ಭಾರತ ಜೋಡೋ ಯಾತ್ರೆಯನ್ನು ವಿಭಜಿಸುವ ಯತ್ನ: BJP - RSS ವಿರುದ್ಧ Rahul Gandhi ವಾಗ್ದಾಳಿ

By BK AshwinFirst Published Sep 27, 2022, 12:00 PM IST
Highlights


ಭಾರತ್ ಜೋಡೋ ಯಾತ್ರೆ ಪ್ರತಿಯೊಂದು ಅನ್ಯಾಯದ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳ ಕೋಟ್ಯಂತರ ಸಾಲವನ್ನು ಮನ್ನಾ ಮಾಡುತ್ತಿದೆ. ಆದರೆ ಸಾಲಗಾರನೆಂದು ರೈತನನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
 

ಒಂದೆಡೆ, ಕಾಂಗ್ರೆಸ್‌ (Congress) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ (Presidential Election) ಹತ್ತಿರವಾಗುತ್ತಿದ್ದಂತೆ ಕೈ ಪಕ್ಷದಲ್ಲಿ ತೀವ್ರ ಗೊಂದಲ ಏರ್ಪಟ್ಟಿದೆ. ಅಶೋಕ್‌ ಗೆಹ್ಲೋಟ್‌ ಎಐಸಿಸಿ ಅಧ್ಯಕ್ಷರಾದರೆ (AICC President) ರಾಜಸ್ಥಾನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಪಕ್ಷ ಹೇಳಿರುವುದರಿಂದ, ಗೆಹ್ಲೋಟ್‌ ಬೆಂಬಲಿಗರು ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಆದರೆ, ಇನ್ನೊಂದೆಡೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದು, ಈ ವೇಳೆ ಬಿಜೆಪಿ (BJP) - ಆರ್‌ಎಸ್‌ಎಸ್‌ (RSS) ತಮ್ಮ ಯಾತ್ರೆಯನ್ನು ವಿಭಜಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಸೋಮವಾರ ಭಾರತೀಯ ಜನತಾ ಪಕ್ಷ (Bharatiya Janata Party) (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (Rashtriya Swayam Sevak Sangh) (ಆರ್‌ಎಸ್‌ಎಸ್‌) ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ರಾಹುಲ್‌ ಗಾಂಧಿ,  ಭಾರತ್ ಜೋಡೋ ಯಾತ್ರೆಯನ್ನು 'ವಿಭಜಿಸಲು'  ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

"ಬಿಜೆಪಿ-ಆರ್‌ಎಸ್‌ಎಸ್‌ ಈ ನದಿ (River) (ಭಾರತ್ ಜೋಡೋ ರ‍್ಯಾಲಿಯಲ್ಲಿರುವ ಜನರು) ವಿಭಜನೆಯಾಗಬೇಕೆಂದು ಬಯಸುತ್ತದೆ. ಅಲ್ಲದೆ, ದೇಶದ ನಿವಾಸಿಗಳು ಪರಸ್ಪರ ಜಗಳವಾಡಲು ಅವರು ಬಯಸುತ್ತಾರೆ. ಅವರಿಗೆ ಎಂತಹ ನದಿ ಬೇಕು ಎಂದರೆ, ಯಾರಾದರೂ ಆ ನದಿಗೆ ಬಿದ್ದರೆ, ಯಾರೂ ಅವರನ್ನು ಎತ್ತುವುದಿಲ್ಲ ಮತ್ತು ಎಲ್ಲರೂ ಒಂಟಿಯಾಗಿರುತ್ತಾರೆ’’ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಹಾಗೂ, ಅವರು ಒಡೆದು ದೇಶವನ್ನು ನಡೆಸುತ್ತಾರೆ ಮತ್ತು ದ್ವೇಷವನ್ನು ಹರಡುತ್ತಿದ್ದಾರೆ" ಎಂದು ರಾಹುಲ್‌ ಗಾಂಧಿ ಹೇಳಿದರು. 

ಇದನ್ನು ಓದಿ: ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ, Bharat Jodo Yatra ವಿರುದ್ಧ ಹೈಕೋರ್ಟ್‌ಗೆ ಅರ್ಜಿ!

ಈ ಮಧ್ಯೆ, ಭಾರತ್ ಜೋಡೋ ಯಾತ್ರೆಯು ಪ್ರತಿಯೊಂದು ಅನ್ಯಾಯದ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳ ಕೋಟ್ಯಂತರ ಸಾಲವನ್ನು ಮನ್ನಾ ಮಾಡುತ್ತಿದೆ. ಆದರೆ ಸಾಲಗಾರನೆಂದು ರೈತನನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಸಹ ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಕಾಶ್ಮೀರ ತಲುಪುವ ವೇಳೆಗೆ ಭಾರತ ಕಾಂಗ್ರೆಸ್ ಮುಕ್ತ ಭಾರತವನ್ನು ಕಾಣಲಿದೆ: ಬಿಜೆಪಿ ನಾಯಕ
"ಭಾರತ್ ಜೋಡೋ ಯಾತ್ರೆಯು ಪ್ರತಿಯೊಂದು ಅನ್ಯಾಯದ ವಿರುದ್ಧವಾಗಿದೆ. ಭಾರತವು ರಾಜನ ಈ '2 ಹಿಂದೂಸ್ಥಾನ'ವನ್ನು ಒಪ್ಪಿಕೊಳ್ಳುವುದಿಲ್ಲ," ಎಂದು ರಾಹುಲ್‌ ಗಾಂಧಿ ಟ್ವೀಟ್ ಮಾಡಿದ್ದಾರೆ. ಈ ಹಿಂದೆ, ಅಂಕಿತಾ ಭಂಡಾರಿ ಪ್ರಕರಣದ ಬಗ್ಗೆ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದ ರಾಹುಲ್‌ ಗಾಂಧಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವು "ಅಪರಾಧ ಮತ್ತು ದುರಹಂಕಾರ" ಕ್ಕೆ ಸಮಾನಾರ್ಥಕವಾಗಿದೆ ಎಂದು ಹೇಳಿದ್ದರು.

ಇದಕ್ಕೆ ಸಂಬಂಧಿತ ಕಾಮೆಂಟ್‌ನಲ್ಲಿ, ಬಿಜೆಪಿ ನಾಯಕರೊಬ್ಬರು ಸೋಮವಾರ ರಾಹುಲ್‌ ಗಾಂಧಿ ವಿರುದ್ಧ ಲೇವಡಿ ಮಾಡಿದ್ದಾರೆ. ಭಾರತ್ ಜೋಡೋ ಯಾತ್ರೆಯು ಕಾಶ್ಮೀರವನ್ನು ತಲುಪುವ ಹೊತ್ತಿಗೆ ಭಾರತವು 'ಕಾಂಗ್ರೆಸ್-ಮುಕ್ತ ಭಾರತ'ವನ್ನು ನೋಡುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. "ಅವರು (ರಾಹುಲ್ ಗಾಂಧಿ) ಕಾಶ್ಮೀರವನ್ನು ತಲುಪುವ ಹೊತ್ತಿಗೆ ಭಾರತವು ಕಾಂಗ್ರೆಸ್ ಮುಕ್ತ ಭಾರತವನ್ನು ನೋಡುತ್ತದೆ" ಎಂದು ಅಸ್ಸಾಂ ಸಚಿವ ಪಿಜುಶ್ ಹಜಾರಿಕಾ ಹೇಳಿದ್ದಾರೆ. ಸಿಎಂ ಅಶೋಕ್ ಗೆಹ್ಲೋಟ್ ಅವರು ತಮ್ಮ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರೊಂದಿಗೆ ರಾಜಸ್ಥಾನದಲ್ಲಿ ನಡೆಯುತ್ತಿರುವ ಜಗಳವನ್ನು ಉಲ್ಲೇಖಿಸಿ ಅಸ್ಸಾಂ ಸಚಿವ ಪರೋಕ್ಷವಾಗಿ ಈ ರೀತಿ ಹೇಳಿದ್ದಾರೆ.

ಇದನ್ನೂ ಓದಿ: Bharat Jodo Yatra: ಸ್ವಾತಂತ್ರ್ಯ ನಂತರ ನಡೆಯುತ್ತಿರುವ ಅತಿ ದೊಡ್ಡ ಪಾದಯಾತ್ರೆ

ಭಾರತ್ ಜೋಡೋ ಯಾತ್ರೆ - ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುವ 3,500 ಕಿಲೋಮೀಟರ್ ಪಾದಯಾತ್ರೆಯಾಗಿದ್ದು, ಇದು 150 ದಿನಗಳ ಕಾಲ ದೇಶಾದ್ಯಂತ ನಡೆಯಲಿದೆ. 12 ರಾಜ್ಯಗಳನ್ನು ಒಳಗೊಂಡಿರುವ ಈ ಪಾದಯಾತ್ರೆ ಪ್ರತಿದಿನ 25 ಕಿ.ಮೀ. ನಡೆಯುತ್ತದೆ. ಮುಂದಿನ ಹಂತದಲ್ಲಿ, ರಾಹುಲ್‌ ಗಾಂಧಿ ಉತ್ತರಕ್ಕೆ ತೆರಳುವ ಮೊದಲು ಕರ್ನಾಟಕದಲ್ಲಿ 25 ದಿನಗಳ ಕಾಲ ಭಾರತ್ ಜೋಡೋ ಪಾದಯಾತ್ರೆ ನಡೆಸಲಿದ್ದಾರೆ. 

click me!