ಚಿನ್ನದ ಗಣಿ ಪ್ರದೇಶದಲ್ಲಿ ಅಕ್ರಮ ಬಡಾವಣೆ; ಸಕ್ರಮಕ್ಕೆ ಕಾಂಗ್ರೆಸ್ ಶಾಸಕಿ ಸಾಥ್!

By Kannadaprabha News  |  First Published Jul 30, 2023, 3:20 PM IST

ಚಿನ್ನದ ಗಣಿ ಕಾರ್ಮಿಕರಿಗೆ ಮನೆಗಳ ಹಕ್ಕು ಪತ್ರಗಳ ವಿತರಣೆಯಲ್ಲಿ ಸ್ಥಳೀಯ ಶಾಸಕರ ಪಾತ್ರ ಏನೂ ಇಲ್ಲ, ಕಾಂಗ್ರೆಸ್‌ ಸರ್ಕಾರ ಇದೆ ಎಂದು ಅಧಿಕಾರ ದುರುಪಯೋಗಪಡಿಸಿಕೊಂಡು ಜನರ ಮುಂದೆ ನಾಟಕ ಮಾಡಲು ಅಧಿಕಾರಿಗಳೊಂದಿಗೆ ಚಿನ್ನದ ಗಣಿ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ ಎಂದು ಸಂಸದ ಎಸ್‌.ಮುನಿಸ್ವಾಮಿ ಶಾಸಕಿ ರೂಪಕಲಾಶಶಿಧರ್‌Ü ವಿರುದ್ಧ ಆರೋಪಿಸಿದರು.


ಕೆಜಿಎಫ್‌ (ಜು.30) :  ಚಿನ್ನದ ಗಣಿ ಕಾರ್ಮಿಕರಿಗೆ ಮನೆಗಳ ಹಕ್ಕು ಪತ್ರಗಳ ವಿತರಣೆಯಲ್ಲಿ ಸ್ಥಳೀಯ ಶಾಸಕರ ಪಾತ್ರ ಏನೂ ಇಲ್ಲ, ಕಾಂಗ್ರೆಸ್‌ ಸರ್ಕಾರ ಇದೆ ಎಂದು ಅಧಿಕಾರ ದುರುಪಯೋಗಪಡಿಸಿಕೊಂಡು ಜನರ ಮುಂದೆ ನಾಟಕ ಮಾಡಲು ಅಧಿಕಾರಿಗಳೊಂದಿಗೆ ಚಿನ್ನದ ಗಣಿ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ ಎಂದು ಸಂಸದ ಎಸ್‌.ಮುನಿಸ್ವಾಮಿ ಶಾಸಕಿ ರೂಪಕಲಾಶಶಿಧರ್‌Ü ವಿರುದ್ಧ ಆರೋಪಿಸಿದರು.

ನಗರದ ಸ್ವರ್ಣ ಭವನದಲ್ಲಿ ಸರ್ವೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಶಾಸಕರು ಸಭೆ ನಡೆಸುತ್ತಿದ್ದಾರೆಂಬ ವಿಷಯ ತಿಳಿದು ದೂರವಾಣಿ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು,

Latest Videos

undefined

ಶಾಸಕರ ತಂದೆ ಸಂಸದರಾಗಿದ್ದಂತಹ ಸಮಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಆಗ ಚಿನ್ನದ ಗಣಿ ಲೂಟಿ ಮಾಡಿ 2001 ಚಿನ್ನದ ಗಣಿಗಳನ್ನು ಮುಚ್ಚುವಂತೆ ಮಾಡಿದರು ಎಂದರು.

ಕೋಲಾರ ಜಿಲ್ಲೆಗೆ ನೀಡಿರುವ ಅನುದಾನವನ್ನು ಸದ್ಬಳಿಸಿಕೊಳ್ಳಿ: ಸಚಿವ ದಿನೇಶ್‌

ಗಣಿ ಭೂಮಿಯಲ್ಲಿ ಅಕ್ರಮ ಬಡಾವಣೆ

ಕಾಂಗ್ರೆಸ್‌ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಗಣಿ ಕಾರ್ಮಿಕರ ಹಿತ ಕಾಯಲು ಏಕೆ ಮುಂದಾಗಲಿಲ್ಲ ಎಂದು ಪ್ರಶ್ನಿಸಿದ ಅವರು, ಈಗ ಶಾಸಕರೊಂದಿಗೆ ಇರುವ ಏಜೆಂಟರು ಮತ್ತು ನಾಯಕರು ಚಿನ್ನದ ಗಣಿಗಳ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಚಿನ್ನದ ಗಣಿ ಜಾಗದಲ್ಲಿ ಬಡಾವಣೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದನ್ನು ಸಕ್ರಮಗೊಳಿಸಲು ಶಾಸಕರು ಚಿನ್ನದ ಗಣಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅಕ್ರ ಪಾಷರೊಂದಿಗೆ ಸಭೆ ನಡೆಸಿರುವುದು ಖಂಡನೀಯ ಎಂದರು.

ಹಕ್ಕು ಪತ್ರ ವಿತರಣೆಗೆ ಕೇಂದ್ರ ಸಿದ್ಧತೆ

ಚಿನ್ನದ ಗಣಿ ಪ್ರದೇಶ ಇಂದಿಗೂ ಕೇಂದ್ರ ಸರ್ಕಾರದ ಹೆಸರಿನಲ್ಲಿಯೇ ಇದ್ದು, ಇಲ್ಲಿ ವಾಸಿಸುತ್ತಿರುವ ನೌಕರರ ಪರವಾಗಿ ತಾವು ಅಕಾರಕ್ಕೆ ಬಂದಾಗಿನಿಂದಲೂ ಸತತ ಪ್ರಯತ್ನದಿಂದ ಎಸ್‌ಟಿಪಿಬಿ ನೌಕರರಿಗೆ ಹಕ್ಕುಪತ್ರ ವಿತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂದೂ ಸಹ ತಾವು ಕೇಂದ್ರ ಗಣಿ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಎಲ್ಲಾ 2,800 ಎಸ್‌ಟಿಬಿಪಿ ನೌಕರರನ್ನು ಒಂದೆಡೆ ಸೇರಿಸಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿರಿಂದ ಕಾರ್ಮಿಕರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ಜಿಲ್ಲಾಕಾರಿ ಜತೆ ಸಭೆ ನಡೆಸಿದ ಶಾಸಕಿ

ಬಿಜಿಎಂಎಲ್‌ ಸಂಸ್ಥೆಯು ಎಸ್‌ಟಿಬಿಪಿ ನೌಕರರಿಗೆ ನೀಡಿರುವ ಜಾಗ ಅವರ ಹೆಸರಿಗೇ ಅತ್ಯಂತ ಕಡಿಮೆ ವೆಚ್ಚದಲ್ಲಿ ನೊಂದಣಿ ಮಾಡಿಕೊಡುವಂತೆ ಹೈಕೋರ್ಚ್‌ ಆದೇಶ ನೀಡಿರುವ ಹಿನ್ನಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾಗಿ ಶಾಸಕಿ ರೂಪಕಲಾ ಶಶಿಧರ್‌ ತಿಳಿಸಿದರು.

ವರದಿಗಾರರ ಜತೆ ಮಾತನಾಡಿದ ಅವರು, ಗಣಿ ಕಾರ್ಮಿಕರಿಗೆ ಕೋರ್ಚ್‌ ನಿರ್ದೇಶನದಂತೆ ಮನೆಗಳನ್ನು ಮಂಜೂರು ಮಾಡುವುದಾದರೆ ಒಂದೇ ಸ್ಥಳದಲ್ಲಿ 200 ಎಕರೆ ನೀಡಲಿ. ರಾಜ್ಯ ಸರ್ಕಾರ, ನಗರಸಭೆಯಿಂದ ಮೂಲಭೂತ ಸೌಲಭ್ಯಗಳನ್ನು ನಾವು ನೀಡುತ್ತೇವೆ ಎಂದರು.

ಡಿಸಿಸಿ ಬ್ಯಾಂಕ್‌ನಲ್ಲಿ ಹಗರಣವೂ ನಡೆದಿಲ್ಲ, ತನಿಖೆಯೂ ಇಲ್ಲ: ಶಾಸಕ ನಂಜೇಗೌಡ

ಆಶ್ರಯ ವಸತಿ ಯೋಜನೆಯಡಿ ಫಲಾನುಭವಿಗಳಿಗೆ 20/30 ಅಳತೆಯ ಮನೆಗಳನ್ನು ನೀಡಲಾಗುತ್ತದೆ. ಇದರಲ್ಲಿ ಎರಡು ಕೋಣೆಗಳು, ಒಂದು ಶೌಚಾಲಯ, ಒಂದು ಬಾತ್‌ ರೂಮ್‌ ಮತ್ತು ಸ್ವಲ್ಪ ಜಾಗವಾದರೂ ಇರುತ್ತದೆ. ಆದರೆ ಬಿಜಿಎಂಎಲ್‌ ವತಿಯಿಂದ ಇದಕ್ಕಿಂತಲೂ ಕಡಿಮೆ ಜಾಗವನ್ನು ನೀಡಿದಲ್ಲಿ ಅಲ್ಲಿ ಅವರು ಹೇಗೆ ತಾನೆ ವಾಸಿಸಲು ಸಾಧ್ಯ ಎಂದು ಪ್ರಶ್ನಿಸಿದರು.

click me!