ಸರ್ಕಾರಿ ಭೂಮಿ ಅರ್ಹರಿಗೆ ಸಿಗಬೇಕು: ಸಚಿವ ದಿನೇಶ್‌ ಗುಂಡೂರಾವ್‌

By Kannadaprabha News  |  First Published Jun 12, 2023, 11:55 AM IST

ಆರೆಸ್ಸೆಸ್‌ ಮತ್ತು ಅದರ ಅಂಗ ಸಂಸ್ಥೆಗಳಿಗೆ ನೂರಾರು ಎಕರೆ ಭೂಮಿ ನೀಡಿದ ಹಿಂದಿನ ಸರ್ಕಾರದ ನಿರ್ಧಾರ ಕುರಿತು ಕಾಂಗ್ರೆಸ್‌ ಸರ್ಕಾರ ಮರುಪರಿಶೀಲನೆ ನಡೆಸಲಿದೆ ಎಂಬ ತಮ್ಮ ಹೇಳಿಕೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಸಮರ್ಥಿಸಿಕೊಂಡಿದ್ದಾರೆ.


ಮಂಗಳೂರು (ಜೂ.12): ಆರೆಸ್ಸೆಸ್‌ ಮತ್ತು ಅದರ ಅಂಗ ಸಂಸ್ಥೆಗಳಿಗೆ ನೂರಾರು ಎಕರೆ ಭೂಮಿ ನೀಡಿದ ಹಿಂದಿನ ಸರ್ಕಾರದ ನಿರ್ಧಾರ ಕುರಿತು ಕಾಂಗ್ರೆಸ್‌ ಸರ್ಕಾರ ಮರುಪರಿಶೀಲನೆ ನಡೆಸಲಿದೆ ಎಂಬ ತಮ್ಮ ಹೇಳಿಕೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಸಮರ್ಥಿಸಿಕೊಂಡಿದ್ದಾರೆ. ಸರ್ಕಾರಿ ಭೂಮಿ ಸರಿಯಾದ ಉದ್ದೇಶಕ್ಕೆ ಬಳಕೆಯಾಗಬೇಕು, ಅರ್ಹತೆಯುಳ್ಳ ಸಂಸ್ಥೆಗೆ ಆ ಭೂಮಿ ಸೇರಬೇಕು. ಈ ನಿಟ್ಟಿನಲ್ಲಿ ನಾನು ನೀಡಿದ ಹೇಳಿಕೆ ಎಲ್ಲರಿಗೂ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಪ್ರಥಮ ಬಾರಿಗೆ ಭಾನುವಾರ ಜಿಲ್ಲೆಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯಾರೇ ಆದರೂ ಕಾನೂನು ಪ್ರಕಾರ ಸರ್ಕಾರಿ ಭೂಮಿ ಹಸ್ತಾಂತರ ಆಗಬೇಕು. ಯಾರಿಗೇ ಸರ್ಕಾರಿ ಭೂಮಿ ನೀಡಿದ್ದರೂ ಅದರ ಪರಿಶೀಲನೆ ಆಗಲಿದೆ. ಕಂದಾಯ ಇಲಾಖೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ಇದೇ ವೇಳೆ, ಸರ್ಕಾರದ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನ ಆಗುವಂತೆ ನೋಡಿಕೊಳ್ಳುವುದು, ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ನಮ್ಮ ಆದ್ಯತೆ ಎಂದು ಗುಂಡೂರಾವ್‌ ಹೇಳಿದರು.

Tap to resize

Latest Videos

ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ: ನಕಲಿ ಐಪಿಎಸ್‌ ಅಧಿಕಾರಿ ಪೊಲೀಸರ ಬಲೆಗೆ!

ಸರ್ಕಾರದ ಜನಪರ ಯೋಜನೆಗಳು ಜನರಿಂದ ಕೈತಪ್ಪದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟಸೂಚನೆ ನೀಡಲಾಗಿದೆ. ಸರ್ಕಾರ ಘೋಷಿಸಿದ ಎಲ್ಲ ಭರವಸೆಗಳನ್ನು ಈಡೇರಿಸಲು ಬದ್ಧವಾಗಿದೆ. ನಾವು ನುಡಿದಂತೆ ನಡೆಯುತ್ತೇವೆ. ಹಂತ ಹಂತವಾಗಿ ಎಲ್ಲ ಯೋಜನೆಗಳು ಜಾರಿಯಾಗಲಿವೆ, ಜನರಿಗೆ ಇವುಗಳ ಉಪಯೋಗ ಸಿಗಲಿದೆ ಎಂದರು. ಶಾಂತಿ ಕದಡುವವರ ಮೇಲೆ ಕ್ರಮ: ಶಾಂತಿ, ನೆಮ್ಮದಿ, ಸಾಮರಸ್ಯ ನೆಲೆಯೂರಿದ್ದರೆ ಮಾತ್ರ ಅಭಿವೃದ್ಧಿ ಕಾರ್ಯಗಳು ಸಾಕಾರಗೊಳ್ಳಲು ಸಾಧ್ಯ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ವಿಶೇಷ ಒತ್ತು ನೀಡಲಾಗುವುದು ಎಂದ ಹೇಳಿದರು ದಿನೇಶ್‌ ಗುಂಡೂರಾವ್‌.

ಬೆಂಗಳೂರಿನಲ್ಲೂ ದೆಹಲಿ ರೀತಿ ಮಹಿಳೆಯ ಕೊಂದು ಕತ್ತರಿಸಿ ಎಸೆದರು: ಓರ್ವನ ಬಂಧನ

ಶಾಂತಿ ಕದಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ ಈಗಾಗಲೇ ಸೂಚಿಸಲಾಗಿದೆ ಎಂದು ತಿಳಿಸಿದರು. ಸಾಮರಸ್ಯಕ್ಕೆ ಪ್ರತ್ಯೇಕ ವಿಂಗ್‌ ಅಗತ್ಯ: ದ.ಕ. ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕಾಪಾಡಲು ಆ್ಯಂಟಿ ಕಮ್ಯೂನಲ್‌ ವಿಂಗ್‌ ಸ್ಥಾಪನೆ ವಿಚಾರವನ್ನು ಗೃಹ ಸಚಿವರು ಈಗಾಗಲೇ ಪ್ರಸ್ತಾಪಿಸಿದ್ದಾರೆ. ಇದು ಅವಶ್ಯವೂ ಆಗಿದೆ. ಆದರೆ ಈ ವಿಶೇಷ ಪಡೆ ಯಾರದೋ ದ್ವೇಷ ಸಾಧನೆಗೆ ಸಾಧನವಾಗಬಾರದು, ಸಾಮರಸ್ಯ ಕಾಪಾಡುವ ದಳವಾಗಬೇಕು. ಗೃಹ ಸಚಿವರು ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಗುಂಡೂರಾವ್‌ ಹೇಳಿದರು.

click me!