ನನ್ನನೂ ಸಿಎಂ ಆಗಲು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ: ಎಚ್‌.ಡಿ.ಕುಮಾರಸ್ವಾಮಿ

By Kannadaprabha News  |  First Published Apr 14, 2023, 4:00 AM IST

ಜೆಡಿಎಸ್‌ ಕಾರ್ಯಕರ್ತರಿಗೆ ಕಿರುಕುಳ ನೀಡುವ ಕೆಲಸ ಮಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗರಂ ಆಗಿ ಹೇಳಿದ್ದಾರೆ. 


ಆಳಂದ (ಏ.14): ಜೆಡಿಎಸ್‌ ಕಾರ್ಯಕರ್ತರಿಗೆ ಕಿರುಕುಳ ನೀಡುವ ಕೆಲಸ ಮಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗರಂ ಆಗಿ ಹೇಳಿದ್ದಾರೆ. ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಗುರುವಾರ ಜೆಡಿಎಸ್‌ ಅಭ್ಯರ್ಥಿ ಮಹೇಶ್ವರಿ ವಾಲಿ ಪರ ಕೈಗೊಂಡ ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಜೆಡಿಎಸ್‌ ಕಾರ್ಯಕರ್ತರಿಗೆ ಕಿರುಕುಳ ವಿಚಾರದ ಬಗ್ಗೆ ಕಿಡಿಕಾರಿದ ಅವರು, ಅಂತಹ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕಪ್ತಡಿಸಿದರು. ಕ್ಷೇತ್ರದಲ್ಲಿ ಒಬ್ಬ ಹೆಣ್ಣು ಮಗಳು ಸ್ಪರ್ಧೆ ನೀಡಿದ್ದು, ಹೆಲಿಪ್ಯಾಡ್‌ಗೆ ಅನುಪತಿ ನೀಡಲು ಯಾರದೋ ಮಾತು ಕೇಳಿ ಅಡ್ಡಿಪಡಿಸುವುದು ಸರಿಯಲ್ಲ ಎಂದರು.

ಬರುವ ದಿನಗಳಲ್ಲಿ ನನ್ನನೂ ಸಿಎಂ ಆಗಲು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಸಿಎಂ ಆಗಿದ್ದಾಗ ಸಾಮಾನ್ಯನಿಗೂ ಗೌರವಕೊಟ್ಟು ಆಡಳಿತ ನಡೆಸಿದ್ದು, ಅಧಿಕಾರಿಗಳು ಯಾವುದೇ ಸರ್ಕಾರ ಶಾಶ್ವತವಲ್ಲ. ಕಾರ್ಯಕರ್ತರಿಗೆ ಧಮ್ಕಿ, ಕಿರುಕುಳ ಕೊಡುವುದು. ಚುನಾವಣೆ ಬಂದಾಗಿನಿಂದ ಹೆಚ್ಚಾಗಿದೆ ನಾನು ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತೇನೆ. ಇನ್ನೊಂದು ತಿಂಗಳು ಅಷ್ಟೇ ನಿಮ್ಮ ಸಮಯ. ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಕೆಲಸ ಮಾಡಬೇಕು. ಕಾಂಗ್ರೆಸ್‌ ಮತ್ತು ಬಿಜೆಪಿ ಅಡಿಯಾಳಾಗಿ ಕೆಲಸ ಮಾಡಿದರೆ ಜೂನ್‌ ತಿಂಗಳ ಬಳಿಕ ಪ್ರಾಯಶ್ಚಿತ ಅನುಭವಿಸಬೇಕಾಗುತದೆ ಎಂದು ನೆರವಾಗಿ ಎಚ್ಚರಿಕೆ ನೀಡಿದರು.

Tap to resize

Latest Videos

undefined

ಎಚ್ಡಿಕೆ ಆಸ್ಪತ್ರೆ ಕಟ್ಟಿಸದಿದ್ದರೆ ಜನ ಸಾಯಬೇಕಿತ್ತು: ಎಚ್‌.ಡಿ.ರೇವಣ್ಣ

ರಾಜ್ಯದ ಜನತೆಯ ಹಣದಿಂದ ನೀವು ಕೆಲಸ ಮಾಡುತ್ತಿರಿ ಅನ್ನೋದನ್ನು ಅಧಿಕಾರಿಗಳು ನೆನಪಿನಪಿಟ್ಟುಕೊಳ್ಳಬೇಕು. ನಾನೂ ಎರಡು ಬಾರಿ ಸಿಎಂ ಆಗಿ ಕೆಲಸ ಮಾಡಿದ್ದೇನೆ. ಎಂದೂ ಇಂಥ ದ್ವೇಷದ ರಾಜಕೀಯಕ್ಕೆ ಪ್ರೋತ್ಸಾಹ ಕೊಟ್ಟಿಲ್ಲ. ಅಧಿಕಾರಿಗಳು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು. ಉತ್ತರ ಕರ್ನಾಟಕದಲ್ಲಿ ಬಿಜೆಪಿ-ಕಾಂಗ್ರೆಸ್‌ನ ಪಾಳೆಗಾರಿಕೆ, ರಾಜ್ಯದ ಖಜಾನೆ ಲೂಟಿ ಮಾಡುವ ಪಕ್ಷಗಳಿಗೆ ಎಷ್ಟುದಿನವಂತ ಬೆಂಬಲಿಸಿಸಹಿಸಿಕೊಳ್ಳುತ್ತಿರಿ, ಬದಲಾಣೆಗಾಗಿ ಜೆಡಿಎಸ್‌ಗೆ ಮತ ನೀಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್‌ ಅಭ್ಯರ್ಥಿ ಮಹೇಶ್ವರಿ ವಾಲಿ ಅವರು ಮಾತನಾಡಿ, ಕ್ಷೇತ್ರದಲ್ಲಿ ಪಾದಯಾತ್ರೆ, ಗ್ರಾಮವಾಸ್ತವ್ಯ ಮೂಲಕ ಸಮಸ್ಯೆ ಅರಿತುಕೊಂಡಿದ್ದು, ಮನೆಗೆ ಬಂದಾಗ ಊಟಕೊಟ್ಟು ಗೌರವಿಸಿ ಬೆಂಬಲ ಸೂಚಿಸಿದ್ದರಿ, ಬಿ.ಆರ್‌. ಪಾಟೀಲ ಮೂರು ಬಾರಿ, ಸುಭಾಷ ಗುತ್ತೇದಾರಗೆ ನಾಲ್ಕು ಬಾರಿ ಆಯ್ಕೆ ಮಾಡಿದರು ಜನತೆ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಕೇವಲ ಅವರ ಶಾಲೆ, ಕಾಲೇಜು, ವ್ಯಯಕ್ತಿ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಒಮ್ಮೆ ಅವಕಾಶಕೊಟ್ಟು ನೋಡಿ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಬಿಜೆಪಿ-ಕಾಂಗ್ರೆಸ್ಸಿನಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಳ: ಎಚ್‌.ಡಿ.ಕುಮಾರಸ್ವಾಮಿ

ಜೆಡಿಎಸ್‌ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮಹ್ಮದ್‌ ಜಫರ ಹುಸೇನ, ಮಹಿಳಾ ಯುವ ಘಟಕದ ರಾಜ್ಯ ಕಾರ್ಯದರ್ಶಿ ನಜ್ಮಾ ನಜೀರ್‌ ಅಅವರು ರಾಜ್ಯದ ಮತ್ತು ಜನತೆಯ ಹಿತದೃಷ್ಟಿಯಿಂದ ಭವಿಷ್ಯಕ್ಕಾಗಿ ಜೆಡಿಎಸ್‌ ಅಭ್ಯರ್ಥಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಹೇಳಿದರು. ಪ್ಪಕ್ಷದ ತಾಲೂಕು ಅಧ್ಯಕ್ಷ ರಾಜು ಚವ್ಹಾಣ, ಯುವ ಘಟಕದ ಅಧ್ಯಕ್ಷ ಶರಣ ಕುಲಕರ್ಣಿ, ಅಲ್ಪಸಂಖ್ಯಾತರ ಘಟಕದ ಗ್ರಾಮೀಣ ಅಧ್ಯಕ್ಷ ಮೊಹಮದ್‌ ರಫಿಕ್‌, ನಗರಾಧ್ಯಕ್ಷ ಇಲಿಯಾಸ್‌ ಅನ್ಸಾರಿ, ಜಿಲ್ಲಾದ ಮಸ್ತಕ್‌ ಅಲಿ, ಶ್ರೀಶೈಲ ಬಿರಾದಾರ, ಜಯರಾಮ ರಾಠೋಡ, ಮಸಣಪ್ಪ ಮುನ್ನೊಳ್ಳಿ, ಶರಣಬಸಪ್ಪ ಉಜಳಂಬೆ, ಯಶ್ವಂತ ನಾಗಶೆಟಿ, ವಿರೂಪಾಕ್ಷಿ ಹಣಮಶೆಟ್ಟಿ, ಶಿವುಕುಮಾರ ಪಾಟೀಲ, ಶಿವುಕುಮಾರ ವಾಲಿ, ವಿಶ್ವನಾಥ ಜಮಾದಾರ ಪಡಸಾವಳಿ  ಇನ್ನಿತರು ಇದ್ದರು.

click me!