ಚಾಮರಾಜನಗರ ಮತ್ತು ಮೈಸೂರು ಎರಡು ಜಿಲ್ಲೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನಗೆ ರಾಜಕೀಯ ನೆಲೆಕೊಟ್ಟಜಿಲ್ಲೆಗಳಾಗಿವೆ. ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವಷ್ಟು ನೆರವು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಮಾಜಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ತಿಳಿಸಿದರು.
ಚಾಮರಾಜನಗರ (ಜೂ.14): ಚಾಮರಾಜನಗರ ಮತ್ತು ಮೈಸೂರು ಎರಡು ಜಿಲ್ಲೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನಗೆ ರಾಜಕೀಯ ನೆಲೆಕೊಟ್ಟಜಿ ಲ್ಲೆಗಳಾಗಿವೆ. ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿರುವಷ್ಟು ನೆರವು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಮಾಜಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ತಿಳಿಸಿದರು. ನಗರದ ಎಪಿಎಂಸಿ ಅರಿಶಿನ ಮಾರುಕಟ್ಟೆಪ್ರಾಂಗಣದಲ್ಲಿ ಗ್ರಾಮಾಂತರ ಹಾಗೂ ನಗರಬ್ಲಾಕ್ ಕಾಂಗ್ರೆಸ್‌ನಿಂದ ನಡೆದ ಮತದಾರರು ಹಾಗೂ ಕಾರ್ಯಕರ್ತರಿಗೆ ಆಯೋಜಿಸಿದ್ದ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳು ಸಂವಿಧಾನದ ಆಶಯಗಳಿಗೆ ಪೂರಕವಾಗಿದ್ದು, ಎಲ್ಲಾ ವರ್ಗದವರಿಗೂ ಸಮಾನ ಅವಕಾಶ ನೀಡಿ, ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ.
ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಗಳಾಗಿ ರಾಜ್ಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ನೀಡಿದ್ದ 5ಗ್ಯಾರಂಟಿ ಯೋಜನೆಗಳನ್ನು ಕೇವಲ 20 ದಿನಗಳ ಅವಧಿಯಲ್ಲಿ ಜಾರಿಗೊಳಿಸುವ ಮೂಲಕ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಮತ್ತೊಮ್ಮೆ ಸಿದ್ದರಾಮಯ್ಯ ಸಾಬೀತು ಪಡಿಸಿದ್ದಾರೆ. 2013-18ನೇ ಅಧಿಕಾರವಧಿಯಲ್ಲಿ ಕಾಂಗ್ರೆಸ್ ನೀಡಿದ್ದ 165 ಭರವಸೆಗಳ ಪೈಕಿ 158 ಭರವಸೆ ಈಡೇರಿಸಿತ್ತು. ಹೀಗಾಗಿ, ಜನರು ಕಳೆದ 5 ವರ್ಷಗಳ ಬಿಜೆಪಿ ಹಾಗೂ ಜೆಡಿಎಸ್ ಆಡಳಿತದಿಂದ ಬೇಸತ್ತಿದ್ದರು. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ಪಣ ತೊಟ್ಟು 135ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸುವ ಮೂಲಕ 2ನೇ ಬಾರಿಗೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಮಹದೇವಪ್ಪ ತಿಳಿಸಿದರು.
undefined
ಸರ್ಕಾರಕ್ಕೆ ಹೊರೆಯಾದರೂ ಕೊಟ್ಟಮಾತು ಉಳಿಸಿಕೊಳ್ಳುತ್ತೇವೆ: ಸಚಿವ ವೆಂಕಟೇಶ್
ಶಾಸಕ ಸಿ.ಪುಟ್ಟರಂಗಶೆಟ್ಟರನ್ನು ಸತತ ನಾಲ್ಕು ಬಾರಿಗೆ ಗೆಲ್ಲಿಸುವ ಮೂಲಕ ಕ್ಷೇತ್ರದ ಮತದಾರರು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಸರಳ ಸಜ್ಜನಿಕೆ ಹಾಗೂ ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದ ಪುಟ್ಟರಂಗಶೆಟ್ಟರ ಗೆಲುವು ಹಿಂದುಳಿದ ವರ್ಗಗಳ ಗೆಲುವಾಗಿದೆ. ಬಹಳಷ್ಟುರಾಜಕಾರಣಿಗಳನ್ನು ಬೆಳೆಸಿದ ಜಿಲ್ಲೆ ಇದಾಗಿದೆ. ನನ್ನ ಹಾಗೂ ಸಿದ್ದರಾಮಯ್ಯ ಅವರ ರಾಜಕೀಯವಾಗಿ ಬೆಳೆಸಿದ ಜಿಲ್ಲೆ ಚಾ.ನಗರ. ಮೈಸೂರು ಅವಿಭಜಿತ ಜಿಲ್ಲೆಯಾಗಿದ್ದ ಚಾ.ನಗರ ಜಿಲ್ಲೆಯ ಬಗ್ಗೆ ರಾಚಯ್ಯ ಅವರಿಗೆ ಹಾಗೂ ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ. ಈ ಕಾಂಗ್ರೆಸ್ ಅವಧಿಯಲ್ಲಿ ಚಾ.ನಗರ ಹೆಚ್ಚು ಅಭಿವೃದ್ಧಿಯಾಗಿದೆ.
ದಾಖಲೆಗಳನ್ನು ಒಮ್ಮೆ ತೆಗೆದು ನೋಡಿದರೆ ಅರಿವಿಗೆ ಬರುತ್ತದೆ ಎಂದು ಮಹದೇವಪ್ಪ ನುಡಿದರು. ಈ ಭಾಗದ ಜನಾನುರಾಗಿ ನಾಯಕರು ಮತ್ತು ಶಾಸಕರಾಗಿದ್ದ ಎಂ.ಸಿ. ಬಸಪ್ಪ, ಯು.ಎಂ.ಮಾದಪ್ಪ, ಎಸ್. ಪುಟ್ಟಸ್ವಾಮಿ, ವಾಟಾಳ್ ನಾಗರಾಜ್, ಸಿ. ಗುರುಸ್ವಾಮಿ ಅವರಲ್ಲಿ ಯಾರು ಸತತ ನಾಲ್ಕು ಬಾರಿ ಗೆದ್ದಿಲ್ಲ. ಆದರೆ, ಪುಟ್ಟರಂಗಶೆಟ್ಟರು ಈ ಸಾಧನೆ ಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅವರಲ್ಲಿರುವ ಸರಳತೆ ಆಗಿದೆ. ಭಗೀರಥ ಸಮುದಾಯದ ಪುಟ್ಟರಂಗಶೆಟ್ಟರು ಸತತ ನಾಲ್ಕನೇ ಬಾರಿ ಆಯ್ಕೆಯಾಗಿರುವುದು ಈ ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಿದಂತಾಗಿದೆ. ಸಮಾಜದ ಮೊದಲ ಮಂತ್ರಿ ಪುಟ್ಟರಂಗಶೆಟ್ಟರ ಗೆಲುವಿಗೆ ಕಾಂಗ್ರೆಸ್ ಮೂಲ ಮತದಾರರು ಹಾಗೂ ಬಹುಸಂಖ್ಯಾತರ ಮತವನ್ನು ಕ್ರೋಡಿಕರಿಸಿಕೊಂಡಿದ್ದರು ಎಂದು ಮಹದೇವಪ್ಪ ವಿಶ್ಲೇಷಿಸಿದರು.
ಜನರಲ್ಲಿ ಮೌಢ್ಯತೆ ಸಾರಿದ ಪ್ರಧಾನಿ: ಕೋವಿಡ್ ನಿರ್ಮೂಲನೆಗೆ ಜಾಗಟೆ ಹೊಡಿಯಿರಿ. ದೀಪ ಹಚ್ಚಿ ಎಂಬ ಮೌಡ್ಯವನ್ನು ನಮ್ಮ ಜನರಲ್ಲಿ ಬಿತ್ತಿದ್ದರು. ಹೀಗಾಗಿ ಕರ್ನಾಟಕದ ಜನರು ಪ್ರಧಾನಿ ನರೇಂದ್ರ ಮೋದಿ ಎಷ್ಟೋ ಬಾರಿ ರಾಜ್ಯಕ್ಕು ಬಂದರು ಬಿಜೆಪಿಯನ್ನು ಬೆಂಬಲಿಸಲಿಲ್ಲ. ನಮ್ಮ ಸಂವಿಧಾನದ ಆಶಯದಂತೆ ನಡೆಯುವ ಸರ್ಕಾರವಾಗಿದೆ. ಸಂವಿಧಾನ ಓದಬೇಕು. ಅ ಮೂಲಕ ದೇಶದ ಆಡಳಿತ ನಡೆಯಬೇಕಿದೆ. ಶಾಲಾ-ಕಾಲೇಜು ಸಂವಿಧಾನ ಓದಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ನಮ್ಮೆಲ್ಲರ ಗೆಲುವಿಗೆ ಕಾರಣರಾದ ಮತದಾರನ್ನು ಸತ್ಕಾರ್ಯ ಮಾಡುವುದು ನಮ್ಮ ಜವಾಬ್ಧಾರಿ.
ಪುಟ್ಟರಂಗಶೆಟ್ಟರು ಸರಳ, ಸಜ್ಜನಿಕೆಯ ಶಾಸಕರಾಗಿದ್ದಾರೆ. ಇಡೀ ರಾಜ್ಯದಲ್ಲಿ ಉಪ್ಪಾರ ಸಮುದಾಯದ ಒಬ್ಬರೇ ಶಾಸಕರಾಗಿದ್ದಾರೆ. ಮುಖ್ಯಮಂತ್ರಿ ಬೇಸರ ಮಾಡಿಕೊಂಡಿದ್ದಾರೆ ಅವರಿಗೆ ಸಚಿವ ಸ್ಥಾನ ಕೊಡುವ ಮನಸ್ಸು ಅವರಿಗಿದೆ. ನಾವೆಲ್ಲರೂ ಪುಟ್ಟರಂಗಶೆಟ್ಟರ ಪರವಾಗಿ ಇದ್ದೇವೆ. ಪುಟ್ಟರಂಗಶೆಟ್ಟರು ನಾವು ಜೊತೆಗೂಡಿ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲಾಗುತ್ರದೆ. ಟೀಕೆ ಮಾಡುವ ವಿರೋಧ ಪಕ್ಷದವರಿಗೆ ಉತ್ತರ ಕೊಟ್ಟಿದ್ದೇವೆ. ಇನ್ನು ಮೂರು ಯೋಜನೆಗಳು ಆಗಸ್ಟ್ 15 ವರಗೆ ಜಾರಿ ಮಾಡಲಾಗುವುದು ಎಂದು ವೆಂಕಟೇಶ್ ತಿಳಿಸಿದರು.
ಮುಖಂಡರು ಸೋಲುತ್ತಾರೆ: ಶಾಸಕ ಸಿ. ಪುಟ್ಟರಂಗಶೆಟ್ಟಿಮಾತನಾಡಿ, ನಾಲ್ಕನೆಯ ಬಾರಿಯು ಗೆಲ್ಲಿಸಿಕೊಟ್ಟಮತದಾರರಿಗೆ ಅಭಿನಂದನೆ ಸಲ್ಲಿಸಲಾಗುವುದು, ಪಕ್ಷದ ಕೆಲವು ಮುಖಂಡರೇ ಸೋಲುತ್ತಾರೆ ಎಂದು ಭಾವಿಸಿದ್ದರು. ನಾನು ಮತ್ತು ನನ್ನ ನೆಚ್ಚಿನ ನಾಯಕರಾದ ಸಿದ್ದರಾಮಯ್ಯ ಇಬ್ಬರು ಗೆಲ್ಲುತ್ತೇವೆ. ಸೋಮಣ್ಣ ಎರಡು ಕಡೆಯು ಸೋಲುತ್ತಾರೆ ಎಂದು ಮಾಧ್ಯಮಗಳಿಗೆ ನಾಮಪತ್ರ ಸಲ್ಲಿಸಿದ ದಿನವೇ ಹೇಳಿದ್ದೆ. ಮನೆಮನೆಗೆ ತೆರಳಿ ಮತಯಾಚನೆ ಮಾಡಿದ್ದೆ. ಒಂದು ಗ್ರಾಮಕ್ಕೆ ಹೋದರೆ, ಹಿರಿಯರಿಗೆ ನಮಸ್ಕಾರ ಮಾಡಿ ಮತ ಕೇಳುತ್ತಿದ್ದೆ. ಜನರ ಮನಸ್ಸಿನಲ್ಲಿಯು ನನ್ನನ್ನು ನಾಲ್ಕನೇ ಬಾರಿ ಆಯ್ಕೆ ಮಾಡಿಬೇಕೆಂಬ ಮನಸ್ಸು ಇತ್ತು. ಹೀಗಾಗಿ ಗೆಲುವು ಸಾಧಿಸಿದೆ ಎಂದರು.
ಡೆಪ್ಯುಟಿ ಸ್ಪೀಕರ್ ಸ್ಥಾನ ತಿರಸ್ಕರಿಸಿದ್ದ ಪುಟ್ಟರಂಗಶೆಟ್ಟಿ ಯೂ ಟರ್ನ್: ಕಾಂಗ್ರೆಸ್ ವರಿಷ್ಠರ ನಿರ್ಧಾರಕ್ಕೆ ಒಪ್ಪಿಗೆ
ಕಾರ್ಯಕ್ರಮದಲ್ಲಿ ಭೋದಿದತ್ತಾ ತೇರಾ ದಿವ್ಯ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಎಚ್.ಎಸ್.ಗಣೇಶಪ್ರಸಾದ್, ದರ್ಶನ್ ಧ್ರುವನಾರಾಯಣ, ಅನಿಲ್ ಚಿಕ್ಕಮಾಧು, ರಿಜ್ವಾನ್ ಹರ್ಷದ್, ಪ್ರಚಾರ ಸಮಿತಿ ಉಸ್ತುವಾರಿ ಚಿತ್ರನಟ ಎಸ್. ನಾರಾಯಣ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಕಳಲೆ ಕೇಶವಮೂರ್ತಿ, ನಗರಸಭಾ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಪುಪ್ಪಾ ಅಮರನಾಥ್, ಉದ್ಯಮಿ ಫೈಜಲ್, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್, ಎ.ಎಸ್. ಗುರುಸ್ವಾಮಿ, ವೀಕ್ಷಕರಾದ ಅಕ್ಬರ್ ಅಲಿ, ಪ್ರಧಾನ ಕಾರ್ಯದರ್ಶಿಗಳಾದ ಆರ್.ಮಹದೇವ, ಚಿಕ್ಕಮಹದೇವ, ಉಪಾಧ್ಯಕ್ಷ ವೆಂಕಟೇಶ್, ಹೊಂಗನೂರು ಚಂದ್ರು, ಕೆಪಿಸಿಸಿ ಸದಸ್ಯ ಸೈಯದ್ ರಫಿ, ಎಸ್ ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಪು. ಶ್ರೀನಿವಾಸನಾಯಕ, ರಾಜ್ಯ ಕನಿಷ್ಟವೇತನಾ ಸಲಹಾ ಮಂಡಲಿ ಮಾಜಿ ಅಧ್ಯಕ್ಷ ಉಮೇಶ್, ಜಿ.ಪಂ.ಮಾಜಿ ಸದಸ್ಯ ಸದಾಶಿವಮೂರ್ತಿ, ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ಭಾಗ್ಯಮ್ಮ, ಆರ್.ಪಿ.ನಂಜುಂಡಸ್ವಾಮಿ, ರಾಜಪ್ಪ, ಭಾಗ್ಯಮ್ಮ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.