ಕಾಂಗ್ರೆಸ್‌ನಲ್ಲಿ ಡಿಕೆಶಿ ಸ್ಫೋಟಿಸುವ ಯತ್ನ : ಅಧಿಕೃತ ಸಂದೇಶದ ಬಗ್ಗೆ ಬಿಜೆಪಿಗರ ಸ್ಫೋಟಕ ಹೇಳಿಕೆ

By Kannadaprabha News  |  First Published Mar 25, 2021, 9:05 AM IST

ಕನಕಪುರ ಬಂಡೆ ಎನ್ನುತ್ತಿದ್ದ ಡಿಕೆಶಿಗೆ ಡೈನಮೈಟ್ ಇಟ್ಟು ಉಡಾಯಿಸುವ ಯತ್ನ ನಡೆಯುತ್ತಿದೆಯೇ ಎಂದು  ಬಿಜೆಪಿಗರು ಹೇಳಿದ್ದು ಅಧಿಕೃತ ಸಂದೇಶ ಒಂದು ರವಾನೆಯಾಗಿದೆ ಎಂದಿದ್ದಾರೆ. 


ಬೆಂಗಳೂರು (ಮಾ.25):  ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಬೇರೆ ಯಾವ ಮಹಾನಾಯಕರಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇಲ್ಲವೇ ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ. ಈ ಕುರಿತು ಬುಧವಾರ ಟ್ವೀಟ್‌ ಮಾಡಿರುವ ಬಿಜೆಪಿ, ಕಾಂಗ್ರೆಸ್‌ ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯನ್ನು ಸಿದ್ದರಾಮಯ್ಯ ಬಣ ನಿಯಂತ್ರಿಸುತ್ತಿದೆಯೇ? ಕೂಸು ಹುಟ್ಟುವ ಮುನ್ನವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಣ ಕುಲಾವಿಗೆ ಹೊಡೆದಾಡುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದೆ.

ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕೊನೆಗೂ ಕಾಂಗ್ರೆಸ್‌ ಪಕ್ಷ ಅಧಿಕೃತವಾಗಿ ಅಂತಿಮಗೊಳಿಸಿದೆ. ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಸೂಚ್ಯವಾಗಿ ತಿಳಿಸಿದೆ. 

Tap to resize

Latest Videos

ಯಾರೇನೇ ಹೇಳಲಿ ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ; ಡಿಕೆಶಿ ಕೌಂಟರ್..! .

ಸಿದ್ದರಾಮಯ್ಯ ಬಣ ಡಿ.ಕೆ.ಶಿವಕುಮಾರ್‌ ಅವರಿಗೆ ಟ್ವೀಟ್‌ ಮೂಲಕ ಸ್ಪಷ್ಟಸಂದೇಶ ರವಾನಿಸಿದೆ. ಕನಕಪುರದ ಬಂಡೆ ಎಂದು ಮೆರೆಯುತ್ತಿದ್ದವರಿಗೆ ಡೈನಮೈಟ್‌ ಇಟ್ಟು ಉಡಾಯಿಸುವ ಮುನ್ಸೂಚನೆಯನ್ನು ಸಿದ್ದರಾಮಯ್ಯ ಬಣ ನೀಡುತ್ತಿದೆಯೇ? ಮಾಜಿ ಗೃಹ ಸಚಿವ ಪರಮೇಶ್ವರ ಅವರನ್ನು ಸೋಲಿಸಿದವರು ಈಗ ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಶಿವಕುಮಾರ್‌ಗೆ ಸಂದೇಶ ಕಳುಹಿಸಿದ್ದಾರೆ. ವಲಸೆ ನಾಯಕರ ಮುಂದೆ ಮೂಲ ಕಾಂಗ್ರೆಸಿಗರು ಶರಣಾದರೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.

click me!