ಕರ್ನಾಟಕ ಮತ್ತು ಮಹರಾಷ್ಟ್ರ ಗಡಿ ವಿಚಾರ ಮುಗಿದ ಹೋದ ಅದ್ಯಾಯ. ಆದರೂ ಮಹಾರಾಷ್ಟ್ರದವರು ಸುಪ್ರಿಂ ಕೋರ್ಟ ಮೊರೆ ಹೋಗಿದ್ದಾರೆ. ಈಗ ಕರ್ನಾಟಕ ಮತ್ತು ಮಹಾರಾಷ್ಟ್ರ ನಮ್ಮ ಶಾಸಕರಿಗೆ ವಿವಾದಾತ್ಮಕ ಹೇಳಿಕೆಗಳನ್ನ ಕೊಡಬೇಡಿ ಅಂತ ಹೇಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡ (ನ.28) : ಕರ್ನಾಟಕ ಮತ್ತು ಮಹರಾಷ್ಟ್ರ ಗಡಿ ವಿಚಾರ ಮುಗಿದ ಹೋದ ಅದ್ಯಾಯ. ಆದರೂ ಮಹಾರಾಷ್ಟ್ರದವರು ಸುಪ್ರಿಂ ಕೋರ್ಟ ಮೊರೆ ಹೋಗಿದ್ದಾರೆ. ಈಗ ಕರ್ನಾಟಕ ಮತ್ತು ಮಹಾರಾಷ್ಟ್ರ ನಮ್ಮ ಶಾಸಕರಿಗೆ ವಿವಾದಾತ್ಮಕ ಹೇಳಿಕೆಗಳನ್ನ ಕೊಡಬೇಡಿ ಅಂತ ಹೇಳಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯದ 36 ನೇಯ ಸಂಸ್ಥಾಪನ ದಿನಾಚರಣೆಯ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿಯೂ ಮರಾಠಿಗರು ಇದ್ದು, ಅವರು ಕನ್ನಡಿಗರ ಜೊತೆ ಹೊಂದಾಣಿಕೆಯಿಂದ ಇದ್ದಾರೆ. ಧಾರವಾಡ , ಬೆಳಗಾವಿಯಲ್ಲಿ ಮರಾಠಿಗರು ಇದ್ದರೂ ಯಾರಿಗೂ ತೊಂದರೆ ಆಗಿಲ್ಲ. ಮಹಾರಾಷ್ಟ್ರ ,ಸೊಲ್ಲಾಪೂರ, ಸಾಂಗ್ಲಿ , ಕೊಲ್ಲಾಪೂರ ದಲ್ಲಿ ಕನ್ನಡಿಗರು ಸಂತೋಷದಿಂದ ಇದ್ದಾರೆ. ಸಮಸ್ಯಗಳಿದ್ದರೆ ಆಯಾ ರಾಜ್ಯ ಸರ್ಕಾರಗಳ ಜೊತೆ ಮಾತನಾಡಿಕ್ಕೊಳ್ಳಬೇಕು. ನಮ್ಮ ದೇಶ ಒಂದೇ ಆಗಿದ್ದು, ನಾವು ಚೀನಾ, ಪಾಕಿಸ್ತಾನದ ಜೊತೆ ಹೋರಾಡಬೇಕು. ಅದರ ಬದಲಾಗಿ ಕರ್ನಾಟಕ, ಮಹಾರಾಷ್ಟ್ರ ಗಡಿ ಎಂದು ಬಡಿದಾಡುತ್ತಿರುವುದು ದೌರ್ಭಾಗ್ಯ ಸಂಗತಿಯಾಗಿದೆ. ಈ ಕುರಿತ ಪ್ರಕರಣ ಸುಪ್ರೀಂ ಕೋರ್ಟನಲ್ಲಿದೆ. ಎರಡು ರಾಜ್ಯಗಳಿಗೆ ನ್ಯಾಯಯುತವಾಗಿ ಕೋರ್ಟ ತಿರ್ಪು ಪ್ರಕಣ ಮಾಡುತ್ತೆ ಎಂದು ಹೇಳಿದರು.
ಮಹಾರಾಷ್ಟ್ರದ ಗಡಿ ಗ್ರಾಮಗಳಲ್ಲಿ ಕನ್ನಡದ ಬಾವುಟಗಳ ಹಾರಾಟ
ಎರಡೂ ರಾಜ್ಯಗಳಿಗೆ ಒಂದಿಂಚು ಭೂಮಿ ಹೋಗಲ್ಲ: ರಾಜ್ಯದಲ್ಲಿ ಮಹಾಜನ ಆಯೋಗದ ಬಳಿಕ ಸೆಟೆಲ್ ಪ್ರಕರಣ ಆಗಿದೆ. ಮಹಾರಾಷ್ಟ್ರದವರು ಕೋರ್ಟ ಗೆ ಹೋಗಬಾರದಿತ್ತು ಮಹಾರಾಷ್ಟ್ರ ನಾಯಕರು ಕೊಟ್ಟಿರುವ ಹೇಳಿಕೆಗಳನ್ನುಕೊಡಬಾರದು. ನನಗೆ ವಿಶ್ವಾಸ ವಿದೆ ಕರ್ನಾಟಕದ ಒಂದಿಂಚು ಭೂಮಿ ಮಹಾರಾಷ್ಟ್ರ ಕ್ಕೆ ಹೋಗಲ್ಲ ಎಂಬ ವಿಶ್ವಾಸವಿದೆ. ಹಾಗೆಯೇ ಮಹಾರಾಷ್ಟ್ರದ ಒಂದಿಂಚು ಭೂಮಿ ಕರ್ನಾಟಕಕ್ಕೆ ಬರಲ್ಲ. ಎರಡು ರಾಜ್ಯದ ನಾಯಕರು ವಿವಾದಾತ್ಮಹ ಹೇಳಿಕೆಗಳನ್ನ ಕೊಡಬಾರದು ಇದರಿಂದ ಯಾರಿಗೂ ಲಾಭವಿಲ್ಲ. ನುರಿತ ಕಾನೂನಿನ ತಜ್ಞರು ಇದ್ದು, ಒಳೆಯ ತೀರ್ಪು ಪ್ರಕಟವಾಗುತ್ತೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕತ ಮನೆಗಳಿಗೆ ಮುತ್ತಿಗೆ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆ ಹೆಚ್ಚಾಗುತ್ತವೆ ಎಂದು ಸಿಟಿ ರವಿ ಅವರು ಹೇಳಿಕೆಯನ್ನ ಕೊಟ್ಟಿದ್ದಾರೆ. ಇದಕ್ಕೆ ಹಲವು ಸಾಕ್ಷಿಗಳಿವೆ. ಸಿದ್ದರಾಮಯ್ಯ ಅವರಿಗೆ ಕುಂಕುಮ ಇಟ್ಟುಕ್ಕೊಂಡವರನ್ನ ನೋಡಿದರೆ, ಹೆದರಿಕೆ ಬರುತ್ತದೆ ಎಂದಿದ್ದರು. ಅವರು ಅಧಿಕಾರದಲ್ಲಿ ಇದ್ದಾಗ ಪಿಎಫ್ಐ ಸಂಘಟನಾಕಾರರನ್ನ ಬಿಡುಗಡೆ ಮಾಡಿದ್ದರು. ಒಂದು ವೇಳೆ ಸಿ.ಟಿ. ರವಿ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದರೆ, ನಾವು ಕಾಂಗ್ರೆಸ್ ನವರ ಮೆನೆಗೆ ಮುತ್ತಿಗೆ ಹಾಕುತ್ತೆವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಡಕ್ ಎಚ್ಚರಿಕೆ ನೀಡಿದರು.