2024ರ ಲೋಕಸಭಾ ಚುನಾವಣೆಗೆ ತಯಾರಾಗಿರುವ ವಿಪಕ್ಷಗಳು ಬೆಂಗಳೂರಿನಲ್ಲಿ 2ನೇ ಸುತ್ತಿನ ಸಭೆ ಸೇರಿದೆ. ದೇಶದ ವಿಪಕ್ಷಗಳ ಘಟಾನುಘಟಿ ನಾಯಕರು ಇದೀಗ ಬೆಂಗಳೂರಿನಲ್ಲಿದ್ದಾರೆ. ಈ ಸಭೆಯಲ್ಲಿ ಬಿಜೆಪಿ ಮಣಿಸಲು ರಣತಂತ್ರದ ಬಗ್ಗೆ ಚರ್ಚಿಸಲಾಗಿದೆ. ಇದೇ ವೇಳೆ ಕಾಂಗ್ರೆಸ್ ಸ್ಫೋಟಕ ಹೇಳಿಕೆ ನೀಡಿದೆ. ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಹುದ್ದೆಯಲ್ಲಿ ಆಸಕ್ತಿ ಇಲ್ಲ ಎಂದಿದ್ದಾರೆ.
ನವದೆಹಲಿ(ಜು.18) ಬಿಜೆಪಿ ಹಾಗೂ ಪ್ರಧಾನಿ ಮೋದಿ ಸೋಲಿಸಲು ಪಣತೊಟ್ಟಿರುವ ವಿಪಕ್ಷಗಳು 2024ರ ಚುನಾವಣೆಯಲ್ಲಿ ಒಗಟ್ಟಿನಿಂದ ಹೋರಾಡಲು ನಿರ್ಧರಿಸಿದೆ. ಬಿಜೆಪಿ ವಿರುದ್ದ ಒಗ್ಗಟ್ಟಾಗಿರುವ ಬಹುತೇಕ ವಿಪಕ್ಷಗಳು ಇಂದು ಬೆಂಗಳೂರಿನಲ್ಲಿ ಸಭೆ ಸೇರಿದೆ. ಪಾಟ್ನಾ ಬಳಿಕ ನಡೆಯುತ್ತಿರುವ ವಿಪಕ್ಷಗಳ 2ನೇ ಸಭೆ ಇದಾಗಿದ್ದು ಭಾರಿ ಮಹತ್ವ ಪಡೆದುಕೊಂಡಿದೆ. ಈ ಸಭೆಯಲ್ಲಿ ವಿಪಕ್ಷಗಳು ಯಾರ ನೇೃತ್ವದಲ್ಲಿ ಚುನಾವಣೆ ಎದುರಿಸಬೇಕು? ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಅನ್ನೋ ಚರ್ಚೆ ನಡೆದಿದೆ. ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ಹಲವರಿಗೆ ಅಚ್ಚರಿ ತಂದಿದೆ. ಕಾಂಗ್ರೆಸ್‌ಗೆ ಪ್ರಧಾನಿ ಹುದ್ದೆ ಮೇಲೆ ಆಸಕ್ತಿ ಇಲ್ಲ ಎಂದಿದ್ದಾರೆ. ಈ ಮೂಲಕ ಮುಂದಿನ ಪ್ರಧಾನಿ ರಾಹುಲ್ ಗಾಂಧಿ ಅನ್ನೋ ಕಾಂಗ್ರೆಸ್ ಅಭಿಯಾನಕ್ಕೆ ಫುಲ್ ಸ್ಟಾಪ್ ಇಡುವ ಕುರಿತು ಪರೋಕ್ಷವಾಗಿ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಎಪಿ, ಜೆಡಿಯು, ಆರ್ ಜೆ ಡಿ, ಜೆಎಮ್ ಎಮ್, ಎನ್ ಸಿಪಿ ಸೇರಿದಂತೆ 26 ಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಂಡಿದೆ. ಮಹತ್ವದ ಚರ್ಚೆ ನಡುವೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನೀಡಿದ ಹೇಳಿಕೆ ಇದೀಗ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್‌ಗೆ ಅಧಿಕಾರದ ಆಕಾಂಕ್ಷೆ ಇಲ್ಲ, ಪ್ರಧಾನಿ ಹುದ್ದೆಯ ಮೇಲೆ ಆಸಕ್ತಿಯೂ ಇಲ್ಲ. ನಾವು ಅಧಿಕಾರಕ್ಕೇರಲು ನಡೆಸುತ್ತಿರುವ ಸಭೆ ಇದಲ್ಲ. ಈ ದೇಶದ ಸಂವಿಧಾನವನ್ನು ರಕ್ಷಿಸಬೇಕು, ಪ್ರಜಾಪ್ರಭುತ್ವವನ್ನು ಉಳಿಸಬೇಕು, ಜಾತ್ಯಾತೀತೆಯನ್ನು ಬೆಳೆಸಬೇಕು. ಈ ಉದ್ದೇಶಕ್ಕಾಗಿ ಕಾಂಗ್ರೆಸ್ ವಿಪಕ್ಷ ಸಭೆಗೆ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.
ವಿಪಕ್ಷ ಮೈತ್ರಿಕೂಟಕ್ಕೆ INDIA ನಾಮಕರಣಕ್ಕೆ ಅಂತಿಮ ಹಂತದ ಚರ್ಚೆ, ಇದು ನ್ಯಾಶನಲ್ ಡೆಮಾಕ್ರಟಿಕ್!
ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ಇಲ್ಲಿ ಪಾಲ್ಗೊಂಡ ಕೆಲ ಪಕ್ಷಗಳ ಜೊತೆ ಹೊಂದಾಣಿಕೆ ಇಲ್ಲ ಅನ್ನೋದು ನಮಗೆ ಗೊತ್ತಿದೆ. ಆದರೆ ಈ ವೈಮನಸ್ಸು ಸಿದ್ಧಾಂತಗಳಿಂದಲ್ಲ. ನಮ್ಮ ಹಾಗೂ ಕೆಲ ಪಕ್ಷಗಳ ನಡುವಿನ ವೈಮನಸ್ಸು ಸರಿಪಡಿಸುವುದು ದೊಡ್ಡ ವಿಷವಲ್ಲ. ನಾವು ಬಡವರು, ದಲಿತರು, ಅಲ್ಪಸಂಖ್ಯಾತರು, ನಿರ್ಗತಿಕರ ಏಳಿಗೆಗಾಗಿ ಶ್ರಮಿಸುತ್ತಿದ್ದೇವೆ. ಇಂತವರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಇದರ ವಿರುದ್ದ ಹೋರಾಡಲು ನಾವು ಒಗ್ಗಟ್ಟಾಗಬೇಕು ಎಂದು ಖರ್ಗೆ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ತೀವ್ರ ಹಿನ್ನಡೆಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರು, ಹಲವು ನಾಯಕರು ಈಗಾಗಲೇ ರಾಹುಲ್ ಗಾಂಧಿ ಮುಂದಿನ ಪಿಎಂ ಅನ್ನೋ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದಾರೆ. ಇದೀಗ ಕಾಂಗ್ರೆಸ್ ಪ್ರಧಾನಿ ಹುದ್ದೆ ಮೇಲೆ ಆಸಕ್ತಿ ಇಲ್ಲ ಎಂದಿದೆ. ಇಷ್ಟೇ ಅಲ್ಲ ವಿಕ್ಷಗಳ ಒಕ್ಕೂಟ ಮೋದಿ ವಿರುದ್ದ ಸಮರ್ಥ ನಾಯಕನನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಮುಂದಾಗಿದೆ. ಹೀಗಾಗಿ ರಾಹುಲ್ ಗಾಂಧಿ ಹಾಗೂ ಕಾರ್ಯಕರ್ತರ ಆಸೆಗೆ ಕಾಂಗ್ರೆಸ್ ತಣ್ಣೀರೆರಚಿದೆ.
ಭ್ರಷ್ಟಾಚಾರವೇ ಅವರ ಗ್ಯಾರಂಟಿ: ಕುಟುಂಬವೇ ಮೊದಲು, ದೇಶ ಲೆಕ್ಕಕ್ಕಿಲ್ಲ; ವಿಪಕ್ಷ ಸಭೆಗೆ ಮೋದಿ ಕೆಂಡಾಮಂಡಲ
26 ಪ್ರಮುಖ ಪಕ್ಷಗಳು ಸಭೆಯಲ್ಲಿ ಪಾಲ್ಗೊಂಡಿದೆ. ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್ ಸೇರಿದಂತೆ ಹಲವು ಕೇಂದ್ರ ನಾಯಕರು ಪಾಲ್ಗೊಂಡಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕೂಡ ಈ ಸಭೆಯಲ್ಲಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಹಾರ ಸಿಎಂ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ 80ಕ್ಕೂ ಹೆಚ್ಚು ಘಟಾನುಘಟಿ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.