
ಕಲಬುರಗಿ (ಜೂ.12): ನಾನು ಪಿಯುಸಿ ಫೇಲ್ ಅಲ್ಲ, ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಓದಿದ್ದೇನೆ. ಪಾಸ್ ಕೂಡ ಆಗಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಮೂಲಕ ಪಿಯುಸಿ ಫೇಲ್ ಆದ ಪ್ರಿಯಾಂಕ್ ಖರ್ಗೆ ಎಂಜಿನಿಯರ್ ಚಕ್ರವರ್ತಿ ಸೂಲಿಬೆಲೆ ಅವರ ವಿದ್ಯಾರ್ಹತೆ ಕೇಳುತ್ತಿದ್ದಾರೆ ಎಂಬ ಬಿಜೆಪಿಗರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ನನ್ನ ವಿದ್ಯಾರ್ಹತೆ ಏನೆಂಬುದು ಅಫಿಡವಿಟ್‌ನಲ್ಲೇ ಇದೆ. ಬೇಕಿದ್ದರೆ ಅವರಿಗೆ ನ್ಯಾಷನಲ್ ಲಾ ಸ್ಕೂಲ್‌ಗೆ ಹೋಗಿ ನೋಡಲು ಹೇಳಿ. ನಾನು ಪಾಸಾಗಿದ್ದೇನೆ.
ನನ್ನ ಶೈಕ್ಷಣಿಕ ಅರ್ಹತೆ ಅವರಿಗೆ ತಿಳಿಯದೇ ಇರಬಹುದು. ಅದಕ್ಕೆ ನಾನೇನೂ ಉತ್ತರ ಕೊಡಲು ಆಗಲ್ಲ ಎಂದು ಕಿಡಿಕಾರಿದರು. ಇದೇ ವೇಳೆ ಪ್ರಧಾನಿ ಮೋದಿಯವರ ವಿದ್ಯಾರ್ಹತೆ ಬಗ್ಗೆ ಕೆದಕಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರಿಗೆ ನನ್ನ ಕುರಿತು ಅಷ್ಟೊಂದು ಕಾಳಜಿ ಇದ್ದರೆ ಅವರ ಪರಮೋಚ್ಚ ನಾಯಕ (ಮೋದಿ) ಅವರ ವಿದ್ಯಾರ್ಹತೆ ಏನೆಂಬುದನ್ನು ಮೊದಲು ತಿಳಿಸಲು ಹೇಳಿ. ಪ್ರಧಾನಿ ಅವರ ವಿದ್ಯಾರ್ಹತೆ ತಿಳಿಯಲು ಆರ್‌ಟಿಐ ಅರ್ಜಿ ಹಾಕಿದರೆ ಉತ್ತರ ಕೊಡಬೇಡಿ ಎಂದು ಅಧಿಕಾರಿಗಳಿಗೆ ಹೇಳಿಬಿಟ್ಟಿದ್ದಾರೆ.
ಸರ್ಕಾರಿ ಭೂಮಿ ಅರ್ಹರಿಗೆ ಸಿಗಬೇಕು: ಸಚಿವ ದಿನೇಶ್ ಗುಂಡೂರಾವ್
ಅದಕ್ಕಾಗಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಕೇಸ್ ಕೂಡ ಹಾಕಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು. ಶಾಲಾ ಪಠ್ಯ ಪುಸ್ತಕದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಪಠ್ಯ ಸೇರ್ಪಡೆ ಮಾಡಿದ್ದ ಬಿಜೆಪಿ ಸರ್ಕಾರದ ನಡೆಗೆ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ಸೂಲಿಬೆಲೆ ಅವರ ವಿದ್ಯಾರ್ಹತೆಯನ್ನೂ ಪ್ರಶ್ನಿಸಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆ ಅವರ ವಿದ್ಯಾರ್ಹತೆಯನ್ನು ಪ್ರಶ್ನಿಸಿ ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್ ಮಾಡಿದ್ದರು.
ಕಾಂಗ್ರೆಸ್ ಗೆಲ್ಲಿಸಿ ಚಿತ್ತಾಪುರದ ಭವಿಷ್ಯ ಉಳಿಸಿದ್ದೀರಿ: ಬಿಜೆಪಿ ಹಾಗೂ ಅರ್‌ಎಸ್‌ಎಸ್ ಸೇರಿದಂತೆ ಸಂವಿಧಾನ ವಿರೋಧಿಗಳು ಕೂಡಿಕೊಂಡು ನನ್ನ ಸೋಲಿಗೆ ದೊಡ್ಡ ಷಡ್ಯಂತ್ರ ಮಾಡಿದ್ದರು. ಆದರೂ ಮತದಾರರು ಪ್ರಬುದ್ಧರಾಗಿ ಸಿದ್ಧಾಂತದ ಚುನಾವಣೆಯಲ್ಲಿ ನನಗೆ ಅಭೂತಪೂರ್ವ ಗೆಲುವು ನೀಡಿದ್ದಿರಿ. ತಮ್ಮ ಪ್ರಭುದ್ಧತೆಗೆ ನನ್ನ ದೊಡ್ಡ ಸಲಾಂ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್, ಐಟಿ-ಬಿಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ನಡೆದ ಮತದಾರರಿಗೆ ಕೃತಜ್ಞತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ವೈಯಕ್ತಿಕ ಕಾರಣಗಳಿಂದಾಗಿ ಹೆಚ್ಚು ದಿನ ಚುನಾವಣೆ ಪ್ರಚಾರ ಮಾಡಲು ಸಾಧ್ಯವಾಗಿರಲಿಲ್ಲ. ಆದರೂ ನೀವೆಲ್ಲಾ ನಿಮ್ಮ ಮನೆ ಮಗನ ಚುನಾವಣೆ ಎನ್ನುವಂತೆ ಕೆಲಸ ಮಾಡಿ ಗೆಲ್ಲಿಸಿದ್ದೀರಿ. ಈ ಚುನಾವಣೆಯಲ್ಲಿ ಚಿತ್ತಾಪುರ ಯುವಕರ ಭವಿಷ್ಯ ಅಡಗಿತ್ತು. ನೀವೆಲ್ಲಾ ನನ್ನನು ಗೆಲ್ಲಿಸುವ ಮೂಲಕ ಕ್ಷೇತ್ರದ ಭವಿಷ್ಯ ಕಾಪಾಡಿದ್ದೀರಿ ಎಂದು ಭಾವುಕರಾಗಿ ನುಡಿದರು.
ಮುಂಗಾರು ಮಳೆ ಬೆನ್ನಲ್ಲೇ ಕರಾವಳಿಯಲ್ಲಿ ಕಡಲ್ಕೊರೆತ: ಮನೆ, ಅಂಗಡಿಗಳು ಸಮುದ್ರಪಾಲು
ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ಒಂದು ತಿಂಗಳಲ್ಲೆ ಐದು ಗ್ಯಾರಂಟಿಗಳ ಪೈಕಿ ಒಂದನ್ನು ಇಂದು ಜಾರಿಗೊಳಿಸಿದ್ದೇವೆ. ಉಳಿದ 4 ಗ್ಯಾರಂಟಿಗಳನ್ನು ಕೂಡಾ ಶೀಘ್ರದಲ್ಲೆ ಅನುಷ್ಟಾನ ತರಲಿದ್ದೇವೆ. ಆದರೂ ಬಿಜೆಪಿಯವರು ನಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಐದು ಗ್ಯಾರಂಟಿಗಳ ಬಗ್ಗೆ ಜನರಿಗಿರದ ಕಾತುರ ಬಿಜೆಪಿ ನಾಯಕರಿಗೇಕೆ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.