ಮುಗಿದ ಕಲಾಪ... ಇದೊಂದು ವಿಚಾರ ಚರ್ಚೆಯಾಗಲೇ ಇಲ್ಲ; ಕಾಗೇರಿ ಬೇಸರ

Published : Mar 25, 2021, 03:05 PM IST
ಮುಗಿದ ಕಲಾಪ... ಇದೊಂದು ವಿಚಾರ ಚರ್ಚೆಯಾಗಲೇ ಇಲ್ಲ; ಕಾಗೇರಿ ಬೇಸರ

ಸಾರಾಂಶ

ವಿಧಾನಸಭೆ ಅಧಿವೇಶನ 31  ನೇ ದಿನಾಂಕದ ವರೆಗೆ ನಡೆಯಬೇಕಿತ್ತು/ ಪರಿಸ್ಥಿತಿ ಕಾರಣದಿಂದ ಅನಿವಾರ್ಯವಾಗಿ ನೆನ್ನೆಯೇ ಮುಗಿಸಬೇಕಾಯಿತು/ 13 ದಿನ ಕಲಾಪ ನಡೆದಿದೆ, ಒಟ್ಟು 44 ಗಂಟೆಗಳ ಕಾಲ ಕಲಾಪ ನಡೆದಿದೆ/ ನಡೆದ ಅಷ್ಟು ದಿನಗಳ ಕಾಲ ವ್ಯವಸ್ಥಿತವಾಗಿ ಕಲಾಪ ನಡೆದಿದ/ ನಾನು ಸಭಾದ್ಯಕ್ಷನಾದ ಕ್ಷಣದಿಂದ ಸಂಸದೀಯ ವ್ಯವಸ್ಥೆ ಗಳಿಗೆ ಮೌಲ್ಯ ತುಂಬುವ ಪ್ರಯತ್ನ ಮಾಡಿದ್ದೇನೆ/ ಸಚಿವರು, ಶಾಸಕರ ಪಾಲ್ಗೊಳ್ಳುವಿಕೆ ಗಮನಿಸಿದಾಗ ಅವರು ಇನ್ನೂ ಉತ್ತಮ ವಾಗಿ ಸ್ಪಂದಿಸಬಹುದಿತ್ತು/ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ  ಹೇಳಿಕೆ

ಬೆಂಗಳೂರು(ಮಾ.  25)  ವಿಧಾನಸಭೆ ಅಧಿವೇಶನ ಮಾರ್ಚ್ 31 ರವರೆಗೆ ನಡೆಯಬೇಕಿತ್ತು. ಪರಿಸ್ಥಿತಿ ಕಾರಣದಿಂದ ಅನಿವಾರ್ಯವಾಗಿ ಬುಧವಾರವೇ ಮುಗಿಸಬೇಕಾಯಿತು. 13 ದಿನ ಕಲಾಪ ನಡೆದಿದೆ, ಒಟ್ಟು 44 ಗಂಟೆಗಳ ಕಾಲ ಕಲಾಪ ನಡೆದಿದೆ. ನಡೆದ ಅಷ್ಟು ದಿನಗಳ ಕಾಲ ವ್ಯವಸ್ಥಿತವಾಗಿ ಕಲಾಪ ನಡೆದಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಧ್ವರ ಹೆಗಡೆ ಕಾಗೇರಿನ ತಿಳಿಸಿದರು.

ನಾನು ಸಭಾದ್ಯಕ್ಷನಾದ ಕ್ಷಣದಿಂದ ಸಂಸದೀಯ ವ್ಯವಸ್ಥೆ ಗಳಿಗೆ ಮೌಲ್ಯ ತುಂಬುವ ಪ್ರಯತ್ನ ಮಾಡಿದ್ದೇನೆ.ಸಚಿವರು, ಶಾಸಕರ ಪಾಲ್ಗೊಳ್ಳುವಿಕೆ ಗಮನಿಸಿದಾಗ ಅವರು ಇನ್ನೂ ಉತ್ತಮ ವಾಗಿ ಸ್ಪಂದಿಸಬಹುದಿತ್ತು. ಸಚಿವರು, ಶಾಸಕರು, ಅಧಿಕಾರಿಗಳಿಗೆ ಸ್ವಯಂ ಜಾಗೃತಿ ಮೂಡಬೇಕು. ಆಗ ಮಾತ್ರ ಕಲಾಪಕ್ಕೆ ಅರ್ಥ ಬರುತ್ತದೆ. ಅಧಿವೇಶನ ನಡೆಯುವ ಅಷ್ಟೂ ದಿನ ಬೇರೆ ಕಾರಣಗಳಿಗೆ ಗೈರಾಗುವುದು, ಭಾಗವಹಿಸಿದರೂ ವ್ಯರ್ಥ ಹರಣ ಮಾಡುವುದು ಮಾಡಬಾರದು. ಇತ್ತೀಚಿಗೆ ಮಂತ್ರಿಗಳು, ಶಾಸಕರು ನನ್ನ ಬಳಿ ಬಂದು ಅನುಪಸ್ಥಿತಿಗೆ ಕಾರಣಗಳನ್ನು ಕೊಟ್ಟು ಗೈರಾಗುವುದು ಹೆಚ್ಚಾಗುತ್ತಿದೆ. ಅನಿವಾರ್ಯ ಪರಿಸ್ಥಿತಿ ಇದ್ದಾಗ ಸರಿ, ಆದರೆ ಸಣ್ಣಪುಟ್ಟ ಕಾರಣಗಳಿಗೆ ಕಾರಣ ನೀಡಿ ಗೈರಾಗಬಾರದು ಎಂದರು.

ಅಂಗಿ ಬಿಚ್ಚಿದ ಸಂಗಮೇಶ್‌ಗೆ  ಕೊಟ್ಟ ಶಿಕ್ಷೆ ಎಂಥದ್ದು?

ಪ್ರತಿಪಕ್ಷ ನಡೆದುಕೊಂಡ ರೀತಿ ಅತ್ಯಂತ ನೋವು ತಂದಿದೆ. ಪ್ರತಿಪಕ್ಷವಾಗಿ ಆಡಳಿತ ಪಕ್ಷದ ಸಭಾನಾಯಕರಿಗೆ ಇರುವಷ್ಟೇ ಜವಾಬ್ದಾರಿ ಇರುತ್ತದೆ. ಸಂಸದೀಯ ವ್ಯವಸ್ಥೆ ಗೆ ಶಕ್ಕಿ ಬರಬೇಕಾದರೆ ಪ್ರತಿಪಕ್ಷವೂ ಜವಾಬ್ದಾರಿ ಯುತವಾಗಿ ನಡೆದು ಕೊಳ್ಳಬೇಕು. ಒಂದು  ರಾಷ್ಟ್ರ,ಒಂದು ಚುನಾವಣೆ ವಿಚಾರದಲ್ಲಿ ಎರಡು ದಿನ ಚರ್ಚೆಗೆ ತೆಗೆದುಕೊಳ್ಳಲು ಬಯಸಿದ್ದೆ. ಆದರೆ ಇದು ಚರ್ಚೆ ಆಗಲೇ ಇಲ್ಲ, ಅವರ ಅಭಿಪ್ರಾಯ ಗಳನ್ನು ವ್ಯಕ್ತ ಪಡಿಸಬೇಕಿತ್ತು. ಭಿನ್ನಾಭಿಪ್ರಾಯ ಗಳು ಇರುವುದು ಸಹಜ ಅದನ್ನಾದರೂ ವ್ಯಕ್ತ ಪಡಿಸಬೇಕಿತ್ತು ಎಂದು ಕಾಂಗ್ರೆಸ್ ನ ನೀತಿಯ ಬಗ್ಗೆ  ಹೇಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದರಾಮಯ್ಯ ಹೆಲಿಕಾಪ್ಟರ್‌ ಪ್ರಯಾಣಕ್ಕೆ ರಾಜ್ಯದ ಬೊಕ್ಕಸದಿಂದ ಕೋಟ್ಯಂತರ ಖರ್ಚು!
ಅಂದು ಜ್ಯೋತಿಷಿ ಹೇಳಿದ್ದು 'The Devilʼ ಸಿನಿಮಾದಲ್ಲಿ ನಿಜವಾಯ್ತು, Darshan ರಿಯಲ್‌ ಲೈಫ್‌ನಲ್ಲಿ ಏನಾಗತ್ತೆ?