ಅಂತಿಮ ದಿನ ಬೆಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಮೂವರು ನಾಮಪತ್ರ ಸಲ್ಲಿಕೆ

By Kannadaprabha News  |  First Published Apr 21, 2023, 7:43 AM IST

ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆಯ ದಿನವಾದ ಗುರುವಾರ ನಗರದಲ್ಲಿ ಮೂವರು ಕಾಂಗ್ರೆಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. 


ಬೆಂಗಳೂರು (ಏ.21): ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕೊನೆಯ ದಿನವಾದ ಗುರುವಾರ ನಗರದಲ್ಲಿ ಮೂವರು ಕಾಂಗ್ರೆಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಅಳೆದು ತೂಗಿ ಬುಧವಾರ ರಾತ್ರಿ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿನ ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್‌.ಆನಂದ ಕುಮಾರ್‌, ಪುಲಕೇಶಿ ನಗರ ಕ್ಷೇತ್ರದ ಅಭ್ಯರ್ಥಿ ಎ.ಸಿ.ಶ್ರೀನಿವಾಸ್‌ ಹಾಗೂ ಕೆ.ಆರ್‌.ಪುರ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಮೋಹನ್‌ ಗುರುವಾರ ನಾಮಪತ್ರ ಸಲ್ಲಿಸಿದರು. 

ಆ ಪೈಕಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಕಾಂಗ್ರೆಸ್‌ ಅಭ್ಯರ್ಥಿಗಳಲ್ಲಿ ಎಸ್‌.ಆನಂದ್‌ ಕುಮಾರ್‌ ಅತಿ ಕಡಿಮೆ ಆಸ್ತಿ (.30.14 ಲಕ್ಷ) ಹೊಂದಿದ್ದಾರೆ. ಉಳಿದಂತೆ ಕೆ.ಆರ್‌.ಪುರ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಮೋಹನ್‌ 131.16 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿ ಕೊಂಡಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Tap to resize

Latest Videos

ಕಾಂಗ್ರೆಸ್‌ ಧಿಕ್ಕರಿಸಿ ಕಮಲಕ್ಕೆ ಮತ ನೀಡಿ: ರಾಜೀವ್‌ ಚಂದ್ರಶೇಖರ್‌

ಎಸ್‌.ಆನಂದ ಕುಮಾರ್‌ ಆಸ್ತಿ 30.14 ಲಕ್ಷ ರು.!: ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್‌.ಆನಂದ ಕುಮಾರ್‌ .30.14 ಲಕ್ಷ ಹೊಂದಿರುವುದಾಗಿ ಘೋಷಿಸಿಕೊಂಡಿದ್ದು, ಅದು ಕೇವಲ ಚರಾಸ್ತಿಯಾಗಿದೆ. ಅವರ ಬಳಿ ಯಾವುದೇ ಚಿನ್ನಾಭರಣ, ವಾಹನವಿಲ್ಲ. ಬದಲಿಗೆ ತಾಯಿ ಬಳಿ 160 ಗ್ರಾಂ ಚಿನ್ನವಿದೆ. ಕೃಷಿ ಭೂಮಿ, ವಾಣಿಜ್ಯ ಕಟ್ಟಡ, ವಸತಿ ಕಟ್ಟಡ ಸೇರಿ ಯಾವುದೇ ಸ್ಥಿರಾಸ್ತಿಯಿಲ್ಲ. ಚರಾಸ್ತಿ ಪೈಕಿ ಆನಂದ ಕುಮಾರ್‌ ಮತ್ತು ಅವರ ತಾಯಿ .2.35 ಲಕ್ಷ ನಗದು ಹೊಂದಿದ್ದಾರೆ. ಉಳಿದಂತೆ ಬ್ಯಾಂಕ್‌ ಖಾತೆಯಲ್ಲಿ .2.49 ಲಕ್ಷ ಇದ್ದರೆ, ಮಣಿಕಂಠ ಎಂಬುವವರಿಗೆ .16.50 ಲಕ್ಷ ಸಾಲ ನೀಡಿದ್ದಾರೆ. ಆನಂದ ಕುಮಾರ್‌ ಯಾವುದೇ ಹೊಣೆಗಾರಿಕೆಯನ್ನೂ ಹೊಂದಿಲ್ಲ.

ಸಿದ್ದರಾಮಯ್ಯ ಹಿಂದು ವಿರೋಧಿ, ಮುಸ್ಲಿಂ ನಾಯಕ: ಶೋಭಾ ಕರಂದ್ಲಾಜೆ

ಬಿ.ಶಿವಣ್ಣ ಆಸ್ತಿ .33.53 ಕೋಟಿ: ಆನೇಕಲ್‌ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಶಿವಣ್ಣ ಬಳಿ .33.53 ಕೋಟಿ ಆಸ್ತಿಯಿದೆ. ಅದರಲ್ಲಿ .5.06 ಕೋಟಿ ಚರಾಸ್ತಿ ಮತ್ತು .28.47 ಕೋಟಿ ಸ್ಥಿರಾಸ್ತಿಯಾಗಿದೆ. 2018ರಲ್ಲಿ ಶಿವಣ್ಣ ಬಳಿ .1.30 ಕೋಟಿ ಚರಾಸ್ತಿ ಮತ್ತು .19.70 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು .21 ಕೋಟಿ ಆಸ್ತಿಯಿತ್ತು. ಐದು ವರ್ಷಗಳಲ್ಲಿ ಬಿ.ಶಿವಣ್ಣ ಆಸ್ತಿ .12.53 ಕೋಟಿ ಹೆಚ್ಚಳವಾಗಿದೆ. ಪ್ರಸ್ತುತ 2.1 ಕೇಜಿ ಚಿನ್ನಾಭರಣ, 22 ಕೇಜಿ ಬೆಳ್ಳಿ ವಸ್ತುಗಳಿವೆ. ಎರಡು ಕಾರುಗಳು ಅವರ ಬಳಿಯಿದೆ. .3.88 ಕೋಟಿ ಹೊಣೆಗಾರಿಕೆಯನ್ನು ಅವರು ಹೊಂದಿದ್ದಾರೆ.

click me!