ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಂತೆ ಬೇರೆ ಪಕ್ಷಗಳ ನಾಯಕರಿಗೆ ನಾವು ಗಾಳ ಹಾಕುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್ ಈಗಾಗಲೇ 93 ಜನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಇನ್ನೂ ಈ ಕೆಲಸ ಸಾಧ್ಯವಾಗಿಲ್ಲ ಎಂದರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಜ.24): ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಂತೆ ಬೇರೆ ಪಕ್ಷಗಳ ನಾಯಕರಿಗೆ ನಾವು ಗಾಳ ಹಾಕುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಆಡಗಲ್ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಜೆಡಿಎಸ್ ಈಗಾಗಲೇ 93 ಜನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಇನ್ನೂ ಈ ಕೆಲಸ ಸಾಧ್ಯವಾಗಿಲ್ಲ ಎಂದರು. ಮುಂದಿನ 15 ದಿನಗಳಲ್ಲಿ ಇನ್ನೂ 50 ರಿಂದ 60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಲಾಗುವುದು ಎಂದರು, ಚುನಾವಣೆಗೆ ಮುನ್ನ ಗಾಳ ಹಾಕಿ ಕರೆತರಲು ಅಮಿತ್ ಶಾ ಸೂಚಿಸಿದ್ದಾರಂತೆ. ಆಪರೇಷನ್ ದಿಂದ ನನಗೆ ಯಾವುದೇ ಸಮಸ್ಯೆ ಇಲ್ಲ.ಯಾರೇ ಹೋದರೂ ತಲೆಕೆಡಿಸಿಕೊಳ್ಳೋದಿಲ್ಲ.ಕಾಲ ಪ್ರತಿಯೊಂದಕ್ಕೂ ಉತ್ತರ ಕೊಡುತ್ತದೆ ಎಂದು ಹೇಳಿದರು.
undefined
ಭವಾನಿ ರೇವಣ್ಣಗೆ ಟಿಕೆಟ್ ಪಕ್ಷದಲ್ಲಿ ಚರ್ಚಿಸಿ ತೀರ್ಮಾನ:
ಭವಾನಿ ರೇವಣ್ಣ ಹಾಸನದಿಂದ ಸ್ಪರ್ಧೆ ಮಾಡುವ ಕುರಿತ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು ಸ್ಪರ್ಧೆ ಮಾಡೋ ಆಸೆ ಇದೆ, ಇರೋದು ತಪ್ಪಾ ಎಂದರಲ್ಲದೆ, ಈ ದೇಶದ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲುವ ಹಕ್ಕು ಎಲ್ಲರಿಗೂ ಇದೆ, ಆದರೆ ಭವಿಷ್ಯದಲ್ಲಿ ರಾಜ್ಯದ ಜನತೆಗೆ ನೀಡುವ ಸಂದೇಶ ಮತ್ತು ಪಕ್ಷ ಸಂಘಟನೆ ದೃಷ್ಟಿಯಿಂದ ಅದನ್ನು ಪಕ್ಷದಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.
ರಾಷ್ಟ್ರೀಯ ಪಕ್ಷಗಳು ಸೋತೆತ್ತಿನ ಬಾಲ ಹಿಡಿದು ಬಂದವರು:
ಸಿಎಂ ಇದ್ದಾಗ ಕುಮಾರಸ್ವಾಮಿ ಪಂಚರತ್ನ ಯಾಕೆ ಮಾಡಲಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಎಚ್ಡಿಕೆ, ಜೆಡಿಎಸ್ ಪಕ್ಷ ಗೆದ್ದೆತ್ತಿನ ಬಾಲ ಹಿಡಿಯೋರು ಅಂತಾ ಅವರೇ ಹೇಳಿದ್ದಾರೆ. ನಾನು ಗೆದ್ದೆತ್ತಿನ ಬಾಲ ಹಿಡಿದಿಲ್ಲ, ಎರಡೂ ರಾಷ್ಟ್ರೀಯ ಪಕ್ಷಗಳು ಸೋತೆತ್ತಿನ ಬಾಲ ಹಿಡಿದು ಬಂದವರು ಎಂದು ವಾಗ್ದಾಳಿ ನಡೆಸಿದರು. ಸಚಿವ ಗೋವಿಂದ ಕಾರಜೋಳ ಕೈ ಮುಗಿದು ದೇವೇಗೌಡರ ಬಳಿ ಸರ್ಕಾರ ಮಾಡೋಣ ಅಂತಾ ದುಂಬಾಲು ಬಿದ್ದರು. ನಾನು ಯಾರ ದುಂಬಾಲು ಬಿದ್ದಿಲ್ಲ. ಆಗ ಎಂಪಿ ಪ್ರಕಾಶ್ ಅವರಿಗೆ ಸಿಎಂ ಆಗೋಕೆ ಹೇಳಿದ್ದೆ, ಆದರೆ ಅವರು ಒಪ್ಪಲಿಲ್ಲ ಎಂದರು. 2013 ರಲ್ಲಿ ನೀವೆ ಸರ್ಕಾರ ಮಾಡಿದಿರಿ, ಆಗ ಸುವರ್ಣ ಗ್ರಾಮ ಕಿತ್ತು ಹಾಕಿದಿರಿ ಎಂದು ದೂರಿದರು.
ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಇದ್ದಾಗ ನನ್ನನ್ನು ಗುಮಾಸ್ತನಂತೆ ನೋಡಿಕೊಂಡರು. ಹಿಂದೆ ನೀವೇಕೆ ಪಂಚರತ್ನ ಯಾತ್ರೆ ಯಾಕೆ ಮಾಡಲಿಲ್ಲ ಅಂತಾ ಹೇಳ್ತಾರೆ, ಯಾವ ಅನ್ ಡಿಕಂಡಿಷನ್ ಸಪೋರ್ಟ್ ಇತ್ತು ಇವರದ್ದು. ನೀವೇ ಸಿಎಂ ಆಗಬೇಕು ಅಂತಾ ಅಂದಿದ್ದಿರಲ್ಲ, ಇನ್ನೂ ಬದುಕಿದ್ದೀರಿ ಎಲ್ಲರೂ ನಿಜ ಹೇಳಿ ಎಂದರು. ನಾಚಿಕೆ ಆಗಲ್ವ ಸುಳ್ಳು ಹೇಳೋಕೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸಿಎಂ ಇದ್ದಾಗ ನನ್ನನ್ನು ಗುಮಾಸ್ತನಂತೆ ಮಾಡಿದರು. ನಾನವಾಗ ವಿಷಕಂಠನಂತೆ ಇದ್ದೆ. ಇಲಾಖೆಗಳ ರಿವೀವ್ ಮಾಡೋ ಹಾಗಿರಲಿಲ್ಲ ಎನ್ನುವ ಸತ್ಯ ಬಿಚ್ಚಿಟ್ಟರು.
ಕಾಂಗ್ರೆಸ್‌ನಿಂದ ಬೆಂಗ್ಳೂರು ಹಾಳು: ಸಿಎಂ ಬೊಮ್ಮಾಯಿ
ನಾನು ಕೆಸಿ ವ್ಯಾಲಿ, ಎತ್ತಿನ ಹೊಳೆಗೂ ವಿರೋಧ ಮಾಡಿಲ್ಲ. ಯಾರ ಕುತ್ತಿಗೆ ಹೊಡೆದು ಕಿಸೆ ತುಂಬಿಕೊಂಡಿದ್ದೀರಿ ಗೊತ್ತಿಲ್ವ ನಿಮಗೆ. ಅವತ್ತು ಕೆಸಿ ವ್ಯಾಲಿ ಮಾಡಿದ್ದು ನಿಮ್ಮ ಜೇಬು ತುಂಬಿಸೋಕೆ ಮಾಡಿದ್ದು. ಬಿಜೆಪಿ ಬಿ ಟೀಂ ಅಂತಾ ಹೇಳುತ್ತೀರಿ ಉತ್ತರ ಕೊಡಿ ಎಂದರು. ಎರಡೂ ರಾಷ್ಟ್ರೀಯ ಪಕ್ಷಗಳು ಉತ್ತರ ಕರ್ನಾಟಕವನ್ನು ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುತ್ತಿವೆ. ಜನರ ಸಮಸ್ಯೆ ನಿರ್ಲಕ್ಷ್ಯ ಕಂಡಿದ್ದು, ಜನ ಆಯ್ಕೆ ಮಾಡ್ತಾರೆ ಅಂದುಕೊಂಡಿದ್ದಾರೆ. ಉಕ. ಭಾಗದ ಹಲವಾರು ಕಡೆಗಳಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳನ್ನು ಜನ ಅನುಭವಿಸುತ್ತಿದ್ದಾರೆ. ರಸ್ತೆಗಳು ಯಾವವೂ ಸರಿಯಿಲ್ಲ ಎಂಬುದನ್ನು ಯಾತ್ರೆ ಯಲ್ಲಿ ಕಂಡಿದ್ದೇನೆ. ಅಭಿವೃದ್ಧಿ ತೋರಿಸಿದ್ದಾರೆ. ಹಣ ಎಲ್ಲಿಗೆ ಹೋಗುತ್ತಿದೆ ಗೊತ್ತಿಲ್ಲ.
ASSEMBLY ELECTION: ಬಿಜೆಪಿ ಆಪರೇಷನ್‌ಗೆ ಯಾರೇ ಹೋದರೂ ಜೆಡಿಎಸ್‌ಗೆ ಸಮಸ್ಯೆಯಿಲ್ಲ: ಕುಮಾರಸ್ವಾಮಿ
ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಹಳ್ಳಿಗಳ ಹೆಣ್ಣುಮಕ್ಕಳ ಒಂದೇ ಒಂದು ಬೇಡಿಕೆ ಶೌಚಾಲಯ ಬೇಡಿಕೆ. ಬಯಲು ಶೌಚ ಮುಕ್ತ ಅಂತಾ ರೆಕಾರ್ಡ್ ನಲ್ಲಿ ತೋರಿಸುತ್ತಿದ್ದಾರೆ. ಆದರೆ ಯಾವುದೇ ಶೌಚಾಲಯ ಕಾಣಿಸುತ್ತಿಲ್ಲ. ಈಗ ಜಲಮಿಷನ್ ಅಂತ ಹೇಳಿ, ಜಲಮಿಷನ್ ಹೆಸರಿನಲ್ಲಿ ಜೋಡಿಸಿರುವ ನಲ್ಲಿಗಳಲ್ಲಿ ಟ್ಯಾಪ್ ಗಳೇ ಇಲ್ಲ. ಜಲಮಿಷನ್ ಯೋಜನೆಯಲ್ಲಿ ಲೂಟಿ ತಾಂಡವ ಆಡುತ್ತಿದೆ. ಯೋಜನೆಯಡಿ ಶುದ್ಧ ನೀರು ಕೊಡುವಲ್ಲಿ ಸರ್ಕಾರಗಳು ಎಡವಿದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಬಾದಾಮಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.