ವಿಜಯೇಂದ್ರ ಜತೆ ಯಾವುದೇ ಸಂಧಾನ ಸಭೆ ನಡೆದಿಲ್ಲ: ಅರವಿಂದ ಲಿಂಬಾವಳಿ

Kannadaprabha News   | Kannada Prabha
Published : Jun 29, 2025, 05:25 PM IST
Arvind Limbavali

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ನಮ್ಮ ನಡುವೆ ಸಂಧಾನ ಸಭೆ ನಡೆಯಿತು ಎಂಬುದು ಮಾಧ್ಯಮಗಳ ಸೃಷ್ಟಿ. ಆದರೆ ಯಾವುದೇ ಸಂಧಾನ ಸಭೆ, ಮತ್ತೊಂದು ಸಭೆ ಆಗಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಕೋಲಾರ (ಜೂ.29): ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ನಮ್ಮ ನಡುವೆ ಸಂಧಾನ ಸಭೆ ನಡೆಯಿತು ಎಂಬುದು ಮಾಧ್ಯಮಗಳ ಸೃಷ್ಟಿ. ಆದರೆ ಯಾವುದೇ ಸಂಧಾನ ಸಭೆ, ಮತ್ತೊಂದು ಸಭೆ ಆಗಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು. ನಗರದ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿ 50 ವರ್ಷ ಹಿನ್ನೆಲೆ ಜಿಲ್ಲಾ ಬಿಜೆಪಿಯಿಂದ ಕರಾಳ ಕಾರ್ಯಕ್ರಮದ ನಂತರ ಪತ್ರಕರ್ತರ ಜತೆ ಮಾತನಾಡಿ, ಕುಟುಂಬದಲ್ಲಿ ಸಮಸ್ಯೆ ಇದ್ದಂತೆ ಪಕ್ಷಗಳಲ್ಲೂ ಇರುತ್ತೆ, ಬಿಜೆಪಿ ಪಕ್ಷ ದೊಡ್ಡ ಪಕ್ಷ, ಸಮಸ್ಯೆಗಳು ಇದ್ದೇ ಇರುತ್ತೆ ಅದು ಸಹಜ, ಸಮಸ್ಯೆಗಳನ್ನು ಬಗೆಹರಿಸಲು ಸೇರಿದಂತಹ ಸಭೆ ಅಷ್ಟೇ ಎಂದರು.

ಶೇಕ್ ಹ್ಯಾಂಡ್ ಕೊಡಬಾರದಾ: ಸಭೆಗಳಲ್ಲಿ ನಮಗೆ ಯಾರಾದರೂ ಸಿಕ್ಕಿದರೆ ಶೇಕ್ ಹ್ಯಾಂಡ್ ಕೊಡಬಾರದಾ ಎಂದು ಪ್ರಶ್ನೆ ಮಾಡಿದ ಅವರು ವಿಜಯೇಂದ್ರ ಮತ್ತು ಅರವಿಂದ ಲಿಂಬಾವಳಿ ಶೇಕ್ ಹ್ಯಾಂಡ್ ಮಾಡಿದರೆಂದು ಬರುತ್ತಿದೆ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ, ನಿಮಗೆ ಟಿಆರ್‌ಪಿ ಜಾಸ್ತಿ ಮಾಡಬೇಕು, ಅದಕ್ಕೆ ಹೀಗೆ ಎಂದರು. ಭಿನ್ನಮತ ಶಮನವಾಗಿದ್ದೀಯಾ ಎಂಬ ಪ್ರಶ್ನೆಗೆ, ಅದು ಅಂತರಿಕ ವಿಷಯ, ಪಕ್ಷ ಪರಿಹಾರ ಕಂಡು ಕೊಳ್ಳುತ್ತೆ ಎಂದರು.

ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಯಾರು ಮಾತನಾಡಿದ್ದಾರೆ ಅವರನ್ನೆ ಕೇಳಿ. ಬದಲಾವಣೆ ಅದು ಆಂತರಿಕ ವಿಚಾರ, ನಮಗೆ ಹೈಕಮಾಂಡ್ ಇದೆ, ಸಲಹೆ ಸೂಚನೆ ನೀಡಲು ಆರ್‌ಎಸ್‌ಎಸ್ ಇದೆ ಅವರ ಮಟ್ಟದಲ್ಲಿ ಚರ್ಚೆ ನಡೆಯುತ್ತೆ. ಭಿನ್ನಾಭಿಪ್ರಾಯ ಬಗೆಹರಿಸಲು ಆರ್‌ಎಸ್ ಎಸ್ ಬರಬೇಕಾಯಿತು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ತುರ್ತು ಪರಿಸ್ಥಿತಿಯನ್ನು ಆರ್‌ಎಸ್‌ಎಸ್ ಬಗೆಹರಿಸಲು ಕೆಲಸ ಮಾಡಿದೆ ಎಂದರು, ಹಾಗಾದರೆ ಬಿಜೆಪಿಯಲ್ಲಿ ತುರ್ತು ಪರಿಸ್ಥಿತಿ ಇದ್ದೀಯಾ ಎನ್ನುತ್ತಲೆ ಉತ್ತರ ನೀಡದೆ ಜಾರಿಕೊಂಡರು.

ನುಸುಳುಕೋರರ ಗುರುತು ಮಾಡಲಾಗುತ್ತಿದೆ: ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿಯಾಗಿರುವವರು ಮತ್ತು ಬಾಂಗ್ಲಾದೇಶದಿಂದ ನುಸುಳಿರುವ ನುಸುಳುಕೋರರ ಗುರುತು ಮಾಡುವ ಕೆಲಸ ಆಗಿದೆ. ಅವರನ್ನ ಪತ್ತೆ ಹಚ್ಚುವ ಕೆಲಸ ಆಗಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.ನಗರದ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಪೆಹಲ್ಗಾಮ್ ನಲ್ಲಿ ಧರ್ಮ ಗುರುತಿಸಿ ಹಿಂದೂಗಳನ್ನು ಕೊಂದಿದ್ದಾರೆ. ಈ ಘಟನೆ ನಮಗೆ ದುಃಖಕರವಾದದ್ದು. ಪಾಕಿಸ್ತಾನ, ಬಾಂಗ್ಲಾ ವಲಸಿಗರು ದೇಶದ ಅಲ್ಲಲ್ಲಿ ಇದ್ದಾರೆ. ಈಗಾಗಲೇ ನಮ್ಮ ವಾರ್ ರೂಮ್ ಪ್ರಾರಂಭಿಸಿದ್ದೇವೆ.

400 ಕ್ಕಿಂತ ಹೆಚ್ಚು ಕರೆಗಳು ಬರುತ್ತಿವೆ. ಹಲವು ಮಾಹಿತಿ ರವಾನೆ ಆಗುತ್ತಿದೆ. ಬೋಗಸ್ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡು ವಾಸಿಸುತ್ತಿದ್ದಾರೆ. ಯಾರಾದರೂ ವಲಸಿಗರು ಇದ್ದರೆ ನಮ್ಮ ವಾರ್‌ರೂಂ ನಂಬರ್‌ ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.ಕರ್ನಾಟಕದಲ್ಲಿಯೂ ಹಲವರು ಇರುವ ಮಾಹಿತಿ ಇದ್ದು, ಯಾರದರೂ ಕಂಡುಬಂದಲ್ಲಿ ಮೊ. 90356 75734, 82176 86764 ನಂಬರ್ ಗೆ ಮಾಹಿತಿ ನೀಡಿ ಎಂದರು. ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆಯಾಗಿರುವುದು ಖಂಡನೀಯ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಇಡೀ ರಾಜ್ಯದ ಜನತೆ ಸುಹಾಸ್ ಶೆಟ್ಟಿ ಕುಟುಂಬ ಜೊತೆ ಇದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಕೊಲೆಯಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆ ಆಗಬೇಕು ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ