ರಾಮಮಂದಿರ ಉದ್ಘಾಟನೆಗೆ ಬಿಜೆಪಿ, ಕಾಂಗ್ರೆಸ್ ಎಲ್ಲ ರಾಜಕೀಯ ಪಕ್ಷದ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಮಾಜಿ ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಉಡುಪಿ (ಡಿ.30): ರಾಮಮಂದಿರ ಉದ್ಘಾಟನೆಗೆ ಬಿಜೆಪಿ, ಕಾಂಗ್ರೆಸ್ ಎಲ್ಲ ರಾಜಕೀಯ ಪಕ್ಷದ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಮಾಜಿ ಸಚಿವ ಸುನಿಲ್ ಕುಮಾರ್ ತಿಳಿಸಿದರು.
ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿರುವ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಗಣ್ಯರಿಗೂ ಆಹ್ವಾನ ನೀಡಲಾಗಿದೆ.ಸುಖಾ ಸುಮ್ಮನೆ ಆರೋಪ ಮಾಡಲಾಗ್ತಿದೆ. ಶ್ರೀರಾಮ ಎಲ್ಲ ಭಾರತೀಯರಿಗೆ ಸೇರಿದವನು. ಆಹ್ವಾನ ಇಲ್ಲದೆಯೂ ಉದ್ಘಾಟನೆಗೆ ಬರಬಹುದಾಗಿದೆ ಎಂದರು.
undefined
ಇನ್ನು ಆರಂಭದಿಂದಲೂ ರಾಮಮಂದಿರಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿರುವಂತದ್ದೆ. ಹಿಂದೆ ರಾಮನೇ ಅಸ್ತಿತ್ವ ಪ್ರಶ್ನಿಸಿದ್ದರು. ಈಗ ಆಹ್ವಾನ ನೀಡಲ್ಲ ಆಕ್ಷೇಪವೆತ್ತಿದ್ದಾರೆ. ಕರಸೇವಕರ ಮೇಲೆ ಗುಂಡಿನ ದಾಳಿ ಮಾಡಿದ ಕಾಂಗ್ರೆಸ್ ನ ನಿಲುವು ಏನು ಎಂಬುದು ಜನಮಾನಸಕ್ಕೆ ಗೊತ್ತಿದೆ. ಈಗ ನಿರ್ಮಾಣವಾಗಿರುವುದು ರಾಮಮಂದಿರ ಅಲ್ಲ, ರಾಷ್ಟ್ರಮಂದಿರ. ಕಾಲಘಟ್ಟ ತುಂಬಾ ಬದಲಾಗಿದೆ ಮೊದಲಿನಂತಿಲ್ಲ ಎಂದರು.
3 ರಾಮಲಲ್ಲಾ ಮೂರ್ತಿಗಳು, ಗರ್ಭಗುಡಿ ರಾಮಲಲ್ಲಾ ಯಾರು..? ವಿವಾದಿತ ಸ್ಥಳ ಅಭಿವೃದ್ಧಿ ಸ್ಥಳವಾಗಿ ಬದಲಾಗಿದ್ದು ಹೇಗೆ..?
ಚುನಾವಣಾ ಹಿಂದೂಗಳಾಗಬೇಡಿ:
ಎಐಸಿಸಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸಹಿತ ಕಾಂಗ್ರೆಸ್ ನಾಯಕರು ರಾಮಮಂದಿರ ಉದ್ಘಾಟನೆಗೆ ಬರುವ ಮಾನಸಿಕತೆ ಬೆಳೆಸಿಕೊಂಡರೆ ಒಳ್ಳೆಯದು. ಆಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಬಂದು ಕರೆಸೇವಕರ ಮಾರಣಹೋಮಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ. ಚುನಾವಣೆ ಬಂದಾಗ ಮಾತ್ರ ಹಿಂದೂ ಎಂದು ಹೇಳಿಕೊಳ್ಳುವ ಬದಲು ನೈಜ ಹಿಂದುತ್ವ ಪ್ರದರ್ಶಿಸಲಿ ಎಂದು ತಿರುಗೇಟು ನೀಡಿದರು.
ಇನ್ನು ಕನ್ನಡ ಹೋರಾಟಗಾರರನ್ನು ಬಂಧಿಸಿದ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು. ನಮ್ಮ ಬಿಜೆಪಿ ಸರ್ಕಾರ ಸಮಗ್ರ ಕನ್ನಡ ಭಾಷಾ ವಿಧೇಯಕವನ್ನು ಮಂಡನೆ ಮಾಡಿತ್ತು. ಆದರೆ ಅನುಮೋದನೆ ತೆಗೆದುಕೊಂಡ ವಿಧೇಯಕಕ್ಕೆ ಈ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಅಧಿಕಾರಕ್ಕೆ ಬಂದು ಎಂಟು ತಿಂಗಳಾದರೂ ಕೂಡ ಈ ವಿಚಾರದಲ್ಲಿನ್ನೂ ಕಾಲಹರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
'ಅಕ್ಕ ಸತ್ರೆ ಅಮಾವಾಸ್ಯೆ ನಿಲ್ಲೋದಿಲ್ಲ' ಪರೋಕ್ಷವಾಗಿ ಯತ್ನಾಳ್‌ಗೆ ನಿರಾಣಿ ಟಾಂಗ್!
ಆಡಳಿತದಲ್ಲಿ ಕನ್ನಡ, ನಡವಳಿಕೆಯಲ್ಲಿ ಕನ್ನಡ ನಮ್ಮ ಸರ್ಕಾರದ ಆಶಯವಾಗಿತ್ತು. ಬೆಂಗಳೂರಿನಲ್ಲಿ ನಡೆದ ಘಟನೆಗಳಿಗೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ. ಕನ್ನಡ ಕಾರ್ಯಕರ್ತರನ್ನ ಬಂಧಿಸಿರುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕನ್ನಡ ಕಾರ್ಯಕರ್ತರ ಮೇಲಿನ ಮೊಕದ್ದಮೆ ವಾಪಸ್ಸು ಪಡೆದು ತಕ್ಷಣ ಕನ್ನಡ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲಿ. ಚುನಾವಣೆ ಬಂದಾಗ ಭಾಷಾಭಿಮಾನ ತೋರುತ್ತೀರಿ. ಅಧಿಕಾರಕ್ಕೆ ಬಂದ ಮೇಲೆ ಕನ್ನಡಪರ ಹೋರಾಟಗಾರರನ್ನೇ ಬಂಧಿಸಿ ಜೈಲಿಗಟ್ಟುತ್ತಿರಿ ಇಂತಹ ಇಬ್ಬಗೆ ನೀತಿಯಿಂದಲೇ ಸಹಿಸಲು ಕನ್ನಡಿಗರು ಸಹಿಸುವುದಿಲ್ಲ ರಾಜ್ಯಸರ್ಕಾರದ ವಿರುದ್ಧ ಹರಿಹಾಯ್ದರು.