ಭಾರತ್‌ ಜೋಡೋ ಪಾದಯಾತ್ರೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ; ವಿ.ಎಸ್.ಉಗ್ರಪ್ಪ

By Kannadaprabha News  |  First Published Sep 25, 2022, 12:09 PM IST

 ಈಸ್ಟ್‌ ಇಂಡಿಯಾ ಕಂಪನಿಗಿಂತಲೂ ಕ್ರೂರವಾದಂತಹ ಸರ್ಕಾರವನ್ನು ಬಿಜೆಪಿ ಸರ್ಕಾರ ನೀಡುತ್ತಿದ್ದು, ಇದರಿಂದ ದೇಶದ ಜನರನ್ನು ಮುಕ್ತಗೊಳಿಸಿ ಜನರಿಗೆ ನೆಮ್ಮದಿಯ ಜೀವನ ಸಾಗಿಸಲಿಕ್ಕೆ  ರಾಹುಲ್‌ ಗಾಂಧಿ ಭಾರತ್‌ ಜೋಡೋ ಪಾದಯಾತ್ರೆ ಹಮ್ಮಿಕೊಂಡಿದ್ದು, ಇದು ದೇಶದ ಎರಡನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಹೇಳಿದರು.


ಕಂಪ್ಲಿ (ಸೆ.25) : ಈಸ್ಟ್‌ ಇಂಡಿಯಾ ಕಂಪನಿಗಿಂತಲೂ ಕ್ರೂರವಾದಂತಹ ಸರ್ಕಾರವನ್ನು ಬಿಜೆಪಿ ಸರ್ಕಾರ ನೀಡುತ್ತಿದ್ದು, ಇದರಿಂದ ದೇಶದ ಜನರನ್ನು ಮುಕ್ತಗೊಳಿಸಿ ಜನರಿಗೆ ನೆಮ್ಮದಿಯ ಜೀವನ ಸಾಗಿಸಲಿಕ್ಕೆ ಅನುವು ನೀಡಿ, ದೇಶವನ್ನು ಐಕ್ಯಗೊಳಿಸುವ ದೃಷ್ಟಿಯಲ್ಲಿ ರಾಹುಲ್‌ ಗಾಂಧಿ ಭಾರತ್‌ ಜೋಡೋ ಪಾದಯಾತ್ರೆ ಹಮ್ಮಿಕೊಂಡಿದ್ದು, ಇದು ದೇಶದ ಎರಡನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಹೇಳಿದರು. ಶನಿವಾರ ಇಲ್ಲಿ ನಡೆದ ಭಾರತ್‌ ಜೋಡೋ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ, Bharat Jodo Yatra ವಿರುದ್ಧ ಹೈಕೋರ್ಟ್‌ಗೆ ಅರ್ಜಿ!

Latest Videos

undefined

ಅದಾನಿ, ಅಂಬಾನಿಯವರ ಪೋಷಕರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಜಿಎಸ್‌ಟಿ ಹೇರಿಕೆ, ಬೆಲೆ ಏರಿಕೆಯ ಮೂಲಕ ದೇಶದ ಜನ ಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ನೂಕಿದ್ದಾರೆ. ನರೇಂದ್ರ ಮೋದಿ, ತಮ್ಮ ರಾಜಕೀಯ ಲಾಭಕ್ಕಾಗಿ ಧರ್ಮ ಧರ್ಮಗಳ ಮಧ್ಯೆ, ಜಾತಿ-ಜಾತಿಗಳ ಮಧ್ಯೆ ದ್ವೇಷ ಬಿತ್ತಿ ಅಣ್ಣ ತಮ್ಮಂದಿರಂತಿದ್ದ ಭಾರತೀಯರನ್ನು ಒಡೆಯುವ ಕೆಲಸ ಮಾಡಿದ್ದಾರೆ. ಬಿಜೆಪಿಯ ಕುತಂತ್ರವನ್ನು ಖಂಡಿಸಿ ದೇಶದ ಪ್ರತಿಯೊಬ್ಬರಲ್ಲೂ ಐಕ್ಯತೆಯ ಮನೋಭಾವವನ್ನು ಬಿತ್ತುವ ಜೊತೆಗೆ ದೇಶದಲ್ಲಿನ ಬದಲಾವಣೆಯ ದೃಷ್ಟಿಯಿಂದ ಈ ಭಾರತ್‌ ಜೋಡೋ ಪಾದಯಾತ್ರೆಗೆ ರಾಹುಲ್‌ ಗಾಂಧಿ ಮುಂದಾಗಿದ್ದು, ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ತಿಳಿಸಿದರು.

ಶಾಸಕ ಜೆ.ಎನ್‌. ಗಣೇಶ್‌ ಮಾತನಾಡಿ, ದೇಶದ ಐಕ್ಯತೆಯ ದೃಷ್ಟಿಯಲ್ಲಿ ಭಾರತ್‌ ಜೋಡೋ ಯಾತ್ರೆ ಹಮ್ಮಿಕೊಂಡಿರುವ ರಾಹುಲ್‌ ಗಾಂಧಿ ಅ. 19ರಂದು ಬಳ್ಳಾರಿಗೆ ಆಗಮಿಸಲಿದ್ದು, ಕ್ಷೇತ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಶ್ರೀಧರಬಾಬು, ರಾಜ್ಯಸಭಾ ಸದಸ್ಯರಾದ ಎಲ್‌. ಹನುಮಂತಯ್ಯ, ಸಯ್ಯದ್‌ ನಾಸೀರ್‌ ಹುಸೇನ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್‌. ಮಂಜುನಾಥ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್‌ ಗ್ರಾಮಾಂತರ ಸಮಿತಿ ಅಧ್ಯಕ್ಷ ಬಿ.ವಿ. ಶಿವಯೋಗಿ, ನಗರ ಸಮಿತಿ ಅಧ್ಯಕ್ಷ ರಫೀಕ್‌, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ. ವೀಣಾ ಮಹಾಂತೇಶ್‌, ಕುರುಗೋಡು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಂಗಿ ಮಲ್ಲಯ್ಯ, ಕಾಂಗ್ರೆಸ್‌ ಮುಖಂಡರಾದ ಹಬೀಬ್‌ ರೆಹೆಮಾನ್‌, ಸಯ್ಯದ್‌ ಉಸ್ಮಾನ್‌, ಕೆ. ಮನೋಹರ, ಸುಧೀರ್‌, ಬೂದುಗುಂಪಿ ಹುಸೇನ್‌ ಸಾಬ್‌, ಜಾಫರ್‌, ಭಟ್‌ ಪ್ರಸಾದ್‌ ಸೇರಿದಂತೆ ಇತರರಿದ್ದರು. ಬಳಿಕ ಭಾರತ್‌ ಜೋಡೋ ಪಾದಯಾತ್ರೆಯ ಬಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.

ಹೊಸಪೇಟೆಯಲ್ಲಿ ಭಾರತ ಜೋಡೋ ಪೂರ್ವಭಾವಿ ಸಭೆ

ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಭಾರತ ಜೋಡೊ ಐಕ್ಯತಾ ಪಾದಯಾತ್ರೆ ನಿಮಿತ್ತ ವಿಜಯನಗರ ವಿಧಾನಸಭಾ ಕ್ಷೇತ್ರದ ಪೂರ್ವಸಿದ್ಧತಾ ಸಭೆ ಜರುಗಿತು. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಾಬು ಮಾತನಾಡಿ, ಬಳ್ಳಾರಿಯಲ್ಲಿ ಅಕ್ಟೋಬರ್‌ 19ರಂದು ಬೃಹತ್‌ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಹುಲ್‌ ಗಾಂಧಿ ಮಾತನಾಡಲಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರದ ಎಲ್ಲ ಆಕಾಂಕ್ಷಿಗಳು ಒಗ್ಗಟ್ಟಾಗಿ ಕನಿಷ್ಟ50 ಸಾವಿರ ಜನರನ್ನು ಸೇರಿಸಿ ಸಭೆ ಯಶಸ್ವಿ ಮಾಡಬೇಕು ಎಂದರು.

ಅಲ್ಲಿ ಜೋಡೋ ಯಾತ್ರೆ..ಇಲ್ಲಿ ಛೋಡೋ ಪಾಲಿಟಿಕ್ಸ್:ಸಿದ್ದು ಶಿಷ್ಯರಿಗೆ ಭಾರತ್ ಜೋಡೋದಿಂದ ಗೇಟ್‌ಪಾಸ್..!

ರಾಜ್ಯ ಸಭಾ ಸದಸ್ಯ ಡಾ. ಸೈಯ್ಯದ್‌ ನಾಸೀರ್‌ ಹುಸೇನ್‌, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ಮಾಜಿ ಶಾಸಕ ಅನಿಲ್‌ ಲಾಡ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್‌.ಮಂಜುನಾಥ್‌, ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ಎಸ್‌. ಮೊಹಮ್ಮದ್‌ ರಫೀಕ್‌, ಮುಖಂಡರಾದ ಎಚ್‌.ಎನ್‌.ಇಮಾಮ್‌ ನಿಯಾಜಿ, ರಘು ಗುಜ್ಜಲ, ಗುಜ್ಜಲ ನಾಗರಾಜ್‌, ರಾಜಶೇಖರ್‌ ಹಿಟ್ನಾಳ್‌, ನಿಂಬಗಲ್‌ ರಾಮಕೃಷ್ಣ, ಬೆಣಕಲ್‌ ಬಸವರಾಜ, ಬಿ.ಎಂ. ಪಾಟೀಲ್‌, ವೀಣಾ ಮಹಾಂತೇಶ, ಅಮ್ಜದ್‌ ಪಟೇಲ್‌, ವಿನಾಯಕ ಶೆಟ್ಟರ್‌, ಸಿ.ಖಾಜಾ ಹುಸೇನ್‌, ಎಲ್‌.ಸಿದ್ದನಗೌಡ, ಎಂ.ಸಿ.ವೀರಸ್ವಾಮಿ, ಭಾಗ್ಯಲಕ್ಷ್ಮಿ ಭರಾಡೆ, ಮುನ್ನಿಕಾಸಿಂ ಮತ್ತಿತರರಿದ್ದರು.

click me!