ಸಾವಿನ ಮನೆಯಲ್ಲಿ ಮಾಜಿ ಶಾಸಕರು ರಾಜಕೀಯ ಮಾಡುವುದು ಸರಿಯಲ್ಲ, ಅದು ಯಾರಿಗೂ ಶೋಭೆ ತರಲ್ಲ, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿರುಗೇಟು ನೀಡಿದರು.
ಮಧುಗಿರಿ (ಸೆ.25) : ಸಾವಿನ ಮನೆಯಲ್ಲಿ ಮಾಜಿ ಶಾಸಕರು ರಾಜಕೀಯ ಮಾಡುವುದು ಸರಿಯಲ್ಲ, ಅದು ಯಾರಿಗೂ ಶೋಭೆ ತರಲ್ಲ, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿರುಗೇಟು ನೀಡಿದರು.
Tumakuru: ಸಂಕಷ್ಟದ ನಡುವೆಯೂ ಈಡಿಗ ಸಮುದಾಯದಿಂದ ಸಾಧನೆ: ಶಾಸಕ ಕುಮಾರ್ ಬಂಗಾರಪ್ಪ
ಶನಿವಾರ ತಾಲೂಕಿನ ಕಂಬದಹಳ್ಳಿಯಲ್ಲಿ 50 ಲಕ್ಷ ರು. ವೆಚ್ಚದ ಮನೆ ಮನೆಗೆ ಗಂಗೆ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಗುರುವಾರ ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಬಗ್ಗೆ ಮಾಜಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು. ನನ್ನ ಸಹೋದರ ಪಾತರಾಜು ಕೊರಟಗೆರೆ, ಶಿರಾ ಹಾಗೂ ತುಮಕೂರಿನಲ್ಲಿ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸಿ ಜನಸ್ನೇಹಿಯಾಗಿ ಕೆಲಸ ಮಾಡಿರುವುದು ಜನತೆಗೆ ಗೊತ್ತಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮುಖ್ಯಮಂತ್ರಿ ಪರಿಹಾರ ನಿಧಿಯ ಅಧಿಕಾರಿಯಾಗಿದ್ದು ಮಧುಗಿರಿ ಜನತೆಗೆ ಸಹಾಯ ಮಾಡಿದ್ದಾನೆ. ಆದರೆ ಅದನ್ನು ಸಹಿಸದೆ ಇಂಡಿ ಕ್ಷೇತ್ರಕ್ಕೆ ವರ್ಗ ಮಾಡಿಸಿದ್ದು ಕೆಎನ್ ರಾಜಣ್ಣ. ಈ ಹಿಂದೆ ನನ್ನ ತಮ್ಮನ ಕರ್ತವ್ಯವನ್ನು ಹೊಗಳಿದ್ದ ಇವರೇ ಇಂದು ಕ್ರಿಮಿನಲ್ ಎಂದು ಮಾಡಿರುವ ಇವರ ಆರೋಪದಲ್ಲಿ ಯಾವುದೇ ಉರುಳಿಲ್ಲ. ಏಕವಚನ ಪದ ಬಳಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಗುಡುಗಿದರು.
ತನಿಖೆಗೆ ಸಹಕಾರ: ಮಿಡಿಗೇಶಿಯಲ್ಲಿ ನಡೆದ ಈ ಜೋಡಿ ಕೊಲೆಯ ಬಗ್ಗೆ ಪೊಲೀಸರಿಗೆ ಸಮಗ್ರವಾದ ಮಾಹಿತಿಯಿದ್ದು ರಾಜಕೀಯ ಉದ್ದೇಶ ಹೊಂದಿಲ್ಲ. ಪೊಲೀಸರು ಕಾನೂನು ಪ್ರಕಾರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.ಅದನ್ನು ಪೋಲಿಸರು ಮಾಡುತ್ತಾರೆ. ಈ ವಿಚಾರವನ್ನು ಸದನದಲ್ಲಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲಿದ್ದು ಅವಕಾಶ ಸಿಗಲಿಲ್ಲ. ಆದರೂ ಗೃಹ ಮಂತ್ರಿಗಳ ಬಳಿ ಮಾತನಾಡಿದ್ದು ಸೂಕ್ತ ತನಿಖೆಗೆ ಸೂಚಿಸಿದ್ದಾರೆ ಎಂದರು.
ದಲಿತ ಮಹಿಳೆಯ ಶವ ಹೂಳಲು ಸ್ಥಳವಿಲ್ಲ; ರಸ್ತೆಯಲ್ಲಿ ಶವವಿಟ್ಟು ಗ್ರಾಮಸ್ಥರಿಂದ ಪ್ರತಿಭಟನೆ
ಗುಣಮಟ್ಟದ ಕೆಲಸಕ್ಕೆ ಸೂಚನೆ: ಮನೆ ಮನೆಗೆ ಗಂಗೆ ಯೋಜನೆಯು ಉತ್ತಮ ಕೆಲಸವಾಗಿದ್ದು, 50 ಲಕ್ಷ ವೆಚ್ಚದಲ್ಲಿ ಆರಂಭವಾಗಿದೆ. ಗುಣಮಟ್ಟದಲ್ಲಿ ರಾಜಿಯಾಗದೆ ಶೀಘ್ರವಾಗಿ ಕೆಲಸ ಪೂರ್ಣಗೊಳಿಸಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರವಿಕುಮಾರ್, ತಾಪಂ ಮಾಜಿ ಸದಸ್ಯ ನಾಗಭೂಷಣ್, ಪುರಸಭೆ ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಸ್. ಚಂದ್ರಶೇಖರ್‌ಬಾಬು, ಮುಖಂಡರಾದ ತುಂಗೋಟಿ ರಾಮಣ್ಣ, ತಿಮ್ಮಣ್ಣ, ಗೋವಿಂದರಾಜು, ಸತೀಶ್, ಗ್ರಾಪಂ ಸದಸ್ಯರಾದ ಫ್ರಭು, ಗಣೇಶ್, ಸಿದ್ದೇಶ್, ಪಿಡಿಓ ಅಂಬಿಕಾ, ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ಎಇಇ ರಾಮದಾಸು, ಗುತ್ತಿಗೆದಾರ ಬಸವರಾಜ್‌ಗೌಡ ಮುಖಂಡರಾದ ಡಿವಿಹಳ್ಳಿ ರಾಮು ಹಾಗೂ ಇತರರಿದ್ದರು.