ಮಂಡ್ಯ ಜಿಲ್ಲೆಯ ಜನರು ಪದೇ ಪದೆ ನಂಬಿಕೊಂಡು ಅವಕಾಶ ಕೊಟ್ಟರೂ ಜಿಲ್ಲೆಯ ಅಭಿವೃದ್ಧಿಗೆ ಏನು ಕೊಡುಗೆ ಕೊಟ್ಟಿದ್ದಾರೆಂದು ಗೊತ್ತಿದೆ. ಬರೀ ಚೇಷ್ಟೆ, ಸ್ವಾರ್ಥ ರಾಜಕಾರಣ ಮಾಡುತ್ತಾ ಇನ್ನೊಬ್ಬರನ್ನು ರಕ್ತ ಹೀರುವಂತನನನ್ನು ನಾಯಕ ಅಂತಾ ಕರಿತೀರಾ? ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಅಶ್ವತ್ಥ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು (ನ.28): ಮಂಡ್ಯ ಜಿಲ್ಲೆಯ ಜನತೆ ಎಂದರೆ ರಾಜಕೀಯವನ್ನು ಅರೆದು ಕುಡಿದವರಾಗಿದ್ದಾರೆ. ರಾಜಕೀಯವನ್ನೇ ನಿದ್ದೆ, ನೀರು ಮತ್ತು ಉಸಿರಾಗಿಸಿಕೊಂಡಿದ್ದಾರೆ. ಆದರೆ, ಒಬ್ಬರನ್ನು ನಂಬಿಕೊಂಡು ಅವಕಾಶ ಕೊಟ್ಟರೂ ಜಿಲ್ಲೆಯ ಅಭಿವೃದ್ಧಿಗೆ ಏನು ಕೊಡುಗೆ ಕೊಟ್ಟಿದ್ದಾರೆಂದು ನಿಮಗೆ ಗೊತ್ತಿದೆ. ಬರೀ ಚೇಷ್ಟೆ, ಸ್ವಾರ್ಥ ರಾಜಕಾರಣ ಮಾಡುತ್ತಾ ಇನ್ನೊಬ್ಬರನ್ನು ರಕ್ತ ಹೀರುವಂತನನನ್ನು ನಾಯಕ ಅಂತಾ ಕರಿತೀರಾ? ಅವನನ್ನು ಏನು ಅಂತಾ ಕರೀಬೇಕು ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಅಶ್ವತ್ಥ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.
ಸಂಸದೆ ಸುಮಲತಾ ಅಂಬರೀಶ್ ಅವರ ಆಪ್ತ ಇಂಡುವಾಳು ಸಚ್ಚಿದಾನಂದ ಹಾಗೂ ಬೆಂಬಲಿಗರು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಂಡ್ಯ ಜಿಲ್ಲೆ ಕಾಲ ಕಾಲಕ್ಕೆ ಹೇಗೆ ಕುಸಿಯುತ್ತಾ ಬಂತು ಅಂತಾ ಗೊತ್ತಿದೆ. ರಾಜಕೀಯವನ್ನೇ ಮೈಗೂಡಿಸಿಕೊಂಡಿದ್ದು, ಅತಿ ಹೆಚ್ಚಿನ ನಾಯಕರನ್ನು ಕೊಡುವ ಜಿಲ್ಲೆಯಾಗಿದೆ. ಆದರೆ ರಾಜ್ಯದಲ್ಲಿಯೇ ಅತೀ ಹೆಚ್ಚಿನ ಸಾಲ ತೆಗೆದುಕೊಂಡಿರುವ, ಅತೀ ಹೆಚ್ಚು ಆತ್ಮಹತ್ಯೆ ಆಗುವ ಜಿಲ್ಲೆ ಮಂಡ್ಯ ಆಗಿದೆ ಎನ್ನುವುದು ಬೇಸರದ ವಿಚಾರವಾಗಿದೆ. ಆದರೆ ನಂಬಿ ನಂಬಿ ಅವಕಾಶ ಕೊಟ್ಟ ವ್ಯಕ್ತಿಗಳು ಏನು ಮಾಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ಮಂಡ್ಯ ಮೈ ಶುಗರ್ ಕಾರ್ಖಾನೆ ನಡೆಸೋಕೆ ಪ್ರಯತ್ನ ಮಾಡಿಲ್ಲ. ಬರೀ ಚೇಷ್ಟೆ, ರಾಜಕೀಯ ಅಷ್ಟೇ, ಅವರ ಸ್ವಾರ್ಥಕ್ಕೆ ಅಷ್ಟೇ ರಾಜಕಾರಣ ಮಾಡಿದ್ದಾರೆ. ಇನ್ನೊಬ್ಬರನ್ನು ರಕ್ತ ಹೀರುವಂತನನನ್ನು ನಾಯಕ ಅಂತಾ ಕರಿತೀರಾ..? ಎಂದು ಅಶ್ವಥ್ ನಾರಾಯಣ್ ಸಭಿಕರನ್ನು ಕೇಳಿದಾಗ ಎಲ್ಲರೂ ಈ ವೇಳೆ ರಾಕ್ಷಸ ಎಂದು ಸಭಿಕರು ಉತ್ತರಿಸಿದರು.
Mandya: ಸಂಸದೆ ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಬಿಜೆಪಿ ಸೇರ್ಪಡೆ
ಸಕ್ಕರೆ ಕಾರ್ಖಾನೆಗಳನ್ನು ಎಕ್ಕುಡಿಸಿದರು: ಜನರ ರಕ್ತ ಹೀರಿದಂತಹ ರಾಕ್ಷಸರಿಗೆ ಮುಂದೆ ತಕ್ಕ ಪಾಠ ಕಲಿಸಬೇಕು. ಪಾಂಡವಪುರ, ಕೆ.ಆರ್. ನಗರ ಹಾಗೂ ಮಂಡ್ಯದ ಮೈ ಶುಗರ್ ಕಾರ್ಖಾನೆ ಎಕ್ಕುಡಿಸಿದರು. ಈ ರೀತಿಯ ಪರಿಸ್ಥಿತಿ ನಮಗೆ ಬರಬಾರದು. ಮಂಡ್ಯ ಅಂದರೆ ಸಮೃದ್ಧಿಯ ನಾಡು. ಕೈಗಾರಿಕೆಯಲ್ಲಿ, ಶಿಕ್ಷಣ, ವ್ಯವಸಾಯದಲ್ಲಿ ಮಂಡ್ಯ ಮುಂದೆ ತಂದಿದ್ದಾರಾ? ಹೋಗಲಿ ಕಾಲುವೆಗಳನ್ನು ಅಭಿವೃದ್ಧಿ ಮಾಡಿದ್ದಾರಾ? ಐನೂ ಮಾಡಿಲ್ಲ. ಇಲ್ಲಿದ್ದ ಗುಡ್ಡವನ್ನು ಈಗ ನೋಡಿದರೆ ಕ್ರಷ್ ಮಾಡಿ ತಿಂದುಕೊಂಡಿದ್ದಾರೆ. ನಾವು ಅಲ್ಲಿ ನಿಜವಾಗಿಯೂ ಸ್ವಾತಂತ್ರ್ಯ ತೆಗೆದುಕೊಳ್ಳಬೇಕಿದೆ. ನರೇಂದ್ರ ಮೋದಿಯನ್ನು ಪ್ರತಿಯೊಬ್ಬ ಜನರು ಪ್ರೀತಿ ಮಾಡುತ್ತಾರೆ. ಕುಟುಂಬ ಆಧಾರಿತ ಪಕ್ಷಗಳು ಅಂದರೆ ಅದು ಕಾಂಗ್ರೆಸ್, ಜೆಡಿಎಸ್ ಪಕ್ಷ. ನಾವು ಜನರ ಬಳಿ ಹೋಗಿ ಪಕ್ಷ ಸಂಘಟಿಸಿ ಜನರ ಪರ ನಿಲ್ಲಬೇಕು. ನಾವು ಸ್ವಾಭಿಮಾನದ ಪ್ರತೀಕವಾಗಿ ನಿಲ್ಲಬೇಕು. ನಿಮಗೆ ಏನು ಆಗಬೇಕು ಹೇಳಿ..? ನಾವು ಏನು ಬೇಕಾದರೂ ತ್ಯಾಗಕ್ಕೆ ಸಿದ್ದರಿದ್ದೇವೆ, ತಲೆ ಕೊಡೋಕೆ ರೆಡಿ ಇದ್ದೇವೆ ಎಂದು ತಿಳಿಸಿದರು.
ಬಿಜೆಪಿ ಎಲ್ಲರ ಮನೆಯ ಪಕ್ಷ: ದೇಶದಲ್ಲಿ ಬಿಜೆಪಿ ಎಲ್ಲ ಕಾರ್ಯಕರ್ತರ ಮತ್ತು ಅವರ ಮನೆಯ ಪಕ್ಷವಾಗಿದೆ. ನೀವು ಯಾರ ಮನೆಯ ಬಾಗಿಲು ಕಾಯುವ ಅವಶ್ಯಕತೆ ಇಲ್ಲ. ಸ್ವಾಭಿಮಾನದಿಂದ ನೀವು ಬದಕಲು ನಿಮಗೆ ಏನು ಬೇಕು ಅದನ್ನು ತಿಳಿಸಬೇಕು. ತುಷ್ಟಿಕಾರಣ, ಸ್ವಾರ್ಥದ ರಾಜಕಾರಣ ಮಾಡುವ ಎರಡು ಪಕ್ಷಗಳಿಗೂ ನೀವು ಪಾಠ ಕಲಿಸಬೇಕು. ಮಂಡ್ಯದಲ್ಲಿ ಏನು ದುಡ್ಡು ಖರ್ಚು ಮಾಡಿದರೂ ನಡೆಯೋದಿಲ್ಲ. ನಾವೇ ಇರಬೇಕು ಅಂತೇನಿಲ್ಲ, ಅಲ್ಲಿ ನೀವೇ ಇರಿ. ಆದರೆ ಜನರ ಬಗ್ಗೆ ನಿಜವಾಗಿಯೂ ನಿಮಗೆ ಕಾಳಜಿ ಇರಬೇಕು. ಮಂಡ್ಯದಲ್ಲಿ ಅಂತಿಮವಾಗಿ ನಡೆಯೋದೇ ಸ್ವಾಭಿಮಾನ. ಈ ಹಿಂದೆ ಲೋಕಸಭಾ ಸದಸ್ಯರ ಚುನಾವಣೆಯಲ್ಲಿ ನೋಡಿದ್ದೀರಲ್ಲ. ಹೆಸರು ಪ್ರಸ್ತಾಪ ಮಾಡದೇ, ಭಾಷಣ ಉದ್ದಕ್ಕೂ ಕುಮಾರಸ್ವಾಮಿ ವಿರುದ್ದ ಕಿಡಿ ಕಾರಿದರು.
Mandya: ನಾಗಮಂಗಲ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ: ಚಲುವರಾಯಸ್ವಾಮಿ
ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವವನ್ನು ಒಪ್ಪಿಕೊಂಡು ನಾನು ಬಿಜೆಪಿ ಸೇರಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಿ ಕೊಡುತ್ತೇವೆ ಎಂದು ಪಕ್ಷ ಸೇರ್ಪಡೆಯಾದ ಸಚ್ಚಿದಾನಂದ ಹೇಳಿದರು. ಸಮಾರಂಭದಲ್ಲಿ ಇಂಡುವಾಳು ಸಚ್ಚಿದಾನಮದ ಸೇರಿದಂತೆ ನಾಗಮಂಗಲ ರವಿ, ಶ್ರೀರಂಗಪಟ್ಟಣದ ಲಿಂಗರಾಜು ಸೇರಿ ನೂರಾರು ಕಾರ್ಯಕರ್ತರು ಬಿಜೆಪಿ ನಾಯಕರು ಕೊಟ್ಟ ಪಕ್ಷದ ಭಾವುಟ ಮತ್ತು ಶಾಲು ಹೊದ್ದುಕೊಂಡು ಬಿಜೆಪಿ ಸೇರ್ಪಡೆಯಾದರು.