ಜನಪ್ರತಿನಿಧಿಗಳಾಗುವ ತನಕ ಮಾತ್ರ ರಾಜಕಾರಣ ಮಾಡಬೇಕು. ಗೆದ್ದ ನಂತರ ರಾಜಕಾರಣ ಮಾಡುವುದನ್ನು ಬಿಟ್ಟು ತಮ್ಮ ಕ್ಷೇತ್ರ ಮತ್ತು ಜನರ ಅಭಿವೃದ್ಧಿ ಶ್ರಮಿಸಿದಾಗ ಮಾತ್ರ ಮುಂದಿನ ಬಾರಿಯೂ ಜನತೆ ನಮ್ಮನ್ನೇ ಆಯ್ಕೆ ಮಾಡುತ್ತಾರೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಕೋಲಾರ (ಜು.30): ಜನಪ್ರತಿನಿಧಿಗಳಾಗುವ ತನಕ ಮಾತ್ರ ರಾಜಕಾರಣ ಮಾಡಬೇಕು. ಗೆದ್ದ ನಂತರ ರಾಜಕಾರಣ ಮಾಡುವುದನ್ನು ಬಿಟ್ಟು ತಮ್ಮ ಕ್ಷೇತ್ರ ಮತ್ತು ಜನರ ಅಭಿವೃದ್ಧಿ ಶ್ರಮಿಸಿದಾಗ ಮಾತ್ರ ಮುಂದಿನ ಬಾರಿಯೂ ಜನತೆ ನಮ್ಮನ್ನೇ ಆಯ್ಕೆ ಮಾಡುತ್ತಾರೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ತಾಲೂಕಿನ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಸುಗಟೂರಿನಲ್ಲಿ 2023-24 ನೇ ಸಾಲಿನ ನರೇಗಾ ಯೋಜನೆಯಲ್ಲಿ ಸಂಜೀವಿನಿ ಶೆಡ್ ಹಾಗೂ ಗ್ರಾಪಂ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಜನಪ್ರತಿನಿಧಿಗಳಾದವರ ಮಧ್ಯೆ ಸಣ್ಣಪುಟ್ಟವೈಮನಸ್ಸು ಇದ್ದರೂ ಅಭಿವೃದ್ಧಿಯ ದೃಷ್ಟಿಯಿಂದ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಎಂದರು.
ಗ್ರಾಪಂಗಳಿಗೆ ಸಾಕಷ್ಟು ಅನುದಾನ: ವೋಟ್‌ಗಾಗಿ ಮಾತ್ರ ನಾವು ಎಲ್ಲರೂ ರಾಜಕಾರಣ ಮಾಡೋಣ, ಅಭಿವೃದ್ಧಿಗಾಗಿ ರಾಜಕಾರಣ ಮಾಡುವುದು ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಅಭಿವೃದ್ಧಿಯ ಮಾಡಿದಾಗ ಮಾತ್ರ ನಮ್ಮನ್ನು ಆಯ್ಕೆ ಮಾಡಿದ ಜನರ ಸೇವೆ ಮಾಡಿದ ತೃಪ್ತಿ ನಮಗೆಲ್ಲ ಸಿಗುತ್ತದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಾಕಷ್ಟುಅನುದಾನ ಬಿಡುಗಡೆಯಾಗುತ್ತದೆ ಗ್ರಾಮಗಳಲ್ಲಿ ಸಿಮೆಂಟ್ ರಸ್ತೆ, ಚರಂಡಿ, ಲೈಟು,ಕುಡಿಯುವ ನೀರು ಕೊಡುವುದು ಸೇರಿದಂತೆ ನರೇಗಾ ಯೋಜನೆಯಲ್ಲಿ ವೈಯಕ್ತಿಕವಾಗಿ ಸ್ವಂತ ಜಮೀನಿಗಳಲ್ಲೂ ಅಭಿವೃದ್ಧಿ ಪಡೆಸಿಕೊಳ್ಳಬಹುದಾಗಿದೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
undefined
ಕೋಲಾರ ಜಿಲ್ಲೆಗೆ ನೀಡಿರುವ ಅನುದಾನವನ್ನು ಸದ್ಬಳಿಸಿಕೊಳ್ಳಿ: ಸಚಿವ ದಿನೇಶ್
ಮಾದರಿ ಗ್ರಾಪಂ ಮಾಡಲು ಸಹಕಾರ: ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಮಾತನಾಡಿ, ಸುಗಟೂರು ಗ್ರಾಪಂ ಮತ್ತು ಹೋಬಳಿಯ ಎಲ್ಲಾ ಗ್ರಾಪಂಗಳಿಗೆ ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಉಳಿದ ಪಂಚಾಯತಿಗಳಿಗೂ ಪಕ್ಷಾತೀತವಾಗಿ ಅಭಿವೃದ್ಧಿ ಪಡಿಸಲು ನಿಮ್ಮೊಂದಿಗೆ ಇರುತ್ತೇವೆ. ಹೋಬಳಿಯಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ ಪಾಲ್ಗೊಂಡು ಯಶಸ್ವಿ ಮಾಡುತ್ತಾರೆ ಅದೇ ರೀತಿಯಲ್ಲಿ ಹೋಬಳಿ ಕೇಂದ್ರದಲ್ಲಿರುವ ಆಸ್ಪತ್ರೆ ಸೇರಿದಂತೆ ಇತರೆ ಸಾರ್ವಜನಿಕ ಕಟ್ಟಡಗಳಿಗೆ ಹೆಚ್ಚಿನ ಒತ್ತು ನೀಡಬೇಕು. ನರೇಗಾ ಯೋಜನೆಯಲ್ಲಿ ಪ್ರತಿಯೊಬ್ಬರೂ ಕಾಮಗಾರಿಗಳನ್ನು ಮಾಡಬಹುದಾಗಿದ್ದು ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಸೀರ್ ಅಹಮದ್ ಮಾತನಾಡಿ ಹೋಬಳಿ ಕೇಂದ್ರಗಳಲ್ಲಿ ಇಂತಹ ಕಟ್ಟಡಗಳು ಸರಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಹಕಾರಿಯಾಗುತ್ತದೆ ಸರಕಾರದ ಸೌಲಭ್ಯಗಳು ಪ್ರತಿಯೊಬ್ಬರಿಗೂ ಸಿಗುವ ನಿಟ್ಟಿನಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಬೇಕಾಗಿದೆ ಅಭಿವೃದ್ಧಿಗೆ ಏನಾದರೂ ಅನುದಾನ ಬೇಕಾದಲ್ಲಿ ಒದಗಿಸಿಕೊಡುವ ಮ?ಲಕ ನಿಮ್ಮೊಂದಿಗೆ ನಾವು ಇರುತ್ತೇವೆ ಎಂದು ತಿಳಿಸಿದರು.
ಗ್ರಾಪಂಗಳಿಗೆ ಹೆಚ್ಚು ಅಧಿಕಾರ: ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಅಭಿವೃದ್ಧಿಗೆ ಪೂರಕವಾಗಿ ಗ್ರಾಮ ಪಂಚಾಯತಿಗಳು ಕಾರ್ಯನಿರ್ವಹಿಸಲಿವೆ. ರಾಜೀವ್ ಗಾಂಧಿಯವರು ಗ್ರಾಪಂಗಳ ವಿಕೇಂದ್ರೀಕರಣ ಮೂಲಕ ಅಭಿವೃದ್ಧಿಗೆ ನಾಂದಿ ಮಾಡಿದ್ದಾರೆ. ಯಾವುದೇ ಎಂಪಿ.ಎಂಎಲ್‌ಎ. ಎಂಎಲ್ಸಿ ಇಲ್ಲದೇ ಇದ್ದರೂ ಕೂಡ ಆಡಳಿತ ನಡೆಸಲು ಗ್ರಾಪಂಗಳಿಗೆ ಅಧಿಕಾರ ಕೊಟ್ಟಿದ್ದಾರೆ. ಪಂಚಾಯತಿಯ ಅಭಿವೃದ್ಧಿಗೆ ಬೇಕಾದ ಸಂಪನ್ಮೂಲಗಳನ್ನು ಬಳಸಿಕೊಂಡು ಜನರ ಸೇವೆ ಮಾಡಲು ಅವಕಾಶವಿದ್ದು ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ಡಿಸಿಸಿ ಬ್ಯಾಂಕ್‌ನಲ್ಲಿ ಹಗರಣವೂ ನಡೆದಿಲ್ಲ, ತನಿಖೆಯೂ ಇಲ್ಲ: ಶಾಸಕ ನಂಜೇಗೌಡ
ತಾಪಂ ಇಒ ಮುನಿಯಪ್ಪ, ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಸದಸ್ಯ ಕಿತ್ತಂಡೂರು ನಂಜುಂಡಪ್ಪ, ಗ್ರಾಪಂ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ದ್ಯಾವಪ್ಪ ಉಪಾಧ್ಯಕ್ಷೆ ಮುನಿರತ್ನಮ್ಮ ನರಸಿಂಹಪ್ಪ, ಪಿಡಿಒ ರಮೇಶ್, ಕಾರ್ಯದರ್ಶಿ ವೆಂಕಟೇಶ್, ಗ್ರಾಪಂ ಸದಸ್ಯರು, ಮಾಜಿ ಅಧ್ಯಕ್ಷರು, ಮುಖಂಡರಾದ ಸುಗಟೂರು ನಾರಾಯಣಗೌಡ, ಚಲಪತಿ, ಶ್ರೀಧರ್ ಇದ್ದರು.