ಜಿಲ್ಲೆಯ ಎರಡು ಮತ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದೆ. ಒಂದನೇ ಲಿಸ್ಟ್ ನಲ್ಲಿ ಗದಗ, ರೋಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.
ಗದಗ (ಮಾ.25) : ಜಿಲ್ಲೆಯ ಎರಡು ಮತ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದೆ. ಒಂದನೇ ಲಿಸ್ಟ್ ನಲ್ಲಿ ಗದಗ, ರೋಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.
ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ಶಾಸಕ ಎಚ್ ಕೆ ಪಾಟೀಲ(HK Patil), ಮೊದಲ ಪಟ್ಟಿ ಬಿಡುಗಡೆಯಾಗಿದ್ದು ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್(Congress) ದಾಪುಗಾಲು ಇಟ್ಟಿದೆ ಅಂತಾ ಹೇಳಿದ್ರು..
undefined
ನಾವು ಐತಿಹಾಸಿಕ ಸಮಾವೇಶ ಮಾಡ್ತೇವೆ. ಇಂಥ ಕಾರ್ಯಕ್ರಮ ಹಿಂದೆ ನಡೆದಿಲ್ಲ; ಮುಂದೆ ನಡೆಯೋದಿಲ್ಲ: ಎಚ್‌ಡಿಕೆ
ಎಚ್ ಕೆ ಪಾಟೀಲರ ಎದುರು ಬಿಜೆಪಿ ಪ್ರಭಾವಿ ನಾಯಕರನ್ನ ಕಣಕ್ಕಿಳಿಸುವ ಚಿಂತನೆ ನಡೆದಿದೆ ಎನ್ನಲಾಗ್ತಿದೆ ಅನ್ನೋ ಪ್ರಶ್ನೆಗೆ ನಮ್ಮ ಕಾರ್ಯಕರ್ತರು, ನಮ್ಮ ಹೈಕಮಾಂಡ್ ನನ್ನ ಅನೌನ್ಸ್ ಮಾಡಿದಾರೆ. ಬಿಜೆಪಿ ವಿರುದ್ಧದ ಪಾರ್ಟಿ. ಅವ್ರು ಯಾರನ್ನ ಕಣಕ್ಕೆ ಇಳಿಸ್ತಾರೆ ನಾನು ಯೋಚಿಸಲ್ಲ..ನನ್ನ ಕಾರ್ಯಕರ್ತರು ನನ್ನ ಬೆಂಬಲಕ್ಕಾಗಿ ದುಡಿಯುತ್ತಿದ್ದಾರೆ.. ಪಕ್ಷದ ಒಬ್ಬ ಕರ್ಯಕರ್ತನಾಗಿ ಚುನಾವಣೆ ಕಣದಲ್ಲಿ ಹೋರಾಟ ಮಾಡ್ತೀನಿ ಅಂತಾ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಸರ್ವಾನುಮತದಿಂದ 124 ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ.. ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.. ಮುಂಜಾನೆಯಿಂದ ಒಂದು ಕಡೆಯೂ ಅಪಸ್ವರದ ಮಾತಿಲ್ಲ.. ಉತ್ತಮ ರೀತಿಯಲ್ಲಿ ಟಿಕೆಟ್ ಹಂಚಿಕೆಯಾಗಿದೆ ಅಂತಾ ಹೇಳಿದ್ರು..
ಯುವರಾಜನ ಬಾಳಲ್ಲಿ ಬಿರುಗಾಳಿ... ಅನರ್ಹತೆ ಬಗ್ಗೆ ಕಾನೂನು ಹೇಳೋದೇನು.?
ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun kharge) ಅವರ ಮರ್ಗದರ್ಶನದಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ.. ಎರಡನೇ ಪಟ್ಟಿ ಬಿಡುಗಡೆ ವಿಷಯವಾಗಿ 26, 27 ನೇ ತಾರೀಕು ಸಿಇಸಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತೆ.. ಉಳಿದ 100 ಸೀಟ್ ಬಗ್ಗೆ ಚರ್ಚೆ ನಡೆಸಿ ಚುನಾವಣೆ ಘೋಷಣೆಗೂ ಮುಂಚೆ ಅಥ್ವಾ ಒಂದು ದಿನ ನಂತ್ರ ಘೋಷಣೆ ಮಾಡುವ ಸಾಧ್ಯತೆ ಇದೆ ಅಂತಾ ಹೇಳಿದ್ರು.. ಶಿರಹಟ್ಟಿ, ನರಗುಂದ ಟಿಕೆಟ್ ವಿಷಯ ಸಿಇಸಿ ಸಭೆಯಲ್ಲಿ ನಿರ್ಧರಿಸಲಾಗುತ್ತೆ ಅಂತಾ ಹೇಳಿದ್ರು..