ಶಾಸಕರ ಪಕ್ಷಾಂತರಕ್ಕೆ ಕೊನೆ ಮೊಳೆ? ಪರಿಚ್ಛೇದ10 ತಿದ್ದುಪಡಿ ಸಭೆಯಲ್ಲಿ ಸಿದ್ದು ಅಭಿಪ್ರಾಯ

By Suvarna NewsFirst Published May 28, 2020, 4:05 PM IST
Highlights

ಪಕ್ಷಾಂತರ ನಿಷೇಧ ಕಾಯಿದೆ ನಿಯಮಗಳ ಮರುಪರಿಶೀಲನೆಯಲ್ಲಿ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದು, ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಅವು ಈ ಕೆಳಗಿನಂತಿವೆ.

ಬೆಂಗಳೂರು, (ಮೇ.28): ಪಕ್ಷಾಂತರ ನಿಷೇಧ ಕಾಯಿದೆ ನಿಯಮಗಳ ಮರುಪರಿಶೀಲನೆ ಸಂಬಂಧ ಅಭಿಪ್ರಾಯ ಸಂಗ್ರಹಿಸಲು ವಿಧಾನಸಭೆಯ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು (ಗುರುವಾರ) ಸಭೆ ನಡೆಸಿದರು.

ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಾಯರು ಸೇರಿ ಒಟ್ಟು 25 ನಾಯಕರೊಂದಿಗೆ ಸಂವಿಧಾನದ ಶೆಡ್ಯೂಲ್ 10ರ ತಿದ್ದುಪಡಿ ತರುವ ಬಗ್ಗೆ ಸ್ಪೀಕರ್ ಕಂಗೇರಿ ಚರ್ಚೆ ನಡೆಸಿದರು.

ಪಕ್ಷಾಂತರ ಕಾಯ್ದೆ ವಿಚಾರ ಡಿಕೆಶಿ ಸಲಹೆ: ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ

ಈ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಸಭೆಯಲ್ಲಿ ಸಿದ್ದು ತಿಳಿಸುರುವ ಅಭಿಪ್ರಾಯಗಳು ಈ ಕೆಳಗಿನಂತಿವೆ.

ಸಿದ್ದರಾಮಯ್ಯ ಅಭಿಪ್ರಾಯ ಇಂತಿದೆ..!

ಈ ಪಕ್ಷಾಂತರಿಗಳಿಂದ ಬೇರೆ ಬೇರೆ ರಾಜ್ಯಗಳಲ್ಲಿ ಸರ್ಕಾರಗಳನ್ನೇ ಬೀಳಿಸಿ ಬಿಟ್ಟಿದ್ದಾರೆ. ಈ ರೀತಿ ಆದರೆ ಪ್ರಜಾಪ್ರಭುತ್ವ ಎಲ್ಲಿ ಉಳಿಯುತ್ತೆ...? ಎರಡು ಚುನಾವಣೆ ಗೆ ನಿಲ್ಲಬಾರದು. ಯಾವುದೇ ಅಧಿಕಾರವನ್ನು ಅವರಿಗೆ ಕೊಡಬಾರದು ಎಂದು ಸ್ಪೀಕರ್‌ಗೆ ತಿಳಿಸಿದ್ದಾರೆ.

ಅನರ್ಹರಾದವರು ಮರು ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾದರೆ ನೈತಿಕತೆ ಉಳಿಯುತ್ತದೆಯೇ? ಹತ್ತು ವರ್ಷಗಳ ಕಾಲ ಅಂಥವರು ಸದನವನ್ನೇ ಪ್ರವೇಶ ಮಾಡಬಾರದು. ಹಾಗಾಗಿ ನಿಯಮಾವಳಿಗಳಲ್ಲಿ ಬದಲಾವಣೆ ತರುವುದರ ಜೊತೆಗೆ ಚುನಾವಣಾ ಪ್ರಕ್ರಿಯೆಗಳಲ್ಲಿಯೂ ಸುಧಾರಣೆ ತರಬೇಕು.

ಮೂರನೇ ಜಡ್ಜಮೆಂಟ್ ಗೆ ಇದನ್ನು ಹೋಗಲು ಬಿಡಬಾರದು.  ಸ್ಪೀಕರ್ ಮಟ್ಟದಲ್ಲೇ ಇದು ಇತ್ಯರ್ಥವಾಗಬೇಕು. ಸ್ಪೀಕರ್ ಗೆ ಸಂಪೂರ್ಣ ಅಧಿಕಾರ ಇರಬೇಕು.  ಮೂರು ತಿಂಗಳ ಒಳಗೆ ಇದು ಇತ್ಯರ್ಥವಾಗಬೇಕು. ರಾಜೀನಾಮೆ ಕೊಟ್ರೆ ಅವರ ನಡವಳಿಕೆ ನೋಡಿ ತೀರ್ಮಾನ ಮಾಡಬೇಕು. ರಾಜೀನಾಮೆ ಅಂಗೀಕಾರದ ಬಗ್ಗೆ ಮನಸ್ಥಿತಿ, ನಡವಳಿಕೆ ನೋಡಿ ನಿರ್ಧಾರ ಮಾಡಬೇಕು. ಇಷ್ಟು ವಿಷಯಗಳ ಬಗ್ಗೆ ಸ್ಪೀಕರ್‌ಗೆ ನಾವು ತಿಳಿಸಿದ್ದೇವೆ. ಬೇರೆಯವರು ಕೂಡ ಅವರವರ ಅಭಿಪ್ರಾಯ ತಿಳಿಸಿದ್ದಾರೆ. ಇನ್ನೂ ಶಾಸಕರು, ಪರಿಷತ್ ಸದಸ್ಯರು ಅಭಿಪ್ರಾಯವನ್ನು ಕೂಡ ಸ್ಪೀಕರ್ ಸಂಗ್ರಹಿಸಲಿದ್ದಾರೆ. ಎಂದು ಸಿದ್ದರಾಮಯ್ಯ ಹೇಳಿದರು.

ಲೋಕಸಭೆ ಸ್ಫೀಕರ್‌ಗೆ ವರದಿ ರವಾನೆ

ಪಕ್ಷಾಂತರ ಮಾಡುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂಬ ನಿಟ್ಟಿನಲ್ಲಿ ಪಕ್ಷಾಂತ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಚರ್ಚೆ ಆಗಿದ್ದು, ಶಾಸಕರಾಗಿದ್ದಾಗಲೇ ಪಕ್ಷ ಬದಲಿಸಿ ಅನರ್ಹಗೊಂಡು, ಮತ್ತೊಂದು ಪಕ್ಷದಿಂದ ಗೆದ್ದು ಬರಲು ಅವಕಾಶ ಕಲ್ಪಿಸಲಾಗಿದೆ.

ಆದ್ರೆ, ಪಕ್ಷಾಂತರ ಮಾಡಿದವರನ್ನು ಜೀವನಪೂರ್ತಿ ರಾಜಕೀಯದಿಂದ ಅನರ್ಹಗೊಳಿಸಬೇಕು ಅಥವಾ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂಬ ವಾದ ಇದೆ. ಸದ್ಯ ಸ್ಪೀಕರ್ ಕಾಗೇರಿಯವರು ಎಲ್ಲಾ ಪಕ್ಷಗಳ ನಾಯಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ, ಪಕ್ಷಾಂತರ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ವರದಿ ತಯಾರಿಸಿ ಲೋಕಸಭೆ ಸ್ಪೀಕರ್‌ಗೆ ರವಾನಿಸಲಿದ್ದಾರೆ.

click me!