'ಗಾರು' ಎಂದ ಪ್ರತಾಪ್‌ಗೆ ಸಿದ್ದರಾಮಯ್ಯ ಕೊಟ್ಟ ರಿಯಾಕ್ಷನ್!

By Suvarna NewsFirst Published Jun 10, 2021, 5:07 PM IST
Highlights

* ಸ್ಪೀಕರ್ ಗೆ ಪತ್ರ ಬರೆದ ವಿಪಕ್ಷ ನಾಯಕ ಸಿದ್ದರಾಮಯ್ಯ
* ಜಮೀರ್ ಅಹಮದ್ ಎಲ್ಲ ವರ್ಗದವರಿಗೂ ನೆರವು ನೀಡುತ್ತಿದ್ದಾರೆ
* ಪ್ರತಾಪ್ ಸಿಂಹ ಒಬ್ಬ ಅಪ್ರಬುದ್ಧ ರಾಜಕಾರಣಿ
*ಮೈಸೂರು ಭೂ ಮಾಫಿಯಾ ಪ್ರಕರಣ ತನಿಖೆಯಾಗಲಿ

ಬೆಂಗಳೂರು (ಜೂ. 10)  ವಿಧಾನಸಭೆ ಸ್ಪೀಕರ್ ಗೆ ವಿಶ್ವೇಶ್ವರ ಹೆಗಡೆ  ಕಾಗೇರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಸರ್ಕಾರಕ್ಕೆ ಸೂಚಿಸಿ ಎಂದು ಕೇಳಿಕೊಂಡಿದ್ದಾರೆ.

ಕೊರೋನಾ ಬಗ್ಗೆ ಡಿಸಿಗಳ ಜೊತೆ ಸಭೆ ನಡೆಸಬೇಕು. ಅವರಿಂದ ವಾಸ್ತವ ಮಾಹಿತಿ ಪಡೆದುಕೊಳ್ಳಬೇಕು.  ನಾವು ಝೂಂ ತಂತ್ರಾಂಶದ ಮೂಲಕ ಸಭೆ ನಡೆಸಲು ಮುಂದಾಗಿದ್ದೇವೆ. ಅವಕಾಶ ಕೊಡಲು ಸರ್ಕಾರಕ್ಕೆ ಸೂಚಿಸಿ ಎಂದಿದ್ದಾರೆ. 

ನನ್ನ ಅವಧಿಯಲ್ಲಿ ಪ್ರತಿಪಕ್ಷದವರು ಸಭೆ ನಡೆಸಿದ್ದರು. ಜಿಲ್ಲೆಗಳಿಗೆ ಹೋಗಿ ಖುದ್ದು ಸಭೆ ನಡೆಸಿದ್ದರು. ಈ ಸಭೆಗಳಿಗೆ ನಾವು ವಿರೋಧ ಮಾಡಿರಲಿಲ್ಲ. ಆದರೆ ಈಗ ನಾನು ಸಭೆ ನಡೆಸಲು ಅವಕಾಶ ನೀಡ್ತಿಲ್ಲಇದು ಸಂವಿಧಾನದ ಪ್ರಕಾರ ಹಕ್ಕುಚ್ಯುತಿಯಾಗುತ್ತದೆ ಎಂದು ಸ್ಪೀಕರ್ ಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖ ಮಾಡಿದ್ದಾರೆ. 

ಜಮೀರ್ ಎಲ್ಲರಿಗೆ ನೆರವು ನೀಡ್ತಿದ್ದಾರೆ. ಆಶಾ ಕಾರ್ಯಕರ್ತೆಯರು,ಎಲ್ಲ ಧರ್ಮದ ಅರ್ಚಕರು, ಪೌರಕಾರ್ಮಿಕರಿಗೆ ಸಹಾಯ ಮಾಡ್ತಿದ್ದಾರೆ. 5 ಸಾವಿರ ನಗದು,ಫುಡ್ ಕಿಟ್ ಕೊಡ್ತಿದ್ದಾರೆ. ಕ್ಷೇತ್ರದಲ್ಲಿ 25 ಸಾವಿರ ಲಸಿಕೆಯನ್ನು ಕೊಡ್ತಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಕೊಡುತ್ತಿದ್ದಾರೆ ಸ್ವಂತ ಹಣದಿಂದ ನೀಡ್ತಿದ್ದಾರೆ. ಇದೊಂದು ಉತ್ತಮ ಕೆಲಸ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಕೆಲಸಕವನ್ನು ಸಿದ್ದರಾಮಯ್ಯ ಅಭಿನಂದಿಸಿದ್ದಾರೆ. 

ಪೆಟ್ರೋಲ್ ಬೆಲೆ 100 ರೂ ದಾಟಿದೆ. ಒಂದು ವರ್ಷದಲ್ಲಿ ಶೇ. 30 ರಷ್ಟು ಪೆಟ್ರೋಲ್ ಡಿಸೇಲ್ ಬೆಲೆ ಏರಿಸಿದ್ದಾರೆ. ವಿದ್ಯುತ್ ದರ ಬೆಲೆ ಏರಿಕೆ ಕೂಡ ಆಗಿದೆ. ಪೆಟ್ರೊಲ್ ಬೆಲೆ ಏರಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯ್ಲ್ ಬೆಲೆ ಹೆಚ್ಚಾಗಿರುವ ಕಾರಣ ನೀಡ್ತಾರೆ.. ಈಗ ಕ್ರೂಡ್ ಆಯಗ್ಲ್ ಬ್ಯಾರಲ್ ಗೆ 70 ಡಾಲರ್ ಇದೆ. ಈ ಹಿಂದೆ ಕ್ರೂಡ್ ಆಯ್ಲ್ ಬೆಲೆ 30 ಡಾಲರ್ ಗೂ ಇಳಿದಿತ್ತು. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕಡಿಮೆ ದರದಲ್ಲಿ ಪೆಟ್ರೋಲ್ ಕೊಟ್ರಾ..? ಕೇಂದ್ರ ಸರ್ಕಾರ ಎಕ್ಸೈಸ್ ಡ್ಯೂಟಿ‌ ಹೆಚ್ಚುಮಾಡಿದೆ. ರಾಜ್ಯ ಸರ್ಕಾರ ಶೇ 31ರಷ್ಟು ಸುಂಕ ವಿಧಿಸ್ತಿದೆ. ಸರ್ಕಾರ ಈ ಟ್ಯಾಕ್ಸ್ ಗಳನ್ನ ಕಡಿಮೆ ಮಾಡಲಿ. ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕಲ್ವಾ? ಎಂದು ಪ್ರಶ್ನೆ ಮಾಡಿದರು.

'ಬಿಎಸ್‌ವೈ ಬಿಜೆಪಿಗೆ ಬೇಡವಾದ ಕೂಸು'

ಪೆಟ್ರೋಲ್ ಬೆಲೆ ಹೆಚ್ಚಳ ಖಂಡಿಸಿ ಪ್ರತಿಭಟನೆ ಮಾಡ್ತೇವೆ. ಪ್ರತಿಭಟನೆ ಮಾಡುವಂತೆ ಎಐಸಿಸಿ ಸೂಚಿಸಿದೆ. ನಾಳೆಯಿಂದ ಐದು ದಿನಗಳ ಕಾಲ ಧರಣಿ ಮಾಡ್ತೇವೆ. ಪೆಟ್ರೋಲ್ ಬಂಕ್ ಮುಂದೆ ನಾವು ಧರಣಿ ಮಾಡ್ತೇವೆ. ದೇಶಾದ್ಯಂತ ಈ ಪ್ರತಿಭಟನ ಮಾಡ್ತೇವೆ ಎಂದು ತಿಳಿಸಿದರು.

ತಸ್ತಿಕ್ ಎಲ್ಲರಿಗೂ ಕೊಡಲಿ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಹಣ ಹಿಂದೂ ದೇವಸ್ಥಾನಗಳಿಗೂ ಕೊಡಲಿ. ಇತರೆ ಧರ್ಮದ ಮಸೀದಿ ಮತ್ತು ಚರ್ಚ್ ಗಳಿಗೂ ಕೊಡಲಿ. ಇಲ್ಲಿ  ತಾರತಮ್ಯ ಮಾಡುವುದು ಬೇಡ. ಒಂದು ಧರ್ಮಕ್ಕೆ ಸಿಮೀತ ಮಾಡುವುದು ಬೇಡ. ಹಾಗೇ ಮಾಡಿದ್ರೆ ಅದು ಜಾತ್ಯಾತೀತ ವಿರೋಧಿ ನಿಲುವು ಆಗುತ್ತೆ ಎಂದರು.

ವ್ಯಾಕ್ಸಿನ್ ಕೊಡುವುದು ಪಕ್ಷದ ಕಾರ್ಯಕ್ರಮವೇ ಇದು ಪಕ್ಷದ ಕಾರ್ಯಕ್ರಮವಲ್ಲ. ನಿಮ್ಮ ಪಕ್ಷದ ಶಾಸಕರು ಕೊಡಲಿ ಬೇಡ ಅ‌ನ್ನುತ್ತೇವಾ? ಜಮೀರ್ ಅವರ ಹಣದಲ್ಲಿ ಕೊಡ್ತಿಲ್ವಾ..ನಾನು ನನ್ನ ಹಣದಲ್ಲಿ ಕೊಡ್ತಿಲ್ವಾಇವರಿಂದ ನಾವು ಪಾಠ ಕಲಿಯಬೇಕಾ ಜನರ ದುಡ್ಡನ್ನ ಜನರಿಗೆ ಕೊಡಬೇಕಲ್ವಾ!  ಎಂದು ಕೇಳಿದರು.

ರೋಹಿಣಿ ಸಿಂಧೂರಿಯವರು ಬಹಿರಂಗವಾಗಿ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ನನ್ನ ವರ್ಗಾವಣೆಗೆ ಭೂ ಮಾಫಿಯಾ ಕಾರಣ ಎಂದಿದ್ದಾರೆ. ಈ ಬಗ್ಗೆ ತನಿಖೆಯಾಗಲಿ  ಭೂ ಮಾಪಿಯಾದಿಂದಂದ ವರ್ಗಾವಣೆ ಮಾಡಿದ್ದಾರೆ ಅಂತ ಅವರೇ ಹೇಳಿದ್ದಾರೆ. ವರ್ಗಾವಣೆ ಅದೊಂದು ಪೊಲಿಟಿಕಲ್ ಮೊಟಿವೇಟೆಡ್ ಅನಿಸುತ್ತೆ. ಹಗರಣ ನಡೆದಿದ್ದರೆ ಸಮಗ್ರ ತನಿಖೆ ನಡೆಸಲಿ. ರಾಜಕಾಲುವೆ ಮೇಲೆ ಕಟ್ಟಡ ಕಟ್ಟಿಲ್ಲ ಅಂದರೆ ಹೇಗೆ? ಕಟ್ಟಿದ್ದರೆ ತನಿಖೆ ಮಾಡಲಿ.. ಕಟ್ಟಿದ್ದಾರಾ ಕಟ್ಟಿಲ್ಲವಾ ಎಂಬುದನ್ನ ತನಿಖೆ ಮಾಡಲಿ. ತನಿಖೆ ಮಾಡಿದರೆ ತಪ್ಪಿದ್ದರೆ ತಿಳಿಯಲ್ವಾ? ಎಂದು ತನಿಖೆಗೆ ಒತ್ತಾಯಿಸಿದರು.

ಯಾವ್ಯಾವ ಜಿಲ್ಲೆಯಲ್ಲಿ ಟೆಸ್ಟಿಂಗ್ ಎಷ್ಟಿದೆ? ಪಾಸಿಟಿವಿಟಿ ದರ ಹೇಗಿದೆ ನೋಡಿ ಅನ್ ಲಾಕ್ ತೀರ್ಮಾನ ತೆಗೆದುಕೊಳ್ಳಲಿ. ಜನರ ಸಮಸ್ಯೆಯನ್ನೂ ಸರ್ಕಾರ ನೋಡಬೇಕು. ಡೆತ್ ರೇಟ್ ಹೇಗೆ ನೋಡ್ತಾರೆ? ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತವರ ಸಂಖ್ಯೆ ಕೊಡ್ತಾರಾ? ಬೇರೆ ಕಡೆ ಸತ್ತವರ ಸಂಖ್ಯೆ ಲೆಕ್ಕ ಸರಿಯಾಗಿ ಕೊಡ್ತಾರಾ?  ಎಂದು ಸರ್ಕಾರದ ಅಂಕಿಅಂಶ ಸರಿ ಇಲ್ಲ ಎಂಬ ರೀತಿ ಮಾತನಾಡಿದರು.

ಮೈಸೂರು ಐಎಎಸ್ ಕಿತ್ತಾಟಕ್ಕೆ ಅಸಲಿ ಕಾರಣ ಏನು?

ಯಡಿಯೂರಪ್ಪ ಬದಲಾವಣೆ ಚರ್ಚೆ ನಡೆಯುತ್ತಿದೆ. ಇದನ್ನ ನಾನು‌ ಹೇಳಿದ್ದೆ. ಯೋಗೇಶ್ವರ್ ಮೇಲೇಕೆ ಆ್ಯಕ್ಷನ್ ತೆಗೆದುಕೊಳ್ಳಲಿಲ್ಲ? ಯತ್ನಾಳ್ ಮೇಲೆ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ? ಅರುಣ್ ಸಿಂಗ್ ಹೇಳಿದಾಕ್ಷಣ ಸುಮ್ಮನಾಗಲ್ಲ. ಬೆಂಕಿ ಇಲ್ಲದೆ ಯಾವ ಹೊಗೆಯೂ ಆಡಲ್ಲ. ಬದಲಾವಣೆಯಾಗ ಬೇಕೆಂದವರ ಮೇಲೆ ಕ್ರಮ ಏಕಿಲ್ಲ ಈ ಬಗ್ಗೆ ಅರುಣ್ ಸಿಂಗ್ ಸ್ಪಷ್ಟಪಡಿಸಲಿ. ಬಿಜೆಪಿ ಹೈಕಮಾಂಡ್ ವೀಕ್ ಆಗಿದೆ. ದುರ್ಬಲ ಮುಖ್ಯಮಂತ್ರಿ, ದುರ್ಬಲ ಹೈಕಮಾಂಡ್ ಎಂದು  ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಮೈಸೂರು ಸಂಸದ ಪ್ರತಾಪ ಸಿಂಹ ತಮಗೂ ತೆಲುಗು ಬರುತ್ತೆ ಅಂತಾ ತೋರಿಸಲು ಯತ್ನಿಸಿದ್ದಾರೆ. ಇದು ವ್ಯಂಗ್ಯ ಇರಬಹುದು.. ನನಗೆ ಗೊತ್ತಿಲ್ಲ. 'ಗಾರು' ಎಂಬುದನ್ನ ಸೂಕ್ತ ರೀತಿಯಲ್ಲಿ ಸ್ವೀಕರಿಸುತ್ತೇನೆ. ಆದರೆ ಪಾಪಾ ಬಹುವಚನದಲ್ಲಿ ಮಾತಾಡಿದ್ದಾನೆ. ಪ್ರತಾಪ್ ಸಿಂಹ ಅಪ್ರಬುದ್ಧ ರಾಜಕಾರಣಿ,  ಯಾವುದೇ ನಿಲುವಿಲ್ಲ ಅವನಿಗೆ ಪ್ರತಿ ಭಾರಿ ನಿಲುವು ಬದಲಿಸುತ್ತಾನೆ. ಚಾಮರಾಜನಗರ ಪ್ರಕರಣದಲ್ಲಿ ಸಿಂಧೂರಿ ಪರ ಮಾತನಾಡಿದ್ದರು. ಈ ಹಿಂದೆ ರೋಹಿಣಿ ಸಿಂಧೂರಿಗೆ ಬೆಂಬಲಿಸಿದ್ದು ಯಾರು? ಈಗ ಸ್ವಾರ್ಥಕ್ಕಾಗಿ ವಿರೋಧಿಸುತ್ತಿದ್ದಾರೆ ಎಂದು ಏಕವಚನ ಸೇರಿಸಿ ವಾಗ್ದಾಳಿ ಮಾಡಿದರು. 

 

click me!