ಕಾಂಗ್ರೆಸ್‌ಗೆ ಉಳಿದಿರೋದು ಅದೊಂದೇ; ಈ ಬಾರಿ ಅದನ್ನೂ ಕಳೆದುಕೊಳ್ಳಲಿದೆ: ಸಿ.ಟಿ.ರವಿ

By Kannadaprabha News  |  First Published Jan 27, 2023, 2:54 PM IST

ಜಾತಿ ಪ್ರಚೋದನೆ, ಅಪಪ್ರಚಾರ, ವೈಯಕ್ತಿಕ ತೇಜೋವಧೆ ಮೂಲಕ ರಾಜಕಾರಣ ಮಾಡಲು ಕಾಂಗ್ರೆಸ್‌ ಹೊರಟಿದೆ. ಜಿಲ್ಲೆಯಲ್ಲಿ ಅವರ ರಾಜಕೀಯ ಆಟವನ್ನು ಮತದಾರರು ಗಮನಿ ಸುತ್ತಿದ್ದಾರೆ. ಒಂದು ಸ್ಥಾನದಲ್ಲಿ ಕಾಂಗ್ರೆಸ್‌ ಇತ್ತು. ಅದನ್ನು ಸಹ ಈ ಬಾರಿ ಕಳೆದುಕೊಳ್ಳಲಿದೆ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.


ಚಿಕ್ಕಮಗಳೂರು (ಜ.27) ಜಾತಿ ಪ್ರಚೋದನೆ, ಅಪಪ್ರಚಾರ, ವೈಯಕ್ತಿಕ ತೇಜೋವಧೆ ಮೂಲಕ ರಾಜಕಾರಣ ಮಾಡಲು ಕಾಂಗ್ರೆಸ್‌ ಹೊರಟಿದೆ. ಜಿಲ್ಲೆಯಲ್ಲಿ ಅವರ ರಾಜಕೀಯ ಆಟವನ್ನು ಮತದಾರರು ಗಮನಿ ಸುತ್ತಿದ್ದಾರೆ. ಒಂದು ಸ್ಥಾನದಲ್ಲಿ ಕಾಂಗ್ರೆಸ್‌ ಇತ್ತು. ಅದನ್ನು ಸಹ ಈ ಬಾರಿ ಕಳೆದುಕೊಳ್ಳಲಿದೆ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾ ಧ್ವನಿಯಾತ್ರೆ ಚಿಕ್ಕಮಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಈ ಜಿಲ್ಲೆಯ ಅಭಿವೃದ್ಧಿಗೆ ಏನನ್ನು ಕೊಟ್ಟಿದ್ದೇವೆ ಎಂಬ ಒಂದೂ ಮಾತು ಮಾಜಿ ಸಿಎಂ ಅವರಿಂದ ಬರಲಿಲ್ಲ, ಬರಲು ಅವರು ಮಾಡಿದ್ದು ಏನೂ ಇಲ್ಲ, ಬಿಜೆಪಿ ಸರ್ಕಾರ ಏಳೆಂಟು ಸಾವಿರ ಕೋಟಿ ರುಪಾಯಿ ನೀಡಿದೆ ಎಂದರು.

Latest Videos

undefined

ಕಾಂಗ್ರೆಸ್‌ ಹತಾಶೆಯಿಂದ ಉಚಿತ ಕೊಡುಗೆ ಘೋಷಿಸುತ್ತಿದೆ: ಸಿ.ಟಿ. ರವಿ ಟೀಕೆ

ನಿಚ್ಚಳವಾದ ಬಹುಮತದೊಂದಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ.ವಾತಾವರಣ ಬಿಜೆಪಿ ಪರವಾಗಿ ಇರುವುದರಿಂದಲೇ ಕಾಂಗ್ರೆಸ್‌ ಹತಾಶವಾಗಿದೆ. ಉಚಿತ ಕೊಡುಗೆಗಳ ಮಹಾಪೂರ ಹರಿಸಲು ಹೊರಟಿದೆ. ಅವರು ಸುಳ್ಳು ಹೇಳುತ್ತಿದ್ದಾರೆ ಎಂಬುದಕ್ಕೆ 2018ರಲ್ಲಿ ರಾಜಸ್ಥಾನದಲ್ಲಿ ಚುನಾವಣಾ ಸಂದರ್ಭದಲ್ಲಿ ರಾಹುಲ್‌ಗಾಂಧಿಯವರು ಮಾತನಾಡುವಾಗ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ,

ರೈತರ ಎಲ್ಲಾ ಸಾಲವನ್ನು 10 ದಿನಗೊಳಗೆ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ, ಕೊಟ್ಟಮಾತನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದರು.

ಚಾಲೆಂಜ್‌ ಸ್ವೀಕಾರ: ಚುನಾವಣೆ ಸಂದರ್ಭದಲ್ಲಿ ಎಂತದ್ದೇ ಪರಿಸ್ಥಿತಿ ಬಂದರೂ ಅದನ್ನು ಚಾಲೆಂಜ್‌ ಆಗಿ ಸ್ವೀಕಾರ ಮಾಡುವ ಕಾರ್ಯಕರ್ತರು ನಮ್ಮ ಪಕ್ಷದಲ್ಲಿದ್ದಾರೆ.ಅವರು ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂದು ಸಿ.ಟಿ. ರವಿ ಹೇಳಿದರು.

ನಗರಸಭೆಯ ಮಾಜಿ ಅಧ್ಯಕ್ಷ ಎಚ್‌.ಡಿ. ತಮ್ಮಯ್ಯ ಅವರು ಬಿಜೆಪಿಯಿಂದ ಒಂದು ಹೆಜ್ಜೆ ಹೊರಗಿಟ್ಟಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ, ನದಿ ತುಂಬಿ ಬಂದಾಗ ಈಜಿ ದಡ ಸೇರಬೇಕೋ, ಸೇತುವೆ ಮೇಲೆ ಹೋಗಬೇಕೋ ಎಂಬ ನಿರ್ಧಾರ ಮಾಡಬೇಕಾಗುತ್ತದೆ.ಮುಂದೆ ನೋಡೋಣ ಎಂದು ಮಾರ್ಮಿಕವಾಗಿ ಹೇಳಿದರು.

ಪಕ್ಷದ ಸಿದ್ಧಾಂತ ಏನೆಂದು ಜನರಿಗೆ ಗೊತ್ತಿದೆ. ಸಂದರ್ಭ ಬಂದಾಗ ಅದನ್ನು ಎದುರಿಸುವ ಸಾಮರ್ಥ್ಯ ಸಂಘಟನೆಗೆ ಇದೆ. ಚಾಲೆಂಜ್‌ ಸ್ವೀಕಾರ ಮಾಡುವುದು ಸಂಘಟನೆ, ನಾನಾಗಲಿ ಮತ್ತೊಬ್ಬ ಅಭ್ಯರ್ಥಿಯಾದರೂ ಕಾರ್ಯಕರ್ತರು ಪಕ್ಷವನ್ನು ಗೆಲ್ಲಿಸುತ್ತಾರೆ. 2004, 2008, 2013ರಲ್ಲೂ ಇಂತಹದ್ದೆ ಪ್ರಶ್ನೆ ಉದ್ಭವಗೊಂಡಿತ್ತು. ಜಾತಿ ಲೆಕ್ಕಚಾರ ನಡೆದಿತ್ತು. ಗೆದ್ದಿದ್ದು ಬಿಜೆಪಿ, ಗೆಲ್ಲಿಸಿದ್ದು ಕಾರ್ಯಕರ್ತರು. ಚಾಲೆಂಜ್‌ ಸ್ವೀಕಾರ ಮಾಡುವುದು ಕಾರ್ಯಕರ್ತರು ಎಂದರು.

ಮೋದಿ ಬಂದ ಮೇಲೆ ಪದ್ಮಶ್ರೀ ಪ್ರಶಸ್ತಿ ಹಿರಿಮೆ-ಗರಿಮೆ ಹೆಚ್ಚಾಗಿದೆ: ಸಿ.ಟಿ.ರವಿ

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ. ವೆಂಕಟೇಶ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್‌.ಸಿ. ಕಲ್ಮರಡಪ್ಪ, ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್‌, ಸಿಡಿಎ ಅಧ್ಯಕ್ಷ ಸಿ. ಆನಂದ್‌ ಉಪಸ್ಥಿತರಿದ್ದರು.

click me!