ಸಿಎಂ ಯಾರಾದರೂ ಆಗಲಿ, ಕ್ಷೇತ್ರದ ಅಭಿವೃದ್ಧಿ ಮುಖ್ಯ: ಶಾಸಕ ಕೊತ್ತೂರು ಮಂಜುನಾಥ್

By Kannadaprabha NewsFirst Published Feb 25, 2024, 6:25 PM IST
Highlights

ಮುಖ್ಯಮಂತ್ರಿ ಸ್ಥಾನ ಯಾರಿಗಾದರೂ ಕೊಡಲಿ ಬಿಡಲಿ ನಾನು ನನ್ನ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸುವೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು. 

ಕೋಲಾರ (ಫೆ.25): ಮುಖ್ಯಮಂತ್ರಿ ಸ್ಥಾನ ಯಾರಿಗಾದರೂ ಕೊಡಲಿ ಬಿಡಲಿ ನಾನು ನನ್ನ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸುವೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು. ನಗರದ ಕನ್ನಡ ಭವನದಲ್ಲಿ ತಾಲೂಕು ಮಟ್ಟದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಾಂಸ್ಕೃತಿಕ ಕಾರ್ಯವಿಧಾನ ಪರಿಣಾಮಕಾರಿಯಾಗಿ ಜಾರಿಗೆ ತಂದಿರುವ ಫಲಾನುಭವಿಗಳ ಸಮ್ಮೇಳನದ ಕಾರ್ಯಕ್ರಮದ ನಂತರ ಅವರು ಸುದ್ಧಿಗಾರರೊಂದಿಗೆ ಮಾತನಾಡಿದರು.

ರಾಜ್ಯ ರಾಜಕಾರಣ ಬೇಡ: ದಲಿತ ಸಿಎಂ ವಿಚಾರ ಕುರಿತು ಮಾತನಾಡಿದ ಅವರು, ಸಿಎಂ ಸ್ಥಾನ ಯಾರಿಗಾದರೂ ಕೊಡಲಿ ನಾನು ನಮ್ಮ ತಾಲೂಕಿಗೆ ಏನು ಸೌಲಭ್ಯ ಬೇಕು ನೋಡುತ್ತೇನೆ. ಅದು ಬಿಟ್ಟು ರಾಜ್ಯ ರಾಜಕಾರಣ ನನಗೆ ಬೇಕಾಗಿಲ್ಲ, ರಾಜ್ಯದ ವಿಚಾರಗಳು ನನಗೆ ಗೊತ್ತಿಲ್ಲ, ನಾನು ಅದರ ಕುರಿತು ತಲೆನೂ ಕೆಡಿಸಿಕೊಳ್ಳುವುದಿಲ್ಲ ಎಂದರು. ಸಿಎಂ ಯಾರಾದರೂ ಆಗಬಹುದು ನನ್ನದೇನು ಅಭ್ಯಂತರ ಇಲ್ಲ, ಇನ್ನೂ ದಲಿತರಾಗುತ್ತಾರೋ ಇನ್ಯಾರೋ ಆಗುತ್ತಾರೋ ಅನ್ನೋದು ಇಲ್ಲ, ಕರ್ನಾಟಕಕ್ಕೆ ಈಗ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ, ಅಷ್ಟೆ ಸಾಕು ಎಂದು ಹೇಳಿದರು.

ಜೆಡಿಎಸ್‌ ಅಭಿವೃದ್ಧಿ ಕೆಲಸಕ್ಕೆ ಸಿಎಂ ಉದ್ಘಾಟನೆ: ಎಚ್‌.ಡಿ.ರೇವಣ್ಣ ಆರೋಪ

ಜೆಡಿಎಸ್‌ ಶಾಸಕರು ಕಾಂಗ್ರೆಸ್‌ಗೆ?: ಕೋಲಾರ ಜಿಲ್ಲೆಯ ಜೆಡಿಎಸ್ ಇಬ್ಬರು ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದನ್ನ ಸಮರ್ಥಿಸಿಕೊಂಡ ಅವರು, ಕಾಂಗ್ರೆಸ್‌ಗೆ ಬರುವುದಾಗಿ ಕೇಳಿರುವುದು ನಿಜ, ಇಲ್ಲದಿದ್ದರೆ ಅಧ್ಯಕ್ಷರು ನಮಗೆ ಯಾಕೆ ಕೇಳ್ತಾರೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಣ್ಣ ಅವರು ನಮ್ಮನ್ನ ಕರೆಸಿ ಯಾಕೆ ಮಾತನಾಡುತ್ತಿದ್ದರು, ಇವರು ಹೋಗಿರುವುದರಿಂದ ಕೇಳಿದ್ದಾರೆ, ನಾನೂ ಹೇಳಿದ್ದೇನೆ, ಈ ಕುರಿತು ಒರಿಜಿನಲ್ ವಾಸ್ತವಾಂಶ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಸೇರುವುದಾಗಿ ಹೋಗಿರುವುದು ನಿಜ ಎಂದು ಹೇಳಿದರು.

ವಿದ್ಯಾರ್ಥಿಗಳ ಸಾಧನೆಗೆ ಗುರಿ ಇರಬೇಕು: ವಿದ್ಯಾರ್ಥಿಗಳು ತಂದೆ-ತಾಯಿಯರನ್ನು ಮತ್ತು ವಿದ್ಯೆ ಬುದ್ದಿ ಕಲಿಸಿದ ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರವೇ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು. ನಗರದ ಹೊರವಲಯದ ಸಮೈಖ್ಯ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರಿಗೂ ವಿದ್ಯೆ ಮತ್ತು ಉದ್ಯೋಗ ಎಂಬುದು ಬಹುಮುಖ್ಯ ಎಂದರು.

ಸಾಧನೆಗೆ ಗುರಿ ಇರಬೇಕು: ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಸತತ ಪ್ರಯತ್ನ ಹಾಗೂ ಕಷ್ಟಪಟ್ಟಾಗ ಮಾತ್ರವೇ ಸಾಧ್ಯ. ಅದನ್ನು ಪಡೆಯಲು ಓದಿನ ಪ್ರಾರಂಭದಲ್ಲಿಯೇ ಗುರಿ ಇಟ್ಟುಕೊಂಡು ಸಾಧಿಸಲು ಮುಂದಾಗಬೇಕು ಅನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಲೋಚನೆಗಳು ಗುರಿ ಸಾಧನೆ ಕಡೆ ಇರಬೇಕು. ವಿದ್ಯಾರ್ಥಿಗಳಾದವರು ಓದಿನಲ್ಲಿ ಯಾವಾಗಲೂ ಮುಂದೆ ಇರಬೇಕು ನಮ್ಮಲ್ಲಿನ ಆತ್ಮಸ್ಥೆರ್ಯ ಹಾಗೂ ಛಲದಿಂದ ಪ್ರತಿಯೊಂದು ವಿಷಯದಲ್ಲಿ ಅಧ್ಯಯನ ಮಾಡಬೇಕು ಎಂದರು.

ನಮ್ಮ ನಿಷ್ಠೆ ಎದೆ ಬಗೆದು ತೋರಿಸಲು ಆಗೋದಿಲ್ಲ: ಸಿ.ಟಿ.ರವಿ

ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಎಂತಹ ಸಾಧನೆ ಬೇಕಾದರೂ ಮಾಡಬಹುದು ಎಂಬುದನ್ನು ತನ್ನಲ್ಲಿಯೇ ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿರುವ ಅನೇಕ ಸಾಹಿತಿಗಳು ಸೇರಿದಂತೆ ಐಎಎಸ್ ಐಪಿಎಸ್, ಅಧಿಕಾರಿಗಳು ಸ್ಫೂರ್ತಿದಾಯಕವಾಗಬೇಕು. ಪೋಷಕರು ಮತ್ತು ಗುರುಗಳು ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಧೈರ್ಯ, ಶೌರ್ಯ, ಸಾಹಸ ಗುಣಗಳನ್ನು ಬೆಳೆಸುವಲ್ಲಿ ಪ್ರಯತ್ನಿಸಬೇಕು ಎಂದು ತಿಳಿಸಿದರು.

click me!