Koppal News: ಜನಾಶೀರ್ವಾದ ಇರುವವರೆಗೂ ಯಾರೂ ಏನೂ ಮಾಡಲಾಗದು: ಸಿದ್ದರಾಮಯ್ಯ

By Kannadaprabha News  |  First Published Feb 19, 2023, 5:36 AM IST

ನಾಡಿನ ಜನರ ಸಮಸ್ಯೆಗಳನ್ನು ಆಲಿಸಿ, ಜನರಿಗೆ ರಕ್ಷಣೆ ಕೊಡಬೇಕಾದ ಸಚಿವ ಅಶ್ವತ್ಥನಾರಾಯಣ ಅವರು ನನ್ನನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು ಎಂದು ಹೇಳಿದ್ದಾರೆ. ಜನರ ರಕ್ಷಣೆ, ಸೇವೆ ಮಾಡಿ ಸಮಾಜದ ಸ್ಥಿರತೆ ಕಾಪಾಡಬೇಕಾದವರು ಹೀಗೆ ಮಾತಾಡಿದರೆ ನೀವು ಒಪ್ಪುತ್ತೀರಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.


ಯಲಬುರ್ಗಾ (ಫೆ.19) : ನಾಡಿನ ಜನರ ಸಮಸ್ಯೆಗಳನ್ನು ಆಲಿಸಿ, ಜನರಿಗೆ ರಕ್ಷಣೆ ಕೊಡಬೇಕಾದ ಸಚಿವ ಅಶ್ವತ್ಥನಾರಾಯಣ ಅವರು ನನ್ನನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು ಎಂದು ಹೇಳಿದ್ದಾರೆ. ಜನರ ರಕ್ಷಣೆ, ಸೇವೆ ಮಾಡಿ ಸಮಾಜದ ಸ್ಥಿರತೆ ಕಾಪಾಡಬೇಕಾದವರು ಹೀಗೆ ಮಾತಾಡಿದರೆ ನೀವು ಒಪ್ಪುತ್ತೀರಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನ(Bheeralingeshwar temple)ದ ಆವರಣದಲ್ಲಿ ಶನಿವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(Sangolli rayanna)ನವರ ಮೂರ್ತಿ ಅನಾವರಣ ಹಾಗೂ ಶಿಲಾ ಮಂಟಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ(Siddaramaiah) ಅವರನ್ನು ಸಾಯಿಸಬೇಕು ಎಂದು ಹೇಳಿದ್ದಾರೆ. ಆದರೆ ಜನರ ಆರ್ಶೀವಾದ ಇರುವ ವರೆಗೂ ಯಾರೂ ನನಗೆ ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದರು.

Tap to resize

Latest Videos

undefined

ಸಿದ್ದು-ಡಿಕೆಶಿ ನಡುವೆ 'ಸಿಎಂ ಪಟ್ಟ'ದ ಜಿದ್ದು: ಕೋಲಾರದಲ್ಲಿ ಟಗರಿಗೆ ವಿಘ್ನ

 

ನಮ್ಮವರೇ ಹಿಡಿದುಕೊಟ್ಟರು:

ಸ್ವಾತಂತ್ರ್ಯ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣನನ್ನು ಬಂಧಿಸಲು ನಮ್ಮವರೇ ಸಹಾಯ ಮಾಡುತ್ತಾರೆ. ಇಲ್ಲದಿದ್ದರೆ ಸಂಗೊಳ್ಳಿ ರಾಯಣ್ಣನನ್ನು ಹಿಡಿಯಲು ಬ್ರಿಟಿಷರಿಗೆ ಆಗುತ್ತಿರಲಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ನಂದಗಡ ಹಾಗೂ ಸಂಗೊಳ್ಳಿ ಗ್ರಾಮವನ್ನು .282 ಕೋಟಿ ಅನುದಾನದಲ್ಲಿ ಅಭಿವೃದ್ಧಿಗೊಳಿಸಿದ್ದೇನೆ. ರಾಯಣ್ಣನ ಹೆಸರಿನಲ್ಲಿ ಸೈನಿಕ ಶಾಲೆಯನ್ನು ಪ್ರಾರಂಭಿಸಿದೆ. ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಸ್ಥಾಪಿಸಿದೆ ಎಂದರು.

ಮಾಜಿ ಸಚಿವ ಬಸವರಾಜ ರಾಯರಡ್ಡಿ(Basavaraj rayareddy) ಮಾತನಾಡಿ, ನನ್ನ ಬಗ್ಗೆ ಕೆಲವರು ಇಲ್ಲಸಲ್ಲದ ಹೇಳಿಕೆಯನ್ನು ಪತ್ರಿಕೆಗಳಲ್ಲಿ ಬರೆಯಿಸಿದ್ದಾರೆ, ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಿಂಥಣಿ ಬ್ರಿಡ್ಜನ ಸಿದ್ದರಾಮಾನಂದ ಪುರಿ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಕೆಟ್ಟಬೆಳವಣಿಗೆ ಆಗುತ್ತಿದೆ. ಕಾನೂನು ರಕ್ಷಣೆ ಮಾಡಬೇಕಾದವರೆ ಕೆಟ್ಟಹೇಳಿಕೆ ನೀಡುತ್ತಿದ್ದಾರೆ. ಅಂತಹ ಕೆಟ್ಟರಾಜ್ಯ, ಕೇಂದ್ರ ಸರ್ಕಾರ ಇದೆ. ನಾಲಾಯಕ ಜನಪ್ರತಿನಿಧಿಗಳು ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಇದರಿಂದ ರಾಜ್ಯದ ಹಿತವಿಲ್ಲ ಎಂದರು.

ಅಂದಾನಗೌಡ ಪೊಲೀಸ್‌ ಪಾಟೀಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾದಿಮನಾಳದ ಶಿವಸಿದ್ದೇಶ್ವರ ಸ್ವಾಮೀಜಿ, ವೇದಮೂರ್ತಿ ದ್ಯಾಮಪ್ಪಯ್ಯ ಗುರುವಿನ ಸಾನ್ನಿಧ್ಯ ವಹಿಸಿದ್ದರು.

ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಬಳೂಟಗಿ ಅಧ್ಯಕ್ಷತೆ ವಹಿಸಿದ್ದರು. ಹುಮ್ನಬಾದ ಶಾಸಕ ರಾಜಶೇಖರ ಪಾಟೀಲ, ವಿಪ ಸದಸ್ಯ ಶರಣೇಗೌಡ ಪಾಟೀಲ ಬಯ್ಯಾಪುರ, ಮಾಜಿ ಶಾಸಕ ಶಿವರಾಜ ತಂಗಡಗಿ, ಬಸವಲಿಂಗಪ್ಪ ಭೂತೆ, ವೀರಣ್ಣ ಹುಬ್ಬಳ್ಳಿ, ಕಳಕಪ್ಪ ಕಂಬಳಿ, ಸಿ.ಎಚ್‌. ಪಾಟೀಲ, ಶಿವಶಂಕರರಾವ್‌ ದೇಸಾಯಿ ಮತ್ತಿತರರು ಇದ್ದರು.

ಹೆಣ ಬೀಳೋದನ್ನೇ ಕಾಯುವ ಬಿಜೆಪಿ ಒಂದು ಭಯೋತ್ಪಾದಕ ಪಕ್ಷ : ಬಿಕೆ ಹರಿಪ್ರಸಾದ್‌

ಸಭೆಯಲ್ಲಿ ಗದ್ದಲ:

ಹೆಬ್ಬಾಳ ಶಾಸಕ ಬೈರತಿ ಸುರೇಶ(Byrati suresh) ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆ(Assembly election)ಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕಾದರೆ ಈ ಕ್ಷೇತ್ರದ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರನ್ನು ಮತ್ತೆ ಗೆಲ್ಲಿಸಬೇಕು. ಇಲ್ಲಿಯ ಶಾಸಕರು, ಸಚಿವರು ಏನಾದರೂ ಅಭಿವೃದ್ಧಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಅಷ್ಟರಲ್ಲಿ ವೇದಿಕೆ ಮೇಲಿದ್ದ ಬಿಜೆಪಿ ಮುಖಂಡರಾದ ಕಳಕಪ್ಪ ಕಂಬಳಿ, ವೀರಣ್ಣ ಹುಬ್ಬಳ್ಳಿ, ಅಮರೇಶ ಹುಬ್ಬಳ್ಳಿ, ಶಿವಶಂಕರರಾವ್‌ ದೇಸಾಯಿ, ಸಿ.ಎಚ್‌. ಪಾಟೀಲ, ಎಸ್‌.ಎನ್‌. ಶ್ಯಾಗೋಟಿ ಆಕ್ಷೇಪಿಸಿದರು.

click me!