂಚನೆಯ ಮೇರೆಗೆ ಅಂದು ಘೋಷಣೆ ಮಾಡಿದ್ದ ಎಲ್ಲ ಯೋಜನೆಗಳನ್ನು ಪ್ರಸ್ತುತ ಜಾರಿ ಮಾಡಿದ್ದೇವೆ ಎಂದು ಹೇಳಿದರು.

ಹಣಕಾಸಿನ ಕೊರತೆ ನಿರ್ವಹಿಸಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಪ್ರಥಮ ಸರ್ಕಾರ ನಮ್ಮದಾಗಿದೆ. ಕೆಲವರು ಏನೇನೂ ಯಾತ್ರೆ, ಭರವಸೆ ನೀಡಿದ್ದರೂ ಅವುಗಳನ್ನು ಅವರ ಆಡಳಿತ ಸಂದರ್ಭದಲ್ಲಿ ನೆರವೇರಿಸಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಘೋಷಣೆ ಮಾಡಿದ್ದ ಯೋಜನೆಗಳನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ಹಿಂದೆ ಸರ್ಕಾರ ನಡೆಸಿದವರು ನೂರಾರು ಯೋಜನೆಗಳನ್ನು ಘೋಷಣೆ ಮಾಡಿ ಬೆರಳೆಣಿಕೆಯಷ್ಟು ಜಾರಿ ಮಾಡಿದ್ದರು. 

ಸುಳ್ಳುಗಾರ, ವಚನಭ್ರಷ್ಠ ಸಿಎಂ ಸಿದ್ದರಾಮಯ್ಯ: ಮಾಜಿ ಶಾಸಕ ಎನ್.ಮಹೇಶ್

ನಮ್ಮ ರಾಜ್ಯದ ನಿರುದ್ಯೋಗಿ ಮಿತ್ರರು ಇದನ್ನು ಅರ್ಥ ಮಾಡಿಕೊಂಡು ಉದ್ಯೋಗ ಸಿಗುವವರೆಗೆ ಯುವನಿಧಿ ಯೋಜನೆಯನ್ನು ಉಪಯೋಗಿಸಿಕೊಳ್ಳಬಹುದು ಎಂದರು. ಆನ್ ಲೈನ್ ನಲ್ಲಿ ಸೂಕ್ತ ದಾಖಲೆಗಳೊಂದಿಗೆ ನೋಂದಣಿ ಮಾಡಿಕೊಳ್ಳಬಹುದು. ರಾಜ್ಯದ ಸಮಗ್ರ ಅಭಿವೃದ್ಧಿಯ ಜೊತೆಗೆ ಅಸಮತೋಲನ ನಿವಾರಣೆಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳಿದರು. ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಕೆ.ಎನ್.ಲೋಕೇಶ್, ತಾಪಂ.ಇಒ ಎಲ್.ಮಮತಾ, ಸೆಸ್ಕ್ ಎಇಇ ಎಚ್‌.ಎಸ್.ಪ್ರೇಮ್ ಕುಮಾರ್ ಹಾಗೂ ಮುಖಂಡರು ಇದ್ದರು.

ಕ್ಷೇತ್ರದಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಿದ್ದೇನೆ: ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿ ಕುಂಠಿತ ಜೊತೆಗೆ ಅಕ್ರಮಗಳು ಹೆಚ್ಚಾಗಿದ್ದವು. ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕಿದ್ದೇನೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು. ತಾಲೂಕಿನ ಅಂಗ್ರಾಪುರ ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಅಕ್ರಮ ದಂಧೆಯಲ್ಲಿ ತೊಡಗಿದ್ದವರು ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾ ಜನರನ್ನು ದಿಕ್ಕು ತಪ್ಪಿಸಲು ಹೊರಟ್ಟಿದ್ದಾರೆ. ಇವುಗಳಿಗೆ ಯಾವುದಕ್ಕೂ ಬಗ್ಗುವುದಿಲ್ಲ. ಅಕ್ರಮ ಚಟುವಟಿಕೆಗಳಿಗೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದರು.

ಪ್ರತಿ ಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸದಾ ಚಿಂತಿಸಿ ಹೆಚ್ಚಿನ ಬಹುಮತ ಕೊಟ್ಟು ಗೆಲ್ಲಿಸಿದ ಮತದಾರರ ನಿರೀಕ್ಷೆ ಹುಸಿಯಾಗದಂತೆ ಅವಕಶ್ಯಕತೆ ಪೂರೈಸಲು ಪ್ರಾಮಾಣಿಕ ಶ್ರಮಿಸುತ್ತಿದ್ದೇನೆ. ನನ್ನ ಅಧಿಕಾರದ ಅವಧಿಯಲ್ಲಿ ಬಹುಜನರಿಗೆ ಅನುಕೂಲವಾಗುವ ತೀರ್ಮಾನಗಳನ್ನು ಕೈಗೊಳ್ಳುತ್ತೇನೆ ಹೊರತು ಯಾರಿಗೂ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ ಎಂದರು. ಅಭಿವೃದ್ಧಿ ನಾಗಲೋಟವನ್ನು ಮುಂದುವರಿಸಲಾಗಿದೆ. ಮಾರ್ಚ್ ತಿಂಗಳ ನಂತರ ಕ್ಷೇತ್ರಕ್ಕೆ ಯಾವ ಕೊಡುಗೆ ಬಂದಿದೆ ಎಂದು ತಿಳಿಯುತ್ತದೆ. ಕ್ಷೇತ್ರಕ್ಕೆ ಬರಬೇಕಿದ್ದ ಪಾಲನ್ನು ತಂದೆ ತರುತ್ತೇನೆ. ಈಗಾಗಲೇ ಮಳವಳ್ಳಿಗೆ ವಿಶೇಷ ಕಾಲೇಜು ಮಂಜೂರು ಮಾಡಿಸಲಾಗಿದೆ ಎಂದರು.

ದಂಗೆ ಆಗಲಿ, ಗಲಭೆ ಆಗಲಿ ಎಂದು ಬಯಸುವುದೇ ಬಿಜೆಪಿ: ಸಚಿವ ದಿನೇಶ್ ಗುಂಡೂರಾವ್

ವಿಜ್ಞಾನ ವಿಷಯಗಳನ್ನು ಪ್ರಾರಂಭಿಸಲಾಗುತ್ತಿದೆ. ತಾಲೂಕಿನ 8 ಕೆಪಿಎಸ್ ಶಾಲೆಗಳನ್ನು ತರಲಾಗುವುದು. ಪ್ರತಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇಲ್ಲದಂತೆ 180 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಕಾರ್ಖಾನೆ ಸೇರಿದಂತೆ ಇತರೆ ಸಂಸ್ಥೆಗಳಿಂದ ಬರುವ ಸಂಸ್ಕರಣ ನಿಧಿಯನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉನ್ನತ್ತೀಕರಣ ಪಡೆದು ಪೈಪೋಟಿ ಯುಗದಲ್ಲಿ ಸ್ಪರ್ಧೆ ಮಾಡುವಂತೆ ಗುಣ ಮಟ್ಟದ ಶಿಕ್ಷಣ ಕೊಡಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದರು.

click me!