ಆಪರೇಷನ್ ಮಾಡಿ ಅಭ್ಯರ್ಥಿಗಳನ್ನು ಸೆಳೆದುಕೊಳ್ಳುವುದರಿಂದ ನನಗೆ ಯಾವುದೇ ಸಮಸ್ಯೆ ಇಲ್ಲ.
ಜೆಡಿಎಸ್ ತೊರೆದು ಯಾರೇ ಹೋದರೂ ನಾನು ತಲೆಕೆಡಿಸಿಕೊಳ್ಳೋದಿಲ್ಲ.
ಎರಡನೇ ಹಂತದಲ್ಲಿ 15 ದಿನದಲ್ಲಿ 60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಬಾಗಲಕೋಟೆ (ಜ.24): ರಾಜ್ಯದ ಮುಂಬರುವ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಗೆಲ್ಲುವ ಕಸರತ್ತು ಮಾಡುತ್ತಿವೆ. ಅದಕ್ಕಾಗಿ ನಮ್ಮ ಪಕ್ಷದಿಂದ ಹಲವು ನಾಯಕರಿಗೆ ಆಪರೇಷನ್ ಮೂಲಕ ಗಾಳ ಹಾಕುತ್ತಿರುವುದು ಕಂಡುಬಂದಿದೆ. ಆದರೆ. ಇದರಿಂದ ನನಗೆ ಅಥವಾ ನಮ್ಮ ಪಕ್ಷಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆಯುತ್ತಿರುವ ಬಾಗಲಕೋಟೆ ಜಿಲ್ಲೆಯ ಆಡಗಲ್ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರಿಗೆ ಬಿಜೆಪಿ ಗಾಳ ಹಾಕುತ್ತಿರುವ ಹಿನ್ನೆಲೆಯಲ್ಲಿ ಬೇರೆ ಪಕ್ಷಗಳ ಅಭ್ಯರ್ಥಿಗಳಿಗೆ ಗಾಳ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾನು ಯಾತಕ್ಕೆ ಗಾಳ ಹಾಕಲಿ. ಯಾಕೆ ಹಾಕಬೇಕು.? ಈವರೆಗೆ ನಾನು ಜೆಡಿಎಸ್‌ನಿಂದ ಸ್ಪರ್ಧೆ ಮಾಡಲಿರುವ 93 ಜನರ ಮೊದಲ ಪಟ್ಟಿಯನ್ನು ನಾನು ಬಿಡುಗಡೆ ಮಾಡಿದ್ದೇನೆ. ಎರಡು ಪಕ್ಷಗಳಿಗೆ ಇನ್ನೂ ಮಾಡಲಿಕ್ಕಾಗಿಲ್ಲ. ಮುಂದಿನ 15 ದಿನದಲ್ಲಿ 50 ರಿಂದ 60 ಅಭ್ಯರ್ಥಿಗಳ ಪಟ್ಟಿಯನ್ನು ಎರಡನೇ ಹಂತದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
undefined
ಸಿದ್ದರಾಮಯ್ಯ ಷಡ್ಯಂತ್ರ ಬಿಚ್ಚಿಡಬೇಕಾ: ಎಚ್.ಡಿ.ಕುಮಾರಸ್ವಾಮಿ
ಯಾರೇ ಹೋದರೂ ನಾನು ತಲೆಕೆಡಿಸಿಕೊಳ್ಳೋದಿಲ್ಲ:
ಯಾವ ಪಕ್ಷದವರಿಗೂ ನಾವು ಅರ್ಜಿ ಹಾಕಿಕೊಂಡಿಲ್ಲ. ನೀವೆ ಟಿವಿಯಲ್ಲಿ ತೋರಸ್ತೀರಿ ಅಲ್ವಾ.? ರಾಜ್ಯದ ಚುನಾವಣೆಗೆ ಮುನ್ನ ಇತರೆ ಪಕ್ಷಗಳ ಗೆಲ್ಲುವ ಅಭ್ಯರ್ಥಿಗಳನ್ನು ಗುರುತಿಸಿ ಗಾಳ ಹಾಕಿ ಕರೆತರಲು ಅಮಿತ್ ಶಾ ಸೂಚನೆ ನೀಡಿದ್ದಾರಂತೆ. ಆಪರೇಷನ್ ಮಾಡಿ ಅಭ್ಯರ್ಥಿಗಳನ್ನು ಸೆಳೆದುಕೊಳ್ಳುವುದರಿಂದ ನನಗೆ ಯಾವುದೇ ಸಮಸ್ಯೆ ಇಲ್ಲ. ಯಾರೇ ಹೋದರೂ ನಾನು ತಲೆಕೆಡಿಸಿಕೊಳ್ಳೋದಿಲ್ಲ. ಕಾಲ ಪ್ರತಿಯೊಂದಕ್ಕೂ ಉತ್ತರ ಕೊಡುತ್ತದೆ. ನಾನು ಈ ಬಾರಿ ಜನರ ಸಂಪೂರ್ಣ ಬೆಂಬಲ ಕೇಳಿದ್ದೀನಿ ಎಂದ ಕುಮಾರಸ್ವಾಮಿ ತಿಳಿಸಿದರು.
ದೇಶದಲ್ಲಿ ಎಲ್ಲರಿಗೂ ಸ್ಪರ್ಧೆ ಮಾಡುವ ಆಸೆಯಿರುತ್ತದೆ:
ಭವಾನಿ ರೇವಣ್ಣ ಅವರಿಗೆ ಹಾಸನದಿಂದ ಸ್ಪರ್ಧೆ ಮಾಡುವ ಆಸೆಯಿದೆ. ಹೀಗೆ ಶಾಸಕರಾಗಿ ಆಯ್ಕೆ ಆಗುವುದಕ್ಕೆ ಆಸೆ ಇರೋದು ತಪ್ಪಾ.? ಈ ದೇಶದಲ್ಲಿ ಚುನಾವಣೆಗೆ ನಿಲ್ಲಬೇಕೆನ್ನುವ ಹಕ್ಕು ಯಾರಿಗೆ ಬೇಕಾದರೂ ಇದೆ. ಈ ದೇಶದ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ನಿಲ್ಲುವ ಹಕ್ಕಿದೆ. ಆದರೆ, ರಾಜ್ಯದ ಜನತೆಗೆ ಸಂದೇಶ ಕೊಡುವ ದೃಷ್ಠಿಯಿಂದ ಹಾಗೂ ಪಕ್ಷದ ಸಂಘಟನಾ ದೃಷ್ಟಿಯಿಂದ ಎನು ಕ್ರಮ ತಗೊಬೇಕು ಅದನ್ನ ಪಕ್ಷದ ತೀರ್ಮಾನದಲ್ಲಿ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಜೆಡಿಎಸ್‌ನತ್ತ ಬಿಜೆಪಿ-ಕಾಂಗ್ರೆಸ್ ಮುಖಂಡರ ಚಿತ್ತ..!
ಹಾಸನದ ಅಭ್ಯರ್ಥಿಯಾಗಿ ನ್ನ ಹೆಸರಿ ಘೋಷಣೆ- ಭವಾನಿ ರೇವಣ್ಣ: ಹಾಸನ ತಾಲ್ಲೂಕಿನ, ಸಾಲಗಾಮೆ ಹೋಬಳಿ, ಕಕ್ಕೇನಹಳ್ಳಿ ಗ್ರಾಮದಲ್ಲಿ ದೇವಸ್ಥಾನ ಉದ್ಘಾಟನೆ ಮಾಡಿ ಮಾತನಾಡಿದ ಭವಾನಿ ರೇವಣ್ಣ ಅವರು, ಬೇರೆ ಎಲ್ಲಿ ಬೇಕಾದರೂ ಜಾತಿ ಮಾಡಲಿ, ನಮಗೆ ಅದರ ಗಂಧವೇ ಗೊತ್ತಿಲ್ಲ ಅನ್ನುವ ರೀತಿ ಕುಳಿತಿರುವ ಮುಸ್ಲಿಂ ಬಾಂಧವರಿಗೆ ವಿಶೇಷವಾಗಿ ಅವರಿಗೆ ವಂದನೆ ಸಲ್ಲಿಸುತ್ತೇನೆ. ಕಳೆದ ಭಾರಿ ಹಾಸನ ವಿಧಾನಸಭಾ ಕ್ಷೇತ್ರ ಬಿಜೆಪಿ ಕ್ಷೇತ್ರವಾಗಿ ಕೆಲವು ಕೆಲಸ, ಕಾರ್ಯಗಳು ಉಳಿದುಕೊಂಡಿವೆ.
ಇನ್ನೇನು 90 ದಿನಗಳಲ್ಲಿ ನಮ್ಮ ಚುನಾವಣೆ ಮುಗಿದು ಹೋಗಿರುತ್ತದೆ. ಈ ಸಂದರ್ಭದಲ್ಲಿ ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಎಲ್ಲರೂ ಕೂಡ ಮಾತನಾಡಿಕೊಂಡು, ನಿರ್ಣಯ ತಗೊಂಡಿದ್ದಾರೆ. ಹಾಗಾಗಿ ಇನ್ನು ಸ್ವಲ್ಪ ದಿವಸದಲ್ಲೇ ನಮ್ಮ ಹೆಸರು ಕೂಡ ಹೇಳುತ್ತಾರೆ. ಹಾಗಾಗಿ ಊರೂರುಗಳಲ್ಲಿ ನನಗೆ ಜನ ಪರಿಚಯ ಇದ್ದರೆ, ಊರು ಪರಿಚಯ ಇದ್ದರೆ ನನಗೂ ಕೂಡ ಒಳ್ಳೆಯದು. ಮುಂದಿನ ದಿನಗಳಲ್ಲಿ ಕೆಲಸ ಮಾಡಲು ಭಗವಂತ ಆಶೀರ್ವಾದ ಮಾಡಲಿ ಅಂತ ಭಗವಂತನಲ್ಲಿ ಬೇಡಿದ್ದೇನೆ ಎಂದು ಭವಾನಿ ರೇವಣ್ಣ ಹೇಳಿದರು.