ಪ್ರೂಫ್ ಬೇಡ, ವಿಡಿಯೋ ಸಾಕು, ದಿಗ್ಗಿ ಬಳಿಕ ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ ಕೇಳಿದ ಕಾಂಗ್ರೆಸ್ ನಾಯಕ!

By Suvarna News  |  First Published Jan 27, 2023, 3:33 PM IST

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಲ್ಲಾ ನಾಯಕರು ಭಾರತೀಯ ಸೇನೆಯ ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ ಕೇಳಿ ಕೈಸುಟ್ಟುಕೊಂಡಿದ್ದರು. ಇದೀಗ ದಿಗ್ವಿಜಯ್ ಸಿಂಗ್ ಸಾಕ್ಷಿ ಕೇಳಿದ ಬೆನ್ನಲ್ಲೇ ಕಾಂಗ್ರೆಸ್ ದೂರ ಸರಿದಿದೆ. ಆದರೆ ದಿಗ್ಗಿ ಬಳಿಕ ಮತ್ತೊಬ್ಬ ಕಾಂಗ್ರೆಸ್ ನಾಯಕ ಪ್ರೂಫ್ ಕೇಳಿದ್ದಾರೆ. ಆದರೆ ಈ ನಾಯಕ ಅಳಿಯ ಅಲ್ಲ, ಮಗಳ ಗಂಡ ಅನ್ನೋ ರೀತಿ ಸಾಕ್ಷಿ ಕೇಳಿದ್ದಾರೆ.


ನವದೆಹಲಿ(ಜ.27): ಕರ್ನಾಟಕ ಸೇರಿದಂತೆ ಸಾಲು ಸಾಲು ವಿಧಾನಸಭಾ ಚುನಾವಣೆಗಳು ಮುಂದಿದೆ. ಪ್ರಚಾರದ ಅಬ್ಬರ ಜೋರಾಗುತ್ತಿದೆ. ಅತ್ತ ಭಾರತ್ ಜೋಡೋ ಮೂಲಕ ಲೋಕಸಭಾ ಚುನಾವಣೆಗೆ ತಯಾರಿ ನಡೆಯುತ್ತಿದೆ. ಆದರೆ ಕಾಂಗ್ರೆಸ್ 2019ರ ಚುನಾವಣಾ ಸೋಲಿನಿಂದ ಪಾಠ ಕಲಿತಿಲ್ಲ. ಇದೀಗ ಮತ್ತೆ ಕಾಂಗ್ರೆಸ್ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ ಕೇಳುತ್ತಿದೆ. ದಿಗ್ವಿಜಯ್ ಸಿಂಗ್ ಸಾಕ್ಷಿ ಕೇಳಿದ ಬೆನ್ನಲ್ಲೇ ಈ ಮಾತಿನಿಂದ ಕಾಂಗ್ರೆಸ್ ದೂರ ಉಳಿದುಕೊಂಡಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊರ್ವ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಸರ್ಜಿಕಲ್ ಸ್ಟ್ರೈಕ್ ಪ್ರೂಫ್ ಕೇಳಿದ್ದಾರೆ. ಆದರೆ ರಶೀದ್ ಅಲ್ವಿ ಕೊಂಚ ಟ್ವಿಸ್ಟ್ ಮಾಡಿ ಪ್ರೂಫ್ ಕೇಳಿದ್ದಾರೆ. ನಮಗೆ ಸೇನೆಯ ಮೇಲೆ ಹೆಮ್ಮೆ ಇದೆ. ನಾವು ಸರ್ಜಿಕಲ್ ಸ್ಟ್ರೈಕ್ ಪ್ರೂಫ್ ಕೇಳುತ್ತಿಲ್ಲ. ವಿಡಿಯೋ ಬಿಡುಗಡೆ ಮಾಡಿ ಸಾಕು ಎಂದಿದ್ದಾರೆ. 

ದಿಗ್ವಿಜಯ್ ಸಿಂಗ್ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಅವರು ಸರ್ಜಿಕಲ್ ಸ್ಟ್ರೈಕ್ ಸಾಕ್ಷ್ಯ ಕೇಳಿದ್ದಾರೆ. ಸರ್ಜಿಕಲ್ ಸ್ಟ್ರೈಕ್(Surgical Strike) ಕುರಿತು ಬಿಜೆಪಿ ನಾಯಕರ ಹೇಳಿಕೆ ಗೊಂದಲವಾಗಿದೆ. ಇದಕ್ಕೆ ಸಾಕ್ಷಿಯ ಅವಶ್ಯಕತೆ ಇದೆ. ಕೇಂದ್ರ ಬಿಜೆಪಿ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಕುರಿತು ವಿಡಿಯೋ ಬಹಿರಂಗ ಮಾಡಲಿ. ಇಲ್ಲದಿದ್ದರೆ ಕ್ಷಮೆ ಕೇಳಲಿ ಎಂದು ರಶೀದ್ ಆಲ್ವಿ ಹೇಳಿದ್ದಾರೆ.

Tap to resize

Latest Videos

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸರ್ಕಾರ ಇನ್ನೂ ದಾಖಲೆ ಕೊಟ್ಟಿಲ್ಲ: ಪ್ರೂಫ್‌ ಕೇಳಿದ ಕಾಂಗ್ರೆಸ್‌ ನಾಯಕ

ಅಂದು ಸಚಿವರಾಗಿದ್ದ ಸುಷ್ಮ ಸ್ವರಾಜ್ ಈ ಕುರಿತು ಹೇಳಿಕೆ ನೀಡಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ನಡೆದ ಜಾಗದಲ್ಲಿ ಯಾರೂ ಹತ್ಯೆಯಾಗಲು ಸಾಧ್ಯವಿಲ್ಲ. ಇದು ನಿರ್ಜನ ಪ್ರದೇಶ ಎಂದಿದ್ದರು. ಬಳಿಕ ಅಮಿತ್ ಶಾ, 300 ಉಗ್ರರು ಹತ್ಯೆಯಾಗಿದ್ದಾರೆ ಎಂದಿದ್ದರು. ಬಿಜೆಪಿ ಗೊಂದಲ ಹೇಳಿಕೆ ನೀಡಿದೆ. ಸೇನೆಯ ಸರ್ಜಿಕಲ್ ಸ್ಟ್ರೈಕ್ ಮಾಡಿದ ವಿಡಿಯೋ ಬಿಡುಗಡೆ ಮಾಡಿ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ರಶೀದ್ ಆಲ್ವಿ ಹೇಳಿದ್ದಾರೆ.

ರಶೀದ್ ಆಲ್ವಿ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ಸರ್ಜಿಕಲ್ ಸ್ಟ್ರೈಕ್ ಕುರಿತು ಕಾಂಗ್ರೆಸ್ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ. ಸಾರ್ವಜನಿಕವಾಗಿ ಗೊಂದಲದ ಹೇಳಿಕೆ ನೀಡುತ್ತಿದೆ. ಸಾಕ್ಷಿ ಕೇಳುವ ಮೂಲಕ ಭಾರತೀಯ ಸೇನೆಯ ಆತ್ಮವಿಶ್ವಾಸಕ್ಕೆ ಧಕ್ಕೆ ತರುತ್ತಿದೆ. ದಿಗ್ವಿಜಯ್ ಸಿಂಗ್ ಹೇಳಿಕೆಯನ್ನು ಕಾಂಗ್ರೆಸ್ ವೈಯುಕ್ತಿಕ ಎಂದು ವಿವಾದಿಂದ ದೂರ ಉಳಿದುಕೊಂಡಿದೆ. ಇದೀಗ ರಶೀದ್ ಆಲ್ವಿ ಹೇಳಿಕೆ ಕಾಂಗ್ರೆಸ್ ಅಧಿಕೃತವೇ ಎಂದು ಬಿಜೆಪಿ ಪ್ರಶ್ನಿಸಿದೆ.

ದಿಗ್ವಿಜಯ್‌ ಸಿಂಗ್‌ ಹೇಳಿಕೆ ಒಪ್ಪಲ್ಲ ಎಂದ ರಾಹುಲ್‌ ಗಾಂಧಿ, ಸೇನೆಯ ಕಾರ್ಯಾಚರಣೆಗಳಿಗೆ ಸಾಕ್ಷಿ ಬೇಕಿಲ್ಲ ಎಂದ ರಾಗಾ!

20​16ರಲ್ಲಿ ಭಾರತವು ಪಾಕಿಸ್ತಾನಿ ಉಗ್ರ ನೆಲೆಗಳ ಮೇಲೆ ನಡೆಸಿದ ಸರ್ಜಿಕಲ್‌ ದಾಳಿಯ ಪುರಾವೆಯನ್ನು ಮೋದಿ ಸರ್ಕಾರ ಇನ್ನೂ ನೀಡಿಲ್ಲ’ ಎಂದು ತಮ್ಮದೇ ಪಕ್ಷದ ನಾಯಕ ದಿಗ್ವಿಜಯ ಸಿಂಗ್‌ ಹೇಳಿಕೆಯನ್ನು ಒಪ್ಪಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಿರಾಕರಿಸಿದ್ದಾರೆ. ‘ಈ ಹೇಳಿಕೆಯನ್ನು ಕಾಂಗ್ರೆಸ್‌ ಒಪ್ಪುವುದಿಲ್ಲ. ಈ ಹೇಳಿಕೆ ಹಾಸ್ಯಾಸ್ಪದ. ಸಶಸ್ತ್ರ ಪಡೆಗಳು ತಮ್ಮ ಕಾರಾರ‍ಯಚರಣೆಗೆ ಯಾವುದೇ ಸಾಕ್ಷ್ಯ ನೀಡುವ ಅಗತ್ಯವಿಲ್ಲ’ ಎಂದು ರಾಹುಲ್‌ ಹೇಳಿದ್ದರು.

click me!