ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸ್ರು: ಏಕಾಏಕಿ ನಾಮಕಾರಣ ಕ್ಯಾನ್ಸಲ್

By Suvarna NewsFirst Published May 27, 2020, 9:32 PM IST
Highlights

ಭಾರೀ ವಿರೋಧದ ಬಳಿಕ ಬೆಂಗಳೂರಿನ ಯಲಹಂಕ  ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡಲು ಮುಂದಾಗಿದ್ದ ರಾಜ್ಯ ಸರ್ಕಾರ ದಿಢೀರ್ ಹಿಂದೆ ಸರಿದೆ.

ಬೆಂಗಳೂರು, (ಮೇ.27): ಯಲಹಂಕ ಮೇಲ್ಸೇತುವೆ ಉದ್ಘಾಟನೆಯನ್ನು ಬಿಬಿಎಂಪಿ ಮುಂದೂಡಿದೆ. ನಾಳೆ ಅಂದ್ರೆ ಮೇ.28ಕ್ಕೆ ಮೇಲ್ಸೇತುವೆ ವೀರ್ ಸಾವರ್ಕರ್ ಹೆಸರಿಟ್ಟು ಉದ್ಘಾಟನೆ ಕಾರ್ಯಕ್ರಮವನ್ನ ನಿಗದಿಪಡಿಸಲಾಗಿತ್ತು.

ಆದ್ರೆ, ಇಂದು (ಬುಧವಾರ) ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್‌ಡಿ ಕುಮಾರಸ್ವಾಮಿ ಅವರು, ವೀರ್ ಸಾವರ್ಕರ್ ಹೆಸರಿಡಲು ವಿರೋಧಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿವೆ.

ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು: ಸರ್ಕಾರದ ವಿರುದ್ಧ ಮುಗಿಬಿದ್ದ ಮಾಜಿ ಸಿಎಂಗಳು

ಈ ಹಿನ್ನೆಲೆಯಲ್ಲಿ ಏಕಾಏಕಿ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಮೊಟಕುಗೊಳಿಸಿದೆ.ಸಾಮಾನ್ಯ ಸಭೆಯಲ್ಲಿ ಸಾವರ್ಕರ್ ಹೆಸರಿಡಲು ಪ್ರಸ್ತಾಪವಾಗಿದ್ದು, ಇದಕ್ಕೆ ಒಪ್ಪಿಗೆ ದೊರೆತಿತ್ತು.

ಅದರಂತೆ ಮೇ.28ರಂದು ಮೇಲ್ಸೇತುವೆಯ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸಿಎಂ ಯಡಿಯೂರಪ್ಪ ಭಾಗಿಯಾಗಬೇಕಿತ್ತು. ಆದ್ರೆ, ಈಗ ಬಿಬಿಎಂಪಿ ಯಾವುದೇ ಹೆಸರು ಇಡದೇ ಮೇಲು ಸೇತುವೆ ಅಂತ ಉದ್ಘಾಟನೆ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ

ಒಟ್ಟಿನಲ್ಲಿ ಪ್ರತಿಪಕ್ಷಗಳ ವಿರೋಧದ ಕಾರಣಕ್ಕೆ ಸದ್ಯಕ್ಕೆ  ಯಲಹಂಕ‌ ಮೇಲ್ಸೇಸೇತುವೆಗೆ ಸಾವರ್ಕರ್ ಹೆಸರಿಡುವ ಪ್ರಯತ್ನದಿಂದ  ಸರ್ಕಾರ ಹಿಂದೆ ಸರಿದು, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಿದೆ.

click me!