Election Politics ಕಾಂಗ್ರೆಸ್‌ನಿಂದ ಯಾವುದೇ ಲಾಭವಾಗಿಲ್ಲ, ಸಿದ್ದು-ಡಿಕೆಶಿಗೆ ಮುಜುಗರ ತಪ್ಪಿಸಲು ರಾಜೀನಾಮೆ!

Published : Jun 01, 2022, 04:21 AM IST
Election Politics ಕಾಂಗ್ರೆಸ್‌ನಿಂದ ಯಾವುದೇ ಲಾಭವಾಗಿಲ್ಲ, ಸಿದ್ದು-ಡಿಕೆಶಿಗೆ ಮುಜುಗರ ತಪ್ಪಿಸಲು ರಾಜೀನಾಮೆ!

ಸಾರಾಂಶ

ಕಾಂಗ್ರೆಸ್‌ನಿಂದ ನನಗೆ ಯಾವುದೇ ಲಾಭವಾಗಲಿಲ್ಲ: ಎನ್‌.ವಿ.ಬನ್ನೂರ ನನ್ನ ಪ್ರಶ್ನೆಗೆ ಕಾಂಗ್ರೆಸ್ ಬಳಿ ಉತ್ತರವಿಲ್ಲ, ದೆಹಲಿಯಲ್ಲಿ ಹೆಸರು ಬದಲು ಕಾಂಗ್ರೆಸ್‌ ಯಾವ ಆಧಾರದ ಮೇಲೆ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ?

ಬೆಳಗಾವಿ(ಜೂ.01): ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿರುವೆ ಎಂದು ಎನ್‌.ವಿ.ಬನ್ನೂರ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜೂ.13 ರಂದು ನಡೆಯುವ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ನಾನು ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವೆ. ಈ ಬಾರಿ ಅನುಕಂಪ ಹಾಗೂ ಹೋರಾಟಗಾರ ಎಂಬ ಕಾರಣಕ್ಕೆ ನನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರ್‌ಎಸ್ಎಸ್ ವಿರುದ್ಧ ಸಿದ್ದು ಹೇಳಿಕೆ ವಾಪಸ್ ಪಡೆಯಲು ಕಾಂಗ್ರೆಸ್ ನಾಯಕನ ಆಗ್ರಹ!

ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಕೆ ಮಾಡಿರುವುದನ್ನು ಹಿಂಪಡೆಯಬೇಕೆಂದು ನನಗೆ ಒತ್ತಾಯಿಸಿದರು. ಆದರೆ, ಅವರಿಗೆ ನನ್ನ ಹೆಸರು ದೆಹಲಿಗೆ ಹೋದ ಮೇಲೆ ಹೆಸರು ಬದಲಾವಣೆಯಾಗಿದ್ದು ಹೇಗೆ ಎಂದು ಕೇಳಿದೆ. ಆದರೆ, ಈಗ ಅವರ ಬಳಿ ಉತ್ತರ ಇರಲಿಲ್ಲ. ಚುನಾವಣೆಗೆ ಸಾಕಷ್ಟುಮುಂಚಿತವಾಗಿ ಮೌಖಿಕವಾಗಿ ನನಗೆ ಚುನಾವಣಾ ಪ್ರಚಾರ ನಡೆಸುವಂತೆ ಸೂಚನೆ ನೀಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಟಿಕೆಟ್‌ ತಪ್ಪಿಸಿದರು. ಕಾಂಗ್ರೆಸ್‌ನವರು ಯಾವ ಆಧಾರದ ಮೇಲೆ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಅಭ್ಯರ್ಥಿ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಪಟ್ಟವರೇ ಅಲ್ಲ. ಈ ಕ್ಷೇತ್ರಕ್ಕೆ ಅವರ ಕೊಡುಗೆ ಏನೂ ಇಲ್ಲ. ಶಿಕ್ಷಕರ ಸಮಸ್ಯೆ ಬಗ್ಗೆ ತಿಳಿಯದ ವ್ಯಕ್ತಿಗೆ ಟಿಕೆಟ್‌ ಘೋಷಣೆ ಮಾಡಿದ್ದು ಏಷ್ಟುಸರಿ ಎಂದು ಪ್ರಶ್ನಿಸಿದರು.

ಟಿಕೆಟ್‌ ಕೊಡುವುದಾಗಿ ಹೇಳಿದ್ದ ಕಾಂಗ್ರೆಸ್‌ ನನಗೆ ಅನ್ಯಾಯ ಮಾಡಿದೆ. ಹಾಗಾಗಿ, ಶಿಕ್ಷಕರ ಒತ್ತಾಸೆಯ ಮೇರೆಗೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಕಳೆದ ಬಾರಿ ನನಗೆ ಕಾಂಗ್ರೆಸ್‌ ಚುನಾವಣೆ 14 ದಿನಗಳ ಮುನ್ನ ಟಿಕೆಟ್‌ ನೀಡಿತ್ತು. ಆಗ ನನಗೆ ಕಾಂಗ್ರೆಸ್‌ ನಾಯಕರು ನನ್ನ ಪರವಾಗಿ ಪ್ರಚಾರ ಕೈಗೊಳ್ಳಲಿಲ್ಲ. ಸಹಕಾರವನ್ನೂ ನೀಡಲಿಲ್ಲ. ನನಗೆ ವೈಯಕ್ತಿಕವಾಗಿ ಮತದಾರರು ನನಗೆ ಅಭೂತಪೂರ್ವ ಬೆಂಬಲ ನೀಡಿದ್ದರು. ಕಾಂಗ್ರೆಸ್‌ನಿಂದ ನನಗೆ ಯಾವುದೇ ಲಾಭವಾಗಲಿಲ್ಲ ಎಂದು ತಿಳಿಸಿದರು.

ನನ್ನ ಟ್ರ್ಯಾಕ್ ರೆಕಾರ್ಡ್ ಹಾಳು ಮಾಡಿದ ಕಾಂಗ್ರೆಸ್ ಜೊತೆ ಕೆಲಸ ಮಾಡುವುದಿಲ್ಲ, ಪ್ರಶಾಂತ್ ಕಿಶೋರ್!

ಶಿಕ್ಷಕರ ಕಾಲ್ಪನಿಕ ವೇತನ, ವರ್ಗಾವಣೆ ಮುಂತಾದ ಸಮಸ್ಯೆಗಳ ಬಗ್ಗೆ ನಾನು 3 ದಶಕಗಳಿಂದ ಹೋರಾಟ ನಡೆಸುತ್ತಾ ಇದ್ದ ಶಿಕ್ಷಕರಿಗೆ ನನ್ನ ಹೋರಾಟಗಳ ಅರಿವಿದೆ. ಹೀಗಾಗಿ ಈ ಬಾರಿ ನನಗೆ ಅತ್ಯಂತ ಹೆಚ್ಚಿನ ಮತಗಳಿಂದ ವಿಧಾನಪರಿಷತ್‌ ಚುನಾವಣೆಯಲ್ಲಿ ಆಯ್ಕೆ ಮಾಡುವ ವಿಶ್ವಾಸ ಇದೆ ಎಂದರು.

ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋಲು ಅನುಭವಿಸಿದೆ. ಈ ಬಗ್ಗೆ ಶಿಕ್ಷಕರಿಗೆ ನೋವಿದೆ. ಆದ್ದರಿಂದ ಅವರು ಈ ಬಾರಿ ನನಗೆ ಬೆಂಬಲ ನೀಡಲಿದ್ದಾರೆ. ಶಿಕ್ಷಕರ ಅನುಕಂಪವೇ ನನ್ನ ಪಾಲಿಗೆ ಶ್ರೀರಕ್ಷೆಯಾಗಿದೆ. ಚುನಾವಣಾ ಕಣ ನನ್ನ ಪರವಾಗಿ ಪರಿವರ್ತಿತ ಗೊಳ್ಳುತ್ತಿದ್ದು ಇತರೆ ಅಭ್ಯರ್ಥಿಗಳು ನನಗೆ ಸಿಗುತ್ತಿರುವ ಬೆಂಬಲ ನೊಡಿ ಬೆಚ್ಚಿಬಿದ್ದಿದ್ದಾರೆ. ಎದುರಾಳಿಗಳಿಗೆ ಸೋಲು ಖಚಿತ ಎಂಬ ಭಾವನೆ ಮೂಡಿದೆ.
ಎನ್‌.ವಿ.ಬನ್ನೂರ ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ