ಇಷ್ಟು ದಿನ ಅವರು ಜನರ ಕಿವಿ ಮೇಲೆ ಹೂ ಇಡುತ್ತಿದ್ದರು. ಈಗ ಜನರು ಅವರ ಕಿವಿ ಮೇಲೆ ಹೂ ಇಟ್ಟಿದ್ದಾರೆ. ಮುಂದಿನ ಸಲವೂ ಅವರ ಕಿವಿಯ ಮೇಲೆ ಹೂ ಇಟ್ಟುಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಲೇವಡಿ ಮಾಡಿದ ಬಸವರಾಜ ಬೊಮ್ಮಾಯಿ
ಬೆಂಗಳೂರು(ಫೆ.19): ‘ಇಷ್ಟು ದಿನ ಅವರು (ಪ್ರತಿಪಕ್ಷ) ಜನರ ಕಿವಿ ಮೇಲೆ ಹೂ ಇಡುತ್ತಿದ್ದರು. ಈಗ ಜನರು ಅವರ ಕಿವಿ ಮೇಲೆ ಹೂ ಇಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಬಜೆಟ್ ಮಂಡನೆ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಸದಸ್ಯರು ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿದ್ದರು. ಬಜೆಟ್ ಓದಲು ಆರಂಭಿಸಿದ ಕೆಲ ನಿಮಿಷದಲ್ಲಿ ಇದನ್ನು ಗಮನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಕಾಂಗ್ರೆಸ್ಸಿಗರಿಗೆ ಟಾಂಗ್ ಕೊಟ್ಟರು.
ವಿಜಯಪುರ ಜಿಲ್ಲೆಗೆ ಹಳೆಯ ಬಾಟಲಿಗೆ ಹೊಸ ಲೇಬಲ್‌ನಂತಾದ ಬಜೆಟ್
ನಾನು ಪ್ರತಿಪಕ್ಷದ ನಾಯಕರಿಗೆ ಹೇಳಲು ಇಚ್ಛಿಸುತ್ತೇನೆ. ಕಿವಿ ಮೇಲೆ ಯಾಕೆ ಹೂವು ಇಟ್ಟುಕೊಳ್ಳುತ್ತೀರಾ? ಬೇಡ ಎನ್ನುತ್ತೇನೆ. ಆದರೂ, ಸಹ ಅವರು ಇಟ್ಟುಕೊಳ್ಳುವ ತೀರ್ಮಾನ ಮಾಡಿದ್ದಾರೆ. ಇದು ಸರಿಯಾಗಲ್ಲ ಎಂಬುದು ನನ್ನ ಭಾವನೆ. ಹೂವು ಇಟ್ಟುಕೊಳ್ಳುವುದು ಅವರ ಇಚ್ಛೆ. ಅದರ ಬಗ್ಗೆ ನಾನು ಏನು ಹೇಳುವುದಿಲ್ಲ. ಆದರೆ, ಇಷ್ಟು ಮಾತ್ರ ಹೇಳ ಬಯಸುತ್ತೇನೆ. ಇಷ್ಟು ದಿನ ಅವರು ಜನರ ಕಿವಿ ಮೇಲೆ ಹೂ ಇಡುತ್ತಿದ್ದರು. ಈಗ ಜನರು ಅವರ ಕಿವಿ ಮೇಲೆ ಹೂ ಇಟ್ಟಿದ್ದಾರೆ. ಮುಂದಿನ ಸಲವೂ ಅವರ ಕಿವಿಯ ಮೇಲೆ ಹೂ ಇಟ್ಟುಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಲೇವಡಿ ಮಾಡಿದರು.