ಸ್ಯಾಂಟ್ರೋ ರವಿ ಪ್ರಕರಣವನ್ನ ಮುಚ್ಚಿ ಹಾಕುವ ಯತ್ನ ನಡೆದಿದೆ. ಸ್ಯಾಂಟ್ರೋ ರವಿ ಒಬ್ಬ ಪಿಂಪ್, ವೇಶ್ಯಾವಾಟಿಕೆ, ವರ್ಗಾವಣೆ ದಂಧೆ, ಪೋಕ್ಸೋ ಪ್ರಕರಣದ ಆರೋಪಿ. ಆತ ಹೊರಗೆ ಬಂದರೆ ಹಲವರ ಬಂಡವಾಳ ಹೊರಗೆ ಬರುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು (ಜ.21): ಕೋಲಾರದಲ್ಲಿ ಯಾರೇ ಬಂದರೂ ಏನೇ ಮಾಡಿದರು ನಾನು ಗೆಲ್ಲುತ್ತೇನೆ. ಬಾದಾಮಿಯಲ್ಲೂ ನನ್ನನ್ನು ಸೋಲಿಸಲು ಅಮಿತ್ ಶಾ ಬಂದಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅಶೋಕ್ ಪಟ್ಟಣಶೆಟ್ಟಿ ಬದಲು ಶ್ರೀರಾಮುಲು ನಿಲ್ಲಿಸಿದರು. ಆದರೂ ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ನಾನು ಅಲ್ಲಿ ಪ್ರಚಾರಕ್ಕೆ ಹೋಗಿದ್ದು ಎರಡೇ ದಿನ, ನಾನು ಬಾದಾಮಿ ಕ್ಷೇತ್ರ ಬದಲಾಯಿಸಿದ್ದು ದೂರ ಅನ್ನೋ ಕಾರಣಕ್ಕೆ ಹೊರತು ನಾನು ಅಲ್ಲಿ ನಿಂತರೆ ಸೋಲುತ್ತೀನಿ ಅಂತಾ ಅಲ್ಲ. ಬಾದಾಮಿ ಜನ ಹೆಲಿಕ್ಯಾಪ್ಟರ್ ಕೊಡಿಸುತ್ತೇವೆ ಅಂದರು. ನಾನೇ ಬೇಡ ಎಂದು ಕೋಲಾರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕ್ಷೇತ್ರ ಹತ್ತಿರವಾಗುತ್ತದೆ ಎಂದು ಕೋಲಾರ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಸ್ಯಾಂಟ್ರೋ ರವಿ ಪ್ರಕರಣವನ್ನ ಸಿಐಡಿಗೆ ವಹಿಸಿದ್ದು ಏಕೆ?: ಸ್ಯಾಂಟ್ರೋ ರವಿ ಪ್ರಕರಣವನ್ನ ಮುಚ್ಚಿ ಹಾಕುವ ಯತ್ನ ನಡೆದಿದೆ. ಸ್ಯಾಂಟ್ರೋ ರವಿ ಒಬ್ಬ ಪಿಂಪ್, ವೇಶ್ಯಾವಾಟಿಕೆ, ವರ್ಗಾವಣೆ ದಂಧೆ, ಪೋಕ್ಸೋ ಪ್ರಕರಣದ ಆರೋಪಿ. ಆತ ಹೊರಗೆ ಬಂದರೆ ಹಲವರ ಬಂಡವಾಳ ಹೊರಗೆ ಬರುತ್ತೆ. ಆ ಕಾರಣದಿಂದ ಮುಚ್ಚಿಹಾಕುವ ಯತ್ನ ನಡೆದಿದೆ. ಸಿಐಡಿಗೆ ಪ್ರಕರಣವನ್ನ ವಹಿಸಿದ್ದು ಏಕೆ? ಆತನನ್ನ ಆರಂಭದಲ್ಲಿ ವಶಕ್ಕೆ ಪಡೆಯದೆ ಇರುವುದು ಏಕೆ? ಆತನನ್ನ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದು ಏಕೆ? ಸಿಐಡಿ ಕೂಡ ರಾಜ್ಯ ಪೊಲೀಸ್ ಒಂದು ಘಟಕ. ಇದೆಲ್ಲದರ ಹಿಂದೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ. ಗಂಭೀರ ಆರೋಪ ಮಾಡಿದರು.
undefined
ಜೆಡಿಎಸ್ ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಿಲ್ಲ, 20 ಸೀಟು ಗೆದ್ದರೆ ಜಾಸ್ತಿ: ಸಿದ್ದರಾಮಯ್ಯ
ಇನ್ನೂ ಹಲವು ಘೋಷಣೆ ಮಾಡಲಿದ್ದೇವೆ: ಮುಂದಿನ ಚುನಾವಣೆಯಲ್ಲಿ ನಾವು 130 ಸ್ಥಾನ ಗೆಲ್ಲುತ್ತೇವೆ. ಅದು 150 ಆದರೂ ಆಗಬಹುದು. ರಾಜ್ಯದ ಜನ ಕಾಂಗ್ರೆಸ್ ಅಧಿಕಾರದಲ್ಲಿ ಆಗಿದ್ದ ಕೆಲಸಗಳ ಬಗ್ಗೆ ತಿಳಿದುಕೊಂಡಿದ್ದಾರೆ. ನಾವು ಹಿಂದೆ ಪ್ರಣಾಳಿಕೆಯಲ್ಲಿ ಹೇಳಿದ್ದ ಶೇಕಡ 99 ರಷ್ಟು ಕೆಲಸ ಮಾಡಿದ್ದೇವೆ. ಈಗಲೂ 200 ಯುನಿಟ್ ಉಚಿತ ವಿದ್ಯುತ್, ಕುಟುಂಬ ಮುಖ್ಯಸ್ಥೆಗೆ ತಿಂಗಳು 2 ಸಾವಿರ ಹಣ ನೀಡುವುದಾಗಿ ಘೊಷಣೆ ಮಾಡಿದ್ದೇವೆ. ಇನ್ನೂ ಹಲವು ಘೋಷಣೆ ಮಾಡಲಿದ್ದೇವೆ.ಇವುಗಳು ಚುನಾವಣೆಯಲ್ಲಿ ನಮ್ಮ ಕೈ ಹಿಡಿಯುತ್ತವೆ. ಯಾರು ಏನೇ ಹೇಳಿದರೂ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಸತ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೋಲಾರದ ಕಾಂಗ್ರೆಸ್ಸಿಗರಿಂದ ಸಿದ್ದುಗಾಗಿ ಮನೆ ಹುಡುಕಾಟ
ನಡ್ಡಾಗೂ ರಾಜ್ಯಕ್ಕೂ ಏನು ಸಂಬಂಧ: ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೋದಿ ಸರ್ಟಿಫಿಕೇಟ್ ಅನಗತ್ಯ. ರಾಜ್ಯದಲ್ಲಿ ಪಿಎಸ್‌ಐ ಹಗರಣ ನಡೆದಿರುವುದು ಸುಳ್ಳಾ? ಎಡಿಜಿಪಿ ಜೈಲು ಸೇರಿರುವುದು ಸುಳ್ಳಾ? ಏನು ಆಗಿಲ್ಲ ಅಂದರೆ ಆತ ಇನ್ನು ಏಕೆ ಜೈಲಿನಲ್ಲಿದ್ದಾನೆ? ರಾಜ್ಯಕ್ಕೆ ಪದೇ ಪದೇ ಬಿಜೆಪಿ ಕೇಂದ್ರ ನಾಯಕರ ಭೇಟಿ ನೀಡುತ್ತಿದ್ದು, ಯಾರು ಬಂದರೂ ಏನು ಪ್ರಯೋಜನ ಇಲ್ಲ.ನಡ್ಡಾಗೂ ರಾಜ್ಯಕ್ಕೂ ಏನು ಸಂಬಂಧ. ಅವರು ಏಕೆ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.